ಋತುಚಕ್ರದ ಸಮಯದಲ್ಲಿ ಮಹಿಳೆಯರು ಉತ್ತಮ ಮಾನಸಿಕ ಚುರುಕುತನವನ್ನು ಹೊಂದಿರುತ್ತಾರೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ. ಮುಟ್ಟಿನ ಸಮಯದಲ್ಲಿ ಮಹಿಳೆಯರು ತ್ವರಿತವಾಗಿ ಪ್ರತಿಕ್ರಿಯಿಸುತ್ತಾರೆ ಮತ್ತು ಕಡಿಮೆ ತಪ್ಪುಗಳನ್ನು ಮಾಡುತ್ತಾರೆ ಎಂದು ಹೊಸ ಅಧ್ಯಯನವು ತಿಳಿಸಿದೆ.
ಮುಟ್ಟಿನ ಸಮಯದಲ್ಲಿ ಮಹಿಳೆಯರು ಸಾಮಾನ್ಯವಾಗಿ ತುಂಬಾ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಾರೆ. ಹೊಟ್ಟೆನೋವು, ಮೂಡ್‌ಸ್ವಿಂಗ್ಸ್ ಸಾಮಾನ್ಯವಾಗಿರುತ್ತದೆ. ಹೀಗಾಗಿಯೇ ಮಹಿಳೆಯರ ಋತುಚಕ್ರದ ಕೆಲವು ದಿನ ಕಂಪೆನಿಗಳು ರಜೆಯನ್ನು ನೀಡುತ್ತವೆ. ಆದರೆ ಋತುಚಕ್ರದ ಸಮಯದಲ್ಲಿ ಮಹಿಳೆಯರು ಉತ್ತಮ ಮಾನಸಿಕ ಚುರುಕುತನವನ್ನು ಹೊಂದಿರುತ್ತಾರೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ. ಮುಟ್ಟಿನ ಸಮಯದಲ್ಲಿ ಮಹಿಳೆಯರು ತ್ವರಿತವಾಗಿ ಪ್ರತಿಕ್ರಿಯಿಸುತ್ತಾರೆ ಮತ್ತು ಕಡಿಮೆ ತಪ್ಪುಗಳನ್ನು ಮಾಡುತ್ತಾರೆ ಎಂದು ಹೊಸ ಅಧ್ಯಯನವು ಕಂಡುಹಿಡಿದಿದೆ.
ನ್ಯೂರೋ ಸೈಕಾಲಜಿಯಾದಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದೆ. ಇನ್ಸಿಟ್ಯೂಟ್ ಆಫ್ ಸ್ಪೋರ್ಟ್, ವ್ಯಾಯಾಮ ಮತ್ತು ಆರೋಗ್ಯ (ISEH) ನಿಂದ ಈ ಸಂಶೋಧನೆಯನ್ನು ಋತುಚಕ್ರದ ಕುರಿತಾಗಿ ನಡೆಸಲಾಯತು. ಋತುಚಕ್ರದ ಸಮಯದಲ್ಲಿ ಮಹಿಳೆಯರಲ್ಲಿ ನಿರ್ದಿಷ್ಟ ಅರಿವಿನ ಕಾರ್ಯಗಳು ಏರಿಳಿತಗೊಳ್ಳುತ್ತವೆ ಎಂದು ಅಧ್ಯಯನವು ಹೈಲೈಟ್ ಮಾಡುತ್ತದೆ.
undefined
ಹುಡುಗಿಯರು ಬೇಗ ಮುಟ್ಟಾಗೋಕೇನು ಕಾರಣ? ಅಧ್ಯಯನ ಹೇಳೋದೇನು?
ಅಧ್ಯಯನದಲ್ಲಿ ಭಾಗವಹಿಸುವವರು ಮೂಡ್ ಸ್ಕೇಲ್‌ಗಳು ಮತ್ತು ರೋಗಲಕ್ಷಣದ ಪ್ರಶ್ನಾವಳಿಗಳನ್ನು ಎರಡು ಬಾರಿ ಭರ್ತಿ ಮಾಡಿದರು. ಪರೀಕ್ಷೆಗಳ ಸಮಯದಲ್ಲಿ ಅವರ ಋತುಚಕ್ರದ ಹಂತಗಳನ್ನು ಅಂದಾಜು ಮಾಡಲು ಅವಧಿ-ಟ್ರ್ಯಾಕಿಂಗ್ ಅಪ್ಲಿಕೇಶನ್‌ಗಳನ್ನು ಬಳಸಲಾಯಿತು. ಮುಟ್ಟಿನ ಸಮಯದಲ್ಲಿ ಮಹಿಳೆಯರು ಹೆಚ್ಚು ಕಿರಿಕಿರಿ ಅನುಭವಿಸಿದರೂ ಕಡಿಮೆ ತಪ್ಪುಗಳನ್ನು ಮಾಡಿದರು. ಮಹಿಳಾ ಕ್ರೀಡಾಪಟುಗಳು ಸಹ ಪೀರಿಯೆಡ್ಸ್ ಸಮಯದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದನ್ನು ಅಧ್ಯಯನ ನಡೆಸಿದ ತಂಡದವರು ಕಂಡುಕೊಂಡರು.
'ಆಶ್ಚರ್ಯಕರ ಸಂಗತಿಯೆಂದರೆ, ಮಹಿಳೆಯರು ತಮ್ಮ ಪೀರಿಯೆಡ್ಸ್‌ನಲ್ಲಿದ್ದಾಗ ಅವರ ಕೆಲಸದ ಕಾರ್ಯಕ್ಷಮತೆ ಉತ್ತಮವಾಗಿತ್ತು, ಇದು ಮುಟ್ಟಿನ ಸಮಯದಲ್ಲಿ ಮಹಿಳೆ ಸಾಮರ್ಥ್ಯಗಳ ಬಗ್ಗೆ ಸಾಮಾಜಿಕವಾಗಿ ಇರುವ ಪ್ರಶ್ನೆಗಳಿಗೆ ಸವಾಲು ಹಾಕುತ್ತದೆ' ಎಂದು ಅಧ್ಯಯನ ನಡೆಸಿದ ತಂಡದ ಡಾ.ರೊಂಕಾ ಹೇಳಿದರು.
ಶೂಟಿಂಗ್ ಟೈಮಲ್ಲಿ ನೋವು ತಡೆಯಕ್ಕಾಗೋಲ್ಲ, ರಜೆ ಸಿಕ್ಕಿದ್ರೆ ಎಷ್ಟು ನೆಮ್ಮದಿ ಇರ್ತಿತ್ತು ಎಂದ ಕಿರುತೆರೆ ನಟಿ