ಕೈಯಲ್ಲಿ ಮಗು ಹಿಡಿದುಕೊಂಡು ಕಚೇರಿಯಲ್ಲಿ ಕೆಲಸ; ದೇಶದ ಅತ್ಯಂತ ಕಿರಿಯ ಮೇಯರ್ ಫೋಟೋ ವೈರಲ್‌

By Vinutha Perla  |  First Published Sep 17, 2023, 11:31 AM IST

ಹೆಣ್ಣು ಕಚೇರಿಗೆ ಹೋಗುವುದರ ಜೊತೆಗೇ ಕುಟುಂಬವನ್ನೂ ನಿರ್ವಹಿಸಬಲ್ಲಳು ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ. ಕೇರಳದ ಮೇಯರ್ ಆರ್ಯ ರಾಜೇಂದ್ರನ್ ಕಚೇರಿಯಲ್ಲಿ ತಮ್ಮ ಒಂದು ತಿಂಗಳ ಮಗುವಿನೊಂದಿಗೆ ಕೆಲಸ ಮಾಡುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 


ತಿರುವನಂತಪುರಂ ಮೇಯರ್ ಆರ್ಯ ರಾಜೇಂದ್ರನ್ ದೇಶದ ಅತ್ಯಂತ ಕಿರಿಯ ಮೇಯರ್ ಎಂದು ಗುರುತಿಸಿಕೊಂಡಿದ್ದಾರೆ. ಸದ್ಯ ಅವರು ಕಚೇರಿಯಲ್ಲಿ ಒಂದು ತಿಂಗಳ ಮಗುವನ್ನು ಕೈಯಲ್ಲಿ ಹಿಡಿದಿರುವ ಫೋಟೋ ವೈರಲ್ ಆಗಿದೆ.  ಆರ್ಯ ರಾಜೇಂದ್ರನ್‌, ಸೆಪ್ಟೆಂಬರ್ 2022ರಲ್ಲಿ ಕೇರಳ ಅಸೆಂಬ್ಲಿಯ ಕಿರಿಯ ಶಾಸಕ ಸಚಿನ್ ದೇವ್ ಅವರೊಂದಿಗೆ ವಿವಾಹವಾದರು. ಕಳೆದ ತಿಂಗಳು ದಂಪತಿ ಹೆಣ್ಣು ಮಗುವಿಗೆ ಜನ್ಮ ನೀಡಿದರು.

ತಿರುವನಂತಪುರಂ ಮೇಯರ್ ಆರ್ಯ ರಾಜೇಂದ್ರನ್ ಅವರು ತಮ್ಮ ಒಂದು ತಿಂಗಳ ಮಗು (Baby)ವಿನೊಂದಿಗೆ ಕೆಲಸ ಮಾಡುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆರ್ಯ ತಮ್ಮ ಚೇರ್‌ನಲ್ಲಿ ಕುಳಿತುಕೊಂಡು, ಒಂದು ಕೈಯಲ್ಲಿ ಮಗುವನ್ನು ಹಿಡಿದುಕೊಂಡು ಫೈಲ್ ಪರಿಶೀಲಿಸುತ್ತಿರುವುದು ಕಾಣಿಸುತ್ತದೆ. ಆಗಸ್ಟ್ 10ರಂದು ಆರ್ಯ ರಾಜೇಂದ್ರನ್ ಮತ್ತು ಬಲುಸ್ಸೆರಿಯ ಶಾಸಕ ಸಚಿನ್ ದೇವ್ ಅವರು ಹೆಣ್ಣು ಮಗುವನ್ನು ಸ್ವಾಗತಿಸಿದರು. ತಿರುವನಂತಪುರಂನ ಎಸ್‌ಎಟಿ ಆಸ್ಪತ್ರೆಯಲ್ಲಿ ಆರ್ಯ ತಮ್ಮ ಮಗಳಿಗೆ ಜನ್ಮ (Birth) ನೀಡಿದ್ದಾರೆ. ದಂಪತಿಗಳು ತಮ್ಮ ನವಜಾತ ಮಗಳಿಗೆ ದುವಾ ದೇವ್ ಎಂದು ಹೆಸರಿಟ್ಟಿದ್ದಾರೆ.

Tap to resize

Latest Videos

undefined

ಮನೆ ಕೆಲ್ಸದ ಜವಾಬ್ದಾರಿ ಕಂಪ್ಲೀಟ್ ಹೆಂಡ್ತೀದೆ ಅನ್ನೋ ಮನಸ್ಥಿತಿ ಬಿಟ್ಬಿಡಿ; ಕೋರ್ಟ್ ಹೇಳಿದ್ದೇನು ನೋಡಿ

ವಿಧಾನಸಭೆಯ ಅತ್ಯಂತ ಕಿರಿಯ ಸದಸ್ಯರನ್ನು ಮದ್ವೆಯಾಗಿದ್ದ ಮೇಯರ್
ಆರ್ಯ ಮತ್ತು ಕೆ.ಎಂ ಸಚಿಂದೇವ್ ಅವರು ಸೆಪ್ಟೆಂಬರ್ 4, 2022ರಂದು ವಿವಾಹ (Marriage)ವಾದರು. ಈ ಕಾರ್ಯಕ್ರಮವು ತಿರುವನಂತಪುರಂನ ಎಕೆಜಿ ಹಾಲ್‌ನಲ್ಲಿ ನಡೆಯಿತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂವಿ ಗೋವಿಂದನ್, ಸಚಿವರಾದ ಮೊಹಮ್ಮದ್ ರಿಯಾಸ್ ಮತ್ತು ವಿ ಶಿವನ್‌ಕುಟ್ಟಿ ಸೇರಿದಂತೆ ಹಲವಾರು ಪ್ರಭಾವಿ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಆರ್ಯ ಅವರು ದೇಶದ ಅತ್ಯಂತ ಕಿರಿಯ ಮೇಯರ್ ಆಗಿದ್ದರೆ, ಸಚಿನ್ ದೇವ್ ಅವರು 15 ನೇ ಕೇರಳ ವಿಧಾನಸಭೆಯ ಅತ್ಯಂತ ಕಿರಿಯ ಸದಸ್ಯರಾಗಿದ್ದಾರೆ. ಅವರು ಎಸ್‌ಎಫ್‌ಐನಲ್ಲಿ ವಿದ್ಯಾರ್ಥಿಗಳಾಗಿದ್ದಾಗ ಮೊದಲ ಬಾರಿಗೆ ಭೇಟಿಯಾದರು. ಪರಸ್ಪರ ಸ್ನೇಹ ಪ್ರೀತಿಗೆ ಪರಿವರ್ತನೆಯಾದ ನಂತರ ಮದುವೆಯಾಗಲು ನಿರ್ಧರಿಸಿದರು.

ಮೊಸಳೆಯನ್ನೇ ಮದ್ವೆಯಾದ ಮೇಯರ್, ಇದೆಂಥಾ ವಿಚಿತ್ರ ಸಂಪ್ರದಾಯ!

ಕೋಝಿಕ್ಕೋಡ್‌ನ ನೆಲ್ಲಿಕೋಡ್‌ ಮೂಲದ ಸಚಿನ್‌ ದೇವ್‌ ಅವರು ಎಸ್‌ಎಫ್‌ಐನ ರಾಜ್ಯ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ಬಾಲುಸ್ಸೆರಿ ಕ್ಷೇತ್ರದಿಂದ ಗೆದ್ದಿದ್ದರು. ಕೋಝಿಕ್ಕೋಡ್‌ನಲ್ಲಿ ಸಿಪಿಎಂ ಜಿಲ್ಲಾ ಸಮಿತಿ ಸದಸ್ಯರೂ ಆಗಿದ್ದಾರೆ. ಆರ್ಯ ಅವರು ಆಲ್ ಸೇಂಟ್ಸ್ ಕಾಲೇಜಿನಲ್ಲಿ ಓದುತ್ತಿದ್ದಾಗ 21ನೇ ವಯಸ್ಸಿನಲ್ಲಿ ತಿರುವನಂತಪುರದ ಮೇಯರ್ ಆದರು.

click me!