
ಮಾಸಿಕ ಮುಟ್ಟಿನ ಸಮಯದಲ್ಲಿ ಆರಂಭದ ದಿನ ಮತ್ತು ನಾಲ್ಕನೆಯ ದಿನ ತಲೆಸ್ನಾನ ಮಾಡುವ ಹೆಚ್ಚಿನ ಮಹಿಳೆಯರು ಇದ್ದಾರೆ. ಇದು ಸಂಪ್ರದಾಯವೆನ್ನುವ ಕಾರಣಕ್ಕೆ ಕೆಲವರು ಮಾಡುತ್ತಿದ್ದರೂ, ಆ ಸಂದರ್ಭದಲ್ಲಿ ಆಗುವ ಕಿರಿಕಿರಿ ಮತ್ತು ದೇಹದಲ್ಲಿ ಏನೋ ಹಿಂಸೆ ಎನ್ನಿಸುವ ಕಾರಣದಿಂದ ತಲೆಸ್ನಾನ ಮಾಡಿದರೆ ಉಲ್ಲಾಸ ಕಾಣಬಹುದು ಎನ್ನುವ ಕಾರಣಕ್ಕೂ ಹಲವರು ಮಾಡುವುದು ಇದೆ. ಆದರೆ ಮಾಸಿಕ ಋತುಸ್ರಾವದ ಮೊದಲು ಮೂರು ದಿನ ತಲೆ ಸ್ನಾನ ಮಾಡಬಾರದು ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ಯಾವುದೇ ಸೂಕ್ತ ವೈಜ್ಞಾನಿಕ ಆಧಾರಗಳು ಇಲ್ಲದಿದ್ದರೂ ಮೊದಲ ಮೂರು ದಿನ ತಲೆಸ್ನಾನ ಮಾಡಿದರೆ ಮಹಿಳೆಯರ ದೇಹದಲ್ಲಿ ಕೆಲವೊಂದು ಪ್ರತಿಕೂಲ ಪರಿಣಾಮ ಉಂಟಾಗುತ್ತದೆ ಎಂದು ಹೇಳಲಾಗುತ್ತಿದೆ.
ಮೊದಲ ಮೂರು ದಿನ ಮುಟ್ಟಿನ ಸಮಯದಲ್ಲಿ ದೇಹದ ಉಷ್ಣತೆ ಹೆಚ್ಚಾಗಿರುತ್ತದೆ. ಮೊದಲೇ ದೇಹದಲ್ಲಿ ಏರುಪೇರಾಗುತ್ತಿರುತ್ತದೆ. ಇಂಥ ಸಮಯದಲ್ಲಿ ತಲೆಸ್ನಾನ ಅದರಲ್ಲಿಯೂ ತಣ್ಣೀರಿನ ಸ್ನಾನ ಮಾಡಿದರೆ ದೇಹದ ಉಷ್ಣಾಂಶದಲ್ಲಿ ಏರುಪೇರಾಗುತ್ತದೆ. ಇದು ಅನಾರೋಗ್ಯ ಸಮಸ್ಯೆಯನ್ನು ತಂದೊಡ್ಡಬಹುದು ಎನ್ನಲಾಗಿದೆ. ಇದರಿಂದ ತಲೆನೋವು ಅಥವಾ ಸ್ನಾಯು ಸೆಳೆತ ಉಂಟಾಗುವ ಸಾಧ್ಯತೆ ಹೆಚ್ಚು ಎನ್ನುವುದು ವಾದ. ಬಿಸಿ ನೀರಿನಿಂದ ಸ್ನಾನ ಮಾಡಿದರೆ ಹಿತ ಎನ್ನಿಸುವುದು ನಿಜವಾದರೂ, ಕೂದಲನ್ನು ಹೆಚ್ಚು ಸಮಯದವರೆಗೆ ಹಸಿಯಾಗಿಯೇ ಬಿಟ್ಟುಕೊಳ್ಳುವ ಕಾರಣ, ಮುಟ್ಟಿನ ಸಮಯದಲ್ಲಿ ಇದು ದೇಹದ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡುತ್ತದೆ ಎನ್ನಲಾಗಿದೆ.
ಕೂದಲಿಗೆ ಶ್ಯಾಂಪೂ, ಮುಖಕ್ಕೆ ಬ್ಯೂಟಿ ಕ್ರೀಂ ಬಿಟ್ಟಾಕಿ: ಅಕ್ಕಿ ನೀರು ಹೀಗೆ ಉಪಯೋಗಿಸಿ ನೋಡಿ ಕಮಾಲ್
ಈ ಸಂದರ್ಭದಲ್ಲಿ ದೇಹದಲ್ಲಿ ವಿಶೇಷ ಶಕ್ತಿ ಇರುವ ಕಾರಣದಿಂದ ಆಯುರ್ವೇದದ ಪ್ರಕಾರ ಮೊದಲ ಮೂರು ದಿನ ಸ್ನಾನ ಏನೂ ಮಾಡದೇ ಸಂಪೂರ್ಣವಾಗಿ ರೆಸ್ಟ್ ತೆಗೆದುಕೊಳ್ಳಬೇಕು ಎನ್ನಲಾಗಿದೆ. ಮುಟ್ಟಿನ ದಿನಗಳಲ್ಲಿ ಕೂದಲಿನ ಬುಡಗಳು ತುಂಬಾ ಸೂಕ್ಷ್ಮವಾಗಿರುತ್ತವೆ. ಆ ಸಮಯದಲ್ಲಿ ತಲೆಸ್ನಾನ ಮಾಡಿದರೆ ಕೂದಲು ಉದುರುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ಈ ಸಮಯದಲ್ಲಿ ದೇಹ ಕೂಡ ಸೂಕ್ಷ್ಮವಾಗಿರುವ ಕಾರಣ, ತಲೆಸ್ನಾನದ ನೆಪದಲ್ಲಿ ಬಾತ್‌ರೂಮ್‌ನಲ್ಲಿ ಬಹಳ ಹೊತ್ತು ನೀರಿನ ಬಳಿ ನಿಂತರೆ ಶೀತ, ನೆಗಡಿ, ತಲೆನೋವಿನ ಸಮಸ್ಯೆ ಬರುವ ಸಾಧ್ಯತೆ ಇದೆ. ಮೊದಲೇ ಹೇಳಿದಂತೆ ಇವುಗಳಿಗೆ ಯಾವುದೇ ವೈಜ್ಞಾನಿಕ ಕಾರಣಗಳು ಇಲ್ಲದಿದ್ದರೂ ಸಾಮಾನ್ಯವಾಗಿ ಇವೆಲ್ಲಾ ಸಮಸ್ಯೆ ತಲೆದೋರಬಹುದು ಎಂದು ಹೇಳಲಾಗುತ್ತದೆ.
ಇನ್ನು ಕೆಲವರು ಶಾಸ್ತ್ರದಲ್ಲಿಯೇ ಹೀಗೆ ಹೇಳಲಾಗಿದೆ ಎನ್ನುವುದೂ ಉಂಟು. ಹಿಂದೂ ಶಾಸ್ತ್ರದ ಪ್ರಕಾರ, ಮುಟ್ಟಾದ ಮೂರು ದಿನಗಳವರೆಗೆ ಮಹಿಳೆಯರು ತಲೆ ಸ್ನಾನ ಮಾಡಬಾರದು. ಹೀಗಾದ್ದಲ್ಲಿ ಮಾತ್ರ ಮನೆಯಲ್ಲಿ ಸಂತೋಷ, ಸಮೃದ್ಧಿ ಹೆಚ್ಚಾಗುತ್ತದೆ. ಒಂದು ವೇಳೆ ಅವರು ಈ ನಿಯಮವನ್ನು ಅನುಸರಿಸದಿದ್ದರೆ ಕುಟುಂಬದ ಸದಸ್ಯರೆಲ್ಲರೂ ಅರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿದೆ ಎಂದು ಕೆಲವರು ಹೇಳುತ್ತಾರೆ. ಮುಟ್ಟಿನ ಸಮಯದಲ್ಲಿ, ಪೂಜೆ ಇತ್ಯಾದಿ ಚಟುವಟಿಕೆಗಳಿಗೆ ಮಹಿಳೆಯರು ಪಾಲ್ಗೊಳ್ಳಬಾರದು ಎಂದು ಹೇಳಲಾಗುತ್ತದೆ. ಯಾಕೆಂದರೆ ಅದನ್ನು ಅಪವಿತ್ರವೆನ್ನುವ ನಂಬಿಕೆಯಿದೆ. ಮುಟ್ಟಿನ ಅಂತ್ಯದ ನಂತರ ಅಥವಾ ಕನಿಷ್ಠ ಮೂರು ದಿನಗಳ ನಂತರ ಮಾತ್ರ ಕೂದಲನ್ನು ತೊಳೆಯುವುದು ಸೂಕ್ತವಾಗಿದೆ, ಇದರಿಂದ ದೇಹವು ಸಂಪೂರ್ಣವಾಗಿ ಶುದ್ಧವಾಗಿರುತ್ತದೆ.
ಎರಡೇ ಎರಡೇ ಪುಡಿ- ಬಿಳಿಗೂದಲು ಫುಲ್ ಮಾಯ: ಪ್ರಖ್ಯಾತ ಆಯುರ್ವೇದ ವೈದ್ಯರ ಸಲಹೆ ಕೇಳಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.