ಮಲ್ಲೇಶ್ವರಂ ಬೀದಿಯಲ್ಲಿ ಚಪ್ಪಲಿ ಖರೀದಿಸಿದ ಲಕ್ಷಣ ಶ್ವೇತಾ; ದುಡ್ಡುಳಿಸಲು ಒಳ್ಳೆ ಉಪಾಯ!

By Suvarna News  |  First Published Jul 26, 2023, 12:26 PM IST

ಅಗ್ನಿಸಾಕ್ಷಿಯಲ್ಲಿ ನಟ್ಸಿದ್ದು, ಇದೀಗ ಲಕ್ಷಣದಲ್ಲಿ ಶ್ವೇತಾಳಾಗಿ ಮೆರೆಯುತ್ತಿರುವ ಸುಕೃತಾಗೆ ಅಭಿಮಾನಿಗಳ ಸಂಖ್ಯೆ ಸಾಕಷ್ಟಿದೆ. ಧಾರಾವಾಹಿಯಲ್ಲಿ ಭರ್ಜರಿ ಡ್ರೆಸ್ ಧರಿಸಿ ಮೆರೆಯುವ ನಟಿ ನಿಜ ಜೀವನದಲ್ಲಿ ಹಾಗಿಲ್ಲ. ಸಿಂಪಲ್ ಜೀವನ ನಡೆಸುವ ಅವರು ಶಾಪಿಂಗ್ ಟಿಪ್ಸ್ ನೀಡಿದ್ದಾರೆ.
 


ಅಗ್ನಿ ಸಾಕ್ಷಿ ಧಾರಾವಾಹಿ ಮೂಲಕ ಜನರ ಮನಸ್ಸನ್ನು ಕದ್ದಿದ್ದ ನಟಿ ಸುಕೃತಾ ನಕ್ಷತ್ರ ಧಾರಾವಾಹಿಯಲ್ಲಿ ರಾಣಿಯಂತೆ ಮರೆಯುತ್ತಿದ್ದಾರೆ. ಅವರು ಧರಿಸುವ ಡ್ರೆಸ್, ಬಳಸುವ ವಸ್ತುಗಳು ಸಾಕಷ್ಟು ದುಬಾರಿಯದ್ದು ಅಂತಾ ನೋಡುಗರು ಮಾತನಾಡಿಕೊಳ್ತಾರೆ. ಆದ್ರೆ ನಿಜ ಜೀವನದಲ್ಲಿ ಸುಕೃತಾ ಹಾಗಿಲ್ಲ. ಸುಕೃತಾ ಕಡಿಮೆ ಬೆಲೆಯ ವಸ್ತುಗಳನ್ನೇ ಹೆಚ್ಚು ಖರೀದಿ ಮಾಡ್ತಾರೆ. ಬ್ರ್ಯಾಂಡೆಡ್ ಪ್ರೊಡೆಕ್ಟ್ ಗಳನ್ನು ಸುಕೃತಾ ಖರೀದಿ ಮಾಡೋದಿಲ್ಲ.  ನಾವಿಂದು ಸುಕೃತಾ ಎಲ್ಲಿ ಬಟ್ಟೆ, ಚಪ್ಪಲಿ, ಕಿವಿಯೋಲೆ ಸೇರಿದಂತೆ ಅಲಂಕಾರಿಕ ವಸ್ತುಗಳನ್ನು ಎಲ್ಲಿ ಖರೀದಿ ಮಾಡ್ತಾರೆ ಅನ್ನೋದನ್ನು ನಾವು ಹೇಳ್ತೇವೆ.

ಮಲ್ಲೇಶ್ವರಂ (Malleswaram) ಫೆವರೆಟ್ ಪ್ಲೇಸ್ : ಸಿಲಿಕಾನ್ ಸಿಟಿ ಬೆಂಗಳೂರಿ (Bangalore) ಗೆ ಬಂದವರು ಮಲ್ಲೇಶ್ವರಂಗೆ ಬರಲ್ವಾ? ಬಂದೇ ಬರ್ತಾರೆ. ಹೆಣ್ಮಕ್ಕಳ ಫೆವರೆಟ್ ಜಾಗ ಇದು. ಇಲ್ಲಿ ಮಹಿಳೆಯರಿಗೆ ಅಗತ್ಯವಿರುವ ಎಲ್ಲ ವಸ್ತುಗಳೂ ಸಿಗುತ್ವೆ. ಕೈಗೆಟಕುವ ಬೆಲೆಗೆ ವಸ್ತುಗಳನ್ನು ನಾವಿಲ್ಲಿ ಖರೀದಿ ಮಾಡ್ಬಹುದು. ಇದಕ್ಕೆ ಸುಕೃತಾ  (Sukrutha) ಕೂಡ ಹೌದು ಎನ್ನುತ್ತಾರೆ.  ಸುಕೃತಾ ಫೆವರೆಟ್ ಶಾಪಿಂಗ್ ಸ್ಪಾಟ್ ಕೂಡ ಮಲ್ಲೇಶ್ವರಂ. 
ಬಜೆಟ್ ಇಟ್ಕೊಂಡು ಶಾಪಿಂಗ್ ಮಾಡುವವರಿಗೆ ಮಲ್ಲೇಶ್ವರಂ ಬೆಸ್ಟ್ ಪ್ಲೇಸ್. ಇಲ್ಲಿ ಕ್ವಾಲಿಟಿ ಡ್ರೆಸ್ ಗಳನ್ನು ಕೂಡ ಖರೀದಿ ಮಾಡ್ಬಹುದು. 

Tap to resize

Latest Videos

ಬಜೆಟ್‌ನಲ್ಲಿ Manali ಹೋಗುವುದ್ಹೇಗೆ? ನಟಿ ಐಶ್ವರ್ಯಾ ಶಿಂಧೋಗಿ ಕೊಡ್ತಾರೆ ಟಿಪ್ಸ್!

ಸುಕೃತಾ ಚಪ್ಪಲಿ ಆಯ್ಕೆ ಹೀಗಿರುತ್ತೆ? : ಬ್ರ್ಯಾಂಡೆಡ್ ಬಟ್ಟೆಯೇ ಬೇಕು ಅಂತಿಲ್ಲ. ನಾನು ಬೇಡದಿರುವ ವಸ್ತುಗಳಿಗೆ ಹಣ ಸುರಿಯೋದಿಲ್ಲ ಎನ್ನುತ್ತಾರೆ ಸುಕೃತಾ. ಹೆಣ್ಮಕ್ಕಳು ಅಂದ್ಮೇಲೆ ಒಂದೊಂದು ಡ್ರೆಸ್ ಗೆ ಒಂದೊಂದು ಚಪ್ಪಲಿ ಧರಿಸ್ತಾರೆ. ಅದ್ರಲ್ಲೂ ಸೆಲೆಬ್ರಿಟಿಗಳು ಇದ್ರಲ್ಲಿ ಮುಂದಿರ್ತಾರೆ. ಆದ್ರೆ ಸುಕೃತಾ ಸ್ವಲ್ಪ ಡಿಫರೆಂಟ್ ಆಗಿದ್ದಾರೆ. ಸುಕೃತಾ ಎಲ್ಲ ಡ್ರೆಸ್ ಗೆ ಹೊಂದಿಕೆಯಾಗುವ ಚಪ್ಪಲಿ ಖರೀದಿ ಮಾಡ್ತಾರಂತೆ. ನಿತ್ಯ ಬಳಕೆ ಹಾಗೂ ಶೂಟ್ ಎರಡಕ್ಕೂ ಇದು ಸೂಟ್ ಆಗ್ಬೇಕು, ಅಂಥ ಚಪ್ಪಲಿ ಹೆಚ್ಚು ಖರೀದಿ ಮಾಡ್ತಾರೆ ಸುಕೃತಾ. ಸುಕೃತಾಗೆ ಇಷ್ಟವಂತೆ ಬ್ಲಾಕ್. ಹೈ ಹೀಲ್ಡ್ ಧರಿಸೋದ್ರಿಂದ ಕಾಲು ನೋವು ಬರುತ್ತೆ. ಹಾಗಾಗಿ ಹೆಚ್ಚು ಹೀಲ್ಡ್ ಚಪ್ಪಲಿ ಖರೀದಿ ಮಾಡಲ್ವಂತೆ ಸುಕೃತಾ. ಫಟಾ ಫಟ್ ಅಂತಾ ಚಪ್ಪಲಿ ಖರೀದಿ ಮಾಡುವ ಸುಕೃತಾಗೆ ಹೆಚ್ಚು ಆಪ್ಷನ್ ನೋಡಿದ್ರೆ ಕನ್ಫ್ಯೂಸ್ ಆಗುತ್ತಂತೆ. 

ಶಾಪಿಂಗ್ ಕಷ್ಟ– ಕುರ್ತಾ ಇಷ್ಟ : ಸುಕೃತಾಗೆ ಶಾಪಿಂಗ್ ಅಂದ್ರೆ ಇಷ್ಟವೇ ಇಲ್ವಂತೆ. ಕುರ್ತಾ ಅಂದ್ರೆ ಇಷ್ಟವಂತೆ.  ಬಾರ್ಗಿನ್ ಮಾಡದೆ ಬಟ್ಟೆ ಖರೀದಿ ಮಾಡುವ ಸುಕೃತಾ  ದೇವಸ್ಥಾನ ಸೇರಿದಂತೆ ಯಾವುದೇ ಸಮಾರಂಭಕ್ಕೆ ಹೋಗೋಕೆ ಕುರ್ತಾ ಬೆಸ್ಟ್ ಎನ್ನುತ್ತಾರೆ. 

ಇಂಟರ್‌ನೆಟ್‌ಗೆ ಬೆಂಕಿ ಹಂಚಿದ ಇಶಾ ಗುಪ್ತಾ ಲುಕ್‌: ಇದು ಹಾಟ್‌ನೆಸ್ ಅಲ್ಲ, ಶೇಮ್‌ಲೆಸ್ ಎಂದ ನೆಟ್ಟಿಗರು!

ಇಯರ್ ರಿಂಗ್ ಕಲೆಕ್ಷನ್ : ಯಾವುದೇ ಡ್ರೆಸ್ ಹಾಕಿದ್ರೂ ಅದಕ್ಕೆ ಚೆಂದದ ಇಯರ್ ರಿಂಗ್ ಇದ್ರೆ ಅದ್ರ ಲುಕ್ಕೇ ಬೇರೆ. ಆಗ ಯಾವುದೇ ಜ್ಯುವೆಲರಿ ಅವಶ್ಯಕತೆ ಇರೋದಿಲ್ಲ. ಸುಕೃತಾ ಬಳಿಯೂ ಸಾಕಷ್ಟು ಇಯರ್ ರಿಂಗ್ ಕಲೆಕ್ಷನ್ ಇದೆ.

ದುಡ್ಡು ಹಾಳ್ಮಾಡ್ಬೇಡಿ – ಮಲ್ಲೇಶ್ವರಂಗೆ ಬನ್ನಿ : ಮಾಲ್ ಗೆ ಹೋಗಿ ಹಣ ಹಾಳು ಮಾಡೋ ಬದಲು ನೀವು ಮಲ್ಲೇಶ್ವರಂಗೆ ಬಂದು ಖರೀದಿ ಮಾಡಿ ಎನ್ನುತ್ತಾರೆ ಸುಕೃತಾ. ಕ್ವಾಲಿಟಿ ತುಂಬಾ ಚೆನ್ನಾಗಿರುತ್ತೆ, ನೀವು ಬಾರ್ಗಿನ್ ಮಾಡಿದ್ರೆ ಕಡಿಮೆ ಬೆಲೆಗೂ ಖರೀದಿ ಮಾಡ್ಬಹುದು ಅನ್ನೋದು ಸುಕೃತಾ ಸಲಹೆ. 

ಬೆಂಗಳೂರೆಂದ್ರೆ ಹೆಮ್ಮೆ : ಬೆಂಗಳೂರು ಸುಕೃತಾಗೆ ಬಹಳ ಪ್ರಿಯವಾದ ಜಾಗ. ಬೆಂಗಳೂರಿನ ಹುಡುಗಿ ಎನ್ನಲು ಬಹಳ ಹೆಮ್ಮೆ. ಎಲ್ಲ ವಿಷ್ಯದಲ್ಲೂ ಬೆಂಗಳೂರ್ ಬೆಸ್ಟ್ ಎನ್ನುತ್ತಾರೆ ನಟಿ. 

ಕಾಫಿ ಅಡಿಕ್ಟ್ : ಮನೆಯಲ್ಲಿ ಟೀ ಇಷ್ಟಪಡುವ ಸುಕೃತಾ, ಶೂಟಿಂಗ್ ವೇಳೆ, ಹೊರಗೆ ಹೋದಾಗ ಕಾಫಿ ಹೆಚ್ಚು ಕುಡಿತಾರೆ. ನಿದ್ರೆ ಕಡಿಮೆ ಮಾಡಿ ರಿಲ್ಯಾಕ್ಸ್ ಮಾಡುತ್ತೆ ಕಾಫಿ. ಕಾಫಿ ಅಡಿಕ್ಟ್ ಎನ್ನುತ್ತಾರೆ ಸುಕೃತಾ.    
 

click me!