ತನ್ನದೇ ಅಂತ್ಯಸಂಸ್ಕಾರಕ್ಕೆ ರೂಲ್ಸ್ ಹೇಳಿದ ಅಜ್ಜಿ, ನೀ ಸತ್ತಿದ್ದು ನಮಗೆ ಗೊತ್ತಾಗೋದೇ ಬೇಡವೆಂದ ನೆಟ್ಟಿಗರು!

By Suvarna NewsFirst Published Apr 5, 2024, 3:47 PM IST
Highlights

ಅಂತ್ಯಸಂಸ್ಕಾರ ಹೇಗೆ ನಡೀಬೇಕು ಎಂಬುದನ್ನು ಕೆಲವರು ಮೊದಲೇ ನಿರ್ಧರಿಸ್ತಾರೆ. ಸಾಯುವ ಮೊದಲೇ ಅದ್ರ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿರ್ತಾರೆ. ಆದ್ರೆ ಈ ಅಜ್ಜಿ ಇಡೀ ವಿಶ್ವಕ್ಕೇ ತನ್ನ ಅಂತ್ಯಸಂಸ್ಕಾರದ ಬಗ್ಗೆ ಮಾಹಿತಿ ನೀಡಿದ್ದಾಳೆ. 
 

ಸಾವಿಗೆ ವಯಸ್ಸಿಲ್ಲ. ಯಾವ ವಯಸ್ಸಿನಲ್ಲಾದ್ರೂ ಸಾವು ಬರಬಹುದು. ಆದರೆ ವಯಸ್ಸು ಎಂಭತ್ತರ ಗಡಿ ದಾಟುತ್ತಿದ್ದಂತೆ ಜನರು ಸಾವಿನ ನಿರೀಕ್ಷೆಯಲ್ಲಿರುತ್ತಾರೆ. ಅರೆ ವಯಸ್ಸಿನಲ್ಲಿ ಸಾವು ಬರೋದು ಅನಿರೀಕ್ಷಿತ. ಅದೇ ವಯಸ್ಸಾದ್ಮೇಲೆ ಮರಣ ನಿರೀಕ್ಷಿತವಾದ ಕಾರಣ ಅನೇಕ ವೃದ್ಧರು ತಮ್ಮ ಅಂತಿಮ ದಿನಗಳನ್ನು ಖುಷಿಯಿಂದ ಕಳೆಯಲು ಬಯಸ್ತಾರೆ. ಮತ್ತೆ ಕೆಲವರು ತಮ್ಮ ಸಾವಿನ ನಂತ್ರ ಏನಾಗ್ಬೇಕು ಎಂಬುದನ್ನು ಮೊದಲೇ ನಿಶ್ಚಯಿಸಿರುತ್ತಾರೆ. ಅಂತ್ಯ ಸಂಸ್ಕಾರ ಎಲ್ಲಿ ನಡೆಯಬೇಕು, ಯಾವೆಲ್ಲ ಪದ್ಧತಿಯನ್ನು ಅದ್ರಲ್ಲಿ ಪಾಲನೆ ಮಾಡ್ಬೇಕು ಎನ್ನುವುದ್ರಿಂದ ಹಿಡಿದು ತಮ್ಮ ಸಾವಿನ ನಂತ್ರ ಆಸ್ತಿ ಯಾರ ಪಾಲಾಗಬೇಕು ಎಂಬುದನ್ನು ಸಂಪೂರ್ಣವಾಗಿ ತಿಳಿಸಿರುತ್ತಾರೆ. ಈಗ ಸಾಮಾಜಿಕ ಜಾಲತಾಣ ಒಳ್ಳೆಯ ವೇದಿಕೆ ಆಗಿದೆ. ಜನರು ತಮ್ಮ ಮರಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾತನಾಡ್ತಿರುತ್ತಾರೆ. ಈಗ ಅಜ್ಜಿಯೊಬ್ಬಳ ವಿಡಿಯೋ ವೈರಲ್ ಆಗಿದೆ. ಆಕೆ ತನ್ನ ಅಂತಿಮ ಸಂಸ್ಕಾರದ ಬಗ್ಗೆ, ಜನರ ಡ್ರೆಸ್ ಕೋಡ್ ಬಗ್ಗೆ ಹಾಗೂ ಅಲ್ಲಿ ಏನೆಲ್ಲ ಆಗ್ಬೇಕು ಎಂಬ ಬಗ್ಗೆ ವಿವರ ನೀಡಿದ್ದಾಳೆ.

ಅಜ್ಜಿ ವಯಸ್ಸು 94 ವರ್ಷ. ಅಜ್ಜಿ grandma_droniak ಹೆಸರಿನ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಪ್ರಸಿದ್ಧಿ ಪಡೆದಿದ್ದಾಳೆ. ಆಕೆ ಎರಡು ಮಿಲಿಯನ್ ಗಿಂತಲೂ ಹೆಚ್ಚು ಫಾಲೋವರ್ಸ್ (followers) ಹೊಂದಿದ್ದಾಳೆ. ಈ ಬಾರಿ grandma_droniak ಹೆಸರಿನ ಖಾತೆಯಲ್ಲಿ ಅಜ್ಜಿ ತನ್ನ ಅಂತ್ಯಸಂಸ್ಕಾರದ ಬಗ್ಗೆ ಹೇಳಿದ್ದಾಳೆ. ನನ್ನ ಅಂತ್ಯ ಸಂಸ್ಕಾರದಲ್ಲಿ ಡ್ರೆಸ್ ಕೋಡ್ ಎಂದೇ ಆಕೆ ಶೀರ್ಷಿಕೆ ಹಾಕಿದ್ದಾಳೆ. 

ಈ ವರ್ಷ ಫೋರ್ಬ್ಸ್ ಬಿಲಿಯನೇರ್ ಪಟ್ಟಿಗೆ ಸೇರ್ಪಡೆಗೊಂಡ ಈ ಭಾರತೀಯ ಮಹಿಳಾ ಉದ್ಯಮಿ ಸಂಪತ್ತು 4.8 ಬಿಲಿಯನ್ ಡಾಲರ್!

ಹುಟ್ಟುಹಬ್ಬದ ಪಾರ್ಟಿ, ಮದುವೆ ಸಮಾರಂಭಕ್ಕೆ ಫ್ರೆಂಡ್ಸ್ ಅಥವಾ ಸಂಬಂಧಿಕರು ಡ್ರೆಸ್ ಕೋಡ್ ಬಳಸುವದಿದೆ. ಅಂತ್ಯಸಂಸ್ಕಾರದ ಸಮಯದಲ್ಲಿ ಬಿಳಿ ಅಥವಾ ಕಪ್ಪು ಬಟ್ಟೆಯನ್ನು ಜನರು ಧರಿಸ್ತಾರೆ. ಆದ್ರೆ ಈ ಅಜ್ಜಿ ತನ್ನ ಅಂತ್ಯಸಂಸ್ಕಾರದ ವೇಳೆ ಕಪ್ಪು ಬಟ್ಟೆ ಧರಿಸಿ ಬರೋದನ್ನು ವಿರೋಧಿಸಿದ್ದಾಳೆ. ನನ್ನ ಅಂತ್ಯಸಂಸ್ಕಾರಕ್ಕೆ ಬರುವ ಜನರು ಕಪ್ಪು ಬಟ್ಟೆ ಧರಿಸಿ ಬರಬೇಡಿ ಎಂದು ಅಜ್ಜಿ ವಿಡಿಯೋದಲ್ಲಿ ಹೇಳಿದ್ದಾಳೆ. 

ಇಷ್ಟೇ ಅಲ್ಲ ಅಂತ್ಯಸಂಸ್ಕಾರಕ್ಕೆ ಬರುವ ನೀವು ಸುಂದರವಾಗಿ ಕಾಣಬಹುದು ಆದ್ರೆ ನನಗಿಂತ ಸುಂದರವಾಗಿ ಕಾಣಬಾರದು ಎಂದಿದ್ದಾಳೆ. ಅಷ್ಟೇ ಅಲ್ಲ ಸ್ಕಿನ್ನಿ ಜೀನ್ಸ್ ಧರಿಸುವ ಧೈರ್ಯವನ್ನು ನೀವು ಮಾಡಬೇಡಿ ಎಂದೂ ಅಜ್ಜಿ ಹೇಳಿದ್ದಾಳೆ. 

ಸಾಮಾಜಿಕ ಜಾಲತಾಣದಲ್ಲಿ ಅಜ್ಜಿಯ ವಿಡಿಯೋ ಫುಲ್ ವೈರಲ್ ಆಗಿದೆ. ಈವರೆಗೆ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಸಾವಿರಾರು ಮಂದಿ ಕಮೆಂಟ್ ಮಾಡಿದ್ದಾರೆ. ಅಜ್ಜಿ ಸತ್ತಾಗ ನಮಗೆ ಅಂತ್ಯಸಂಸ್ಕಾರಕ್ಕೆ ಆಹ್ವಾನ ಬರುತ್ತದೆಯೇ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಅಜ್ಜಿ ವಿಡಿಯೋ ನೋಡಿ ನನಗೆ ಖುಷಿ ಆಗ್ತಿದೆ. ಹಾಗೆಯೇ ದುಃಖವೂ ಆಗ್ತಿದೆ. ಅಜ್ಜಿಗೆ ವಯಸ್ಸಾದ ಕಾರಣ ಆಕೆ ಹೀಗೆ ಹೇಳೋದು ಅನಿವಾರ್ಯ. ಜೀವನ ಚಕ್ರವು ಕೆಲವೊಮ್ಮೆ ನೋವು ನೀಡುತ್ತದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. 

ಅಜ್ಜಿ ಅಂತ್ಯಸಂಸ್ಕಾರದ ಲೀಸ್ಟ್ ನಲ್ಲಿ ಏನೆಲ್ಲ ಹೇಳಿದ್ದಾರೆ ಅದನ್ನು ಪ್ರತಿಯೊಬ್ಬರೂ ಗಮನಿಸಿದಂತಿದೆ. ಅದು ಕಮೆಂಟ್ ನಲ್ಲಿ ಸ್ಪಷ್ಟವಾಗಿ ಕಾಣ್ತಿದೆ. ನಾವೆಲ್ಲರೂ ನಿಯಮ ಪಾಲನೆ ಮಾಡುತ್ತೇವೆ ಎಂದು ಇನ್ನೊಬ್ಬರು ಹೇಳಿದ್ದಾರೆ. ನೀವು ಬೇಸರದಲ್ಲಿದ್ದರೆ ಅಜ್ಜಿ ನಿಮ್ಮನ್ನು ಹೆದರಿಸುತ್ತಾರೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

Viral Video: ಸುನಾಮಿ ಜತೆಗೆ ಮಹಿಳೆಯ ಸೆಲ್ಫಿ, ಅದೃಷ್ಟ ಇತ್ತು ಬದುಕ್ಕೊಂಡ್ಲು

ಅಜ್ಜಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ. ಅವರ ಪತಿ ಅನೇಕ ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದು, ಜೀವನದ ಕೊನೆ ಗಳಿಗೆಯಲ್ಲೂ ಖುಷಿಯಾಗಿರುವ ನಿರ್ಧಾರವನ್ನು ಅಜ್ಜಿ ತೆಗೆದುಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಮಾಜಿ ಬಾಯ್ ಫ್ರೆಂಡ್ ಬಗ್ಗೆ ಅವರು ವಿಡಿಯೋ ಹಂಚಿಕೊಂಡಿದ್ದರು. 

click me!