ಸುನ್ನತಿ ಹೆಸರು ಕೇಳ್ತಿದ್ದಂತೆ ಜನರು ಬೆಚ್ಚಿ ಬೀಳ್ತಾರೆ. ವೈದ್ಯಕೀಯ ಜ್ಞಾನವಿಲ್ಲದ ಜನರು ಚಿಕ್ಕ ಮಕ್ಕಳಿಗೆ ಯಮ ಹಿಂಸೆ ನೀಡಿ ಸುನ್ನತಿ ಮಾಡಿಸ್ತಾರೆ. ಇದ್ರ ವಿರುದ್ಧ ಹೋರಾಟಗಳು ನಡೆಯುತ್ತಿವೆ. ಅನೇಕ ದೇಶಗಳಲ್ಲಿ ಇದಕ್ಕೆ ನಿಷೇಧ ಹೇರಿದ್ದರೂ ಕದ್ದುಮುಚ್ಚಿ ಸುನ್ನತಿ ನಡೆಯುತ್ತಿದೆ.
ಪುರುಷ (Male) ಸುನ್ನತಿ ಬಗ್ಗೆ ಬಹುತೇಕ ಎಲ್ಲರೂ ಕೇಳಿರ್ತಾರೆ. ಆದ್ರೆ ಮಹಿಳೆ (woman)ಯರಿಗೆ ನಡೆಯುವ ಸುನ್ನತಿಯನ್ನು ಮುಚ್ಚಿಡಲಾಗುತ್ತದೆ. ಈಜಿಪ್ಟ್ ನಲ್ಲಿ ಸುನ್ನತಿಯನ್ನು ನಿಷೇಧಿಸಲಾಗಿದೆ. ಆದ್ರೂ ಮಹಿಳೆಯರಿಗೆ ನಿರಂತರವಾಗಿ ಸುನ್ನತಿ ನಡೆಯುತ್ತಿದೆ. ಮೂಢನಂಬಿಕೆ ಹೆಸರಿನಲ್ಲಿ ಮಹಿಳೆಯರಿಗೆ ಸುನ್ನತಿ ಮಾಡಲಾಗುತ್ತದೆ. ಮಹಿಳಾ ಸುನ್ನತಿ ಅತ್ಯಂತ ಕ್ರೂರ ಹಾಗೂ ಭಯಾನಕ (Horrible) ವಾಗಿದೆ. ಚಂದ್ರನಾಡಿ ಹಾಗೂ ಯೋನಿಯ ಕೆಲವೆಡೆ ಕತ್ತರಿಸಲಾಗುತ್ತದೆ. ಇಂದು ಸುನ್ನತಿಯ ನೋವನ್ನುಂಡ ಮಹಿಳೆಯೊಬ್ಬಳ ಕಥೆಯನ್ನು ನಿಮಗೆ ಹೇಳ್ತೇವೆ. ಹಾಗೆ ಅದರ ಚಿಕಿತ್ಸೆ (Treatment ) ಬಗ್ಗೆಯೂ ನಾವು ಹೇಳ್ತೇವೆ. ಮೊದಲಿಗೆ ಸುನ್ನತಿ ಎಂದ್ರೇನು ಎಂಬುದನ್ನು ತಿಳಿಯೋಣ.
ಮಹಿಳೆಯರ ಸುನ್ನತಿ ಎಂದರೇನು? : ಐದರಿಂದ ಎಂಟು ವರ್ಷದ ಬಾಲಕಿಯರಿಗೆ ಇದನ್ನು ಮಾಡಲಾಗುತ್ತದೆ. ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಇದು ಶಾಪವಾಗಿ ಪರಿಣಮಿಸಿದೆ. ಮಹಿಳೆಯರಿಗೆ ಸುನ್ನತಿ ಮಾಡುವ ಈ ಪದ್ಧತಿ ಆಫ್ರಿಕನ್ ದೇಶಗಳಲ್ಲೂ ಇದೆ. ಆದರೆ ಇದು ಭಾರತ (India)ದ ಕೆಲವು ಭಾಗಗಳಲ್ಲಿ ಆಚರಣೆಯಲ್ಲಿದೆ. ಈಜಿಪ್ಟ್, ಕೀನ್ಯಾ, ಉಗಾಂಡಾ, ಎರಿಟ್ರಿಯಾ ಮುಂತಾದ ದೇಶಗಳಲ್ಲಿ ಸಂಪ್ರದಾಯವು ಶತಮಾನಗಳಿಂದ ನಡೆದುಕೊಂಡು ಬಂದಿದೆ. ಯಾವುದೇ ವೈದ್ಯಕೀಯ ಜ್ಞಾನವಿಲ್ಲದವರು ಇದನ್ನು ಮಾಡ್ತಾರೆ. ಮುಟ್ಟಿನ ಸಮಯ ಹಾಗೂ ಹೆರಿಗೆ ಸಮಯದಲ್ಲಿ ಹೆಣ್ಣಿನ ನೋವನ್ನು ಕಡಿಮೆ ಮಾಡುವ ಭಾಗವನ್ನು ಸುನ್ನತಿ ವೇಳೆ ತೆಗೆಯಲಾಗುತ್ತದೆ. ಮುಗ್ಧ ಹೆಣ್ಣುಮಕ್ಕಳು ಹಲವು ತಿಂಗಳ ಕಾಲ ನೋವಿನಿಂದ ನರಳುತ್ತಾರೆ. ಅನೇಕ ಹೆಣ್ಣುಮಕ್ಕಳು ಸೋಂಕಿನಿಂದ ಸಾಯುತ್ತಾರೆ.
New Mom Debina Bonnerjee Tips: ಗರ್ಭಧಾರಣೆಗಾಗಿ ಫ್ಲವರ್ ಥೆರಪಿ ಟ್ರೈ ಮಾಡ್ಬೋದು
ಭಯಾನಕ ದಿನಗಳನ್ನು ನೆನಪಿಸಿಕೊಂಡ ಈಜಿಪ್ಟ್ ಮಹಿಳೆ : 28 ವರ್ಷದ ಮಹಿಳೆ ತನ್ನ ನೋವನ್ನು ಎಲ್ಲರ ಮುಂದಿಟ್ಟಿದ್ದಾಳೆ. ಮಾನವಶಾಸ್ತ್ರದ ವಿದ್ಯಾರ್ಥಿನಿ ಮೇರಿಯಮ್ ಕೇವಲ 11 ವರ್ಷ ವಯಸ್ಸಿನವಳಾಗಿದ್ದಳು. ಆಗ ಆಕೆಗೆ ಸುನ್ನತಿ ನಡೆದಿತ್ತು. ಅಮ್ಮನ ಜೊತೆ ಮಹಿಳೆಯೊಬ್ಬಳು ಮನೆಗೆ ಬಂದಿದ್ದಳಂತೆ. ಬೆಡ್ ಮೇಲೆ ಮಲಗುವಂತೆ ಮಹಿಳೆ ಮೇರಿಯಮ್ ಗೆ ಹೇಳಿದ್ದಳಂತೆ. ಕಾಲನ್ನು ಮಡಚಿ ಅಗಲ ಮಾಡುವಂತೆ ಹೇಳಿದ್ದಳಂತೆ. ಅಮ್ಮ, ಕೈ ಕಾಲುಗಳನ್ನು ಹಿಡಿದುಕೊಂಡಿದ್ದಳಂತೆ. ಮಹಿಳೆ ಮೇರಿಯಮ್ ನ ಜನನಾಂಗದ ಸುತ್ತಲೂ ಮರಗಟ್ಟುವಿಕೆ ಕೆನೆ ಹಚ್ಚಿದಳಂತೆ. ರೇಜರ್ ಬ್ಲೇಡ್‌ನಿಂದ ಸುನ್ನತಿ ಮಾಡಿದಳಂತೆ. ಮುಂದೇನಾಯ್ತು ಎಂಬುದು ನನಗೆ ತಿಳಿಯಲಿಲ್ಲ. ಆದ್ರೆ ನಂತ್ರ ಮಹಿಳೆ ಕೆಲ ದೇಹದ ಭಾಗವನ್ನು ನನಗೆ ತೋರಿಸಿದ್ಲು. ನಂತ್ರ ಚಿಕ್ಕಮ್ಮನಿಗೆ ಅದನ್ನು ಹೂಳುವಂತೆ ಸಲಹೆ ನೀಡಿದ್ದಳಂತೆ. ಚಿಕ್ಕಮ್ಮನ ಮದುವೆ ಮಾಡಲು ನಾನು ಏನೋ ಬಲಿದಾನ ಮಾಡಿದ್ದೇನೆ ಎಂಬುದು ಮಾತ್ರ ನನಗೆ ಆಗ ತಿಳಿದಿತ್ತು ಎನ್ನುತ್ತಾರೆ ಮೇರಿಯಮ್. ಯಾವುದೇ ಕಾರಣವಿಲ್ಲದೆ ನನ್ನ ಜನನಾಂಗದ ಬಾಹ್ಯ ಭಾಗವನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿತ್ತು. ನನಗೆ ಇದನ್ನು ಸಹಿಸಲು ಸಾಧ್ಯವಾಗ್ಲಿಲ್ಲ. ನನ್ನಂತೆ ಬೇರೆ ಹೆಣ್ಣು ಮಕ್ಕಳು ಕಷ್ಟ ಅನುಭವಿಸಬಾರದೆಂಬ ನಿರ್ಧಾರಕ್ಕೆ ಬಂದಿದ್ದೆ. ಸುನ್ನತಿ ತಡೆಯಲು ನಾನು ಮುಂದಾಗಿದ್ದೆ. ಇದಕ್ಕೆ ಮನೆಯವರ ಸಂಪೂರ್ಣ ವಿರೋಧವಿತ್ತು ಎನ್ನುತ್ತಾಳೆ ಮೆರಿಯಮ್.
ಗರ್ಭಿಣಿಯರಿಗೆ ಏನೇನೆಲ್ಲಾ ತಿನ್ಬೇಕು ಅನಿಸೋದು ಯಾಕೆ ?
ಸುನ್ನತಿ ಕ್ಲಿನಿಕ್ : ಈಜಿಪ್ಟ್ ನಲ್ಲಿ ಯೋನಿ ಮತ್ತು ಜನನಾಂಗದ ಪುನರ್ ನಿರ್ಮಾಣ ಮಾಡುವ ಆಸ್ಪತ್ರೆಗಳಿದೆ. ಅದ್ರಲ್ಲಿ, ಕ್ಲಿನಿಕ್ ರಿಸ್ಟೋರ್ ಎಫ್ ಜಿಎಂ ನ ಸಂಸ್ಥಾಪಕ ಡಾ. ಅಮರ್ ಸೆಫೆಲ್ಡ್ ಮತ್ತು ಡಾ. ರೆಹಮ್ ಅವದ್ ಪರಿಣಿತರು. ಅವರು ಪ್ಲಾಸ್ಟಿಕ್ ಸರ್ಜರಿ ಮಾಡ್ತಾರೆ. 2020ರಲ್ಲಿ ಈ ಆಸ್ಪತ್ರೆ ತೆರೆಯಲಾಗಿದೆ. ಸುನ್ನತಿ ನಂತ್ರ ಚಿಕಿತ್ಸೆ ನೀಡುವ ಅನೇಕ ಆಸ್ಪತ್ರೆಗಳು ವಿಶ್ವದಾದ್ಯಂತ ಇದೆ. ಆದ್ರೆ ಈ ಆಸ್ಪತ್ರೆ ವಿಶೇಷವೆಂದ್ರೆ ಶಸ್ತ್ರಚಿಕಿತ್ಸೆಯಿಲ್ಲದೆ ಬಹುತೇಕರಿಗೆ ಚಿಕಿತ್ಸೆ ನೀಡಲಾಗುತ್ತದೆ. ಆಸ್ಪತ್ರೆಗೆ ಬರುವವರ ಪರಿಸ್ಥಿತಿ ನೋಡಿ ಅವರಿಗೆ ಚಿಕಿತ್ಸೆ ನೀಡಲಾಗುತ್ತದೆ. ಇದನ್ನು ತಿಳಿದ ಮೇರಿಯಮ್ ಅಲ್ಲಿಗೆ ಹೋಗಿ ಚಿಕಿತ್ಸೆ ಪಡೆದಿದ್ದಾರೆ. ಚಿಕಿತ್ಸೆ ವಿಷ್ಯವನ್ನು ಮೇರಿಯಮ್ ತಾಯಿಗೆ ಹೇಳಿಲ್ಲವಂತೆ. ಮಗಳಿಗೆ ಸುನ್ನತಿ ಮಾಡಿಸಿ ನೊಂದಿರುವ ತಾಯಿಗೆ,ಎಲ್ಲವೂ ಸರಿಯಾದ್ಮೇಲೆ ಹೇಳುವ ನಿರ್ಧಾರವನ್ನು ಮಾಡಿದ್ದಾಳಂತೆ.