ನಾರ್ಮಲ್‌ ಡೆಲಿವರಿಯಾದ್ರೆ ಲೈಂಗಿಕಾಸಕ್ತಿ ಕಡಿಮೆಯಾಗುತ್ತೆ ಅನ್ನೋದು ನಿಜಾನ?

By Vinutha Perla  |  First Published Apr 22, 2023, 2:20 PM IST

ಡೆಲಿವರಿ ಆದರೆ ಸಾಕು ನಾರ್ಮಲ್ ಡೆಲಿವರಿನಾ ಅಲ್ಲ ಸಿ ಸೆಕ್ಷನ್ ಅಂತ ಎಲ್ಲರೂ ಕೇಳುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ನಾರ್ಮಲ್ ಡೆಲಿವರಿ ಆಗುವುದು ಕಡಿಮೆ. ಎಲ್ಲರೂ ಸಿ ಸೆಕ್ಷನ್ ಮಾಡಿಸಿಬಿಡುತ್ತಾರೆ. ಹಾಗೆಯೇ ನಾರ್ಮಲ್ ಡೆಲಿವರಿ ಬಗ್ಗೆ ಹಲವಾರು ತಪ್ಪು ಕಲ್ಪನೆಗಳಿವೆ. ಆ ಬಗ್ಗೆ ತಿಳಿಯೋಣ.


ಹೆರಿಗೆ ಅಂತ ತಕ್ಷಣ ಇವತ್ತಿನ ದಿನಗಳಲ್ಲಿ ತಕ್ಷಣಕ್ಕೆ ನೆನಪಿಗೆ ಬರುವುದು ಸಿ ಸೆಕ್ಷನ್. ಹಿಂದಿನ ಕಾಲದಲ್ಲಿ ನಾರ್ಮಲ್ ಡೆಲಿವರಿ ಎಷ್ಟು ಸಾಮಾನ್ಯವಾಗಿತ್ತೋ, ಈಗ ಸಿ ಸೆಕ್ಷನ್ ಅನ್ನೋದು ಅಷ್ಟೇ ಸಾಮಾನ್ಯವಾಗಿದೆ. ಹೆಚ್ಚು ನೋವನ್ನು ಅನುಭವಿಸಬೇಕು ಅನ್ನೋ ಕಾರಣಕ್ಕೆ ಬಹುತೇಕರು ಸಿ ಸೆಕ್ಷನ್ ಆಯ್ದುಕೊಳ್ಳುತ್ತಾರೆ. ನಾರ್ಮಲ್ ಹೆರಿಗೆಯಲ್ಲಿ ತುಂಬಾನೇ ನೋವು ಅನುಭವಿಸಬೇಕು ಅನ್ನೋ ಕಾರಣಕ್ಕೆ ಇದನ್ನು ಅವಾಯ್ಡ್ ಮಾಡುತ್ತಾರೆ. ಆದರೆ ನಿಜವಾಗಿಯೂ ನಾರ್ಮಲ್ ಡೆಲಿವರಿ ಅಷ್ಟು ಕೆಟ್ಟದ್ದಾ? ಇಲ್ಲ ಸಿಸೇರಿಯನ್ ಮಾಡೋದೆ ಒಳ್ಳೆಯಾ? ಈ ಕುರಿತು ಯೋಚಿಸಿದಾಗ ಗರ್ಭಿಣಿಗೆ ಯಾವ ಹೆರಿಗೆ ಒಳ್ಳೆಯದು ಎಂಬ ಗೊಂದಲ ಉಂಟಾಗುವುದು. ಸಹಜ ಹೆರಿಗೆ ಕುರಿತು ಇರುವ ತಪ್ಪು ಕಲ್ಪನೆಯ ಬಗ್ಗೆ ಕೆಲ ಮಾಹಿತಿ ಇಲ್ಲಿದೆ.

ಹೆರಿಗೆ (Delivery) ಅಂತ ತಕ್ಷಣ ಇವತ್ತಿನ ದಿನಗಳಲ್ಲಿ ತಕ್ಷಣಕ್ಕೆ ನೆನಪಿಗೆ ಬರುವುದು ಸಿ ಸೆಕ್ಷನ್. ಹಿಂದಿನ ಕಾಲದಲ್ಲಿ ನಾರ್ಮಲ್ ಡೆಲಿವರಿ ಎಷ್ಟು ಸಾಮಾನ್ಯವಾಗಿತ್ತೋ, ಈಗ ಸಿ ಸೆಕ್ಷನ್ ಅನ್ನೋದು ಅಷ್ಟೇ ಸಾಮಾನ್ಯವಾಗಿದೆ. ಹೆಚ್ಚು ನೋವನ್ನು (Pain) ಅನುಭವಿಸಬೇಕು ಅನ್ನೋ ಕಾರಣಕ್ಕೆ ಬಹುತೇಕರು ಸಿ ಸೆಕ್ಷನ್ ಆಯ್ದುಕೊಳ್ಳುತ್ತಾರೆ. ನಾರ್ಮಲ್ ಹೆರಿಗೆಯಲ್ಲಿ ತುಂಬಾನೇ ನೋವು ಅನುಭವಿಸಬೇಕು ಅನ್ನೋ ಕಾರಣಕ್ಕೆ ಇದನ್ನು ಅವಾಯ್ಡ್ ಮಾಡುತ್ತಾರೆ. ಆದರೆ ನಿಜವಾಗಿಯೂ ನಾರ್ಮಲ್ ಡೆಲಿವರಿ ಅಷ್ಟು ಕೆಟ್ಟದ್ದಾ? ಇಲ್ಲ ಸಿಸೇರಿಯನ್ ಮಾಡೋದೆ ಒಳ್ಳೆಯಾ? ಈ ಕುರಿತು ಯೋಚಿಸಿದಾಗ ಗರ್ಭಿಣಿಗೆ (Pregnant) ಯಾವ ಹೆರಿಗೆ ಒಳ್ಳೆಯದು ಎಂಬ ಗೊಂದಲ ಉಂಟಾಗುವುದು. ಸಹಜ ಹೆರಿಗೆ ಕುರಿತು ಇರುವ ತಪ್ಪು ಕಲ್ಪನೆಯ ಬಗ್ಗೆ ಕೆಲ ಮಾಹಿತಿ ಇಲ್ಲಿದೆ.

Latest Videos

undefined

ಗರ್ಭಾವಸ್ಥೆಯಲ್ಲಿ ಮಹಿಳೆಯರ ದೇಹದ ಹೀಟ್ ಹೆಚ್ಚುವುದೇಕೆ?

ಮಿಥ್ಯ 1: ವಿಪರೀತ ಹೆರಿಗೆ ನೋವಿರುತ್ತದೆ
ಕೆಲವು ಮಹಿಳೆಯರಿಗೆ ಹೆರಿಗೆ ನೋವು ತೀವ್ರವಾಗಿದ್ದರೂ ಸಹ, ಎಲ್ಲರಿಗೂ ಹೀಗಾಗುವುದಿಲ್ಲ. ಸಹಜ ಹೆರಿಗೆ ಎಲ್ಲರಿಗೆ ಕಷ್ಟಕರವಲ್ಲ. ಕೆಲವರಿಗೆ ನೋವು ಬಂದು 10 ನಿಮಿಷದೊಳಗೆ ಹೆರಿಗೆಯಾಗುತ್ತದೆ. ಇನ್ನು ಕೆಲವರಿಗೆ ಕೆಲವು ಗಂಟೆ ನೋವು ಅನುಭವಿಸಿದ ಮೇಲೆ ಹೆರಿಗೆಯಾಗಿರುತ್ತದೆ. ಹೆರಿಗೆಗೆ ತಯಾರಾಗಲು ಒಂದು ಉತ್ತಮ ಮಾರ್ಗವೆಂದರೆ ಪ್ರಸವಪೂರ್ವ ತರಗತಿಗೆ ಸೈನ್ ಅಪ್ ಮಾಡುವುದು. ಅಲ್ಲಿ ಮಹಿಳೆಯರಿಗೆ ಸಹಜವಾಗಿ ಹೆರಿಗೆಯಾಗಲು ಸರಿಯಾದ ವ್ಯಾಯಾಮ (Exercise) ಮತ್ತು ಉಸಿರಾಟದ ತಂತ್ರಗಳನ್ನು ಕಲಿಸಲಾಗುತ್ತದೆ.

ಮಿಥ್ಯೆ 2: ಸಹಜ ಹೆರಿಗೆ ಲೈಂಗಿಕ ಬಯಕೆ ಕಡಿಮೆ ಮಾಡುತ್ತದೆ
ಸಹಜ ಹೆರಿಗೆಯ ಬಗ್ಗೆಯಿರುವ ದೊಡ್ಡ ತಪ್ಪುಕಲ್ಪನೆಗಳಲ್ಲಿ ಇದೂ ಒಂದು. ನಾರ್ಮಲ್‌ ಡೆಲಿವರಿಯಿಂದಾಗಿ ಯೋನಿ ಸಡಿಲಗೊಳ್ಳುತ್ತದೆ. ಇದರಿಂದ ಮಹಿಳೆಯರಲ್ಲಿ ಲೈಂಗಿಕ ಬಯಕೆ ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ. ಸಹಜ ಹೆರಿಗೆ ಬಳಿಕ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ ಎಂಬುದು ತಪ್ಪು ಕಲ್ಪನೆಯಾಗಿದೆ. ಸಹಜ ಹೆರಿಗೆಯ ಬಳಿಕ ಲೈಂಗಿಕ ಆಸಕ್ತಿ (Sexual interest) ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮಹಿಳೆಯಲ್ಲಿ ಲೈಂಗಿಕ ಆಸಕ್ತಿ ಕುಗ್ಗುವುದಕ್ಕೂ ಸಹಜ ಹೆರಿಗೆಗೂ ಸಂಬಂಧವಿಲ್ಲ. 

ಹೆರಿಗೆ ನಂತರ ಮೂತ್ರ ತಡೆಯಲಾಗಲ್ವಾ? ಕಾರಣ ತಿಳಿದುಕೊಳ್ಳಿ

ಮಿಥ್ಯ 3: ಯೋನಿ ಹೆರಿಗೆಯು ಹಿಗ್ಗುವಿಕೆಗೆ ಕಾರಣವಾಗಬಹುದು
ಗರ್ಭಾಶಯವು ತನ್ನ ಸಾಮಾನ್ಯ ಸ್ಥಾನದಿಂದ ಯೋನಿ (Vagina)ಯೊಳಗೆ ಇಳಿಯುವಾಗ ಗರ್ಭಾಶಯದ ಹಿಗ್ಗುವಿಕೆ ಸಂಭವಿಸುತ್ತದೆ. ಗರ್ಭಾಶಯದ ಹಿಗ್ಗುವಿಕೆಗೆ ಮುಖ್ಯ ಕೊಡುಗೆ ಅಂಶವೆಂದರೆ ಅದರ ಅನುವಂಶಿಕ ಪ್ರವೃತ್ತಿ. ಹೀಗಾಗಿ ಸಹಜ ಹೆರಿಗೆಯಿಂದ ಯೋನಿ ಹಿಗ್ಗುತ್ತದೆ ಎಂಬುದು ನಿಜವಲ್ಲ.

ಮಿಥ್ಯ 4: ಯೋನಿ ಹೆರಿಗೆಗಳು ಶಿಶುಗಳಿಗೆ ಸುರಕ್ಷಿತವಲ್ಲ
ಪ್ರಸೂತಿ ಮತ್ತು ಸ್ತ್ರೀರೋಗತಜ್ಞರ ಅಮೇರಿಕನ್ ಕಾಂಗ್ರೆಸ್ (ACOG) ಯೋನಿ ಪ್ರಸವಗಳನ್ನು ಶಿಫಾರಸು ಮಾಡುತ್ತದೆ. ಏಕೆಂದರೆ ಸಹಜ ಹೆರಿಗೆಯಲ್ಲಿ ಜನಿಸಿದ ಶಿಶುಗಳಿಗೆ ಉಸಿರಾಟದ ಸಮಸ್ಯೆಗಳ ಅಪಾಯ ಕಡಿಮೆ ಮತ್ತು ಬಲವಾದ ಸ್ವಯಂ ನಿರೋಧಕ ವ್ಯವಸ್ಥೆಯನ್ನು ಹೊಂದಿರುತ್ತಾರೆ. ಉಸಿರಾಟದ ತೊಂದರೆ, ಅಲರ್ಜಿಗಳು, ಮಧುಮೇಹ ಅಥವಾ ಸ್ಥೂಲಕಾಯತೆಯ ಕಡಿಮೆ ಅಪಾಯಗಳಿರುತ್ತದೆ. 

ಮಿಥ್ಯ 5: ಹೊಕ್ಕುಳ ಬಳ್ಳಿ ಸುತ್ತಿರುತ್ತದೆ
ಹೊಕ್ಕಳ ಬಳ್ಳಿ ಸುತ್ತಿದ್ದರೆ ಸಿ ಸೆಕ್ಷನ್ ಮಾಡಬೇಕು ಸಾಮಾನ್ಯವಾಗಿ ಈ ರೀತಿಯಾದಾಗ ವೈದ್ಯರು ಸಿ ಸೆಕ್ಷನ್ ಮಾಡುವಂತೆ ಸೂಚಿಸುತ್ತಾರೆ. ಆದರೆ ಎಲ್ಲಾ ಕೇಸ್‌ಗಳಲ್ಲಿ ಸಿ ಸೆಕ್ಷನ್ ಮಾಡಬೇಕೆಂದೇನಿಲ್ಲ, ಹೊಕ್ಕಳ ಬಳ್ಳಿ ಸುತ್ತಿಕೊಂಡರೂ ಸಹಜ ಹೆರಿಗೆಯಾಗಬಹುದು. ಇದರಿಂದ ಮಗುವಿಗೆ ತೊಂದರೆಯೇನೂ ಆಗುವುದಿಲ್ಲ.  ಹೆರಿಗೆಯ ಸಮಯದಲ್ಲಿ  ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ ಮತ್ತು ಭ್ರೂಣದ ತೊಂದರೆಗೆ ಕಾರಣವಾಗುವ ಬಳ್ಳಿಯ ಯಾವುದೇ ಚಿಹ್ನೆಗಳ ಬಗ್ಗೆ ಪ್ರಸೂತಿ ತಜ್ಞರು ಎಚ್ಚರವಾಗಿರುತ್ತಾರೆ. ಸಮಸ್ಯೆ ಇದ್ದಲ್ಲಿ, ಮಗುವನ್ನು ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗುತ್ತದೆ.

click me!