ಪುಟ್ಟ ಮಗುವಿನ ಹೇರ್ ಕಟ್ಟಿಂಗ್‌ಗೆ ಅಮ್ಮ ಮಾಡಿದ ಸ್ಮಾರ್ಟ್ ಐಡಿಯಾ ವೈರಲ್

Published : Jun 30, 2023, 01:43 PM ISTUpdated : Jun 30, 2023, 02:11 PM IST
ಪುಟ್ಟ ಮಗುವಿನ ಹೇರ್ ಕಟ್ಟಿಂಗ್‌ಗೆ ಅಮ್ಮ ಮಾಡಿದ ಸ್ಮಾರ್ಟ್ ಐಡಿಯಾ ವೈರಲ್

ಸಾರಾಂಶ

 ತನ್ನ ಕಂದನನ್ನು ಗಮನದಲ್ಲಿಟ್ಟು ಅಮ್ಮ ಮಾಡುವ ಐಡಿಯಾಗಳು ಯಾವಾಗಲೂ ಬೆಸ್ಟ್ ಆಗಿರುತ್ತವೆ. ಅದೇ ರೀತಿ ಮಗುವಿನ ಕೂದಲು ಕತ್ತರಿಸಲು ಅಮ್ಮ ಮಾಡಿದ ಐಡಿಯಾ ಬೆಸ್ಟ್ ಎನಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಪುಟಾಣಿ ಮಕ್ಕಳನ್ನುಅದರಲ್ಲೂ ಆಗ ತಾನೇ ಕೈಕಾಲು ಹುಟ್ಟಿದ ಮಕ್ಕಳನ್ನು ಹ್ಯಾಂಡಲ್ ಮಾಡುವುದು ಬಹಳ ಕಷ್ಟದ ಕೆಲಸ, ಸ್ವಲ್ಪ ಕಣ್ಣು ತಪ್ಪಿದರೂ ಮಕ್ಕಳು ಏನಾದರೊಂದು ಅನಾಹುತ ಮಾಡಿಕೊಳ್ಳುವುದು ಗ್ಯಾರಂಟಿ, ನಿಂತಲ್ಲಿ ನಿಲ್ಲದ ಕೂತಲ್ಲಿ ಕೂರದ ಈ ಮಕ್ಕಳನ್ನು ನೋಡಿಕೊಳ್ಳಲು ಯಾರಾದರೊಬ್ಬರು ಜೊತೆಯಲ್ಲಿ ಇರಲೇಬೇಕು. ಹಾಗೆಯೇ ಮಗುವಿನ ಉಗುರು ತೆಗೆಯುವುದು ಆಹಾರ ತಿನ್ನಿಸುವುದು ತಲೆಕೂದಲು ಬಾಚುವುದು ಕತ್ತರಿಸುವುದರಿಂದ ಹಿಡಿದು ಪ್ರತಿಯೊಂದು ಕೆಲಸವನ್ನು ಬಹಳ ನಾಜೂಕಿನಿಂದಲೇ ಮಾಡಬೇಕಾಗುತ್ತದೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಬಹಳ ಸೂಕ್ಷ್ಮ ಚರ್ಮವನ್ನು ಹೊಂದಿರುವ ಮಕ್ಕಳಿಗೆ ಹಾನಿಯಾಗುವುದಂತೂ ಪಕ್ಕಾ.  ಮುದ್ದು ಕಂದನ ಕೂದಲು ಕತ್ತರಿಸುವುದು ಅಮ್ಮನ ಪಾಲಿಗೆ ದೊಡ್ಡ ಟಾಸ್ಕ್‌, ಅನೇಕ ಪೋಷಕರು ಮಕ್ಕಳ ಹಲವು ಚಟುವಟಿಕೆಗಳನ್ನು ನಾಜೂಕಾಗಿ ಮಾಡುವುದಕ್ಕೆ ಹಲವು ಐಡಿಯಾಗಳನ್ನು ಮಾಡುತ್ತಾರೆ. ತನ್ನ ಕಂದನನ್ನು ಗಮನದಲ್ಲಿಟ್ಟು ಅಮ್ಮ ಮಾಡುವ ಐಡಿಯಾಗಳು ಯಾವಾಗಲೂ ಬೆಸ್ಟ್ ಆಗಿರುತ್ತವೆ. ಅದೇ ರೀತಿ ಮಗು ಕೂದಲು ಕತ್ತರಿಸಲು ಅಮ್ಮ ಮಾಡಿದ ಐಡಿಯಾ ಬೆಸ್ಟ್ ಎನಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಹೌದು ಅಮ್ಮ ಮಾಡುವ ಪ್ರತಿ ಐಡಿಯಾಗಳಲ್ಲಿ ಮಗುವಿನ ಸುರಕ್ಷತೆಗೆ ಮೊದಲ ಸ್ಥಾನ ನಂತರ ಎಲ್ಲವೂ. ಮಕ್ಕಳ ಬಗ್ಗೆ ಅಮ್ಮನ ಸೇಫ್ಟಿ ಮುಂದೆ ಎಲ್ಲವೂ ಗೌಣವಾಗುತ್ತದೆ. ಸಾಮಾನ್ಯವಾಗಿ ಪುಟಾಣಿ ಮಕ್ಕಳ ಕೂದಲು ಕತ್ತರಿಸುವುದು ಸುಲಭದ ಕೆಲಸ ಅಲ್ಲ, ಪುಟ್ಟ ಮಕ್ಕಳಿಗೂ ತಮ್ಮ ಕೂದಲಿನ ಮೇಲೆ ಭಾರಿ ಪ್ರೀತಿ ಇರುತ್ತದೆ, ಕೆಲ ಮಕ್ಕಳಂತೂ ಕೂದಲು ಕತ್ತರಿಸಲೇ ಬಿಡುವುದಿಲ್ಲ,  ಅದರ ಜೊತೆಗೆ ಮಕ್ಕಳು ನೆಟ್ಟಗೆ ಒಂದು ಕ್ಷಣವೂ ಕೂರದ ಕಾರಣ ಕತ್ತರಿ ಹಿಡಿದು ಮಗುವಿನ ಬಳಿ ಕೆಲಸ ಮಾಡುವುದೇ ಅಪಾಯಕಾರಿ. ಸ್ವಲ್ಪ ಹೆಚ್ಚು ಕಡಿಮೆ ಆದರೂ ಮೂಗು ಮೂತಿ ತೂತಾಗೋದು ಪಕ್ಕಾ. ಇದೇ ಕಾರಣಕ್ಕೆ ಅದಕ್ಕಾಗಿಯೇ ಹೊಸ ಉಪಾಯ ಮಾಡಿದ ಅಮ್ಮ ಕೂದಲು ಕತ್ತರಿಸಲು ಆರಂಭಿಸುವುದಕ್ಕೂ ಮೊದಲು ಮಗುವನ್ನು ಕಾರ್ಡ್‌ಬೋರ್ಡ್ (cardboard) ಡಬ್ಬಿಯಲ್ಲಿ ಹಾಕಿ ಕೂರಿಸಿದ್ದು, ಮಗು ಕಾಲು ನೀಡಿ ಕೂರಲು ಸುಲಭವಾಗುವಂತೆ ಡಬ್ಬಿಯ ಕೆಳಗೆ ಎರಡು ತೂತುಗಳನ್ನು ಮಾಡಿದ್ದಾಳೆ. ಜೊತೆಗೆ ಮೇಲೆ ತಲೆ ಮಾತ್ರ ಹೊರಗೆ ಬರುವಂತೆ ಕಾರ್ಡ್‌ಬೋರ್ಡ್ ಡಬ್ಬಿಯನ್ನು ಕತ್ತರಿಸಿದ್ದಾಳೆ. ನಂತರ ಮಗುವಿನ ಕೈಗಳನ್ನು  ಕಾರ್ಡ್‌ಬೋರ್ಡ್‌ನಲ್ಲಿ ತುಂಬಿಸಿ ಬಾಕ್ಸ್‌ಗೆ ಗಮ್ ಟೇಮ್‌ನಿಂದ ಅಂಟಿಸಿದ್ದಾಳೆ. ಬಳಿಕ ಹೇರ್ ಟ್ರಿಮ್ಮರ್‌ನಿಂದ ಮಗುವಿನ ಕೂದಲನ್ನು ನೈಸ್ ಆಗಿ ಟ್ರಿಮ್ ಮಾಡಿದ್ದಾಳೆ.  ಇತ್ತ ಅಮ್ಮ ಏನು ಮಾಡುತ್ತಿದ್ದಾಳೆ ಎಂಬುದರ ಅರಿವಿಲ್ಲದ ಪುಟಾಣಿ ಪಿಳಿ ಪಿಳಿ ಕಣ್ಣು ಬಿಡುತ್ತಾ ಅಮ್ಮನನ್ನೇ ನೋಡುತ್ತಿದೆ. 

ಟ್ರಾಫಿಕ್‌ನಲ್ಲಿ ಸೆರೆ ಆಯ್ತು ಅಮ್ಮನ ಅಮೋಘ ಪ್ರೀತಿ: ವೈರಲ್ ವೀಡಿಯೋ

ಈ ವೀಡಿಯೋವನ್ನು ಐಪಿಎಸ್ ಅಧಿಕಾರಿ (IPS Officer) ರುಪೀನ್ ಶರ್ಮಾ ಟ್ವಿಟ್ಟರ್‌ನಲ್ಲಿ ನಗುವ ಇಮೋಜಿಯೊಂದಿಗೆ ಪೋಸ್ಟ್ ಮಾಡಿದ್ದಾರೆ. ವೀಡಿಯೋ ನೋಡಿದ ಅನೇಕರು ತಾಯಿಯ ಬುದ್ಧಿವಂತಿಕೆಗೆ ತಲೆದೂಗಿದ್ದಾರೆ. ಸಾವಿರಾರು ಜನ ಈ ವೀಡಿಯೋ ವೀಕ್ಷಿಸಿದ್ದು, ಅನೇಕರು ಅಮ್ಮ ತುಂಬಾ ಸ್ಮಾರ್ಟ್‌ (Smart) ಎಂದು ಕಾಮೆಂಟ್ ಮಾಡಿದ್ದಾರೆ. ಇದೊಂದು ಇನೋವೇಟಿವ್ ಐಡಿಯಾವಾಗಿದ್ದು, ಮಗುವಿನ ಮೊದಲ ಕೇಶ ಮುಂಡನದ ವೇಳೆ ಈ ಐಡಿಯಾ ಬಳಸಬಹುದು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. 

16 ದಿನ ಕೋಮಾದ ಬಳಿಕ ಎಚ್ಚೆತ್ತ ಕಂದ: ಅಮ್ಮನ ಖುಷಿಗೆ ಹರಿಯಿತು ಕಣ್ಣೀರ ಹೊಳೆ: ವೈರಲ್ ವೀಡಿಯೋ

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾವ್ಯಾರಿಗೂ ಕಮ್ಮಿ ಇಲ್ಲ ಬ್ರೋ... ಆಹಾ ಭಾರತೀಯ ನಾರಿ ಕುಡಿದು ರಾಪಿಡೋ ಏರಿ ಬಿದ್ದಳು ಕೆಳಗೆ ಜಾರಿ: ವೀಡಿಯೋ
ಸಾವಿರ ಕೋಟಿ ಕುಬೇರ 'ಮಹಾಪುರುಷ'ನಿಗೆ ಡಿವೋರ್ಸ್ ಕೊಡ್ತಾರಾ ಈ ನಟಿ? ಇದೆಂಥ ಶಾಕಿಂಗ್ ಮ್ಯಾಟರ್!