ಚೇರ್ಮೆನ್ ಮಗಳು ಐಶ್ವರ್ಯ ಕ್ಲಾಸಿಗೆ ಹಾಕಿದ್ರಾ ಬಂಕ್? ಅಟೆಂಡೆನ್ಸ್ ಬಗ್ಗೆ ಡಿಕೆಶಿ ಪುತ್ರಿ ಹೇಳಿದ್ದೇನು?

By Chethan KumarFirst Published Jun 24, 2024, 10:52 AM IST
Highlights

ಡಿಕೆ ಶಿವಕುಮಾರ್ ಪುತ್ರಿ ತರಗತಿಗಳಿಗೆ ಬಂಕ್ ಹಾಕಿದ್ದಾರಾ? ಐಶ್ವರ್ಯ ಡಿಕೆಎಸ್ ಹೆಗ್ಡೆಯ ಅಟೆಂಡೆನ್ಸ್ ಎಷ್ಟಿತ್ತು? ಈ ಕುರಿತು ಖುದ್ದು ಐಶ್ವರ್ಯ ಹಲವು ಮಾಹಿತಿ ಹಂಚಿಕೊಂಡಿದ್ದಾರೆ.

ಬೆಂಗಳೂರು(ಜೂ.24) ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಡಿಕೆಎಸ್ ಹೆಗ್ಡೆ ತಮ್ಮ ಬಾಲ್ಯದ ದಿನ ಹಾಗೂ ನಡೆದು ಬಂದ ಹಾದಿ ಕುರಿತು ಹಲವು ಘಟನೆಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಶಾಲಾ ಕಾಲೇಜಿನ ಹಾಜರಾತಿ ಕುರಿತು ಐಶ್ವರ್ಯ ಡಿಕೆಎಸ್ ಹೆಗ್ಡೆ ಹೇಳಿದ್ದಾರೆ. ನಾವು ಡಿಕೆ ಶಿವಕುಮಾರ್ ಮಕ್ಕಳಾಗಿರಬಹುದು, ಆದರೆ ಒಂದೇ ಒಂದು ದಿನ ತರಗತಿಗೆ ಬಂಕ್ ಹಾಕಿಲ್ಲ. ನಾನು,ತಮ್ಮ ಹಾಗೂ ತಂಗಿ ಹಾಜರಾತಿ ಶೇಕಡಾ 100ರಷ್ಟಿತ್ತು. ಪ್ರತಿ ವರ್ಷ ನಮಗೆ ಶೇಕಡಾ 100ರಷ್ಟು ಹಾಜರಾತಿ ಪಡೆದ ಸರ್ಟಿಫಿಕೇಟ್ ಸಿಗುತ್ತಿತ್ತು ಎಂದು ಐಶ್ವರ್ಯ ಹೇಳಿದ್ದಾರೆ. ಇದೇ ವೇಳೆ ರೇಗಿಸಿದವರಿಗೆ ತಿರುಗಿಸಿ ನನ್ನ ತಾಯಿ ಹೇಳುತ್ತಿದ್ದದ್ದು ಒಂದೇ ಮಾತು, ನಾವು ಏನು ಅನ್ನೋದು ಶಿಕ್ಷಣದ ಮೂಲಕ ತೋರಿಸಿಕೊಡಬೇಕು ಎನ್ನುತ್ತಿದ್ದರು ಎಂದು ಡಿಕೆ ಶಿವಕುಮಾರ್ ಪುತ್ರಿ ಹೇಳಿದ್ದಾರೆ. 

ರ್‍ಯಾಪಿಡ್ ರಶ್ಮಿ ನಡೆಸಿಕೊಡುವ ಸಂದರ್ಶನದಲ್ಲಿ ಮಾತನಾಡಿದ ಐಶ್ವರ್ಯ ಡಿಕೆಎಸ್ ಹೆಗ್ಡೆ ಹಲವು ಮಾಹಿತಿ ಹಂಚಿಕೊಂಡಿದ್ದಾರೆ. ಜೀವನದ ಮೌಲ್ಯಗಳು ಅಂದರೆ ನಾವು ಯಾವ ಸಂಸ್ಕೃತಿಯಲ್ಲಿ ಬೆಳೆದು ಬರುತ್ತೇವೆ ಅನ್ನೋದರ ಮೇಲೆ ನಿಂತಿರುತ್ತದೆ. ನಿಮ್ಮ ತಂದೆ ತಾಯಿ ಯಾವ ಸಂಸ್ಕೃತಿಯನ್ನು ಧಾರೆ ಎರೆದು ನಿಮ್ಮನ್ನು ಬೆಳೆಸಿರುತ್ತಾರೆ, ಆ ಕಲ್ಚರನ್ನು ನೀವು ಹೇಗೆ ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದೀರಿ ಅನ್ನೋದು ಮುಖ್ಯವಾಗುತ್ತದೆ. ನನಗೆ ಜೀವನದಲ್ಲಿ ಶಿಕ್ಷಣ ಪ್ರಮುಖ ಪಾತ್ರವಹಿಸಿದ ಸಂಸ್ಕೃತಿಯಾಗಿದೆ ಎಂದು ಡಿಕೆಶಿ ಪುತ್ರಿ ಐಶ್ವರ್ಯ ಹೇಳಿದ್ದಾರೆ.

Latest Videos

ಬೆಂಗಳೂರಲ್ಲಿ ಓದಿದ್ರೆ ಸಾಕು, ಪುತ್ರಿಗೆ ಡಿಕೆಶಿ ಹಾಕಿದ್ರಾ ಕಂಡೀಷನ್? ಐಶ್ವರ್ಯ ಮುಕ್ತ ಮಾತು!

 ಇಂದು ನಾನು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರಬಹುದು. ಆದರೆ ನನಗೆ ಚಿಕ್ಕವಯಸ್ಸಿನಿಂದ ಅಪ್ಪ ಅಮ್ಮ ಹೇಳಿಕೊಟ್ಟಿದ್ದೆ ಶಿಕ್ಷಣ ನಿನ್ನ ಅತೀ ದೊಡ್ಡ ಶಕ್ತಿ ಎಂದಿದ್ದಾರೆ. ಹಣ, ಆಸ್ತಿ ಇಲ್ಲದೆ ಬದುಕುಬಹುದು. ಅದಕ್ಕೆ ಶಿಕ್ಷಣ ಅತೀ ಮುಖ್ಯ ಎಂದು ನನಗೆ ಹೇಳಿಕೊಟ್ಟಿದ್ದಾರೆ. ನಾನು ಚಿಕ್ಕವಳಿದ್ದಾಗ ಎಲ್ಲಾರು ನನ್ನ ಅಮ್ಮನ ರೇಗಿಸುತ್ತಿದ್ದರು. ಎಲ್ಲಿ ಲಕ್ಷ್ಮಿ ಇರುತ್ತೆ, ಅಲ್ಲಿ ಸರಸ್ವತಿ ಇಲ್ಲ ಎನ್ನುತ್ತಿದ್ದರು. ಈ ರೀತಿಯ ಮಾತುಗಳು ಕೇಳಿಬಂದಾಗ ಅಮ್ಮ ನನಗೆ ತಿರುಗಿಸಿ ಹೇಳುತ್ತಿದ್ದರು. ನಾನು, ತಮ್ಮ ಹಾಗೂ ತಂಗಿಗೆ ಅಮ್ಮ ಪ್ರತಿ ಬಾರಿ, ಈ ರೀತಿ ರೇಗಿಸುವ ಜನಕ್ಕೆ ನಾವು ಏನು ಅನ್ನೋದು ತೋರಿಸಬೇಕು. ನೀವು ಓದಲೇ ಬೇಕು ಎಂದು ಅಮ್ಮ ಹೇಳುತ್ತಿದ್ದರು ಎಂದು ಐಶ್ವರ್ಯ ಡಿಕೆಎಸ್ ಹೆಗ್ಡೆ ಹೇಳಿದ್ದಾರೆ.

 

 

ಪ್ರತಿ ದಿನ ಅಮ್ಮ ಜೊತೆಗೆ ಕೂರಿಸಿ ಓದಿಸುತ್ತಿದ್ದರು. ನೀವು ಹೇಳಬಹುದು ನಾವು ಡಿಕೆ ಶಿವಕುಮಾರ್ ಮಕ್ಕಳು ಅಂತ. ಆದರೆ ನಮಗಿರುವುದು ಉಷಾ ಶಿವಕುಮಾರ್ ತೋರಿಸಿಕೊಟ್ಟ ಸಂಸ್ಕೃತಿ. ಬಾಲ್ಯದಲ್ಲಿ ನಮಗೆ ಮನೆಯಲ್ಲಿ ತುಂಬಾ ಪ್ರಮುಖವಾದ ಸಮಯ ಅಂದರೆ ಓದು. ತಾಯಿ ಓದಿಸುವುದೇ ಪ್ರಮುಖವಾಗಿತ್ತು. ನಾವು ಶಾಲೆ ಕಾಲೇಜಿಗೆ ರಜೆ ಹಾಕಿದವರೇ ಇಲ್ಲ. ನಾವು ಮೂರು ಜನ ಮಕ್ಕಳಿಗೆ ಫುಲ್ ಹಾಜರಾತಿ ಇರುತ್ತಿತ್ತು. ಒಂದು ದಿನವೂ ನಾವು ಒಂದು ಮದುವೆ, ಅಥವಾ ಬೇರೆ ಕಾರ್ಯಕ್ರಮಕ್ಕೆ ಹೋದವರಲ್ಲ. ನಮ್ಮನ್ನು ಅಮ್ಮ ಶಾಲೆಗೆ ರಜೆ ಹಾಕಿಸಿ ಕರೆದುಕೊಂಡು ಹೋಗುತ್ತಿರಲಿಲ್ಲ. ಇದು ನಮ್ಮ ಮನೆಯಲ್ಲಿ ನಮಗೆ ಶಿಕ್ಷಣಕ್ಕೆ ನೀಡಿದ ಪ್ರಾಮುಖ್ಯತೆ ಆಗಿತ್ತು. ನನ್ನ ತಂದೆ ಹಾಗೂ ತಾಯಿ ಇಬ್ಬರೂ ನಮ್ಮ ಶಿಕ್ಷಣಕ್ಕೆ ಪ್ರಮುಖ ಆದ್ಯತೆ ನೀಡಿದ್ದಾರೆ ಎಂದು ಐಶ್ವರ್ಯ ಡಿಕೆಎಸ್ ಹೆಗ್ಡೆ ಹೇಳಿದ್ದಾರೆ.

ಮನಗೆದ್ದ ಸೊಸೆ ಐಶ್ವರ್ಯಗೆ ಅತ್ತೆಯ ಉಡುಗೊರೆ, ಡಿಕೆಶಿ ಪುತ್ರಿ ಹೆಗಲಿಗೆ ಹೊಸ ಜವಾಬ್ದಾರಿ!
 

click me!