ವಂಚಿಸಿದ ಬಾಯ್ ಫ್ರೆಂಡ್ ಮೇಲೆ ಸಿಟ್ಟು, ಮೆಸ್ಸಿ ಆಟೋಗ್ರಾಫ್ ಇರೋ ಜರ್ಸೀನಾ ಮಾರಿದ ಮಹಿಳೆ!

By Roopa Hegde  |  First Published Jul 3, 2024, 1:13 PM IST

ಬಾಯ್ ಫ್ರೆಂಡ್ ಮೋಸ ಮಾಡಿದಾಗ ಕೋಪ ಮಾಡ್ಕೊಳ್ಳುವ ಹುಡುಗಿಯರು ಏನು ನಿರ್ಧಾರಕ್ಕೆ ಬರ್ತಾರೆ ಹೇಳೋದು ಅಸಾಧ್ಯ. ಈ ಮಹಿಳೆ ತನ್ನದೇ ರೀತಿಯಲ್ಲಿ ಆದ್ರೆ ಸೇಡು ತೀರಿಸಿಕೊಂಡಿದ್ದಾಳೆ. ಆಕೆ ಹರಾಜು ಕರೆಯುತ್ತಿದ್ದಂತೆ ಇನ್ಸ್ಟಾ ಫಾಲೋವರ್ಸ್ ಸಂಖ್ಯೆ ದಿಡೀರನೆ ಮೇಲೆ ಹೋಗಿದೆ. 
 


ಮೋಸ ಮಾಡಿದ ಬಾಯ್ ಫ್ರೆಂಡ್ ಮೇಲೆ ಮಹಿಳೆಯೊಬ್ಬಳು ಸೇಡು ತೀರಿಸಿಕೊಂಡಿದ್ದಾಳೆ. ಆಕೆ ಸೇಡು ತೀರಿಸಿಕೊಳ್ಳಲು ಬಳಸಿದ ವಿಧಾನ ಭಿನ್ನವಾಗಿದೆ. ನಂಬಿಕೆಗೆ ಮೋಸವಾದಾಗ ಜನರು ತಮ್ಮದೇ ರೀತಿಯಲ್ಲಿ ಸೇಡು ತೀರಿಸಿಕೊಳ್ತಾರೆ. ಈ ಮಹಿಳೆ ಕೂಡ ಗೆಳೆಯನ ಅಮೂಲ್ಯ ಆಸ್ತಿಯನ್ನು ಮಾರಿದ್ದಾಳೆ. ಲಿಯೋನೆಲ್ ಮೆಸ್ಸಿಯಿಂದ ಹಸ್ತಾಕ್ಷರದ ಫುಟ್‌ಬಾಲ್ ಜೆರ್ಸಿ ಮತ್ತು ಕೋಪಾ ಅಮೇರಿಕಾದ ಎರಡು ಟಿಕೆಟನ್ನು ಆಕೆ ಇನ್ಸ್ಟಾಗ್ರಾಮಲ್ಲಿ ಹರಾಜು ಹಾಕಿದ್ದಾಳೆ. ಇನ್ಸ್ಟಾಗ್ರಾಮ್ ನಲ್ಲಿ ಬಾಯ್ ಫ್ರೆಂಡ್ ಮೋಸದ ಬಗ್ಗೆ ಒಂದು ವಿಡಿಯೋ ಹಾಕಿದ್ದ ಮಹಿಳೆ, ನಂತ್ರ ಬಳಕೆದಾರರಿಗೆ ವಿಶೇಷ ಆಫರ್ ನೀಡಿದ್ದಳು. ಈ ಆಫರಲ್ಲಿ ಗೆದ್ದ ಇಬ್ಬರಿಗೆ ಕೋಪಾ ಅಮೆರಿಕದ ಟಿಕೆಟ್ ನೀಡಿದ್ದಾಳೆ. ಇದಾದ್ಮೇಲೆ ಮೆಸ್ಸಿ ಹಸ್ತಾಕ್ಷರವಿರುವ ಫುಟ್ಬಾಲ್ ಜೆರ್ಸಿ ಹರಾಜಿಗೆ ಇಟ್ಟಿದ್ದಾಳೆ.

ಮಹಿಳೆ ಹೆಸರು ಫಾಸಿನೊ. ಆಕೆ ಅರ್ಜೆಂಟೀನಾ (Argentina) ದ ಬ್ಯೂನಸ್ ಐರಿಸ್‌ ನಿವಾಸಿ. ಸ್ನೇಹಿತರ ಜೊತೆ ಗೆಟ್ ಟುಗೆದರ್ ಗೆ ಹೋಗಿದ್ದಾಗ ಆಕೆ ಬಾಯ್ ಫ್ರೆಂಡ್ (Boy friend)  ಮೆಸ್ಸೇಜ್ ಮಾಡ್ತಿರೋದನ್ನು  ಫಾಸಿನೊ ನೋಡಿದ್ದಾಳೆ. ಈ ಬಗ್ಗೆ ಆತನಲ್ಲಿ ವಿಚಾರಿಸಿದ್ದಾಳೆ. ಆದ್ರೆ ಆತ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾನೆ. ಆಕೆ ಬಾಯ್ ಫ್ರೆಂಡ್, ಆಕೆಯ ಆಪ್ತ ಸ್ನೇಹಿತೆ ಜೊತೆ ಸಂಬಂಧದಲ್ಲಿರೋದು ಮಹಿಳೆಗೆ ಗೊತ್ತಾಗಿದೆ. ಚಾಟಿನಲ್ಲಿ ಕೆಲ ಮೆಸ್ಸೇಜ್ ಡಿಲಿಟ್ ಆಗಿತ್ತು ಎಂದಿರುವ ಫಾಸಿನೊ, ಆ ನಂತ್ರ ಸೇಡು ತೀರಿಸಿಕೊಳ್ಳುವ ನಿರ್ಧಾರಕ್ಕೆ ಬಂದ್ಲು. ಅದಕ್ಕಾಗಿ ಆಕೆ ಕೋಪಾ ಟಿಕೆಟ್ ಬಳಸಿಕೊಂಡಳು.

Tap to resize

Latest Videos

ಡೇಟಿಂಗ್: ಈ ವ್ಯಕ್ತಿ ಒಳ್ಳೆ ಪಾರ್ಟ್ನರ್ ಆಗಲ್ಲ ಅಂತ ಹೇಳೋ 7 ಚಿಹ್ನೆಗಳಿವು..

ಆಕೆ ಬಾಯ್ ಪ್ರೆಂಡ್, ಎರಡು ಕೋಪಾ (Copa) ಟಿಕೆಟ್ ಖರೀದಿ ಮಾಡಿದ್ದು, ಅದನ್ನು ಫಾಸಿನೊ ಮನೆಯಲ್ಲಿಟ್ಟಿದ್ದ. ಅದನ್ನು ಇನ್ಸ್ಟಾಗ್ರಾಮ್ (Instagram) ನಲ್ಲಿ ಮಾರಾಟ ಮಾಡಲು ಫಾಸಿನೊ ಮುಂದಾಗಿದ್ದಾಳೆ. ನನ್ನನ್ನು ಫಾಲೋ ಮಾಡುವ ಜನರಲ್ಲಿ ಇಬ್ಬರಿಗೆ ಇದನ್ನು ನೀಡ್ತೇನೆ ಎಂದಿದ್ದಳು. 

ಫಾಸಿನೋ ಮಾತು ತಪ್ಪಲಿಲ್ಲ. ಮಂಗಳವಾರ ಹಂಚಿಕೊಂಡ ವಿಡಿಯೋದಲ್ಲಿ  ಫಾಸಿನೊ, ಲಾಟರಿ (Lottery) ಎತ್ತಿ ಇಬ್ಬರನ್ನು ಆಯ್ಕೆ ಮಾಡಿದ್ದಾಳೆ. ಅವರಿಗೆ ಕೋಪಾ ಅಮೆರಿಕಾ ಟಿಕೆಟ್ ನೀಡಲಿದ್ದಾಳೆ. ಕೋಪಾ ಅಮೆರಿಕಾ ಫುಟ್ಬಾಲ್ ಹೆಚ್ಚು ಪ್ರಸಿದ್ಧಿ ಪಡೆದಿರುವ ಟೂರ್ನಮೆಂಟ್ (Footbal tournament). ಫೆಬ್ರವರಿಯಲ್ಲಿಯೇ ಈ ಪಂದ್ಯಗಳ ಟಿಕೆಟ್ ಮಾರಾಟ ನಡೆದಿದೆ. ಕೋಪಾ ಅಮೆರಿಕಾ ವೆಬ್ಸೈಟ್ ನಲ್ಲಿ ಈ ಟಿಕೆಟ್ ಮಾರಾಟ ನಡೆದಿದೆ. ಸೆಮಿಫೈನಲ್, ಫೈನಲ್ ಪಂದ್ಯದ ಟಿಕೆಟ್ ಕೂಡ ಮಾರಾಟವಾಗಿದೆ. ಕೋಪಾ ಅಮೆರಿಕಾ 2024ರ ಟಿಕೆಟ್ ಬೆಲೆ ಪಂದ್ಯಕ್ಕೆ ತಕ್ಕಂತೆ ಬದಲಾಗುತ್ತದೆ. ಸೆಮಿಫೈನಲ್ ಪಂದ್ಯದ ಟಿಕೆಟ್ ಬೆಲೆ 226 ಡಾಲರ್ ಅಂದ್ರೆ ಸುಮಾರು 18 ಸಾವಿರಕ್ಕಿಂತ ಹೆಚ್ಚಿರುತ್ತದೆ. ಇದನ್ನು ಫಾಸಿನೋ ಪುಕ್ಕಟ್ಟೆಯಾಗಿ ಜನರಿಗೆ ನೀಡ್ತಿದ್ದಾಳೆ ಅಂದ್ರೆ ಜನರು ಬಿಡ್ತಾರಾ?.

ಸೀರಿಯಲ್‌ನ ಈ ಜೋಡಿ ನೋಡಿದ್ರೆ , ಆದ್ರೆ ಇವ್ರ ಥರ ಅರೇಂಜ್ ಮ್ಯಾರೇಜ್ ಆಗ್ಬೇಕು, ಲವ್ವು ಗಿವ್ವು ಬೇಡ ಅಂತೀರಿ!

ಇಬ್ಬರು ಲಕ್ಕಿ ವಿನ್ನರ್ ಅನೌನ್ಸ್ ಮಾಡಿದ ನಂತ್ರ ಫಾಸಿನೋ, ಫಾಲೋವರ್ಸ್ ಗೆ ಮತ್ತೊಂದು ಶಾಕ್ ನೀಡಿದ್ದಾಳೆ. ಬಾಯ್ ಫ್ರೆಂಡ್ ಬಳಿ ಇದ್ದ ಲಿಯೋನೆಲ್ ಮೆಸ್ಸಿಯಿಂದ ಹಸ್ತಾಕ್ಷರದ ಫುಟ್‌ಬಾಲ್ ಜೆರ್ಸಿಯನ್ನು ಹೊರಗೆ ತೆಗೆದಿದ್ದಾಳೆ. ಇದೂ ಮಾರಾಟಕ್ಕಿದೆ ಎಂದು ಅನೌನ್ಸ್ ಮಾಡಿದ್ದಾಳೆ. ಆಕೆ ವಿಡಿಯೋ ವೈರಲ್ ಆಗ್ತಿದ್ದಂತೆ ಆಕೆಯನ್ನು ಫಾಲೋ ಮಾಡೋರ ಸಂಖ್ಯೆ ಹೆಚ್ಚಾಗಿದೆ. ಮೆಸ್ಸಿ ಹಸ್ತಾಕ್ಷರದ ಜೆರ್ಸಿ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಸಾವಿರಕ್ಕೂ ಹೆಚ್ಚು ಮಂದಿ ಈ ವಿಡಿಯೋಕ್ಕೆ ಕಮೆಂಟ್ ಮಾಡಿದ್ದಾರೆ. ಮೆಸ್ಸಿ ಸಹಿ ಇರುವ ಟೀ ಶರ್ಟ್ ಕೂಡ ಸುಲಭಕ್ಕೆ ಸಿಗೋದಿಲ್ಲ. ಈ ಶರ್ಟ್ ಬೆಲೆ ಕೂಡ 45 -46 ಸಾವಿರ ಬೆಲೆ ಬಾಳುತ್ತದೆ. 

click me!