
ಕರೆಯದೆ ಬರುವ ಅತಿಥಿಗಳು ಅಂದ್ರೆ ನೊಣ, ಸೊಳ್ಳೆ, ಇರುವೆ.. ಒಮ್ಮೆ ಬಂದು ಮನೆ ಸೇರಿದ್ರೆ ಮತ್ತೆ ಮನೆಯಿಂದ ಹೊರಗೆ ಹೋಗೋದಿಲ್ಲ. ಅವುಗಳ ಸಂತಾನ ಬಳೆಯುತ್ತಲೇ ಇರುತ್ತೆ. ಕೆಲ ಪ್ರದೇಶದಲ್ಲಿ ನೊಣಗಳ ಕಾಟ ಹೆಚ್ಚಿರುತ್ತದೆ. ಮನೆ ತುಂಬ ಅದ್ರ ಶಬ್ಧ ಕೇಳ್ತಿರುತ್ತದೆ. ಬರೀ ಶಬ್ಧ ಮಾತ್ರವಲ್ಲ ಆಹಾರದ ಮೇಲೆ ಅವು ಬಂದು ಕುಳಿತ್ರೆ ಆ ಆಹಾರ ಸೇವನೆ ಮಾಡೋದು ಕಷ್ಟ. ಈ ನೊಣಗಳು ಶೌಚಾಲಯದಿಂದ ಆಹಾರದವರೆಗೆ ಎಲ್ಲ ಕಡೆ ಸಂಚರಿಸುವ ಕಾರಣ ನಾನಾ ರೋಗ ಹರಡಲು ಇದು ಕಾರಣವಾಗುತ್ತದೆ.
ಮನೆಯಲ್ಲಿ ನಾನಾ ಕಾರಣಕ್ಕೆ ನೊಣ (Fly)ಗಳು ಹುಟ್ಟಿಕೊಳ್ಳುತ್ತವೆ. ನಿಮ್ಮ ಮನೆ ಮುಂದೆ ಕಸ (Garbage)ದ ರಾಶಿ ಇದ್ರೆ ಅಥವಾ ಚರಂಡಿ ಇದ್ರೆ ನೊಣಗಳು ಮನೆ ಸೇರುತ್ತವೆ. ನಿಮ್ಮ ಮನೆ ಮುಖ್ಯ ಬಾಗಿಲಿನ ಬಳಿಯೇ ನೀವು ಡಸ್ಟ್ ಬಿನ್ ಇಟ್ಟಿದ್ದರೆ ಇದ್ರಿಂದ ಕೂಡ ನೊಣ ನಿಮ್ಮ ಮನೆ ಪ್ರವೇಶ ಮಾಡುತ್ತವೆ. ಆಹಾರ, ತರಕಾರಿ, ಹಣ್ಣುಗಳನ್ನು ಮುಚ್ಚದೆ ತೆರೆದಿಟ್ಟಾಗ ನೊಣ ಅದರ ವಾಸನೆಗೆ ಆಕರ್ಷಿತವಾಗಿ ಮನೆಗೆ ಬರುತ್ತದೆ. ಪ್ರತಿ ಋತುವಿನಲ್ಲಿ ನೊಣಗಳು ಕಾಣಿಸಿಕೊಳ್ಳುತ್ತವೆ. ಆದ್ರೆ ಬೇಸಿಗೆ ಮತ್ತು ಮಳೆಗಾಲದಲ್ಲಿ ಅವುಗಳ ಸಂಖ್ಯೆ ಹೆಚ್ಚು. ನೊಣಗಳ ಸಂತಾನೋತ್ಪತ್ತಿ (Breeding) ಸಾಮರ್ಥ್ಯ ಹೆಚ್ಚು. ಒಮ್ಮೆ ಮೊಟ್ಟೆ ಇಟ್ಟರೆ ಅನೇಕ ನೊಣಗಳು ಜನ್ಮತಳೆಯುತ್ತವೆ. ನೊಣ ಮನೆ ತುಂಬ ಇದ್ರೂ ಅನೇಕರು ಇದನ್ನು ನಿರ್ಲಕ್ಷ್ಯ ಮಾಡ್ತಾರೆ. ಒಂದು ಎರಡು ನೊಣ ಮನೆ ಸೇರಿದಾಗ್ಲೇ ಅದನ್ನು ತೊಲಗಿಸಬೇಕು. ಇಲ್ಲ ಅಂದ್ರೆ ನೊಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗಿ ನಂತ್ರ ಅದ್ರ ನಿಯಂತ್ರಣ ಕಷ್ಟವಾಗುತ್ತದೆ.
ಎಂಟು ಗಂಟೆ ಡ್ರೈವ್ ಮಾಡ್ಕೊಂಡು ಮದುವೆಗೆ ಹೋದವಳಿಗೆ ಹೀಗ್ ಅವಮಾನ ಮಾಡೋದಾ?
ನೊಣ ನಿಯಂತ್ರಣಕ್ಕೆ ಮಾರುಕಟ್ಟೆಯಲ್ಲಿ ಅನೇಕ ಸ್ಪ್ರೇ ಲಭ್ಯವಿದೆ. ಆದ್ರೆ ಎಲ್ಲವೂ ನೊಣ ಓಡಿಸುವ ಸಂಪೂರ್ಣ ಸಾಮರ್ಥ್ಯ ಹೊಂದಿಲ್ಲ. ಈ ಸ್ಪ್ರೇ ಅಪಾಯಕಾರಿಯಾಗಿದ್ದು, ಎಲ್ಲ ಕಡೆ ಅದ್ರ ಸ್ಪ್ರೇ ಸಾಧ್ಯವಿಲ್ಲ. ಮನೆಯಲ್ಲಿರುವ ವಸ್ತುಗಳನ್ನೇ ಸ್ಪ್ರೇತರ ಬಳಸಿ ನೀವು ನೊಣ ಓಡಿಸಬಹುದು.
ವಿನೆಗರ್ (Vinegar) ಮತ್ತು ಡಿಶ್ ಸೋಪ್ (Dish Soap) : ನೊಣಗಳ ಕಾಟದಿಂದ ತಪ್ಪಿಸಿಕೊಳ್ಳಲು ನೀವು ವಿನೆಗರ್ ಮತ್ತು ಡಿಶ್ ಸೋಪ್ ಬಳಸಿ. ಒಂದು ಆಳವಿಲ್ಲ ಬೌಲ್ ಗೆ ಆಪಲ್ ಸೈಡರ್ ವಿನೆಗರ್ ಮತ್ತು ಒಂದು ಚಮಚ ಸಕ್ಕರೆ ಹಾಕಿ. ಇದಕ್ಕೆ ಸ್ವಲ್ಪ ಡಿಶ್ ಸೋಪ್ ಸೇರಿಸಿ.
ಉಪ್ಪು (Salt) ಮತ್ತು ಅರಿಶಿನ ಬಳಸಿ (Turmeric) : ನೊಣದ ಕಾಟ ಅಡುಗೆ ಮನೆಯಲ್ಲಿ ಹೆಚ್ಚಾಗಿದೆ ಎಂದಾದ್ರೆ ಅಡುಗೆ ಮನೆ ಕಟ್ಟೆ ಮೇಲೆಲ್ಲ ಉಪ್ಪು ಬೆರೆಸಿದ ಅರಿಶಿನ ಉದುರಿಸಿ.
ಉಪ್ಪು ಮತ್ತು ಕಾಳುಮೆಣಸು (Pepper) : ನೊಣಗಳನ್ನು ಓಡಿಸಲು ನೀವು ಕಾಳುಮೆಣಸಿನ ಸ್ಪ್ರೇ ಬಳಸಿ. ಒಂದು ಕಪ್ ನೀರು ಕುದಿಸಿ ಅದಕ್ಕೆ ಉಪ್ಪು ಹಾಗೂ ಕಾಳುಮೆಣಸಿನ ಪುಡಿಯನ್ನು ಹಾಕಿ ಕುದಿಸಿ, ಅದು ತಣ್ಣಗಾದ ಮೇಲೆ ಸ್ಪ್ರೇ ಬಾಟಲ್ ಗೆ ಹಾಕಿ ಬಳಸಿ. ಇದು ನೊಣವನ್ನು ಓಡಿಸುತ್ತದೆ.
Success Story: ಭಾರತದ ಮೊದಲ ಮಹಿಳಾ ಮ್ಯೂಜಿಕ್ ತಂಡದ ವಿಶೇಷತೆ ಏನು?
ಸೇಬು – ಲವಂಗ (Clove) : ಮೊದಲು ಸೇಬು ಹಣ್ಣನ್ನು ಅರ್ಧ ಕತ್ತರಿಸಿ. ಅದಕ್ಕೆ ಲವಂಗವನ್ನು ಚುಚ್ಚಿ, ನೊಣ ಬರುವ ಜಾಗದಲ್ಲಿ ಇಡಿ. ಹೀಗೆ ಪ್ರತಿ ದಿನ ಮಾಡ್ತಾ ಬಂದ್ರೆ ನೊಣ ನಿಯಂತ್ರಣಕ್ಕೆ ಬರುತ್ತದೆ.
ಕೆಂಪು ಮೆಣಸು (Red Chilly) : ಒಂದು ಚಮಚ ಕೆಂಪು ಮೆಣಸಿನ ಪುಡಿಯನ್ನು ನೀರಿನಲ್ಲಿ ಬೆರೆಸಿ ಬಾಗಿಲು ಮತ್ತು ಕಿಟಕಿಗಳ ಬಳಿ ಚಿಮುಕಿಸುವುದರಿಂದ ಮನೆಯೊಳಗೆ ನೊಣಗಳು ಬರೋದಿಲ್ಲ.
ಉಪ್ಪು – ನಿಂಬೆ (Salt and Lemon): ಉಪ್ಪು ಮತ್ತು ನಿಂಬೆ ಹಣ್ಣಿನ ರಸ ನೊಣ ಓಡಿಸಲು ಸಹಾಯ ಮಾಡುತ್ತದೆ. ಒಂದು ಕಪ್ ನೀರಿಗೆ ನಿಂಬೆ ರಸ ಮತ್ತು ಎರಡು ಚಮಚ ಉಪ್ಪನ್ನು ಬೆರೆಸಿ ಮಿಶ್ರಣವನ್ನು ಚೆನ್ನಾಗಿ ತಯಾರಿಸಿ. ಈಗ ಅದನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ನೊಣದ ಮೇಲೆ ಸ್ಪ್ರೇ ಮಾಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.