49ನೇ ವಯಸ್ಸಿನಲ್ಲಿ ಡೈವಿಂಗ್ ಕಲಿತು ಸಾಗರ ರಕ್ಷಣೆಗೆ ಪಣತೊಟ್ಟಿರುವ ದಿಟ್ಟ ಮಹಿಳೆ

By Suvarna NewsFirst Published Mar 6, 2024, 2:54 PM IST
Highlights

ಕಲಿಕೆಗೆ ವಯಸ್ಸಿಲ್ಲ. ಸಕಾರಾತ್ಮಕ ಆಲೋಚನೆ, ಸಾಧಿಸುವ ಮನಸ್ಸಿದ್ರೆ ದೇಹ ನಾವು ಹೇಳಿದಂತೆ ಕೇಳುತ್ತೆ. ಚಿತ್ರಕಲೆ ಪ್ರೀತಿ ಈ ಮಹಿಳೆಯನ್ನು ಹೊಸ ದಾರಿಗೆ ಕರೆದೊಯ್ದಿದೆ. ನಿವೃತ್ತಿ ವಯಸ್ಸಿನಲ್ಲಿ ಸಮುದ್ರಕ್ಕೆ ಧುಮುಕುವ ಈಕೆ ಎಲ್ಲರಿಗೂ ಸ್ಪೂರ್ತಿ.  
 

ಗುರಿ ಸಾಧಿಸುವ ಬಯಕೆ ಹೆಮ್ಮರವಾಗಿದ್ದರೆ ಯಾವುದೇ ಅಡೆತಡೆ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ವಯಸ್ಸು ಆಗ ಬರೀ ಲೆಕ್ಕವಾಗಿರುತ್ತದೆ. ಬಾಲ್ಯದ ಗುರಿ ಇನ್ನೂ ಈಡೇರಿಲ್ಲ, ಈಗ ವಯಸ್ಸಾಯ್ತು ಎನ್ನುವ ಮಹಿಳೆಯರಿಗೆ ಹವಳದ ಮಹಿಳೆ ಎಂದೇ ಪ್ರಸಿದ್ಧಿ ಪಡೆದಿರುವ ಉಮಾ ಮಣಿ ಸ್ಫೂರ್ತಿಯಾಗ್ತಾರೆ. ಬಾಲ್ಯದಲ್ಲಿಯೇ ಚಿತ್ರಕಲೆ ಮೇಲೆ ಆಸಕ್ತಿ ಹೊಂದಿದ್ದರೂ ಮನೆಯವರ ಅಭಿಪ್ರಾಯಕ್ಕೆ ಮಣಿದು ಚಿತ್ರಕಲೆಯಿಂದ ದೂರವಿದ್ದ ಉಮಾ ಮಣಿ, ಓದು – ಮದುವೆಗೆ ಆದ್ಯತೆ ನೀಡಿದ್ರು. ಉಮಾ ಮಣಿ 39ನೇ ವರ್ಷದಲ್ಲಿ ಪತಿ ಜೊತೆ ಚೆನ್ನೈ ತೊರೆದು ಮಾಲ್ಡೀವ್ಸ್‌ ಗೆ ಹೋಗಬೇಕಾಯ್ತು. ಅಲ್ಲಿನ ಸುಂದರ ಪರಿಸರ ಅವರ ಬದುಕನ್ನು ಬದಲಿಸಿತು. ನೀರು ಅವರನ್ನು ಆಕರ್ಷಿಸಿತು. ಆದ್ರೆ ಉಮಾ ಮಣಿಗೆ ಈಜು ಬರ್ತಿರಲಿಲ್ಲ. ಚಿತ್ರಕಲೆ ಮೇಲಿದ್ದ ಅವರ ಪ್ರೀತಿ ಅವರು ಈಜು ಕಲಿತು, ಸಮುದ್ರದಲ್ಲಿ ಡೈವಿಂಗ್ ಮಾಡಲು ಸಾಧ್ಯವಾಯ್ತು. ಸಮುದ್ರಕ್ಕೆ ಆರಾಮವಾಗಿ ಧುಮುಕುವ ಅವರು ಹವಳದ ಬಗ್ಗೆ ಸಾಕಷ್ಟು ಅರಿವು ಪಡೆದಿದ್ದಾರೆ. ಹವಳದ ರಕ್ಷಣೆ, ಸಮುದ್ರ ಜೀವಿಗಳ ರಕ್ಷಣೆಗೆ ಸಂಬಂಧಿಸಿದಂತೆ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಇಲ್ಲಿಂದ ಬದಲಾಯ್ತು ಜೀವನ (Life) : ಉಮಾ ಮಣಿ (Uma Mani) ಗೆ ಒಂದು ದಿನ ಹವಳದ ಸಾಕ್ಷ್ಯ ಚಿತ್ರ ವೀಕ್ಷಣೆ ಮಾಡುವ ಅವಕಾಶ ಸಿಕ್ಕಿತ್ತು. ಇದೇ ಸಮಯದಲ್ಲಿ ಉಮಾ, ಹವಳ (Coral) ಗಳು, ಅದರ ಬಂಡೆಯನ್ನು ವೀಕ್ಷಣೆ ಮಾಡದೆ ನಾಲ್ಕು ವರ್ಷದಿಂದ ಇದರ ವರ್ಣಚಿತ್ರ ಬಿಡಿಸುತ್ತಿದ್ದರು. 2014ರಲ್ಲಿ ಹವಳದ ಬಂಡೆ ನೋಡಿ ಬಣ್ಣ ತುಂಬಿ ಎಂದು ಒಬ್ಬರು ಸಲಹೆ ನೀಡಿದ್ದರು. ಆ ನಂತ್ರ ಬಂಡೆ ವೀಕ್ಷಣೆಗೆ ಉಮಾ ಮುಂದಾದ್ರು. ಆದ್ರೆ ಈಜು ಅವಶ್ಯಕವಾಗಿತ್ತು. ಚೆನ್ನೈಗೆ ವಾಪಸ್ ಬಂದು ಈಜು ಕಲಿಯಲು ಮುಂದಾದಾಗ ಉಮಾ, ಕುಟುಂಬಸ್ಥರು, ಆಪ್ತರಿಂದ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಯಾವುದನ್ನೂ ಲೆಕ್ಕಿಸದೆ ಈಜು ಕಲಿತ ಉಮಾ ಮಣಿಯವರಿಗೆ ಮೊದಲ ಬಾರಿ ಸಮುದ್ರಕ್ಕೆ ಧುಮುಕುವ ಅವಕಾಶ ಸಿಕ್ಕಿತ್ತು.

ಅಬ್ಬಬ್ಬಾ..ನೀತಾ ಅಂಬಾನಿ ಮೇಕಪ್‌ ಆರ್ಟಿಸ್ಟ್ ಸಂಬಳ IAS ಆಫೀಸರ್‌ಗಿಂತಲೂ ಹತ್ತು ಪಟ್ಟು ಹೆಚ್ಚು!

ತಮ್ಮ 45ನೇ ವಯಸ್ಸಿನಲ್ಲಿ ಈಜು ಕಲಿತ ಅವರು, ಸಮುದ್ರದಲ್ಲಿರುವ ಹವಳದ ಬಂಡೆ ನೋಡಿ ಮೂಕವಿಸ್ಮಿತರಾಗಿದ್ದರು. ಈವರೆಗೆ ಉಮಾ ಕನಿಷ್ಠ 25 ಬಾರಿ ನೀರಿನ ಅಡಿ ಧುಮುಕಿದ್ದಾರೆ. ಉಮಾ ಡೈವಿಂಗ್ ಲಾಗ್ ಇಟ್ಟಿದ್ದು, ಪ್ರತಿ ಡೈವ್‌ನ ಸ್ಥಳ, ಸಮಯ ಮತ್ತು ಅನುಭವದ ಬಗ್ಗೆ ವಿವರವಾಗಿ ಬರೆಯುತ್ತಾರೆ. 

ನೀರೊಳಗಿನ ಹವಳದ ಬಂಡೆಗಳು ಮತ್ತು ಸಾಗರ ಮಾಲಿನ್ಯದ ಸಮಸ್ಯೆಯನ್ನು ಅರಿತಿರುವ  ಉಮಾ, ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸಾಗರದಲ್ಲಿ ಕಸ ಮತ್ತು ಪ್ಲಾಸ್ಟಿಕ್ ರೂಪದಲ್ಲಿ ಇಂಗಾಲದ ಹೆಜ್ಜೆಗುರುತನ್ನು ನಾವು ಬಿಡುತ್ತಿದ್ದೇವೆ. ಇದ್ರಿಂದ ಸಾಗರದ ಪರಿಸರ, ಸಾಗರ ಜೀವಿಗಳ ನಾಶಕ್ಕೆ ಕಾರಣವಾಗ್ತಿದೆ ಎನ್ನುತ್ತಾರೆ ಉಮಾ. ಪ್ರತಿಯೊಬ್ಬರೂ ಸಾಗರದ ರಕ್ಷಣೆಗೆ ಮುಂದಾಗಬೇಕು ಎನ್ನುವ ಉಮಾ, ತಮ್ಮ ಚಿತ್ರದ ಮೂಲಕ ಜನರಿಗೆ ಈ ಬಗ್ಗೆ ಮಾಹಿತಿ ನೀಡ್ತಿದ್ದಾರೆ. 2018 ರಲ್ಲಿ ಅವರ ಜೀವನ ಕಥೆ ಕೋರಲ್ ವುಮನ್ ಶೀರ್ಷಿಕೆ ಅಡಿ ಸಾಕ್ಷ್ಯಚಿತ್ರವಾಗಿದೆ. ಸೋನಿ ಬಿಬಿಸಿ ಅರ್ಥ್ ಅವರನ್ನು  ಅರ್ಥ್ ಚಾಂಪಿಯನ್  ಎಂದು ಗುರುತಿಸಿದೆ.

Secrets of porn: ಈ ಸೀಕ್ರೆಟ್‌ಗಳನ್ನು ಪೋರ್ನ್‌ ನಟ ನಟಿಯರು ಯಾರಿಗೂ ಹೇಳೊಲ್ಲ!

ಫಿಟ್ನೆಸ್ (Fitness)ಗೆ ಏನು ಮಾಡ್ತಾರೆ ಉಮಾ?: 60ಋ ಹರೆಯದಲ್ಲೂ ಉಮಾ ಮಣಿ ಫಿಟ್ ಆಗಿದ್ದಾರೆ. ಸಮುದ್ರಕ್ಕೆ ಧುಮುಕುವ ವೇಳೆ ಬೆನ್ನಿನ ಮೇಲೆ 20 ಕಿಲೋ ತೂಕವನ್ನು ಹೊರಬೇಕು. ಹಾಗಾಗಿ ಫಿಟ್ನೆಸ್ ಅತ್ಯಗತ್ಯ. ಎಲ್ಲ ಮಹಿಳೆಯರಂತೆ ಮನೆ ಕೆಲಸ ಮಾಡುವ ಅವರು, ಸಾರ್ವಜನಿಕ ಸಾರಿಗೆಯಲ್ಲಿ (Public Transport) ಓಡಾಡುತ್ತಾರೆ. ಯೋಗ, ವ್ಯಾಯಾಮ ಮಾಡುವ ಅವರು ಪ್ರತಿ ದಿನ ದೇವಸ್ಥಾನಕ್ಕೆ ನಡೆದು ಹೋಗ್ತಾರೆ. ನಾಲ್ಕು ನಾಯಿಗಳನ್ನು ಸಾಕಿರುವ ಅವರು ಸಕಾರಾತ್ಮಕ ಆಲೋಚನೆ (Positive Thinking) ಮಾಡ್ತಾರೆ. ರಾತ್ರಿ ಒಂಭತ್ತು ಗಂಟೆಗೆ ಮಲಗುವ ಉಮಾ, ಆರೋಗ್ಯಕರ ಡಯಟ್ (Healthy Diet)ಗೆ ಹೆಚ್ಚು ಆದ್ಯತೆ ನೀಡ್ತಾರೆ. 

click me!