
ಸಾಮಾಜಿಕ ಜಾಲತಾಣದಲ್ಲಿ ಪ್ರತಿ ದಿನ ಸಾವಿರಾರು ಫೋಟೋ, ವಿಡಿಯೋಗಳು ವೈರಲ್ ಆಗ್ತಿರುತ್ತವೆ. ಅನೇಕ ವಿಡಿಯೋಗಳು ಹುಬ್ಬೇರಿಡುವಂತೆ ಮಾಡುತ್ತವೆ. ಈಗಿನ ದಿನಗಳಲ್ಲಿ ಜನರು ಮಾಹಿತಿ ಸಿಗುವ ವಿಡಿಯೋಗಿಂತ ಮನರಂಜನೆ ನೀಡುವ ವಿಡಿಯೋಗಳನ್ನು ಹೆಚ್ಚು ಇಷ್ಟಪಡ್ತಿದ್ದಾರೆ. ಇದೇ ಕಾರಣಕ್ಕೆ ಮಹಿಳೆಯರು ತಮ್ಮ ಮಕ್ಕಳ ಜೊತೆ ಫೋಟೋ, ವಿಡಿಯೋ ಹಂಚಿಕೊಳ್ಳೋದು ಕಾಮನ್ ಆಗಿದೆ. ಅಮ್ಮ – ಮಗ, ಅಮ್ಮ – ಮಗಳ ಡಾನ್ಸ್ ವಿಡಿಯೋಗಳನ್ನು ನೀವು ಇನ್ಸ್ಟಾಗ್ರಾಮ್, ಶಾರ್ಟ್ಸ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ನೋಡ್ಬಹುದು. ಆದ್ರೆ ಕೆಲವೊಂದು ವಿಡಿಯೋ ಅತೀ ಎನ್ನುವಂತಿರುತ್ತವೆ. ಈಗ ಒಂದು ವಿಡಿಯೋ ವೈರಲ್ ಆಗಿದೆ. ಅದ್ರಲ್ಲಿ ಅಮ್ಮ – ಮಗನನ್ನು ನೀವು ನೋಡ್ಬಹುದು. ವಿಡಿಯೋ ನೋಡಿದ್ರೆ ಅವರು ಅಮ್ಮ – ಮಗ ಎನ್ನಲು ಸಾಧ್ಯವೇ ಇಲ್ಲ. ಆದ್ರೆ ಸಂತೂರ್ ಮಮ್ಮಿ ಎನ್ನಿಸಿಕೊಂಡಿರುವ ಮಹಿಳೆಯ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಬಳಕೆದಾರರು ಇಷ್ಟಪಟ್ಟಿಲ್ಲ. ಆಕೆ ಮಗನ ಜೊತೆ ನಡೆದುಕೊಂಡ ರೀತಿಗೆ ಬಳಕೆದಾರರು ಕೋಪಗೊಂಡಿದ್ದಾರೆ.
ಸಂತೂರ್ ಮಾಮ್ (Santoormom) ರಚನಾ ಹೆಸರಿನ ಇನ್ಸ್ಟಾಗ್ರಾಮ್ (Instagram) ಖಾತೆಯಿದೆ. ಅದ್ರಲ್ಲಿ ರಚನಾ ಹೆಸರಿನ ಮಹಿಳೆ ಅನೇಕ ವಿಡಿಯೋ (video) ಗಳನ್ನು ಹಂಚಿಕೊಳ್ತಿರುತ್ತಾರೆ. ಅವರಿಗೆ ನಾಲ್ಕು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇನ್ಸ್ಟಾಗ್ರಾಮ್ ನಲ್ಲಿದ್ದಾರೆ. ಈಗ ಅವರ ಇನ್ನೊಂದು ವಿಡಿಯೋ ವೈರಲ್ ಆಗಿದೆ. ಅದ್ರಲ್ಲಿ ಮಗನ ಜೊತೆ ರೋಮ್ಯಾನ್ಸ್ ಹಾಡಿಗೆ ರಚನಾ ಹೆಜ್ಜೆ ಹಾಕಿರೋದನ್ನು ನೀವು ನೋಡ್ಬಹುದು.ಈ ವಿಡಿಯೋ ನೋಡಿದ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸುವ ಬದಲು ಕೋಪಗೊಂಡಿದ್ದಾರೆ. ಈ ವಿಡಿಯೋ ಟ್ರೋಲರ್ ಬಾಯಿಗೆ ಆಹಾರವಾಗಿದೆ.
ಬೇಡ ಬೇಡ ಅಂತ ಮನಸ್ಸು ಹೇಳ್ತಿದ್ರೂ… ಇಂಥ ಹುಡುಗರ ಕಡೆ ಹುಡುಗೀರ ಹೃದಯ ವಾಲೋದು ಖಚಿತ
ಈ ವಿಡಿಯೋದಲ್ಲಿ ರಚನಾ ಕಪ್ಪು ಡ್ರೆಸ್ ಧರಿಸಿದ್ದು, ಮಗನ ಜೊತೆ ನಡೆಯುತ್ತಿದ್ದಾರೆ. ಹಿಂದೆ ರೋಮ್ಯಾಂಟಿಕ್ ಸಾಂಗ್ ಪ್ಲೇ ಆಗ್ತಿದೆ. ಈ ವಿಡಿಯೋವನ್ನು 51 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ರಚನಾ ಹಾಗೂ ಅವರ ಮಗ ಇದೊಂದೇ ವಿಡಿಯೋದಲ್ಲಿ ಅಲ್ಲ ಅನೇಕ ವಿಡಿಯೋದಲ್ಲಿ ಈ ರೀತಿ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಚನಾ ಸಕ್ರಿಯವಾಗಿದ್ದಾರೆ. ಮಗನ ಜೊತೆ ಅನೇಕ ಫೊಟೋ, ವಿಡಿಯೋಗಳನ್ನು ಅವರು ಹಂಚಿಕೊಳ್ತಿರುತ್ತಾರೆ. ರೋಮ್ಯಾಂಟಿಕ್ ಹಾಡುಗಳಿಗೆ ಇಬ್ಬರು ಕೈ ಕೈ ಹಿಡಿದು ಓಡಾಡೋದನ್ನು ನೀವು ನೋಡ್ಬಹುದು.
ಈಗ ವೈರಲ್ ಆಗಿರೋ ವಿಡಿಯೋಕ್ಕೆ ಕಮೆಂಟ್ ಮಾಡಲು ರಚನಾ ಅವಕಾಶ ನೀಡಿಲ್ಲ. ಆದ್ರೆ ಅವರ ಹಿಂದಿನ ವಿಡಿಯೋಗಳಿಗೆ ಸಾಕಷ್ಟು ಕಮೆಂಟ್ ಬಂದಿದೆ. ಅಮ್ಮ ಎಷ್ಟೇ ಯಂಗ್ ಆಗಿರಲಿ, ಮಗನ ಜೊತೆ ಹೀಗೆ ನಡೆದುಕೊಳ್ಳೋದು ಸರಿಯಲ್ಲ ಅನ್ನೋದು ಬಳಕೆದಾರರ ಅಭಿಪ್ರಾಯ. ತಾಯಿ – ಮಗನ ಸಂಬಂಧಕ್ಕೆ ಚ್ಯುತಿ ಬರಬಾರದು ಎಂದು ಒಬ್ಬರು ಕಮೆಂಟ್ ಮಾಡಿದ್ರೆ ಮತ್ತೊಬ್ಬರು ಇಂಥ ತಾಯಿ ಇದ್ರೆಷ್ಟು ಎಂದು ಕೇಳಿದ್ದಾರೆ.
ಮಗ ಸೊಸೆಯೊಂದಿಗೆ ಸಂತೋಷವಾಗಿರಬೇಕೆಂದರೆ ಅವರ ಜೊತೆ ಇರಬೇಡಿ!
ಹೆಸರಿಗೆ ತಕ್ಕಂತೆ ರಚನಾ ಸಂತೋರ್ ಮಮ್ಮಿತರ ಇರೋದು ಸತ್ಯ. ಅವರು ಚಿಕ್ಕವಯಸ್ಸಿನಲ್ಲಿಯೇ ಮದುವೆ ಆಗಿದ್ದು, ಹದಿಹರೆಯದ ಮಗನಿದ್ದಾನೆ. ಮಗ ಮಾತ್ರವಲ್ಲ ಮಗಳನ್ನು ರಚನಾ ಹೊಂದಿದ್ದಾರೆ. ರಚನಾಗೆ ಇಬ್ಬರು ಮಕ್ಕಳಿದ್ದಾರೆ ಎನ್ನಲು ಸಾಧ್ಯವೇ ಇಲ್ಲ. ವಿಡಿಯೋ ನೋಡಿದ ಬಳಕೆದಾರರು ರಚನಾ, ಮಲ ತಾಯಿ ಎನ್ನುತ್ತಿದ್ದಾರೆ. ಇಷ್ಟೊಂದು ಸುಂದರವಾಗಿರಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡುವ ಜನರ ಸಂಖ್ಯೆ ಸಾಕಷ್ಟಿದೆ. ರಚನಾ ಮಗಳ ಜೊತೆಯೂ ಅನೇಕ ವಿಡಿಯೋಗಳನ್ನು ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಪತಿ ಜೊತೆಗಿರುವ ಫೋಟೋ ಪೋಸ್ಟ್ ಮಾಡಿದ್ದ ರಚನಾ, 17ನೇ ಮದುವೆ ವಾರ್ಷಿಕೋತ್ಸವ ಎಂದು ಬರೆದಿದ್ದರು. ಆದ್ರೆ ಆ ಫೊಟೋ ನೋಡಿದ ಜನರು, ಅಪ್ಪ – ಮಗಳಂತೆ ಕಾಣ್ತಾರೆಂದು ಕಮೆಂಟ್ ಮಾಡಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.