ಜಗತ್ತಿನ ದಿ ಬೆಸ್ಟ್ ಹ್ಯಾಂಡ್‌ರೈಟಿಂಗ್ ಈ ಹುಡುಗಿಯದು.. ಹೇಗಿದೆ ನೋಡಿ ಕೈ ಬರಹ..

By Reshma RaoFirst Published Jul 3, 2024, 11:22 AM IST
Highlights

ಆಕೆ ಕೇವಲ 14 ವರ್ಷದವಳಾಗಿದ್ದಾಗ ಮತ್ತು 8ನೇ ತರಗತಿಯಲ್ಲಿರುವಾಗ ಅವಳ ಅಸೈನ್‌ಮೆಂಟ್ ವೈರಲ್ ಆಯಿತು ಮತ್ತು ಆಕೆಯದು ವಿಶ್ವದಲ್ಲೇ ಅದ್ಭುತ ಕೈ ಬರಹ ಎಂದು ಎಲ್ಲರೂ ಒಪ್ಪಿಕೊಂಡರು.
 

ಇದೇನಿದ್ದರೂ ಕಂಪ್ಯೂಟರ್ ಕಾಲ, ಹ್ಯಾಂಡ್‌ರೈಟಿಂಗ್ ಬೇಕಾಗಿಲ್ಲ ಎಂದು ವಾದಿಸುವವರು ಸಾಕಷ್ಟು ಜನರಿದ್ದಾರೆ. ಆದರೆ, ಕೈ ಬರಹ ಯಾವತ್ತೂ ಔಟ್‌ಡೇಟೆಡ್ ಆಗಲ್ಲ, ಅದೊಂದು ಅತ್ಯಗತ್ಯ ಕೌಶಲ್ಯ ಅನ್ನೋದು ಮತ್ತೆ ಹಲವರ ವಾದ. ಕೈಬರಹ ಎಂದ ಕೂಡಲೇ ಎಲ್ಲರಿಗೂ ನೆನಪಾಗುವುದು ವೈದ್ಯರು ಬರೆದು ಕೊಡುವ ಚೀಟಿ. ಜಗತ್ತಿನ ಅತಿ ಕೆಟ್ಟ ಹ್ಯಾಂಡ್‌ರೈಟಿಂಗ್ ಪ್ರಶಸ್ತಿ ಅಂತೇನಾದ್ರೂ ಕೊಟ್ರೆ ಅದು ವೈದ್ಯರಿಗೇ ಹೋಗಬಹುದು- ಅಥವಾ ಅವರಲ್ಲೇ ಸ್ಪರ್ಧೆ ಹೆಚ್ಚಬಹುದು. ಆದರೆ, ಜಗತ್ತಿನ ಅತ್ಯುತ್ತಮ ಕೈ ಬರಹ ಮಾತ್ರ ನೇಪಾಳದ ಈ ಬೆಡಗಿಯದು. 

ನೇಪಾಳದ ಪ್ರಕತಿ ಮಲ್ಲ ಇಂಥದೊಂದು ಬಿರುದಿಗೆ ಪಾತ್ರಳಾಗಿದ್ದಾಳೆ. ಅವಳು 14 ವರ್ಷದವಳಿದ್ದಾಗ ಮತ್ತು ಎಂಟನೇ ತರಗತಿಯಲ್ಲಿದ್ದಾಗ ಆಕೆ ಬರೆದ ಬರಹವೊಂದು ಅಂತರ್ಜಾಲದಲ್ಲಿ ವೈರಲ್ ಆಗಿತ್ತು. ಆ ಕಾಗದದ ಮೇಲಿನ ಕೈಬರಹ ಜಾಗತಿಕ ಗಮನ ಸೆಳೆಯುವಷ್ಟು ಆಕರ್ಷಕವಾಗಿತ್ತು. ಆಕೆಯ ಕೈಬರಹದ ಸಹಜ ಸೌಂದರ್ಯಕ್ಕೆ ಜನ ಬೆರಗಾದರು.

ಪತ್ತೇದಾರಿಕೆ ಇಷ್ಟಾನಾ? ಒಟಿಟಿಲಿ ಬರ್ತಿದೆ ಸರಣಿ ತನಿಖಾ ಕತೆಗಳು..
 

ಆದರೆ, ಪ್ರಕೃತಿ ಮಲ್ಲಾ ನಿಜವಾಗಿಯೂ ಜಗತ್ತಿನ ಉತ್ತಮ ಕೈ ಬರಹಗಾರ್ತಿ ಎಂಬ ಮನ್ನಣೆಗೆ ಪಾತ್ರವಾಗಿದ್ದು ತನ್ನ 16ನೇ ವಯಸ್ಸಿನಲ್ಲಿ. ಯುಎಇಯ 51ನೇ ಸ್ಪಿರಿಟ್ ಆಫ್ ಯೂನಿಯನ್ ಸಂದರ್ಭದಲ್ಲಿ ಆಕೆ ಯುಎಇಯ ನಾಯಕತ್ವ ಮತ್ತು ನಾಗರಿಕರಿಗೆ ಅಭಿನಂದನಾ ಪತ್ರವನ್ನು ಬರೆದಿದ್ದಳು. ಇದನ್ನು ನೋಡಿದ ಅಧಿಕಾರಿಗಳು ಬೆರಗಾದರು. 2022ರಲ್ಲಿ, ನೇಪಾಳದಲ್ಲಿರುವ ಯುಎಇ ರಾಯಭಾರ ಕಚೇರಿಯು ಪ್ರಕೃತಿ ಮಲ್ಲಾ ಬಗ್ಗೆ ಟ್ವೀಟ್ ಮಾಡಿತು, ಯುಎಇಯ 51 ನೇ ಸ್ಪಿರಿಟ್ ಆಫ್ ಯೂನಿಯನ್‌ನ ಸಂಭ್ರಮಾಚರಣೆಯಲ್ಲಿ ಅವಳಿಗೆ ವಿಶ್ವದ ಅತ್ಯುತ್ತಮ ಕೈಬರಹ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಹೇಳಿದರು. ಪ್ರಕೃತಿ ಯುಎಇ ರಾಯಭಾರ ಕಚೇರಿಯ ಅಧಿಕಾರಿಗಳಿಂದ ಮನ್ನಣೆಯನ್ನೂ ಪಡೆದಳು.

ವೈರಲ್ ಟ್ವೀಟ್ ಪ್ರಕೃತಿ ಮಲ್ಲಾ ಅವರ ಕೆಲಸವನ್ನು ಪ್ರದರ್ಶಿಸಿತು, ಪ್ರತಿ ಅಕ್ಷರವನ್ನು ಅಸಾಧಾರಣವಾಗಿ ಸುಂದರವಾಗಿ ರಚಿಸಲಾಗಿತ್ತು. ಅವಳ ಕೈಬರಹವು ನಿಜವಾಗಿಯೂ ಆಕರ್ಷಕವಾಗಿದೆ ಮತ್ತು ಅವಳ ಕೈಬರಹದ ಪರಾಕ್ರಮಕ್ಕೆ ಹೋಲಿಸಿದರೆ ಕಂಪ್ಯೂಟರ್ ಕೂಡ ಸೋಲನ್ನು ಅನುಭವಿಸಬಹುದು ಎಂದು ಹೇಳುವುದು ಅತಿಶಯೋಕ್ತಿಯಾಗುವುದಿಲ್ಲ.

click me!