
ಹೆಣ್ಣುಮಕ್ಕಳು ಮೊದಲೆಲ್ಲ 11- 16 ವರ್ಷದ ಅವಧಿಯಲ್ಲಿ ಸಾಮಾನ್ಯವಾಗಿ ಋತುಮತಿಯಾಗುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ 8-11 ವಯಸ್ಸಿನಲ್ಲೇ ಋತುಮತಿಯಾಗುವವರ ಸಂಖ್ಯೆ ಹೆಚ್ಚಿದೆ. ಇದಕ್ಕೇನು ಕಾರಣ ಎಂದು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಅಧ್ಯಯನದ ಮೂಲಕ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿದೆ. ಏಕೆಂದರೆ, ಬೇಗ ಮುಟ್ಟಾಗುವುದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಹೊಂದಿರುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.
ಹೆಣ್ಣುಮಕ್ಕಳಲ್ಲಿ ಆರಂಭಿಕ ಮುಟ್ಟಿನ ಅವಧಿಯು ಬಾಲ್ಯದ ಸ್ಥೂಲಕಾಯತೆಗೆ ಸಂಬಂಧಿಸಿದೆ ಮತ್ತು ಇದು ಹೃದಯರಕ್ತನಾಳದ ಕಾಯಿಲೆ ಮತ್ತು ಕ್ಯಾನ್ಸರ್‌ನಂತಹ ಪ್ರತಿಕೂಲ ಆರೋಗ್ಯ ಪರಿಣಾಮಗಳ ಹೆಚ್ಚಿನ ಅಪಾಯವನ್ನು ಹೊಂದಿದೆ ಎಂದು ಈ ಅಧ್ಯಯನವು ಕಂಡುಹಿಡಿದಿದೆ. ಈ ಸಂಬಂಧ ಯುಎಸ್ನಲ್ಲಿ 70,000ಕ್ಕೂ ಹೆಚ್ಚು ಮಹಿಳೆಯರ ಮೇಲೆ ಸಂಶೋಧನೆ ನಡೆಸಲಾಗಿದೆ.
ಹಾರ್ವರ್ಡ್ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನೇತೃತ್ವದ ಅಧ್ಯಯನದ ಪ್ರಕಾರ, ಮೊದಲ ಅವಧಿಯನ್ನು ಪಡೆಯುವ ಸರಾಸರಿ ವಯಸ್ಸು 1950-1969ಕ್ಕೆ ಹೋಲಿಸಿದರೆ 2000-2005 ರವರೆಗೆ ಜನಿಸಿದ ಮಹಿಳೆಯರಲ್ಲಿ 12.5 ವರ್ಷಗಳಿಂದ 11.9 ವರ್ಷಕ್ಕೆ ಇಳಿದಿದೆ.
ಏಷ್ಯನ್ ಅಥವಾ ಮಿಶ್ರ ಜನಾಂಗೀಯ ಬಾಲಕಿಯರಲ್ಲಿ ಮತ್ತು ಸಾಮಾಜಿಕ ಆರ್ಥಿಕ ಸ್ಥಿತಿಯಲ್ಲಿ ತಮ್ಮನ್ನು ತಾವು ಕಡಿಮೆ ಎಂದು ರೇಟಿಂಗ್ ಮಾಡುವ ಮಹಿಳೆಯರಲ್ಲಿ ಈ ಪ್ರವೃತ್ತಿಗಳು ಹೆಚ್ಚು ಸ್ಪಷ್ಟವಾಗಿ ಕಂಡುಬರುತ್ತವೆ.
ಕಾಮಿಡಿ ಶೋ ನೋಡ್ತಾ ನಕ್ಕೂ ನಕ್ಕೂ ಪ್ರಜ್ಞೆ ತಪ್ಪಿ ಬಿದ್ದ ವ್ಯಕ್ತಿ! ಹೀಗೂ ಉಂಟಾ?
ದಿ ಜರ್ನಲ್ ಆಫ್ ದಿ ಅಮೇರಿಕನ್ ಮೆಡಿಕಲ್ ಅಸೋಸಿಯೇಷನ್ (JAMA) ನೆಟ್‌ವರ್ಕ್ ಓಪನ್‌ನಲ್ಲಿ ಪ್ರಕಟವಾದ ಅಧ್ಯಯನವು, 2000ದ ನಂತರ ಜನಿಸಿದ ಹೆಣ್ಣುಮಕ್ಕಳಲ್ಲಿ ಮುಟ್ಟು ನಿಯಮಿತವಾಗಿ ನಡೆಯಲು ಕೂಡಾ ಎರಡು ವರ್ಷಕ್ಕೂ ಅಧಿಕ ಸಮಯ ತೆಗೆದುಕೊಳ್ಳುತ್ತಿದೆ ಎಂದು ಹೇಳಿದೆ. ಇದಕ್ಕೆ ಸಂಶೋಧನೆ ಕಂಡುಕೊಂಡ ಮುಖ್ಯ ಕಾರಣ ಬೊಜ್ಜು.
ಇಂದಿನ ಮಕ್ಕಳಲ್ಲಿ ಬೊಜ್ಜು ಹೆಚ್ಚಿದ್ದು, ಇದೇ ಕಾರಣಕ್ಕೆ ಹೆಣ್ಣುಮಕ್ಕಳು ಬೇಗ ಮುಟ್ಟಾಗುತ್ತಿದ್ದಾರೆ ಮತ್ತು ಅದು ನಿಯಮಿತವಾಗಿಲ್ಲ ಎಂದು ಅಧ್ಯಯನ ಹೇಳಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.