Women Health: ಕೂತ್ಕೊಂಡು ನೆಲ ಒರೆಸಿ, ಹೊಟ್ಟೆ ಕರಗಲು ಬೆಸ್ಟ್ ಈ ಮಲಾಸನ!

By Suvarna News  |  First Published Jul 25, 2023, 4:26 PM IST

ತೂಕ ಏರಿಕೆಯಾಗಿದೆ ಅಂತಾ ಮತ್ತೊಂದಿಷ್ಟು ತಿಂದು ಕುಳಿತ್ರೆ ತೂಕ ಕಡಿಮೆ ಆಗುತ್ತಾ? ನಿತ್ಯದ ಮನೆ ಕೆಲಸವನ್ನು ಹಳೆ ಶೈಲಿಯಲ್ಲಿ ನೀವೂ ಮಾಡಿದ್ರೆ ವ್ಯಾಯಾಮವೂ ಆಗುತ್ತೆ, ಬೊಜ್ಜು ಕರಗುತ್ತೆ.  
 


ಇಡೀ ದಿನ ಕಂಪ್ಯೂಟರ್ ಮುಂದೆ ಕುಳಿತು ಲಟ್ ಪಟ್ ಅಂತಾ ಕುಟ್ಟುತ್ತಿದ್ರೆ ಹೊಟ್ಟೆ ಬರೆದ ಮತ್ತೇನಾಗುತ್ತೆ? ಮನೆ ಕೆಲಸಕ್ಕೆ ಆಳು, ಓಡಾಡೋಕೆ ಬೈಕ್, ಕಾರು. ಒಂದು ಅರ್ಧ ಪರ್ಲಂಗು ನಡೆಯೋದಿಲ್ಲ, ಕಂಪ್ಯೂಟರ್ ಬಿಟ್ರೆ ಮೊಬೈಲ್, ಮೊಬೈಲ್ ಬಿಟ್ರೆ ಟಿವಿ. ಹಣ ಸುರಿದು ಜಿಮ್ ಗೆ ಹೋಗೋದು ಹೌದು, ಹೊಟ್ಟೆ ಮಾತ್ರ ಕರಗೋದಿಲ್ಲ. ನಾವೆಲ್ಲ ಇಷ್ಟು ವಯಸ್ಸಿನಲ್ಲೂ ಹೇಗಿದ್ದೇವೆ ನೋಡಿ ಅಂತಾ ನಮ್ಮತ್ತೆ ಹೇಳೋದನ್ನು ಕೇಳಿದ್ದೇನೆ. 

ಅವರ ಮಾತಿನಲ್ಲಿ ಸತ್ಯವಿದೆ. ಈಗ ಎಲ್ಲದಕ್ಕೂ ಮಶಿನ್ ಬಂದಿದೆ. ಮನೆ ಬಾಗಿಲು ದಾಟಿದ್ರೆ ವಾಹನ ಏರ್ತೇವೆ. ಮನೆಯಲ್ಲಿ ಟೇಬಲ್ ಮೇಲೆ ಕುಳಿತು ಆಹಾರ ಸೇವನೆ ಮಾಡ್ತೇವೆ. ದೇವರಿಗೆ ಬಗ್ಗಿ ನಮಸ್ಕಾರ ಮಾಡೋ ಬದಲು ನಿಂತಲ್ಲೇ ಕೈ ಮುಗಿತೇವೆ. ಹಿಂಗಿರುವಾಗ ವ್ಯಾಯಾಮ (Exercise) ಹೇಗೆ ಆಗ್ಬೇಕು? ಹೊಟ್ಟೆ, ಬೊಜ್ಜು ಎಲ್ಲಿ ಕರಗ್ಬೇಕು? 

Latest Videos

undefined

ನಾವು ನಿತ್ಯ ಮಾಡುವ ಕೆಲಸದಲ್ಲೇ ಸಾಕಷ್ಟು ವ್ಯಾಯಾಮ ಆಗುತ್ತದೆ. ನೀವು ಚಕ್ಕಲಪಟ್ಟೆ ಹೊಡೆದು ಅಥವಾ ಪದ್ಮಾಸನ ಹಾಕಿ ನೆಲಕ್ಕೆ ಊಟಕ್ಕೆ ಕುಳಿತ್ರೂ ಸಾಕು. ಅದ್ರಿಂದ ನಮ್ಮ ದೇಹದ ಕೆಲ ಭಾಗಗಳು ಆಕ್ಟಿವ್ ಆಗ್ತವೆ. ಪಾತ್ರೆ ತೊಳೆಯೋದು, ಮನೆ ಒರೆಸೋದ್ರಿಂದಲೂ ನಮ್ಮ ದೇಹಕ್ಕೆ ವ್ಯಾಯಾಮ ಸಿಗುತ್ತದೆ. ಈಗಿನ ದಿನಗಳಲ್ಲಿ ಉದ್ದದ ಕೋಲು ಹಿಡಿದು ನೆಲೆ ಒರೆಸ್ತಾರೆ. ಇದ್ರ ಬದಲು ನೀವು ಹಿಂದಿನ ಕಾಲದವರಂತೆ ಬಟ್ಟೆಯಲ್ಲಿ ನೆಲೆ ಒರೆಸೋದನ್ನು ರೂಢಿ ಮಾಡಿಕೊಳ್ಳಿ. ಇದು ಸ್ವಲ್ಪ ಮಲಾಸನವನ್ನು ಹೋಲುತ್ತೆ. ನೀವು ಮಾಲಾಸನದಲ್ಲಿ ಕುಳಿತಲ್ಲೇ ಕುಳಿತಿರುತ್ತೀರಿ. ಆದ್ರೆ ನೆಲೆ ಒರೆಸಿವಾಗ ಮಾಲಾಸನ ಭಂಗಿಯಲ್ಲೇ ನೀವು ಸ್ವಲ್ಪ ಹಿಂದೆ ಮುಂದೆ ಹೋಗ್ಬೇಕಾಗುತ್ತದೆ.

ಮಳೆಗಾಲದಲ್ಲಿ ಬಿಸಿ ಬಿಸಿ ಟೀ ಕುಡಿಯೋದನ್ನು ಮಿಸ್ ಮಾಡ್ಲೇಬೇಡಿ

ವರ್ಕ್ ಫ್ರಂ ಹೋಮ್ ಮಾಡ್ತಿರೋರು ನೀವು ಎಂದಾದ್ರೆ, ಮಾಲಾಸನ (Malasana) ಭಂಗಿಯಲ್ಲಿ ಸ್ವಲ್ಪ ಸಮಯ ಕುಳಿತುಕೊಳ್ಳಿ ಇಲ್ಲವೆ ಮನೆಯನ್ನು ಇದೇ ಭಂಗಿಯಲ್ಲಿ ಒರೆಸಲು ಪ್ರಯತ್ನಿಸಿ. ಮಾಲಾಸನದಿಂದ ಸಾಕಷ್ಟು ಪ್ರಯೋಜನವಿದೆ. ಮಾಲಾಸನವನ್ನು ಮಾಲೆಯ ಆಸನ ಅಥವಾ ಉಪವೇಶಾಸನ ಎಂದು ಕರೆಯಲಾಗುತ್ತದೆ. ಈ ಆಸನ ಮನೆಯಲ್ಲಿ ಕುಳಿತು ಆಫೀಸ್ ಕೆಲಸ ಮಾಡುವವರಿಗೆ ಮತ್ತು ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಉತ್ತಮ ಆಸನವಾಗಿದೆ. ಇದರಿಂದ ಸೊಂಟದ ಭಾಗ, ಕಾಲುಗಳು ಬಲವಾಗುತ್ತದೆ.

ಮಲಬದ್ಧತೆ (Constipation) ಹಾಗೂ ಜೀರ್ಣಕ್ರಿಯೆಯ (Digestive System) ಸಮಸ್ಯೆ ಇರೋರಿಗೆ ರಾತ್ರಿಯಾಗ್ತಿದ್ದಂತೆ ಹೊಟ್ಟೆ ಊದಿಕೊಳ್ಳುತ್ತದೆ. ಈ ಸಮಸ್ಯೆಯಿಂದ ಹೊರಗೆ ಬರಬೇಕೆಂದ್ರೆ ನೀವು ಮಾಲಾಸನ ಅಭ್ಯಾಸ ಮಾಡಿ.  ಸಂತಾನೋತ್ಪತ್ತಿ ಕ್ರಿಯೆಗಳು (Reproductive System) ಸರಾಗವಾಗಿ ಆಗುತ್ತವೆ. ಗರ್ಭಿಣಿ ಮಹಿಳೆಯರು ಈ ಆಸನ ಮಾಡುವುದರಿಂದ ಹೆರಿಗೆಗೆ ಹೆಚ್ಚು ಅನುಕೂಲವಾಗುತ್ತದೆ. ಮಾಲಾಸನವು ಮಹಿಳೆಯರಿಗೆ ಉತ್ತಮ ಆಸನವಾಗಿದೆ. ಇದರಿಂದ ಪಿಸಿಒಎಸ್ ಸಮಸ್ಯೆಗಳು ನಿವಾರಣೆಯಾಗುತ್ತವೆ. ಈ ಆಸನದಿಂದ ಲೈಂಗಿಕಾಸಕ್ತಿ ಕೂಡ ಹೆಚ್ಚುತ್ತದೆ.

Health Tips: ನೋವಲ್ಲಿರುವ ಪತ್ನಿಗೆ ಮದ್ದಾಗ್ಬಹುದು ಪತಿಯ ಸ್ಪರ್ಶ

ಮಾಲಾಸನ ಮಾಡೋದು ಹೇಗೆ? : 
•    ಮಾಲಾಸನದಲ್ಲಿ ಕುಳಿತುಕೊಳ್ಳುವಾಗ ಮೊದಲು ನಿಮ್ಮ ಕಾಲನ್ನು 45 ಡಿಗ್ರಿ ಕೋನದಲ್ಲಿ ಇಟ್ಟುಕೊಳ್ಳಬೇಕು.
•    ನಿಮ್ಮ ಕಾಲುಗಳನ್ನು ಸೊಂಟಕ್ಕಿಂತ ಅಗಲವಾಗಿಡಿ.
•    ಮೊಣಕಾಲನ್ನು ಬಗ್ಗಿಸಿ ಪಾದಗಳ ಮೇಲೆ ಭಾರ ಹಾಕಿ ಕುಳಿತುಕೊಳ್ಳಿ. ನಿಮ್ಮ ಬೆನ್ನು ನೇರವಾಗಿರಲಿ.
•    ನಿಮ್ಮ ತೊಡೆಯ ಭಾಗ ಕೂಡ ಸಾಧ್ಯವಾದಷ್ಟು ಹೊರಗಡೆಯೇ ಇರುವಂತೆ ನೋಡಿಕೊಳ್ಳಿ.
•    ಮಾಲಾಸನದ ಸಮಯದಲ್ಲಿ ನಿಮ್ಮ ಎದೆಯ ಭಾಗ ಪೂರ್ತಿಯಾಗಿ ಮುಂದಕ್ಕೆ ಇರಬೇಕು ಹಾಗೂ ಭುಜಗಳು ಕೂಡ ಅಗಲವಾಗಿರಬೇಕು.
•    ನಿಮ್ಮ ಅಂಗೈಯನ್ನು ಜೋಡಿಸಿ ಪ್ರಾರ್ಥನೆಯ ಭಂಗಿಯಲ್ಲಿ ಕುಳಿತುಕೊಳ್ಳಿ.
•    ಈ ಆಸನದಲ್ಲಿ ಕುಳಿತು ವರ್ಕ್ ಮಾಡುವವರು ತಲೆ ದಿಂಬು ಅಥವಾ ಗೋಡೆಯ ಸಹಾಯ ಪಡೆಯಬಹುದು.

ಪ್ರಾರಂಭದಲ್ಲಿ ಈ ಆಸನಗಳನ್ನು ಮಾಡುವವರಿಗೆ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳಬಹುದು. ಹಾಗೆ ನೋವು ಕಾಣಿಸಿಕೊಂಡಾಗ ಕೆಲ ಸಮಯ ವಿಶ್ರಾಂತಿ ತೆಗೆದುಕೊಂಡು ನಂತರ ಮತ್ತೆ ಮಾಲಾಸನವನ್ನು ಹಾಕಬಹುದು. ದಿನಕ್ಕೆ ಹತ್ತು ನಿಮಿಷಗಳ ಕಾಲ ಈ ವ್ಯಾಯಾಮ ಮಾಡಬಹುದು. ಗರ್ಭಿಣಿಯರು ಈ ಆಸನ ಮಾಡುವ ಮೊದಲು ವೈದ್ಯರ ಸಲಹೆಯನ್ನು ಪಡೆಯುವುದು ಉತ್ತಮ.
 

click me!