ಜಗತ್ತಿನಲ್ಲಿರುವ ಜನರ ಹವ್ಯಾಸಗಳು ವಿಚಿತ್ರವಾಗಿರುತ್ತವೆ. ಕೆಲವರು ದಂಗಾಗಿಸುವ ಚಟ ಹೊಂದಿರುತ್ತಾರೆ. ಇಲ್ಲೊಬ್ಬ ಮಹಿಳೆ ಮನುಷ್ಯರ ರಕ್ತವನ್ನು ಕೂಡ ಬಿಡೋದಿಲ್ಲ. ಮನುಷ್ಯರ ರಕ್ತದ ರುಚಿ ಹೆಚ್ಚು ಎನ್ನುವ ಮಹಿಳೆ ಬಗ್ಗೆ ವಿವರ ಇಲ್ಲಿದೆ.
ಮಾಂಸಹಾರಿಗಳಿಗೆ ಬ್ಲಡ್ ಸೂಪ್ ಬಗ್ಗೆ ಚೆನ್ನಾಗಿ ತಿಳಿದಿದೆ. ಅನೇಕರು ಬ್ಲಡ್ ಸೂಪನ್ನು ಇಷ್ಟಪಟ್ಟು ತಿನ್ನುತ್ತಾರೆ. ಪ್ರಾಣಿಗಳ ಬ್ಲಡ್ ನಿಂದ ಸೂಪ್ ಮಾಡೋದು ವಿಶೇಷವೇನಲ್ಲ. ಆದ್ರೆ ನಮ್ಮ ಜಗತ್ತಿನಲ್ಲಿ ಪ್ರಾಣಿ, ಪಕ್ಷಿ, ಹಾವು, ಚೇಳನ್ನು ಮಾತ್ರವಲ್ಲ ಮನುಷ್ಯರನ್ನು ತಿನ್ನುವ ಜನರಿದ್ದಾರೆ. ನರಭಕ್ಷಕರ ಜೀವನ ಶೈಲಿ ಭಿನ್ನವಾಗಿರುತ್ತದೆ. ಅವರು ನಾಡಿನಲ್ಲಿ ವಾಸ ಮಾಡೋದಿಲ್ಲ. ಆದ್ರೆ ಜನರ ಮಧ್ಯೆ ವಾಸಿಸುವ, ಜನಸಾಮಾನ್ಯರಂತೆ ಬದುಕುತ್ತಿರುವ ಮಹಿಳೆಯೊಬ್ಬಳು ಈಗ ತನ್ನ ಆಹಾರ ಹವ್ಯಾಸದಿಂದ ಸುದ್ದಿಗೆ ಬಂದಿದ್ದಾಳೆ. ಆಕೆ ಮನುಷ್ಯರ ಮಾಂಸ ತಿನ್ನೋದಿಲ್ಲ. ಆದ್ರೆ ಮನುಷ್ಯರ ರಕ್ತವನ್ನು ಕುಡಿಯುತ್ತಾಳೆ. ಹಾಲಿವುಡ್ ಕಥೆಯಲ್ಲಿ ಬರುವ ರಕ್ತಪಿಶಾಚಿಯಂತೆ ಈಕೆ ಎಂದು ಜನರು ಆಡಿಕೊಳ್ತಿದ್ದಾರೆ. ಅಷ್ಟಕ್ಕೂ ಆ ಮಹಿಳೆ ಯಾರು, ಆಕೆಯ ಹವ್ಯಾಸ ಏನು ಎಂಬ ವಿವರ ಇಲ್ಲಿದೆ.
ಮನುಷ್ಯರ ರಕ್ತ ಕುಡಿಯುತ್ತಾಳೆ ಈಕೆ : ಆಕೆ ಅಮೆರಿಕಾ (America) ದ ಕ್ಯಾಲಿಫೋರ್ನಿಯಾ ನಿವಾಸಿ. ವಯಸ್ಸು 40 ವರ್ಷ. ಈಕೆ ಹೆಸರು ಮಿಶೆಲ್. ಹಚ್ಚೆ (Tattoo) ಹಾಕುವ ಕೆಲಸ ಮಾಡುತ್ತಾಳೆ. ಈಕೆ ಮನುಷ್ಯರ ರಕ್ತ ಕುಡಿಯೋದನ್ನು ಈಗ ಕಲಿತಿಲ್ಲ. ಅನೇಕ ವರ್ಷಗಳಿಂದ ರಕ್ತ (Blood) ಕುಡಿಯುವ ಹವ್ಯಾಸವನ್ನು ಆಕೆ ಹೊಂದಿದ್ದಾಳೆ. ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮಿಶೆಲ್, ತನಗೆ ಮನುಷ್ಯರ ರಕ್ತ ಕುಡಿಯುವ ಅಭ್ಯಾಸವಿದೆ ಎಂದು ಒಪ್ಪಿಕೊಂಡಿದ್ದಾಳೆ. ಮನುಷ್ಯರ ರಕ್ತ ನನಗೆ ಇಷ್ಟವಾಗುತ್ತದೆ. ಹಾಗಾಗಿ ಅದನ್ನು ನಾನು ಸೇವನೆ ಮಾಡುತ್ತೇನೆ. ಅದನ್ನು ಸದ್ಯ ಬಿಡೋದಿಲ್ಲ ಎಂದಿದ್ದಳು. ಆದ್ರೆ ಮನುಷ್ಯರ ರಕ್ತವನ್ನು ಎಲ್ಲಿಂದ ಪಡೆಯುತ್ತಾಳೆ ಎಂಬ ಮಾಹಿತಿಯನ್ನು ಮಿಶೆಲ್ ಬಿಟ್ಟುಕೊಟ್ಟಿಲ್ಲ.
undefined
ಆರ್‌ಸಿಬಿ ಕ್ರಶ್ ಶ್ರೇಯಾಂಕ ಪಾಟೀಲ್ ವಿಚಿತ್ರ ಹವ್ಯಾಸ; ಸಂತಸವಾದ್ರೂ, ದುಃಖವಾದ್ರೂ ಪಕ್ಕದಲ್ಲಿರೋರನ್ನ ಕಚ್ಚಿಬಿಡ್ತಾಳೆ
ವಾರಕ್ಕೆ ಇಷ್ಟು ರಕ್ತ ಕುಡಿಯುತ್ತಾಳೆ ಮಿಶೆಲ್ : ಮಿಶೆಲ್ ಮನುಷ್ಯರ ರಕ್ತದ ಜೊತೆಗೆ ಪ್ರಾಣಿಗಳ ರಕ್ತವನ್ನೂ ಕುಡಿಯಲು ಇಷ್ಟಪಡುತ್ತಾಳೆ. ಕೇವಲ ಒಂದು ವಾರದಲ್ಲಿ ಅವಳು ಸುಮಾರು 36 ಲೀಟರ್ ರಕ್ತವನ್ನು ಕುಡಿಯುತ್ತಾಳೆ.
ರಕ್ತದ ರುಚಿ ಇಷ್ಟ : ಮಿಶೆಲ್ ತನಗೆ ಏಕೆ ರಕ್ತ ಇಷ್ಟ ಎಂಬುದನ್ನು ಹೇಳಿದ್ದಾಳೆ. ಅಲ್ಲದೆ ಆಕೆಗೆ ಈ ಅಭ್ಯಾಸ ಹೇಗೆ ಶುರುವಾಯ್ತು ಎಂಬುದನ್ನು ಕೂಡ ಹೇಳಿದ್ದಾಳೆ. ಮಿಶೆಲ್ 18 ವರ್ಷದವಳಿದ್ದಾಗ ಖಿನ್ನತೆಗೆ ಒಳಗಾಗಿದ್ದಳು. ಆ ಸಮಯದಲ್ಲಿ ಮಿಶೆಲ್ ನಡವಳಿಕೆಯಲ್ಲಿ ಸಾಕಷ್ಟು ಬದಲಾವಣೆ ಆಗಿತ್ತು. ಸ್ವತಃ ತನ್ನನ್ನು ತಾನು ನೋಯಿಸಿಕೊಳ್ಳಲು ಮುಂದಾಗ್ತಿದ್ದಳು. ಒಂದು ದಿನ ತನ್ನ ಕೈ ಕತ್ತರಿಸಿಕೊಂಡಿದ್ದಾಳೆ. ಕೈನಿಂದ ರಕ್ತಸ್ರಾವ ಆಗಿದೆ. ಅದನ್ನು ಹೀರಿದ್ದಾಳೆ. ಆಕೆಯ ರಕ್ತದ ರುಚಿ ಆಕೆಗೆ ಇಷ್ಟವಾಗಿದೆ. ಆ ನಂತ್ರ ರಕ್ತ ಕುಡಿಯುವ ಅಭ್ಯಾಸ ಶುರುವಾಗಿದೆ. ಅಲ್ಲಿಂದ ಇಲ್ಲಿಯವರೆಗೂ ಈ ಅಭ್ಯಾಸವನ್ನು ಮುಂದುವರೆಸಿಕೊಂಡು ಬಂದಿದ್ದಾಳೆ.
ಮಿಶೆಲ್ ತನ್ನನ್ನು ರಕ್ತಪಿಶಾಚಿ ಎಂದು ಪರಿಗಣಿಸುವುದಿಲ್ಲ. ನಾನು ರಕ್ತಪಿಶಾಚಿ ಅಲ್ಲ. ಆದ್ರೆ ಜನರು ನನ್ನನ್ನು ರಕ್ತಪಿಶಾಚಿ ಎಂದು ಕರೆಯುತ್ತಾರೆ ಎಂದು ಮಿಶೆಲ್ ಹೇಳಿದ್ದಾಳೆ. ಮಿಶೆಲ್ ಪ್ರಾಣಿ ರಕ್ತ ಕುಡಿದ್ರೂ ಮನುಷ್ಯರ ರಕ್ತಕ್ಕೆ ಆಕೆ ಪ್ರಾಥಮಿಕತೆ ನೀಡ್ತಿದ್ದಾಳೆ. ಈಗಿನ ದಿನಗಳಲ್ಲಿ ನಂಬಿಕಸ್ತ ಮೂಲಗಳಿಂದ ಮನುಷ್ಯರ ರಕ್ತಪಡೆಯೋದು ಕಷ್ಟ ಎನ್ನುತ್ತಾಳೆ ಮಿಶೆಲ್.
Intimate Health : ಯೋನಿ ಆರೋಗ್ಯಕ್ಕೆ ಸ್ವಯಂ ಪರೀಕ್ಷೆ ಅನಿವಾರ್ಯ
ಮಿಶೆಲ್ ಟಿವಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ತನ್ನ ಅಭ್ಯಾಸದ ಬಗ್ಗೆ ಮಾಹಿತಿ ನೀಡಿದ ನಂತ್ರ ಅಮೆರಿಕಾದಲ್ಲಿ ಕೆಲ ನಿಯಮ ಕಟ್ಟುನಿಟ್ಟಾಗಿದೆ. ಈ ಕಾರಣದಿಂದ ಮನುಷ್ಯರ ರಕ್ತ ಸುಲಭವಾಗಿ ಸಿಗೋದಿಲ್ಲ. ಅದನ್ನು ಕುಡಿಯೋದು ಇದ್ರಿಂದ ಮತ್ತಷ್ಟು ಕಷ್ಟ ಎನ್ನುತ್ತಾಳೆ ಮಿಶೆಲ್. ರಕ್ತ ಕುಡಿಯುವ ಹವ್ಯಾಸದಿಂದಲೇ ಮಿಶೆಲ್ ಹೆಚ್ಚು ಪ್ರಸಿದ್ಧಿಯಾಗಿದ್ದಾಳೆ. ಜನರು ನನ್ನಂತೆ ಕೆಲ ಹವ್ಯಾಸ ಹೊಂದಿರುತ್ತಾರೆ. ಆದ್ರೆ ಧೈರ್ಯವಾಗಿ ಅದನ್ನು ಹೇಳಿಕೊಳ್ಳೋದಿಲ್ಲ ಎನ್ನುತ್ತಾಳೆ ಮಿಶೆಲ್.