ಪ್ರೀತಿಯಲ್ಲಿ ಮಾತ್ರವಲ್ಲ ಆಸ್ತಿ ಗಳಿಕೆಯಲ್ಲೂ ಮುಂದಿದ್ದಾರೆ Dream Girl ಹೇಮಾ ಮಾಲಿನಿ

By Suvarna NewsFirst Published Feb 22, 2023, 1:13 PM IST
Highlights

ಬಾಲಿವುಡ್ ನಟಿ ಹೇಮಾ ಮಾಲಿನಿ ಸೌಂದರ್ಯಕ್ಕೆ ಮಾರು ಹೋಗದವರಿಲ್ಲ. 74ರ ಹರೆಯದಲ್ಲೂ ನಟಿಯ ಸೌಂದರ್ಯ ಯುವಕರನ್ನು ನಾಚಿಸುವಂತಿದೆ. ಹೇಮಾ ಮಾಲಿನ ಆಸ್ತಿ ಎಷ್ಟಿದೆ?  ಪ್ರೀತಿ ದಾಂಪತ್ಯದ ಗುಟ್ಟೇನು ಎಂಬುದಕ್ಕೆ ಉತ್ತರ ಇಲ್ಲಿದೆ.
 

ಎರಡನೇ ಪತ್ನಿಯಾಗಿ ಪ್ರೀತಿ ಹಂಚಿಕೊಂಡ ನಟಿ ಡ್ರೀಮ್ ಗರ್ಲ್ ಹೇಮಾ ಮಾಲಿನಿ ಸದ್ಯ ಸುದ್ದಿಯಲ್ಲಿದ್ದಾರೆ. ಹೇಮಾ ಮಾಲಿನ ಮೊದಲ ಬಾರಿ ಪತಿ ಧರ್ಮೇಂದ್ರ ಅವರ ಮೊದಲ ಪತ್ನಿ ಬಗ್ಗೆ ಮಾತನಾಡಿದ್ದಾರೆ. ಹೇಮಾ ಮಾಲಿನಿ ಹಾಗೂ ಧರ್ಮೇಂದ್ರ ಜೋಡಿ ಬಾಲಿವುಡ್ ನಲ್ಲಿ ಮೋಡಿ ಮಾಡಿತ್ತು. ಇಬ್ಬರ ಮಧ್ಯೆ ಪ್ರೀತಿ ಚಿಗುರಿತ್ತು. ಆದ್ರೆ ಆಗ್ಲೇ ಧರ್ಮೇಂದ್ರ ಪ್ರಕಾಶ್ ಕೌರ್ ಮದುವೆಯಾಗಿದ್ದರು. ಇಬ್ಬರಿಗೆ ನಾಲ್ವರು ಮಕ್ಕಳಿದ್ದರು. ಎಲ್ಲ ಗಲಾಟೆ ಮಧ್ಯೆ ಧರ್ಮೇಂದ್ರ, ಹೇಮಾ ಕೈ ಹಿಡಿದಿದ್ದರು.

ಎರಡನೇ ಮದುವೆ (Marriage) ಯಾದ್ಮೇಲೆ ಪ್ರಕಾಶ ಕೌರ್ ಬಗ್ಗೆ ನಿಮಗೆ ಹೊಟ್ಟೆಕಿಚ್ಚು ಇತ್ತಾ ಎಂದು ಕೇಳಿದ ಮಾಧ್ಯಮಗಳ ಪ್ರಶ್ನೆಗೆ ಹೇಮಾ ಮಾಲಿನಿ (Hema Malini) ಉತ್ತರ ನೀಡಿದ್ದಾರೆ. ಅವರ ಮೇಲೆ ನನಗೆ ಅಸೂಯೆ ಇರಲಿಲ್ಲ. ಹಾಗಾಗಿಯೇ ನಾನು ಈಗ್ಲೂ ಸಂತೋಷದ ಜೀವನ ನಡೆಸುತ್ತಿದ್ದೇನೆ ಎಂದು ಹೇಮಾ ಹೇಳಿದ್ದಾರೆ. ಪ್ರೀತಿಯನ್ನು ಕೊಡಬೇಕೇ ಹೊರತು ಪ್ರೀತಿ (Love) ಯನ್ನು ಕಸಿದುಕೊಳ್ಳಬಾರದು. ನಾನು ಎಂದೂ ಈ ಬಗ್ಗೆ ಹಿಂಸೆ ನೀಡಲಿಲ್ಲ. ಪ್ರೀತಿ ಶಾಶ್ವತವಾಗಿರಬೇಕು ಎಂಬುದು ನನ್ನ ಬಯಕೆ ಎಂದು ಹೇಮಾ ಹೇಳಿದ್ದಾರೆ.

Latest Videos

Aishwarya Sheoran: ಮಾಡೆಲಿಂಗ್ ನಲ್ಲಿ ಮಿಂಚುತ್ತಿದ್ದಾಕೆ ಏಕಾಏಕಿ ಅಧಿಕಾರಿಯಾಗಿ ಸ್ಫೂರ್ತಿ ತುಂಬಿದಾಗ...

ವೈಯಕ್ತಿಕ ಜೀವನ (Life) ದಿಂದ ಹಿಡಿದು ರಾಜಕೀಯ ಜೀವನದವರೆಗೆ ಎಲ್ಲ ಕ್ಷೇತ್ರದಲ್ಲೂ ಯಶಸ್ಸು ಸಾಧಿಸಿರುವ ಡ್ರೀಮ್ ಗರ್ಲ್ ಹೇಮಾ ಮಾಲಿನಿ ಶ್ರೀಮಂತಿಕೆಯಲ್ಲೂ ಹಿಂದೆ ಬಿದ್ದಿಲ್ಲ. ತನ್ನ ಸ್ಟೈಲ್‌ನಿಂದ ಇಂದಿಗೂ ಜನರನ್ನು ಹುಚ್ಚೆಬ್ಬಿಸಿರುವ ಬಾಲಿವುಡ್‌ನ ಕನಸಿನ ಕನ್ಯೆ ಹೇಮಾ ಮಾಲಿನಿ ಟ್ಯಾಲೆಂಟೆಡ್ ಕೂಡ ಹೌದು. 74ರ ವಸಂತದಲ್ಲಿರುವ ಹೇಮಾ ಮಾಲಿನಿ, ಆಗಿನ ಕಾಲದಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿ ಸೈ ಎನ್ನಿಸಿಕೊಂಡವರು. ಈಗ ಹೇಮಾ ಮಾಲಿನಿ, ರಾಜಕೀಯದಲ್ಲೂ ತುಂಬಾ ಸಕ್ರಿಯರಾಗಿದ್ದಾರೆ. ಹೊಳೆಯುವ ಮುಖದ, ಸದಾ ನಗು ನಗುತ್ತಿರುವ ಹೇಮಾ ಮಾಲಿನಿ ಕೋಟಿ ಕೋಟಿ ಆಸ್ತಿಯ ಒಡತಿ. 

ಹೇಮಾಲಾಮಿನಿ ಅಕ್ಟೋಬರ್ 16, 1948ರಲ್ಲಿ ಜನಿಸಿದ್ದಾರೆ. ಅವರಿಗೆ ಈಗ 74 ವರ್ಷ ವಯಸ್ಸು. ನಟನೆ ನಂತ್ರ ರಾಜಕೀಯಕ್ಕೆ ಕಾಲಿಟ್ಟ ಹೇಮಾ ಮಾಲಿನಿ, ಒಳ್ಳೆಯ ರಾಜಕಾರಣಿ ಎನ್ನಿಸಿಕೊಂಡಿದ್ದಾರೆ.  ಮಥುರಾದ ಸಂಸದೆಯಾಗಿ ಹೇಮಾ ಮಾಲಿನಿ ಭರತನಾಟ್ಯ ಕಲಾವಿದೆ. ಅವರು ಅನೇಕ ಕಡೆ ಭರತನಾಟ್ಯ ಕಾರ್ಯಕ್ರಮ ನೀಡ್ತಾರೆ. 

2019 ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹೇಮಾ ಮಾಲಿನಿ ಅವರು ತಮ್ಮ ಅಫಿಡವಿಟ್‌ನಲ್ಲಿ ತಮ್ಮ ಆಸ್ತಿಯ ವಿವರ ನೀಡಿದ್ದರು. ಅವರು ತಮ್ಮ ಆಸ್ತಿ ಸುಮಾರು 101 ಕೋಟಿ ಎಂದು ಘೋಷಿಸಿದ್ದರು. 2014ಕ್ಕೆ ಹೋಲಿಸಿದರೆ ಅವರ ಆಸ್ತಿ ಸುಮಾರು 34 ಕೋಟಿಯಷ್ಟು ಹೆಚ್ಚಳವಾಗಿದೆ. 2014 ರ ಅಫಿಡವಿಟ್ ಪ್ರಕಾರ, ಆ ಸಮಯದಲ್ಲಿ ಅವರ ಆಸ್ತಿ ಸುಮಾರು 66 ಕೋಟಿ ಆಗಿತ್ತು. 2022ರಲ್ಲಿ ಹೇಮಾ ಮಾಲಿನಿ ಆಸ್ತಿ 250 ಕೋಟಿಯಾಗಿದೆ.  ರಾಜಕೀಯದ ಜೊತೆಗೆ ಸಿನಿಮಾಗಳಲ್ಲಿ, ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಹೇಮಾ ಮಾಲಿನಿ, ನೃತ್ಯ ಕಾರ್ಯಕ್ರಮದ ಮೂಲಕವೂ ಹಣ ಸಂಪಾದನೆ ಮಾಡ್ತಾರೆ. 

ಹೇಮಾ ಮಾಲಿನಿ ಅವರು ಮರ್ಸಿಡಿಸ್ ಮತ್ತು ಟೊಯೊಟಾದಂತಹ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.  ಹೇಮಾ ಅವರ ಪತಿ ಧರ್ಮೇಂದ್ರ ಅವರ ಬಳಿಯೂ ರೇಂಜ್ ರೋವರ್ ಕಾರಿದೆ.  ಧರ್ಮೇಂದ್ರ ಅವರ ಒಟ್ಟು ಆಸ್ತಿ ಪತ್ನಿ ಹೇಮಾ ಅವರ ಆಸ್ತಿಗಿಂತ ಹೆಚ್ಚು. ಧರ್ಮೇಂದ್ರ ಅವರ ಆಸ್ತಿ 123 ಕೋಟಿ.  

Business Woman : ಮನೆಯಲ್ಲೇ ಸೆಣಬಿನ ಚೀಲ ತಯಾರಿಸಿ ಯಶಸ್ವಿಯಾದ ಮಹಿಳೆ

ಹೇಮಾ ಮಾಲಿನಿ ಪದ್ಮಶ್ರೀ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. 2000 ರಲ್ಲಿ ಫಿಲ್ಮ್ ಫೇರ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದಿದ್ದಾರೆ. ಅಷ್ಟೇ ಅಲ್ಲ ಅವರು 2011 ರಲ್ಲಿ PETA ನಿಂದ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಪಡೆದಿದ್ದಾರೆ.
 

click me!