ಭಾರತದ ಸೆಲೆಬ್ರಿಟಿ ನೀತಾ ಅಂಬಾನಿ ಎಷ್ಟೇ ಶ್ರೀಮಂತರಾದ್ರೂ ಭಾರತದ ಸಂಪ್ರದಾಯ, ಸರಳತೆಯನ್ನು ಬಿಟ್ಟಿಲ್ಲ. ಸುಂದರ ಸೀರೆಯುಟ್ಟು ಎಲ್ಲರ ಮನಸ್ಸು ಗೆದ್ದಿರುವ ನೀತಾ, ಕಾಶಿ ಚಾಟ್ ಶಾಪ್ ನಲ್ಲಿ ಸಾಮಾನ್ಯರಂತೆ ಕುಳಿತು ಚಾಟ್ ಸವಿ ಸವಿದು ಮತ್ತಷ್ಟು ಆಪ್ತರಾಗಿದ್ದಾರೆ.
ದೇಶದ ದೊಡ್ಮನೆಯಲ್ಲಿ ಈಗ ಮದುವೆ ಸಂಭ್ರಮ ಮನೆ ಮಾಡಿದೆ. ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ತಮ್ಮ ಮಗ ಅನಂತ್ ಅಂಬಾನಿ ಮದುವೆ ತಯಾರಿಯಲ್ಲಿ ಬ್ಯುಸಿ ಇದ್ದಾರೆ. ನೀತಾ ಅಂಬಾನಿ ಮಗನ ಮದುವೆ ಕಾರ್ಡ್ ಹಿಡಿದು ವಾರಣಾಸಿಯ ಕಾಶಿಗೆ ತೆರಳಿದ್ದರು. ಪೂಜೆ ನಂತ್ರ ಭಗವಂತ ಈಶ್ವರನಿಗೆ ಕಾರ್ಡ್ ಅರ್ಪಿಸಿದ ನೀತಾ ಅಂಬಾನಿ, ವಾರಣಾಸಿಯ ಪ್ರಸಿದ್ಧ ಚಾಟ್ ಶಾಪ್ ಗೆ ಭೇಟಿ ನೀಡಿದ್ದರು. ಚಾಟ್ ಶಾಪ್ ನಲ್ಲಿಯೇ ಕುಳಿತ ನೀತಾ ಅಂಬಾನಿ ಅಲ್ಲಿನ ಪ್ರಸಿದ್ಧ ಟೊಮಾಟೊ ಚಾಟ್ ಹಾಗೂ ಆಲೂ ಟಿಕ್ಕಿಯ ಸವಿ ಸವಿದ್ರು.
ಮಗ ಅನಂತ್ ಅಂಬಾನಿ (Anant Ambani) ಹಾಗೂ ಬಾವಿ ಸೊಸೆ ರಾಧಿಕಾ (Radhika) ಮದುವೆ ಕಾರ್ಡ್ ಹಿಡಿದು ನೀತಾ ಅಂಬಾನಿ ಸೋಮವಾರ ವಾರಣಾಸಿ (Varanasi)ಗೆ ಹೋಗಿದ್ರು. ಅಲ್ಲಿ ಕಾಶಿ ವಿಶ್ವನಾಥ ದೇವಸ್ಥಾನ ಹಾಗೂ ಗಂಗೆಯ ದರ್ಶನ ಪಡೆದ್ರು. ಪೂಜೆ, ಆಶೀರ್ವಾದದ ನಂತ್ರ ಅವರು ಕಾಶಿ ಚಾಟ್ ಬಂಡಾರಕ್ಕೆ ಹೋಗಿ. ಅಲ್ಲಿ ಆಹಾರ ಸೇವನೆ ಮಾಡಿದ್ದಾರೆ. ಇದಕ್ಕಿಂತ ಮೊದಲು ನೀತಾ ಅಂಬಾನಿ, ಗಂಗಾ ಆರತಿಯಲ್ಲಿ ಕೂಡ ಪಾಲ್ಗೊಂಡಿದ್ದರು.
ಬಾಡಿಗೆ ಮನೆಯಲ್ಲಿದ್ರೆ ಸಿಗೋ ಈ ಲಾಭಗಳು ಸ್ವಂತ ಮನೇಲಿ ಸಿಗೋಲ್ಲ..
ಚಾಟ್ ತಿಂದ ನೀತಾ ಅಂಬಾನಿ, ಮದುವೆಗೆ ಬರುವಂತೆ ಅಲ್ಲಿನ ಸಿಬ್ಬಂದಿಯನ್ನು ಆಹ್ವಾನಿಸಿದ್ದಾರೆ. ಚಾಟ್ ಗೆ ಏನೇನು ಹಾಕಲಾಗಿದೆ ಎಂಬ ಮಾಹಿತಿ ಪಡೆದ ಅವರು, ಮದುವೆಯಲ್ಲಿ ಇದನ್ನು ರೆಡಿ ಮಾಡಲು ಬರ್ತಿರಾ ಎಂದು ಕೇಳಿದ್ದಾರೆ. ಇದಕ್ಕೆ ಸಿಬ್ಬಂದಿ ತಲೆಯಾಡಿಸಿದ್ದನ್ನು ನೀವು ನೋಡ್ಬಹುದು.
ಮಗ ಅನಂತ್ ಹಾಗೂ ಸೊಸೆ ರಾಧಿಕಾರ ಒಂದು ಕಾರ್ಯಕ್ರಮವನ್ನು ಕಾಶಿಯಲ್ಲಿ ಮಾಡ್ತೇವೆ. ಅದಕ್ಕಾಗಿ ಮಗ ಹಾಗೂ ಸೊಸೆಯನ್ನು ಕಾಶಿಗೆ ಕರೆದುಕೊಂಡು ಬರ್ತೇನೆ ಎಂದು ನೀತಾ ಅಂಬಾನಿ ಹೇಳಿದ್ದಾರೆ. ಮಗ ಅನಂತ್ ಹಾಗೂ ಸೊಸೆ ರಾಧಿಕಾ ಮದುವೆಗೆ ಆಶೀರ್ವಾದ ಪಡೆಯಲು ವಿಶ್ವನಾಥ ನೆಲೆಸಿರುವ ಜಾಗಕ್ಕೆ ಬಂದಿದ್ದೇನೆ ಎಂದ ನೀತಾ ಅಂಬಾನಿ, ನಮ್ಮ ಕುಟುಂಬದ ಜೊತೆ ಇಡೀ ದೇಶದ ಮೇಲೆ ಭಗವಂತ ಈಶ್ವರನ ಆಶೀರ್ವಾದ ಸದಾ ಇರಲಿ ಎಂದು ನೀತಾ ಇದೇ ಸಮಯದಲ್ಲಿ ಪ್ರಾರ್ಥಿಸಿದ್ದಾರೆ.
ನೀತಾ ಅಂಬಾನಿ ಜೊತೆ ಪ್ರಸಿದ್ಧ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಕೂಡ ವಾರಣಾಸಿಗೆ ಭೇಟಿ ನೀಡಿದ್ದರು. ಮೀಡಿಯಾ ಜೊತೆ ಮಾತನಾಡಿದ ನೀತಾ ಅಂಬಾನಿ, ಹತ್ತು ವರ್ಷದ ನಂತ್ರ ಕಾಶಿಗೆ ಬಂದಿದ್ದೇನೆ ಎಂದ್ರು. ಕಾಶಿ ವಿಶ್ವನಾಥ್ ಕಾರಿಡಾರ್ ನೋಡಿ ನನಗೆ ಖುಷಿಯಾಗಿದೆ ಎಂದು ಇದೇ ಸಂದರ್ಭದಲ್ಲಿ ನೀತಾ ಹೇಳಿದ್ದಾರೆ.
ಜುಲೈ 12ರಂದು ನಡೆಯಲಿದೆ ಅನಂತ್ – ರಾಧಿಕಾ ಮದುವೆ : ಬಹು ನಿರೀಕ್ಷಿತ ಅನಂತ್ ಹಾಗೂ ರಾಧಿಕಾ ಮದುವೆ ಜುಲೈ 12, ಸೋಮವಾರ ನಡೆಯಲಿದೆ. ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಅತಿಥಿಗಳಿಗೆ ಭಾರತೀಯ ಸಾಂಪ್ರದಾಯಿಕ ಉಡುಗೆ ಧರಿಸಿ ಬರುವಂತೆ ಹೇಳಲಾಗಿದೆ. ಮರುದಿನ ಅಂದ್ರೆ ಶನಿವಾರ, ಮಂಗಳಕರ ಆಶೀರ್ವಾದ ಸಮಾರಂಭ ನಡೆಯಲಿದೆ. ಅದಕ್ಕೆ ಡ್ರೆಸ್ ಕೋಡ್ ಭಾರತೀಯ ಫಾರ್ಮಲ್ ವೇರ್ ಆಗಿದೆ. ಜುಲೈ 14 ರಂದು ರಿಸೆಪ್ಷನ್ ನಡೆಯಲಿದೆ. ಇದಕ್ಕೆ ಸೆಲೆಬ್ರಿಟಿಗಳ ದಂಡೇ ಹರಿದು ಬರುವ ನಿರೀಕ್ಷೆ ಇದೆ. ಮದುವೆ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ (ಬಿಕೆಸಿ) ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಸಾಂಪ್ರದಾಯಿಕ ಹಿಂದೂ ವೈದಿಕ ಶೈಲಿಯಲ್ಲಿ ನಡೆಯಲಿದೆ.
ತನ್ನ ಅಗಾಧ ಸೌಂದರ್ಯಕ್ಕೆ ಅವಿವಾಹಿತಳಾಗಿಯೇ ಉಳಿದ ಜಗತ್ತಿನ ಅತ್ಯಂತ ಸುಂದರಿ!
ಅನಂತ್ ಅಂಬಾನಿ ಹಾಗೂ ರಾಧಿಕಾ ಮದುವೆಗೂ ಮುನ್ನ ಪೂರ್ವ ವಿವಾಹ ಸಮಾರಂಭ ನಡೆದಿದೆ. ಮೊದಲ ಸಮಾರಂಭ ಈ ವರ್ಷದ ಆರಂಭದಲ್ಲಿ ಗುಜರಾತ್‌ನ ಜಾಮ್‌ನಗರದಲ್ಲಿ ಆಯೋಜಿಸಲಾಗಿತ್ತು. ಇದರಲ್ಲಿ ಜಗತ್ತಿನಾದ್ಯಂತ ಇರುವ ಅನೇಕ ಸೆಲೆಬ್ರಿಟಿಗಳು ಭಾಗಿಯಾಗಿದ್ದರು.
रिलायंस फाउंडेशन की फाउंडर और चेयरपर्सन नीता अंबानी सोमवार को वाराणसी पहुंचीं. यहां उन्होंने अपने बेटे अनंत अंबानी और होने वाली बहु राधिका मर्चेंट की शादी का न्योता बाबा विश्वनाथ को दिया. इसके बाद नीता अंबानी यहां की लोकल चाट की दुकान में चाट का लुत्फ़ उठाती दिखाई दीं. इस दौरान… pic.twitter.com/qcbO4prYC8
— AajTak (@aajtak)