ಓರಗಿತ್ತಿಯರ ವಿಷ್ಯ ಬಂದಾಗ ನೀತಾ ಅಂಬಾನಿ ಹಾಗೂ ಟೀನಾ ಅಂಬಾನಿ ಕೂಡ ನೆನಪಿಗೆ ಬರ್ತಾರೆ. ಇಬ್ಬರಲ್ಲಿ ಸ್ಪರ್ಧೆ ಇಲ್ಲ ಅಂದ್ರೂ ಟ್ರೋಲರ್ಸ್ ಹೋಲಿಕೆ ಬಿಡಲ್ಲ. ಅನಂತ್ ಅಂಬಾನಿ ಮದುವೆ ಪೂರ್ವ ಕಾರ್ಯಕ್ರಮದಲ್ಲೂ ಇದೇ ಆಗಿದೆ.
ಅನಂತ್ ಅಂಬಾನಿ ಮದುವೆ ಪೂರ್ವ ಕಾರ್ಯಕ್ರಮಗಳು ನಡೆಯುತ್ತಿವೆ (Anant Ambani Pre wedding Funcions). ಬುಧವಾರ ನಡೆದ ಕಾರ್ಯಕ್ರಮದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಈ ಕಾರ್ಯಕ್ರಮಕ್ಕೆ ಮುಖೇಶ್ ಅಂಬಾನಿ ಕಿರಿಯ ಸಹೋದರ ಅನಿಲ್ ಅಂಬಾನಿ ಹಾಗೂ ಪತ್ನಿ ಟೀನಾ ಅಂಬಾನಿ ಆಗಮಿಸಿದ್ರು. ಟೀನಾ ಅಂಬಾನಿ ಲುಕ್ ನೋಡಿ ನೆಟ್ಟಿಗರು, ನೀತಾ ಅಂಬಾನಿ ಜೊತೆ ಹೋಲಿಕೆ ಶುರು ಮಾಡಿದ್ದಾರೆ.
ನೀತಾ ಅಂಬಾನಿ (Nita Ambani ) ಗಿಂತ ಟೀನಾ (Tina) ಅಂಬಾನಿ ತುಂಬಾ ಸಪ್ಪೆಯಾಗಿ ಕಾಣ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಟೀನಾ ಅಂಬಾನಿ ಸಾಂಪ್ರದಾಯಿಕ ಉಡುಗೆ ಸೀರೆ (saree)ಯಲ್ಲಿ ಕಾಣಿಸಿಕೊಂಡಿದ್ದರು. ಅವರು ಗಾಢ ಮತ್ತು ತಿಳಿ ಗುಲಾಬಿ ಬಣ್ಣದ ಸೀರೆ ಧರಿಸಿದ್ದರು. ಹಸಿರು ಒಡವೆ ಅವರ ಸೌಂದರ್ಯವನ್ನು ದುಪ್ಪಟ್ಟು ಮಾಡಿತ್ತು. ಇನ್ನು ಅನಿಲ್ ಅಂಬಾನಿ, ಬಿಳಿ ನೀಲಿ ಕುರ್ತಾ ಧರಿಸಿದ್ದರು. ಸಿಂಪಲ್ ಆಗಿ ಕಾಣ್ತಿದ್ದ ಟೀನಾ ಅಂಬಾನಿ ನೋಡಿದ ನೆಟ್ಟಿಗರು, ಎಲ್ಲರ ಆಕರ್ಷಣೆಯ ಬಿಂದುವಾಗಿದ್ದ, ನಗ್ತಾ ನಗ್ತಾನೆ ಮಾಧ್ಯಮಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾದ ನೀತಾ ಅಂಬಾನಿ ಜೊತೆ ಹೋಲಿಸುತ್ತಿದ್ದಾರೆ. ಟೀನಾಗಿಂತ ನೀತಾ ಫಿಟ್ನೆಸ್ (Fitness), ಸೌಂದರ್ಯದಲ್ಲಿ ಒಂದು ಕೈ ಮುಂದಿದ್ದಾರೆ ಅನ್ನೋದು ಅವರ ಅಭಿಪ್ರಾಯ.
ಜ್ವರದಲ್ಲೇ ಸೆಟ್ಗೆ ಹೋಗಿದ್ದೆ- ಮೊದಲ ಬಾರಿ ಉಪೇಂದ್ರ ನೋಡಿ ಅವಳು ಬೇಕು ಅಂದ್ರು... ಪ್ರಿಯಾಂಕಾ ಮೆಲುಕು
ನೀತಾ ಅಂಬಾನಿ ಫ್ಯಾಷನ್ ವಿಷ್ಯದಲ್ಲಿ ಮುಂದಿದ್ದಾರೆ. ಯಾವುದೇ ಸಮಾರಂಭದಲ್ಲೂ ಅವರು ತಮ್ಮ ನೋಟದಿಂದ್ಲೇ ಜನರನ್ನು ಸೆಳೆಯುತ್ತಾರೆ. ಮಗನ ಮದುವೆ ಪೂರ್ವ ಸಮಾರಂಭದಲ್ಲಿ ನೀತಾ ಗುಲಾಬಿ ಬಣ್ಣದ ಬಾಂಧನಿ ಸೀರೆಯನ್ನು ಧರಿಸಿದ್ದರು. ಅದರ ಮೇಲೆ ಚಿನ್ನದ ಝರಿ ವರ್ಕ್ ಇತ್ತು. ನೀತಾ ಅಂಬಾನಿ ದೊಡ್ಡ ಪಚ್ಚೆಯಿಂದ ಕೂಡಿದ ಡೈಮಂಡ್ ನೆಕ್‌ಪೀಸ್ ಧರಿಸಿದ್ದರು. ಹೆಚ್ಚುವರಿಯಾಗಿ ತಮ್ಮ ಡ್ರೆಸ್ ಗೆ ಹೊಂದಿಕೆಯಾಗುವ ಕಿವಿಯೋಲೆ ಮತ್ತು ಎರಡು ವಜ್ರದ ಬಳೆಗಳನ್ನು ಧರಿಸಿದ್ದರು. ಕೂದಲನ್ನು ಬಿಟ್ಟಿದ್ದ ನೀತಾ ಅಂಬಾನಿ ಲೈಟ್ ಮೇಕಪ್ ನಲ್ಲೂ ಸುಂದರವಾಗಿ ಕಾಣ್ತಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಅಂಬಾನಿ ಮನೆಯ ಇಬ್ಬರು ಸೊಸೆಯರಾದ ನೀತಾ ಹಾಗೂ ಟೀನಾ ಲುಕ್ ಬಗ್ಗೆ ಚರ್ಚೆಯಾಗ್ತಿದೆ. ನೀತಾಗಿಂತ ಟೀನಾ ದೊಡ್ಡವರಾಗಿ ಕಾಣ್ತಾರೆ, ವಯಸ್ಸಾದಂತೆ ಕಾಣ್ತಿದೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ಟೀನಾ ಅಂಬಾನಿ ಯೌವ್ವನದಲ್ಲಿ ಹೇಗಿದ್ರು ಎಂಬುದನ್ನು ಅನೇಕರು ನೆನಪಿಸಿಕೊಂಡಿದ್ದಾರೆ. ಟೀನಾ ಅಂಬಾನಿ, ನೇಹಾ ಕಕ್ಕರ್ ಓಲ್ಡ್ ವರ್ಷನ್ ಅಂತ ಅನೇಕರು ಹೇಳಿದ್ದಾರೆ.
ವಾಸ್ತವವಾಗಿ ನೀತಾ ಅಂಬಾನಿ ಹಾಗೂ ಟೀನಾ ಅಂಬಾನಿ ಬೇರೆ ಬೇರೆ ಕ್ಷೇತ್ರದಿಂದ ಬಂದವರು. ನೀತಾ ಮೊದಲು ಟೀಚರ್ ಆಗಿದ್ರೆ, ಟೀನಾ ಅಂಬಾನಿ ಮದುವೆಗೆ ಮುನ್ನ ಬಾಲಿವುಡ್ ನಟಿಯಾಗಿದ್ದರು. ಮುಖೇಶ್ ಅಂಬಾನಿ ಕೈ ಹಿಡಿದ ನೀತಾ ಅಂಬಾನಿ ಬ್ಯುಸಿನೆಸ್ ಕ್ಷೇತ್ರಕ್ಕೆ ಕಾಲಿಟ್ಟರು. ಡಾನ್ಸಲ್ಲಿಯೂ ನೀತಾ ಆಸಕ್ತಿ ಹೊಂದಿದ್ದಾರೆ. ಇನ್ನು ಟೀನಾ, ಚಾರಿಟಿ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಅಂಬಾನಿ ಕುಟುಂಬದ ದೊಡ್ಡ ಮಗನ ಕೈ ಹಿಡಿದಿರುವ ನೀತಾ, ಮನೆಯಲ್ಲಿ ದೊಡ್ಡ ಸೊಸೆಯಾದ್ರೂ ಟೀನಾಗಿಂತ ಚಿಕ್ಕವರು. ನೀತಾಗಿಂತ 7 ವರ್ಷ ದೊಡ್ಡವರು ಟೀನಾ ಅಂಬಾನಿ. ನೀತಾ ಅಂಬಾನಿ ವಯಸ್ಸು ಈಗ 60 ವರ್ಷವಾದರೆ, ಟೀನಾ ಅಂಬಾನಿ ವಯಸ್ಸು 67 ವರ್ಷ.
ರಾಹುಲ್ ದ್ರಾವಿಡ್ ವಿಜೇತಾ ಪೆಂಡಾರ್ಕರ್ ಲವ್ ಸ್ಟೋರಿ ಶುರುವಾಗಿದ್ದೆಲ್ಲಿಂದ?
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಸಂಭ್ರಮ ಕಳೆದ ಎರಡು ದಿನಗಳಿಂದ ನಡೆಯುತ್ತಿದೆ. ದಂಪತಿ ಜುಲೈ 12, 2024 ರಂದು ಮದುವೆಯಾಗಲಿದ್ದಾರೆ. ಮದುವೆ ಸಮಾರಂಭ ಮೂರು ದಿನ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಬಾಲಿವುಡ್ ಸ್ಟಾರ್ಸ್ ಸೇರಿದಂತೆ ಸೆಲೆಬ್ರಿಟಿಗಳು, ಬ್ಯುಸಿನೆಸ್ ಮೆನ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಕಲಾವಿದರು ಸಾಕ್ಷಿಯಾಗಲಿದ್ದಾರೆ.