ರಿಲಯನ್ಸ್ ಫೌಂಡೇಶನ್‌ನ ಅಧ್ಯಕ್ಷೆ ಮತ್ತು ಮುಂಬೈ ಇಂಡಿಯನ್ಸ್ ಮಾಲೀಕರಾಗಿರುವ ನೀತಾ ಅಂಬಾನಿ ಭಾರತದ ಅತ್ಯಂತ ಪ್ರಭಾವಿ ಮಹಿಳೆಯರಲ್ಲಿ ಒಬ್ಬರು. ದೇಶದ ಅತ್ಯಂತ ಶ್ರೀಮಂತ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Image credits: others
ಫಿಟ್ನೆಸ್ ಸೀಕ್ರೆಟ್
ನೀತಾ ಅಂಬಾನಿ ತಮ್ಮ ಫಿಟ್‌ನೆಸ್‌ನಿಂದಾಗಿ ಆಗಾಗ ಚರ್ಚೆಯಲ್ಲಿರುತ್ತಾರೆ. 60ನೇ ವಯಸ್ಸಲ್ಲಿ 30ರ ತರುಣಿಯಂತೆ ಕಾಣೋ ನೀತಾ ಅಂಬಾನಿ ಫಿಟ್ನೆಸ್ ಸೀಕ್ರೆಟ್ ಏನು ಎಂಬುದು ಹಲವರ ಪ್ರಶ್ನೆಯಾಗಿದೆ.
Image credits: others
ತೂಕ ಇಳಿಕೆ
ನೀತಾ ಅಂಬಾನಿ ಮೊದಲು 90 ಕೆಜಿ ತೂಕವಿದ್ದರು. ನಂತರ 90 ಕೆಜಿಯಿಂದ 50 ಕೆಜಿ ಇಳಿಸಿಕೊಂಡರು. ನೀತಾ ಅಂಬಾನಿಯನ್ನು ನೋಡಿದರೆ ಆಕೆಗೆ 60 ವರ್ಷ ವಯಸ್ಸಾಗಿದೆ ಎಂದು ಹೇಳಲು ಸಾಧ್ಯವಿಲ್ಲ.
Image credits: others
ಯೋಗ ಮತ್ತು ಈಜು
ಪ್ರತಿದಿನ 40 ನಿಮಿಷ ಯೋಗ ಮಾಡುತ್ತಾರೆ. ವ್ಯಾಯಾಮ, ಈಜುವುದಕ್ಕಾಗಿಯೇ ನೀತಾ ಅಂಬಾನಿ ಸಮಯ ವ್ಯಯಿಸುತ್ತಾರೆ. ತಮ್ಮ ಮೈಕಟ್ಟನ್ನು ಕಾಪಾಡಿಕೊಳ್ಳಲು ನೀತಾ ಈ ದಿನಚರಿಯನ್ನು ಎಂದೂ ತಪ್ಪಿಸುವುದಿಲ್ಲ.
Image credits: others
ನೃತ್ಯಗಾರ್ತಿ
ನೀತಾ ಅಂಬಾನಿ ಅತ್ಯುತ್ತಮ ನೃತ್ಯಗಾರ್ತಿ. ಚಿಕ್ಕವರಿದ್ದಾಗ ಶಾಸ್ತ್ರೀಯ ನೃತ್ಯವನ್ನು ಕಲಿಯಲು ಪ್ರಾರಂಭಿಸಿದರು.ಹಲವಾರು ಭರತನಾಟ್ಯ ಕಾರ್ಯಕ್ರಮ ಸಹ ನೀಡಿದ್ದಾರೆ. ನಿಯಮಿತವಾಗಿ ಡ್ಯಾನ್ಸ್ ಅಭ್ಯಾಸ ಮಾಡಿ ಫಿಟ್ ಆಗಿದ್ದಾರೆ
Image credits: others
ಆಹಾರಕ್ರಮ
ನೀತಾ ಅಂಬಾನಿ ತಮ್ಮ ದಿನ ಡ್ರೈ ಫ್ರೂಟ್ಸ್‌ನಿಂದ ಆರಂಭಿಸುತ್ತಾರೆ. ಬೀಟ್ರೂಟ್ ಜ್ಯೂಸ್ ಕುಡಿಯುತ್ತಾರೆ. ಪ್ರತಿ ದಿನ ಡಿಟಾಕ್ಸ್ ವಾಟರ್ ಕುಡಿಯುತ್ತಾರೆ. ಊಟದಲ್ಲಿ ಹಸಿರು ತರಕಾರಿ, ಸೂಪ್, ಮೊಳಕೆಕಾಳು ಸೇವಿಸುತ್ತಾರೆ.