ಪತಿ, ಅತ್ತೆ, ಕುಟುಂಬದ ಜೊತೆಗೆ ಶಿಕ್ಷಣ ಸಂಸ್ಥೆ ಹಾಗೂ ಇತರ ಸಂಸ್ಥೆಗಳನ್ನು ಡಿಕೆಶಿ ಪುತ್ರಿ ಐಶ್ವರ್ಯ ಮುನ್ನಡೆಸುತ್ತಿದ್ದಾರೆ. ಅತ್ತೆಯ ಮುದ್ದಿನ ಸೊಸೆ ಐಶ್ವರ್ಯಗೆ ಇದೀಗ ಹೊಸ ಜವಾಬ್ದಾರಿ ನೀಡಲಾಗಿದೆ.
ಬೆಂಗಳೂರು(ಜೂ.07) ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಡಿಕೆಎಸ್ ಹೆಗ್ಡೆ ಯಾವುದೇ ಸವಾಲಿನ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ನಾಯಕತ್ವದಲ್ಲಿ ಡಿಕೆ ಶಿವಕುಮಾರ್ ಹಾದಿಯಲ್ಲೇ ಐಶ್ವರ್ಯ ಸಾಗುತ್ತಿದ್ದಾರೆ. ಶಿಕ್ಷಣ ಸಂಸ್ಥೆ, ಫಾಶನ್ ಬ್ರ್ಯಾಂಡ್ ಸೇರಿದಂತೆ ಹಲವು ಸಂಸ್ಥೆಗಳನ್ನು ಐಶ್ವರ್ಯ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಇತ್ತ ಕುಟುಂಬ, ಪತಿ, ಅತ್ತೆ ಹೀಗೆ ಎಲ್ಲವನ್ನೂ ನಿಭಾಯಿಸುವಲ್ಲೂ ಐಶ್ವರ್ಯ ಯಶಸ್ವಿಯಾಗಿದ್ದಾರೆ. ಇದೀಗ ಪ್ರೀತಿಯ ಸೊಸೆಗೆ ಅತ್ತೆ ಮಹತ್ತರ ಜವಾಬ್ದಾರಿಯೊಂದನ್ನು ನೀಡಿದ್ದಾರೆ. ಹೌದು, ಡಿಕೆ ಶಿವಕುಮಾರ್ ಸ್ಥಾಪಿಸಿರುವ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುತ್ತಿರುವ ಐಶ್ವರ್ಯಗೆ ಇದೀಗ ಚಿಕ್ಕಮಗಳೂರಿನ ಅಂಬರ್ ವ್ಯಾಲಿ ಸ್ಕೂಲ್ ಹೊಣೆಯನ್ನೂ ನೀಡಲಾಗಿದೆ.
ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಗಳ ಮೇಲ್ವಿಚಾರಣೆ, ಕಾರ್ಯಾಗಾರ, ಮಕ್ಕಳ ಜೊತೆ ಸಂಭಾಷಣೆ, ಸಿಬ್ಬಂದಿ, ಶಿಕ್ಷಕರಿಗೆ ತರಬೇತಿ ಸೇರಿದಂತೆ ಶಿಕ್ಷಣ ಸಂಸ್ಥೆಯ ಹಲವು ಚಟುವಟಿಕೆಯಲ್ಲಿ ಐಶ್ವರ್ಯ ಡಿಕೆಎಸ್ ಹೆಗ್ಡೆ ಬ್ಯೂಸಿಯಾಗಿದ್ದಾರೆ. ಇದೀಗ ಚಿಕ್ಕಮಗಳೂರಿನ ಅಂಬರ್ ವ್ಯಾಲಿ ಸ್ಕೂಲ್ ಹೊಣೆಯನ್ನು ಐಶ್ವರ್ಯ ಹೊತ್ತುಕೊಂಡಿದ್ದಾರೆ. ಹೀಗಾಗಿ ಐಶ್ವರ್ಯ ಡಿಕೆಎಸ್ ಹೆಗ್ಡೆ ಬೆಂಗಳೂರು ಚಿಕ್ಕಮಗಳೂರು ಅಂತಾ ಓಡಾಡುತ್ತಿದ್ದಾರೆ.
ಕಾಲೇಜ್ ಫೆಸ್ಟ್ ವೇದಿಕೆಯಲ್ಲಿ ಡಿಕೆಶಿ ಪುತ್ರಿ, ನಟಿ ಸಪ್ತಮಿ, ಡಾಲಿ ಧನಂಜಯ್, ಪೋಟೋ ವೈರಲ್!
ಇತ್ತೀಚಗೆ ಅಂಬರ್ ವ್ಯಾಲಿ ಸ್ಕೂಲ್‌ಗೆ ಭೇಟಿ ನೀಡಿದ ಐಶ್ವರ್ಯ ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಶಿಕ್ಷಕರು, ಸಿಬ್ಬಂದಿಗಳಿಗೆ ಕಾರ್ಯಾಗಾರ ನಡೆಸಿಕೊಟ್ಟಿದ್ದಾರೆ. ಪ್ರಕೃತಿಯ ಮಡಲಲ್ಲಿರುವ ಈ ಶಾಲೆ, ಇಲ್ಲಿನ ಆಹಾರ, ಶಿಸ್ತು ಹಾಗೂ ಪ್ರೀತಿಯನ್ನು ಐಶ್ವರ್ಯ ಡಿಕೆಎಸ್ ಹೆಗ್ಡೆ ಮೆಚ್ಚಿಕೊಂಡಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಜೊತೆ ಕಾಲ ಕಳೆದಿದ್ದಾರೆ. ಅವರಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲೂ ತೊಡಗಿಸಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿ ನೆರವಾಗಿದ್ದಾರೆ. ಕಲಿಕೆಯ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾ ಚಟುವಟಿಕೆ, ಮಕ್ಕಳೊಂದಿಗೆ ಆಹಾರ ಸವಿದು ಚಿಗುರುವ ಮನಸ್ಸುಗಳಿಗೆ ಹೊಸ ಉತ್ಸಾಹ ತುಂಬಿದ್ದಾರೆ.
ನ್ಯೂಸ್ ಪೇಪರ್ ಡ್ರೆಸ್‌ನಲ್ಲಿ ಮಿಂಚಿದ ಡಿಕೆಶಿ ಪುತ್ರಿ, ಐಶ್ವರ್ಯ ನಮ್ಮ ಕ್ರಶ್ ಎಂದ ಫ್ಯಾನ್ಸ್!
ಐಶ್ವರ್ಯ ಡಿಕೆಎಸ್ ಹೆಗ್ಡೆ ಶಿಕ್ಷಣ ಸಂಸ್ಥೆ ಮಾತ್ರವಲ್ಲ, ಉಡುಪುಗಳ ಫ್ಯಾಶನ್ ಬ್ರ್ಯಾಂಡ್ ಸಂಸ್ಥೆಯನ್ನೂ ಮುನ್ನಡೆಸುತ್ತಿದ್ದಾರೆ. ಐಶ್ವರ್ಯ ಡಿಕೆಎಸ್ ಹೆಗ್ಡೆ ಈ ಕಂನಿಯ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ. ಈ ಫ್ಯಾಶನ್ ಕಂಪನಿಯ ಡ್ರೆಸ್‌ಗಳಿಂದಲೇ ಐಶ್ವರ್ಯ ಮಿಂಚಿದ್ದಾರೆ. ಹಲವು ಉಡುಪುಗಳು, ವಿನ್ಯಾಸ ಭಾರಿ ವೈರಲ್ ಆಗಿದೆ. ಇತ್ತೀಚೆಗೆ ಇದೇ ಫ್ಯಾಶನ್ ಬ್ರ್ಯಾಂಡ್ ಉತ್ಪನ್ನ ಧರಿಸಿ ಎಲ್ಲರ ಮನಗೆದಿದ್ದರು. ಡಿಕೆಶಿ ಪುತ್ರಿ ಧರಿಸಿದ್ದ ನ್ಯೂಸ್ ಪೇಪರ್ ಡ್ರೆಸ್ ಭಾರಿ ವೈರಲ್ ಆಗಿತ್ತು.