ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತೊಂದು ಪೋಸ್ಟ್, ಅದಕ್ಕೇಕೆ ಈ ಮಹಿಳೆ ಕಂಬಿ ಎಣಿಸುವಂತಾಗಿದ್ದು?

By Suvarna NewsFirst Published Mar 28, 2024, 4:33 PM IST
Highlights

ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೆ ನೂರಾರು ಪೋಸ್ಟ್ ವೈರಲ್ ಆಗ್ತಿರುತ್ತದೆ. ಜನರಿಗೆ ಗೊತ್ತಾಗ್ಲಿ ಅಂತ ನಾವು ಎಲ್ಲವನ್ನೂ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಳ್ತೇವೆ. ಈ ಮಹಿಳೆ ಕೂಡ ಅದನ್ನೇ ಮಾಡೋಕೆ ಹೋಗಿ ಈಗ ಜೈಲು ಸೇರಿದ್ದಾಳೆ. 
 

ಇತ್ತೀಚಿನ ದಿನಗಳಲ್ಲಿ ಜನರು ಕುಟುಂಬಸ್ಥರು, ಆಪ್ತರ ಜೊತೆ ಚರ್ಚೆ ಮಾಡುವ ಬದಲು ಸಾಮಾಜಿಕ ಜಾಲತಾಣದ ಮೊರೆ ಹೋಗೋದೇ ಹೆಚ್ಚು. ಖುಷಿ ಇರಲಿ, ದುಃಖವಿರಲಿ ಆಪ್ತರಿಗಿಂತ ಮೊದಲು ಸಾಮಾಜಿಕ ಜಾಲತಾಣ ಬಳಕೆದಾರರಿಗೆ ವಿಷ್ಯ ಗೊತ್ತಾಗಿರುತ್ತದೆ. ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸ್ ಅಪ್ ಸೇರಿದಂತೆ ರೆಡ್ಡಿಟ್ ನಂತಹ ಸಾಮಾಜಿಕ ಜಾಲತಾಣದಲ್ಲಿ ಜನರು ತಮ್ಮ ವೈಯಕ್ತಿಕ ವಿಷ್ಯವನ್ನು ಹಂಚಿಕೊಳ್ತಾರೆ. ಬರೀ ವೈಯಕ್ತಿಕ ವಿಚಾರ ಹಂಚಿಕೊಂಡ್ರೆ ಹೆಚ್ಚು ಸಮಸ್ಯೆ ಆಗದೆ ಇರಬಹುದು ಆದ್ರೆ ಯಾವುದೇ ಒಂದು ವಸ್ತುವಿನ ಬಗ್ಗೆ ಅಥವಾ ಕಂಪನಿ ಬಗ್ಗೆ ಅವಹೇಳನ ಮಾಡುವಾಗ ಅಥವಾ ಅದರ ಉತ್ಪನ್ನವನ್ನು ಖಂಡಿಸುವಾಗ ಎಚ್ಚರಿಕೆಯಿಂದ ಇರಿ. ನೀವು ಮನೆಗೆ ತಂದ ವಸ್ತು ಚೆನ್ನಾಗಿಲ್ಲ ಎಂದಾಗ ಮೊದಲು ಕಂಪನಿ ಜೊತೆ ಮಾತನಾಡಿ. ಅದ್ರ ಬಗ್ಗೆ ಚರ್ಚಿಸಿ. ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಿ. ಅದಕ್ಕಿಂತ ಮೊದಲು ಯಾವುದೇ ಸಂಗತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡ್ಬೇಡಿ. ಹಾಗೆ ಮಾಡಿದ್ರೆ ಈ ಮಹಿಳೆಯಂತೆ ಜೈಲೂಟ ಖಾಯಂ ಆಗ್ಬಹುದು.

ನೈಜೀರಿಯಾ (Nigeria) ದ ಈ ಮಹಿಳೆ ಬೇಡದ ಕೆಲಸ ಮಾಡಿ ಈಗ ಜೈಲು (Prison) ಸೇರಿದ್ದಾಳೆ. 39 ವರ್ಷದ ಚಿಯೋಮಾ ಒಕೋಲಿ ಕಂಬಿ ಎಣಿಸುವಂತಾಗಿದೆ. ಮೇಲಿಂದ ನೋಡಿದ್ರೆ ಇದು ಸಾಮಾನ್ಯ ಕೆಲಸ. ಸೂಕ್ಷ್ಮವಾಗಿ ಗಮನಿಸಿದಾಗ ಮಹಿಳೆ ಮಾಡಿದ ಕೆಲಸದಿಂದ ಕಂಪನಿ (Company) ಗೆ ಸಾಕಷ್ಟು ನಷ್ಟವಾಗಿದೆ. ಹಾಗಾಗಿಯೇ ಮಹಿಳೆ ಈಗ ಜೈಲು ಸೇರುವಂತಾಗಿದೆ. ಅಷ್ಟಕ್ಕೂ ಅಲ್ಲಿ ನಡೆದಿದ್ದು ಏನು ಅಂತ ನೀವು ಕೇಳಿದ್ರೆ, ಆ ಮಹಿಳೆ ಒಂದು ಹೊಟೇಲ್ (Hotel) ಟೊಮೊಟೊ ಚಟ್ನಿ ಬಗ್ಗೆ ಕಮೆಂಟ್ ಮಾಡಿದ್ದೇ ತಪ್ಪಾಗಿದೆ.

ಸಮಂತಾ ಮಾಡಿರೋ ಈ ಕೆಲಸದಿಂದ ನಾಗಚೈತನ್ಯ ಜೊತೆಗಿನ ಸಂಬಂಧ ಕಡಿದು ಹೋಯ್ತಾ?

ಚಿಯೋಮಾ ಒಕೋಲಿ, ಸಾಮಾಜಿಕ ಜಾಲತಾಣದಲ್ಲಿ ಟೊಮೆಟೊ ಪ್ಯೂರಿ ತಯಾರಿಕಾ ಕಂಪನಿಯ ಬ್ರ್ಯಾಂಡ್ ಬಗ್ಗೆ ಟೀಕಿಸಿದ್ದಾಳೆ. ಒಕೋಲಿ, ಚಿಯೋಮಾ ಎಗೋಡಿ ಜೂ ಹೆಸರಿನ ಫೇಸ್ಬುಕ್ ಖಾತೆಯಲ್ಲಿ (Facebook Profile) ಅರಿಸ್ಕೋ ಫುಡ್ ಲಿಮಿಟೆಡ್‌ನಿಂದ ಟೊಮೆಟೊ ಪ್ಯೂರಿ ಖರೀದಿ ಮಾಡಿದ್ದಳು. ಆಕೆಗೆ ಈ ಪ್ಯೂರಿ ಇಷ್ಟವಾಗಿರಲಿಲ್ಲ. 18 ಸಾವಿರ ಫಾಲೋವರ್ಸ್ ಇರುವ ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ಪ್ಯೂರಿ ರುಚಿ ಬಗ್ಗೆ ಬರೆದಿದ್ದಳು. ಅದಕ್ಕೆ ಮೂರು ಸಾವಿರಕ್ಕಿಂತ ಹೆಚ್ಚು ಕಮೆಂಟ್ ಬಂದಿತ್ತು. ಜನರು ರೆಸ್ಟೋರೆಂಟ್ ಬಗ್ಗೆ ಟೀಕಿಸಿದ್ದರು.

ಆರ್‌ಒ, ಪ್ಯೂರಿಫೈಡ್ ನೀರು ಅಂತ ಅತೀ ಶುದ್ಧ ನೀರ ಕುಡಿಯೋದು ಆರೋಗ್ಯಕ್ಕೆ ಒಳ್ಳೇದಲ್ಲ

ಚಿಯೋಮಾ ಒಕೋಲಿ ಪೋಸ್ಟ್ ನೋಡಿದ ಕಂಪನಿ ದಂಗಾಗಿತ್ತು. ಚಿಯೋಮಾ ಈ ಪೋಸ್ಟ್ ನಿಂದ ನಮಗೆ ನಷ್ಟವಾಗಿದೆ ಎಂದು ಕಂಪನಿ ಹೇಳಿತ್ತು. ನಮ್ಮ ಅಣ್ಣನ ಬ್ರ್ಯಾಂಡ್ ಬಗ್ಗೆ ಕಮೆಂಟ್ ಮಾಡೋದನ್ನು ನಿಲ್ಲಿಸಿ. ನೀವು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದಿತ್ತು. ಇಲ್ಲವೇ ಬೇರೆ ಉತ್ಪನ್ನವನ್ನು ಖರೀದಿ ಮಾಡಬಹುದಿತ್ತು. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಅವಶ್ಯಕತೆ ಇರಲಿಲ್ಲ. ಇದ್ರಿಂದ ಕಂಪನಿ ಬಗ್ಗೆ ಗ್ರಾಹಕರಲ್ಲಿ ಕೆಟ್ಟ ಭಾವನೆ ಬಂದಿದೆ. ನಿಮ್ಮ ಈ ಪೋಸ್ಟ್ ನಿಂದ ಕಂಪನಿಗೆ ನಷ್ಟವಾಗಿದೆ ಎಂದು ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದರು. ಅಲ್ಲದೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಚಿಯೋಮಾ ಒಕೋಲಿಯನ್ನು ಬಂಧಿಸಿದ್ದರು. ಪ್ರಕರಣದ ವಿಚಾರಣೆ ಸದ್ಯ ನಡೆಯುತ್ತಿದೆ. ಬಂಧನದ ವೇಳೆ ಚಿಯೋಮಾ ಒಕೋಲಿ ನಾಲ್ಕನೇ ಮಗುವಿಗೆ ಜನ್ಮ ನೀಡುವ ತಯಾರಿಯಲ್ಲಿದ್ದಳು. ಒಂದ್ವೇಳೆ ಒಕೋಲಿ ತಪ್ಪು ಸಾಭಿತಾದ್ರೆ ಆಕೆಗೆ ಜೈಲು ಶಿಕ್ಷೆಯಾಗಲಿದೆ. ಆಕೆ ವಿರುದ್ಧ ಎರಡು ಪ್ರಕರಣ ದಾಖಲಾಗಿದ್ದು, ಒಂದು ಪ್ರಕರಣದಲ್ಲಿ ಏಳು ಮತ್ತು ಮತ್ತೊಂದು ಪ್ರಕರಣದಲ್ಲಿ ಮೂರು ವರ್ಷ ಜೈಲಾಗುವ ನಿರೀಕ್ಷೆ ಇದೆ. 

click me!