ನೀತಾ ಅಂಬಾನಿ ಶಾಪಿಂಗ್‌ ಕ್ರೇಜ್‌ ಎಷ್ಟಿದೆ ಗೊತ್ತಾ? ಖಾಸಗಿ ಜೆಟ್‌ನಲ್ಲಿ ಶ್ರೀಲಂಕಾಗೆ ಹೋದದ್ದೇಕೆ?

By Bhavani Bhat  |  First Published Dec 7, 2024, 5:00 PM IST

ಬಿಲಿಯನೇರ್ ನೀತಾ ಅಂಬಾನಿ ಐಷಾರಾಮಿ ಜೀವನಶೈಲಿಗೆ ಹೆಸರುವಾಸಿ. ಆದರೆ ದುಬಾರಿ ಟೀ ಕಪ್‌ಗಳಿಗಾಗಿ ಶ್ರೀಲಂಕಾಕ್ಕೆ ಹೋದದ್ದು ಏಕೆ? ಈ ಲೇಖನದಲ್ಲಿ ನೀತಾ ಅವರ ಶಾಪಿಂಗ್ ಕ್ರೇಜ್ ಮತ್ತು ಶ್ರೀಲಂಕಾ ಟ್ರಿಪ್‌ನ ಹಿಂದಿನ ಗುಟ್ಟನ್ನು ಬಿಚ್ಚಿಡಲಾಗಿದೆ.


ಬಿಲಿಯನೇರ್‌ ಮುಕೇಶ್‌ ಅಂಬಾನಿ ಪತ್ನಿ ನೀತಾ ಅಂಬಾನಿ, ಸ್ವತಃ ಸಮಾಜ ಸೇವಕಿ. ರಿಲಯನ್ಸ್ ಇಂಡಸ್ಟ್ರೀಸ್‌ನ ಸಮಾಜ ಸೇವಾ ಅಂಗವಾದ ರಿಲಯನ್ಸ್ ಫೌಂಡೇಶನ್‌ನ ಅಧ್ಯಕ್ಷೆ. ಆದರೂ ಈಕೆಯ ಶಾಪಿಂಗ್‌ ಕ್ರೇಜ್‌ ಬಗ್ಗೆ ಉದ್ಯಮಿಕ ವಲಯದಲ್ಲಿ ಸಾಕಷ್ಟು ರೂಮರ್‌ಗಳು ಎಲ್ಲ ಇವೆ. 

ಅಂಬಾನಿ ಕುಟುಂಬವನ್ನು ವಿಶ್ವದ ಅತ್ಯಂತ ಶ್ರೀಮಂತ ಮತ್ತು ಪ್ರಭಾವಿ ಕುಟುಂಬಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ನೇತೃತ್ವದಲ್ಲಿ ಈ ಕುಟುಂಬ ವ್ಯಾಪಾರ, ಸಮಾಜಸೇವೆ ಮತ್ತು ಸಾಮಾಜಿಕ ಪ್ರಭಾವದಲ್ಲಿ ಅಪಾರ ಸಂಪತ್ತು ಮತ್ತು ಅಧಿಕಾರದ ಪರಂಪರೆಯನ್ನು ನಿರ್ಮಿಸಿದೆ. ದಂಪತಿಗಳ ಮೂವರು ಮಕ್ಕಳು ಕೂಡ- ಇಶಾ ಅಂಬಾನಿ, ಅನಂತ್ ಅಂಬಾನಿ ಮತ್ತು ಆಕಾಶ್ ಅಂಬಾನಿ- ಸಾಕಷ್ಟು ಚುರುಕು ಮತ್ತು ಸೇವಾಭಾವನೆಯವರು.

Tap to resize

Latest Videos

ಮಾಧ್ಯಮ ವರದಿಗಳ ಪ್ರಕಾರ, ಬಿಲಿಯನೇರ್ ನೀತಾ ಅಂಬಾನಿ ಸರಳತೆ ಮತ್ತು ಐಷಾರಾಮಿ ಜೀವನಶೈಲಿಯನ್ನು ಸಮತೋಲನಗೊಳಿಸಿಕೊಂಡು ದೈನಂದಿನ ದಿನಚರಿ ಮಾಡುತ್ತಾರಂತೆ. ಈಕೆಗೆ ಕೆಲವು ಬ್ರ್ಯಾಂಡ್‌ಗಳ ಮೇಲೆ ಬಿಡಲಾರದ ಮೋಹವಿದೆ. ಈಕೆ ಜಪಾನ್‌ನ ಅತ್ಯಂತ ಹಳೆಯ ಪಿಂಗಾಣಿ ತಯಾರಿಕೆ ಬ್ರ್ಯಾಂಡ್‌ ಆಗಿರುವ ನೊರಿಟೇಕ್ ತಯಾರಿಸಿದ ಸೊಗಸಾದ ಟೀಕಪ್‌ನಲ್ಲಿ ಬೆಳಿಗ್ಗೆ ಚಹಾವನ್ನು ಆನಂದಿಸುತ್ತಾರೆ. ಇದರಲ್ಲಿ ಸಂಕೀರ್ಣವಾದ ಚಿನ್ನದ ಕುಸುರಿಗಳಿವಯಂತೆ. ಇದರ ಪ್ರತಿ ಟೀ ಕಪ್‌ನ ಬೆಲೆ ರೂ 3 ಲಕ್ಷಕ್ಕಿಂತ ಹೆಚ್ಚು ಎಂದು ವರದಿಯಾಗಿದೆ. ಇದು ಒಂದು ಅದ್ಭುತವಾದ ಟೀ ಸೆಟ್‌. ಒಂದು ಸೆಟ್‌ಗೆ ಇದರ ಒಟ್ಟು ಮೌಲ್ಯ ರೂ 1,50,00,000 ಕೋಟಿ ಮೀರುತ್ತದೆ.

ನೀತಾ ಅಂಬಾನಿ ವಿಶ್ವದ ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾದ ಆಂಟಿಲಿಯಾದಲ್ಲಿ ವಾಸಿಸುತ್ತಾಳೆ. $2.8 ಶತಕೋಟಿ ಮತ್ತು $3 ಶತಕೋಟಿ ನಡುವಿನ ಅಂದಾಜು ನಿವ್ವಳ ಮೌಲ್ಯದೊಂದಿಗೆ, ನೀತಾ ಅವರ ಸಂಪತ್ತು ಪ್ರಾಥಮಿಕವಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಲ್ಲಿ ಗಣನೀಯ ಪಾಲನ್ನು ಹೊಂದಿದೆ. ಅದರಲ್ಲಿ ಅವರ ಪತಿ ಮುಕೇಶ್ ಅಂಬಾನಿ ಸುಮಾರು 50% ಮಾಲೀಕತ್ವವನ್ನು ಹೊಂದಿದ್ದಾರೆ. ಇದರ ನಡುವೆ ತನ್ನ ಐಷಾರಾಮಿ ಮನೆಗೆ ಟೀ ಕಪ್‌ ಖರೀದಿಸುವ ವಿಷಯ ಬಂದಾಗ, ಹಣವನ್ನು ಉಳಿಸಲು ನೀತಾ ಒಮ್ಮೆ ಶ್ರೀಲಂಕಾಕ್ಕೆ ಹಾರಲು ನಿರ್ಧರಿಸಿದ್ದಳಂತೆ.

ನೀತಾ ಅಂಬಾನಿ ಒಮ್ಮೆ ತನ್ನ ಖಾಸಗಿ ಜೆಟ್‌ನಲ್ಲಿ ಶ್ರೀಲಂಕಾಕ್ಕೆ ಹಾರಿದ್ದಳು. ಅಲ್ಲಿ ಅವರು ನೊರಿಟಾಕೆ ಬ್ರ್ಯಾಂಡ್‌ನ 25,000 ಅಡುಗೆ ಸಾಮಾನುಗಳನ್ನು ಖರೀದಿಸಿದರಂತೆ. ಇದರಲ್ಲಿ ಇದ್ದುದು ಸುಮಾರು 25,000 ಚೈನಾವೇರ್‌ಗಳು. ಇವು 22 ಕ್ಯಾರೆಟ್ ಚಿನ್ನ ಅಥವಾ ಪ್ಲಾಟಿನಂನಿಂದ ಟ್ರಿಮ್ ಮಾಡಿದ ಪಿಂಗಾಣಿ ಪಾತ್ರೆಗಳು. 106 ವರ್ಷ ಹಳೆಯದಾದ ಜಪಾನೀಸ್ ಬ್ರ್ಯಾಂಡ್ ನೊರಿಟೇಕ್ ಬ್ರ್ಯಾಂಡ್‌ನ ಪಾತ್ರೆಗಳಾಗಿದ್ದವು ಇವು. 

ಮುಟ್ಟಿನ ಸಮಯದಲ್ಲಿ ವಾಕಿಂಗ್ ಹೋಗಬಹುದಾ?

ದಿ ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ, ಅಂಬಾನಿ ನಿವಾಸದಿಂದ ಸ್ವಲ್ಪ ದೂರದಲ್ಲಿರುವ ಮುಂಬೈನ ಕೆಂಪ್ಸ್ ಕಾರ್ನರ್‌ನಲ್ಲಿರುವ ವಿಶೇಷ ನೊರಿಟೇಕ್ ಶೋರೂಮ್‌ನಲ್ಲಿ ಕೂಡ ಈ ಉತ್ಪನ್ನಗಳು ಇದ್ದವಂತೆ. ಆದರೆ ನೀತಾ ಅಲ್ಲಿ ಇದನ್ನು ಖರೀದಿಸಲಿಲ್ಲ. ಬದಲು ನೀತಾ ಅಂಬಾನಿ ಶ್ರೀಲಂಕಾದಲ್ಲಿ ಖರೀದಿ ಮಾಡಲು ಆಯ್ಕೆ ಮಾಡಿದರು. ಅಲ್ಲಿ ನೊರಿಟೇಕ್ ಉತ್ಪನ್ನಗಳು ಭಾರತ ಸೇರಿದಂತೆ ವಿಶ್ವದ ಇತರ ಭಾಗಗಳಿಗಿಂತ 70-80% ಹೆಚ್ಚು ಡಿಸ್ಕೌಂಟ್‌ ದರದಲ್ಲಿ ಸಿಗುತ್ತವಂತೆ. ಜಪಾನಿನ ಬ್ರ್ಯಾಂಡ್‌ನ ಅತಿದೊಡ್ಡ ಉತ್ಪಾದನಾ ಫ್ಯಾಕ್ಟರಿ ಶ್ರೀಲಂಕಾದಲ್ಲಿದೆ. ಹೀಗಾಗಿ  ಇದು ಅಷ್ಟು ಕಡಿಮೆ ಬೆಲೆಗೆ ಅಲ್ಲಿ ಸಿಗುತ್ತದೆ. 100ಕ್ಕೂ ಹೆಚ್ಚು ದೇಶಗಳಿಗೆ ಈ ಉತ್ಪನ್ನಗಳು ಇಲ್ಲಿಂದ ರಫ್ತಾಗುತ್ತವೆ. ಚೀನಾಗೆ ಕೂಡ ಹೋಗುತ್ತದೆ.

ದಿ ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, 2010ರಲ್ಲಿ, ಶ್ರೀಲಂಕಾದಲ್ಲಿ, 22 ಕ್ಯಾರೆಟ್ ಚಿನ್ನ ಅಥವಾ ಪ್ಲಾಟಿನಂ ಟ್ರಿಮ್ಮಿಂಗ್‌ಗಳಿಂದ ಅಲಂಕರಿಸಲ್ಪಟ್ಟ 50-ಪೀಸ್ ಡಿನ್ನರ್ ಸೆಟ್‌ನ ಬೆಲೆ ಸುಮಾರು $300 ರಿಂದ $500 ಇತ್ತು. ಇದಕ್ಕೆ ವಿರುದ್ಧವಾಗಿ, ಅದೇ ಸೆಟ್ ಭಾರತದಲ್ಲಿ $800 ಮತ್ತು $2,000 ನಡುವೆ ಬೆಲೆಯಿತ್ತು. ಅಂದರೆ ಇಂಥ ಒಂದು ಸೆಟ್‌ ಖರೀದಿಯಲ್ಲಿ ನೀತಾ ಏನಿಲ್ಲ ಅಂದರೂ $1500 ಉಳಿಸಿರಬೇಕು. ಅದೇ 25000 ಸೆಟ್‌ ಅಂದರೆ ಎಷ್ಟಾಯ್ತು ಎಂದು ನೀವೇ ಲೆಕ್ಕ ಹಾಕಿ. 

ಮಹಿಳೆಯರಿಗೆ ಗುಡ್ ನ್ಯೂಸ್: ಕೇವಲ 30 ಸೆಕೆಂಡ್‌ಗಳಲ್ಲಿ ಧರಿಸುವ ಜಿಪ್ಪಿಂಗ್ ಸೀರೆ!
 

click me!