ನೀತಾ ಅಂಬಾನಿ ಬ್ಯೂಟಿ ಸೀಕ್ರೆಟ್‌ ರಿವೀಲ್‌: ಹಾಟ್‌ ಆಗಿ ಕಾಣಲು ಇವರೇ ಕಾರಣ..

By Suvarna News  |  First Published Jun 22, 2023, 10:34 AM IST

ನೀತಾ ಅಂಬಾನಿಯವರ ವಯಸ್ಸು 59 ಆದರೂ ಅವರು ಕೆಲವು ಕಾರ್ಯಕ್ರಮಗಳಲ್ಲಿ ಸಕತ್‌ ಹಾಟ್‌ ಆಗಿ ಕಾಣಿಸುತ್ತಾರೆ. ಇದಕ್ಕೆ ಕಾರಣ ಇವರೇ ನೋಡಿ
 


ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರು ಇತ್ತೀಚೆಗೆ ಮೆಗಾ ನಿತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರವನ್ನು (NMACC) ಪ್ರಾರಂಭಿಸಿದ್ದರು. ಈ ಕಾರ್ಯಕ್ರಮದಲ್ಲಿ ಘಟಾನುಘಟಿಗಳು ಭಾಗವಹಿಸಿದ್ದರು. ಬಾಲಿವುಡ್‌ ತಾರೆಯರ ದಂಡೇ ನೆರೆದಿತ್ತು. ಈ ಎಲ್ಲ ನಟಿಯರಿಗಿಂತಲೂ ಎಲ್ಲರ ಗಮನ ಸೆಳೆದದ್ದು ನೀತಾ ಅಂಬಾನಿ. ಸಹಜವಾಗಿ ಇದು ಅವರದ್ದೇ ಕಾರ್ಯಕ್ರಮವಾಗಿದ್ದರಿಂದ ಅವರೇ ಕೇಂದ್ರಬಿಂದು ಎನ್ನುವುದು ನಿಜವೇ ಆಗಿದ್ದರೂ, ಅವರ ರೂಪ, ಸೌಂದರ್‍ಯ ನೋಡಿ ಹಲವರು ಮರುಳಾಗಿದ್ದರು. 59 ವರ್ಷದ ನೀತಾ ಅಂಬಾನಿ ಅವರು ಈಚೆಗಷ್ಟೇ ಅಜ್ಜಿ ಕೂಡ ಆಗಿದ್ದಾರೆ. ಆದರೆ ನೀತಾ ಅವರು ಮದುಮಗಳಂತೆ ಅಂದು ಕಂಗೊಳಿಸುತ್ತಿದ್ದರು. ಇಂಥ ಹಲವು ವಿಶೇಷ ಕಾರ್ಯಕ್ರಮಗಳಲ್ಲಿಯೂ ನೀತಾ ಅಂಬಾನಿ (Neeta Ambani) ಮಿರಿಮಿರಿ ಮಿಂಚುತ್ತಲೇ ಇರುತ್ತಾರೆ. ನೀತಾ ಅವರು ಸಹಜ ಸೌಂದರ್ಯವತಿಯಾಗಿದ್ದರೂ ಅವರು ಸೌಂದರ್ಯವನ್ನು ಇಮ್ಮಡಿಗೊಳಿಸುವುದು ಯಾವುದು ಗೊತ್ತಾ? ಅವರು ಮಾಡಿಕೊಳ್ಳುವ ಮೇಕಪ್‌, ಅದಕ್ಕಾಗಿ ನೀತಾ ಅವರು ಸುಂದರಿಯಾಗಿ ಕಾಣುವ ಸಂಪೂರ್ಣ ಶ್ರೇಯಸ್ಸು ಸಲ್ಲಿಸುವುದು ಅವರ ಮೇಕಪ್‌ ವುಮೆನ್‌ ನಿಶಿ ಸಿಂಗ್. 

ಕೆಲ ದಶಕಗಳಿಂದ ಸಿನಿ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿರುವ ನಿಶಿ ಸಿಂಗ್‌ (Nishi Singh), ಇದಾಗಲೇ ಬಾಲಿವುಡ್‌ನ ಮೇಕಪ್‌ ವಿಷ್ಯದಲ್ಲಿ ಬಹುದೊಡ್ಡ ಹೆಸರು ಮಾಡಿದ್ದಾರೆ. ಖ್ಯಾತನಾಮ ತಾರೆಯರ ಮೇಕಪ್‌ ಮಾಡುವುದು ಇವರೇ. ಇಂಥ ನಿಶಿ ಅವರೇ ನೀತಾ ಅಂಬಾನಿಯವರ ಮೇಕಪ್‌ ವುಮೆನ್‌ ಕೂಡ. ಈಕೆ ಸೆಲೆಬ್ರಿಟಿ ಮೇಕಪ್ ಕಲಾವಿದೆ ಮಾತ್ರವಲ್ಲದೇ  ಸೌಂದರ್ಯ ಕಲಾವಿದೆ ಕೂಡ. 2017ರಲ್ಲಿ ಭಾರತದ ಮಾನುಷಿ ಛಿಲ್ಲರ್ ಮಿಸ್ ವರ್ಲ್ಡ್ ಆಗಿ ಹೊರಹೊಮ್ಮಿದಾಗ ಇವರ ಮೇಕಪ್‌ ಸಾಕಷ್ಟು ಸದ್ದು ಮಾಡಿತ್ತು.  ಬಾಲಿವುಡ್‌ ತಾರೆಯರಾದ ವಿದ್ಯಾ ಬಾಲನ್, ಸಾರಾ ಅಲಿ ಖಾನ್, ಅನನ್ಯಾ ಪಾಂಡೆ, ಭೂಮಿ ಪೆಡ್ನೇಕರ್, ಫಾತಿಮಾ ಸನಾ ಶೇಖ್, ಮೃಣಾಲ್ ಠಾಕೂರ್, ರಾಧಿಕಾ ಮದನ್, ಪ್ರಣುತನ್ ಬಹ್ಲ್, ಮಾನುಷಿ ಛಿಲಾರ್, ಮಾಳವಿಕಾ ಮೋಹನನ್, ಚಿತ್ರಾಂಗದಾ, ಆಮಿಯಂತಹ ಜನಪ್ರಿಯ ಸೆಲೆಬ್ರಿಟಿಗಳಿಗೆ ಮೇಕ್ ಓವರ್ (make over) ಮಾಡುವುದು ಇವರೇ.   

Tap to resize

Latest Videos

Nita Ambanis Birkin bag: ಇದು ಬರೀ ಬ್ಯಾಗಲ್ಲ, ಮಾರಿದ್ರೆ ಐಷಾರಾಮಿ ಬಂಗ್ಲೆ ಖರೀಸ್ಬೋದು!
 
 ಸದ್ಯ  ಮುಂಬೈನಲ್ಲಿ (Mumbai) ವಾಸವಾಗಿರುವ  ನಿಶಿ ಅವರು ದೆಹಲಿಯಲ್ಲಿ ಏಳು ವರ್ಷ ಮತ್ತು ಅಮೆರಿಕದಲ್ಲಿ  ಆರು ತಿಂಗಳು ಮೇಕಪ್ ತರಬೇತಿ ಪಡೆದಿದ್ದಾರೆ. ಮೇಕಪ್‌ ಮಾತ್ರವಲ್ಲದೇ, ಅವರು ಗುಡ್ಡು ರಂಗೀಲಾ ಮತ್ತು ಯೇ ಲಾಲ್ ರಂಗ್‌ನಂತಹ ಹತ್ತಾರು ಹಿಟ್ ಚಿತ್ರಗಳಲ್ಲಿ ಮೇಕಪ್ ಮತ್ತು ಹೇರ್ ಸ್ಟೈಲ್ ಕೆಲಸವನ್ನೂ ಮಾಡಿದ್ದಾರೆ. ಧಡಕ್ ಚಿತ್ರದಲ್ಲಿ ಶ್ರೀದೇವಿ ಅವರ ಮಗಳು ಜಾನ್ವಿ ಮತ್ತು ಇಶಾನ್ ಖಟ್ಟರ್ ಅವರ ಮೇಕಪ್ ಮತ್ತು ಹೇರ್ ಸ್ಟೈಲಿಂಗ್ ಕೂಡ ಮಾಡಿದ್ದು ಇವರೇ. ಇಷ್ಟೆಲ್ಲಾ ಸೆಲೆಬ್ರಿಟಿಗಳಿಗೆ ಮೇಕಪ್‌ ಮಾಡಿದ್ದರೂ ನೀತಾ ಅಂಬಾನಿ  ಅವರೊಂದಿಗೆ ಕೆಲಸ ಮಾಡುವುದು ಒಂದು ಅಸಾಮಾನ್ಯ ಅನುಭವ ಎಂದಿದ್ದಾರೆ ನಿಶಿ.  ನೀತಾ ಬಹಳ  ಪ್ರಭಾವಶಾಲಿ ಮಹಿಳೆ. ಅವರಿಗೆ ಮೇಕಪ್‌ ಮಾಡಬೇಕು ಎನ್ನುವುದು ನನ್ನ ಬಹುವರ್ಷಗಳ ಕನಸಾಗಿತ್ತು. ಅದು NMACC ಕಾರ್ಯಕ್ರಮದಲ್ಲಿ ನೆರವೇರಿತು. ನೀತಾ ತರಬೇತಿ ಪಡೆದ ಶಾಸ್ತ್ರೀಯ ನೃತ್ಯಗಾರ್ತಿಯಾಗಿ ಮತ್ತು ಕಲಾವಿದೆ, ಅವರ ಪ್ರತಿಯೊಂದು ನಡೆಯನ್ನು ನಾನು ಮೆಚ್ಚುತ್ತೇನೆ. ಅವರಿಗೆ ಮೇಕಪ್‌ ಮಾಡಿದ ಬಳಿಕ ಅದಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದು ನನ್ನ ಜೀವನದಲ್ಲಿ ಮರೆಯಲಾಗದ ಅನುಭವ ಎಂದಿದ್ದಾರೆ.

 ಇತ್ತೀಚಿಗೆ ನೀತಾ  ಅವರು ಹೈ ಪ್ರೊಫೈಲ್ ಮದುವೆಯೊಂದರಲ್ಲಿ ಧರಿಸಿದ್ದ ಪಚ್ಚೆ ರತ್ನಗಳ ಹೊದಿಕೆಯಿರುವ ಸೀರೆಯನ್ನು ವಿಶ್ವದ ಅತ್ಯಂತ ದುಬಾರಿ ಸೀರೆ ಎಂದು ಹೇಳುವ ಮೂಲಕ ನೀತಾ ಅಂಬಾನಿ ಸುದ್ದಿಯಾಗಿದ್ದರು. ದುಬಾರಿ ಬೆಲೆಯ ಡಿಸೈನರ್ (Designer) ಉಡುಪುಗಳನ್ನು ಧರಿಸಿದ್ದ ನೀತಾ ಅವರು,  2015ರಲ್ಲಿ ಮಾಜಿ ರಾಜ್ಯಸಭಾ ಸಂಸದ ಪರಿಮಳ ನಾಥ್ವಾಣಿ ಅವರ ಪುತ್ರನ ಮದುವೆಯಲ್ಲಿ ಪಚ್ಚೆ ರತ್ನಗಳು ಹಾಗೂ ಇತರ ಹರುಳುಗಳಿಂದ ಕೂಡಿದ ಗುಲಾಬಿ ಬಣ್ಣದ ವಿಶ್ವದ ಅತ್ಯಂತ ದುಬಾರಿ ಸೀರೆಯನ್ನು ಧರಿಸಿದ್ದರು. ಗುಲಾಬಿ ಬಣ್ಣದ ಸೀರೆಗೆ ನಿಜವಾದ ಮುತ್ತುಗಳು, ಪಚ್ಚೆಗಳು, ಮಾಣಿಕ್ಯ ಮತ್ತು ಇತರ ರತ್ನಗಳಿಂದ ಕೈಯಲ್ಲಿ ಕಸೂತಿ ಮಾಡಲಾಗಿದೆ. ಈ ಸೀರೆಯ ಗಮನ ಸೆಳೆಯುವ ವೈಶಿಷ್ಟ್ಯವೆಂದರೆ ಕುಪ್ಪಸ. ಇದರಲ್ಲಿ ನಾಥದ್ವಾರದ ಕೃಷ್ಣನ ಚಿತ್ರವನ್ನು ರೂಪಿಸಲಾಗಿತ್ತು.  ಶಿವಲಿಂಗಂ ಅವರು ಡಿಸೈನ್ ಮಾಡಿದ ಈ ದುಬಾರಿ ಸೀರೆಯನ್ನು ಕಾಂಚೀಪುರಂನ 35 ಮಹಿಳಾ ಕುಶಲಕರ್ಮಿಗಳು ರಚಿಸಿದ್ದರು. ಇದರ ಬೆಲೆ 40 ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿತ್ತು. 

60ನೇ ವಯಸ್ಸಲ್ಲಿ 30ರ ತರುಣಿಯಂತೆ ಕಾಣೋ ನೀತಾ ಅಂಬಾನಿ ಫಿಟ್ನೆಸ್ ಸೀಕ್ರೆಟ್ ಏನು?

click me!