ಸಿನಿಮಾಗಿಂತಲೂ ಕಡಿಮೆ ಏನಿಲ್ಲ ಈ ಅಜ್ಜಿ ಕತೆ: ಭಾರತೀಯನ ಪ್ರೀತಿಸಿ ದೇಶ ಬಿಟ್ಟು ಬಂದು ಭಿಕ್ಷುಕಿಯಾದ ಮರ್ಲಿನ್

By Suvarna News  |  First Published Sep 15, 2023, 4:09 PM IST

ಜೀವನ ನಾವು ನೆನೆದಂತೆ ಇರುವುದಿಲ್ಲ ಎಂಬುದಕ್ಕೆ ಈ ಅಜ್ಜಿಯ ಬದುಕೇ ಸಾಕ್ಷಿ, ಒಳ್ಳೆಯ ಶಿಕ್ಷಣವಿದ್ದೂ, ಶಿಕ್ಷಕಿಯಾಗಿದ್ದು, ಭಾರತೀಯನ ಪ್ರೀತಿಸಿ ಮದುವೆಯೂ ಆಗಿ ದೇಶ ಬಿಟ್ಟು ಬಂದ ಈಕೆ ಇಳಿವಯಸ್ಸಿನಲ್ಲಿ ಭಿಕ್ಷೆ ಬೇಡುವಂತಾಗುತ್ತಾಳೆ ಎಂದರೆ ಜೀವನ ಯಾವ ರೀತಿ ಬದುಕಿಗೆ ತಿರುವು ಕೊಡುತ್ತದೆ ನೋಡಿ...


ಸಾಮಾಜಿಕ ಜಾಲತಾಣ ಇಂದು ಅಸಾಧ್ಯವೆನಿಸುವುದನ್ನು ಸಾಧ್ಯವಾಗಿಸಿದೆ. ಇದು ಸಾಮಾಜಿಕ ಜಾಲತಾಣ ಯುಗವಾಗಿದ್ದು, ಇಲ್ಲಿ ಸಿಗದ ಕಂಟೆಂಟ್‌ಗಳೇ ಇಲ್ಲ ಎನಬಹುದು. ಅನೇಕರಿಗೆ ಇದು ಬದುಕಿನ ದಾರಿ ತೋರಿಸುತ್ತಿದೆ. ಇಂದು ಲಕ್ಷಾಂತರ ಜನ ಕೇವಲ ಕಂಟೆಂಟ್ ಕ್ರಿಯೇಟ್ ಮೂಲಕ ಲಕ್ಷಾಂತರ ರೂ ದುಡ್ಡು ಮಾಡುತ್ತಿದ್ದಾರೆ. ಕೆಲವರಿಗೆ ಇದು ಜೀವನ ಎನಿಸಿದೆ. ಇಂತಹ ಸೋಶಿಯಲ್ ಮೀಡಿಯಾ ಈಗ ಅಜ್ಜಿಯೊಬ್ಬರಿಗೆ ಹೊಸ ಬದುಕು ಕಟ್ಟಿ ಕೊಡಲು ನೆರವಾಗಿದೆ. 

ಚೆನ್ನೈನ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದ ಅಜ್ಜಿ

Latest Videos

undefined

ಅವರೊಬ್ಬರು ಅಜ್ಜಿ ಹೊಟ್ಟೆ ಪಾಡಿಗಾಗಿ ಚೆನ್ನೈನ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದರು. ಆದರೆ ಈ ಅಜ್ಜಿ ಎಲ್ಲರಂತೆ ಅಮ್ಮ ತಾಯಿ ಎನ್ನುತ್ತಿರಲಿಲ್ಲ, ಅವರ ಸ್ಪುಟವಾದ ಇಂಗ್ಲೀಷ್ ಭಾಷೆ ಶ್ರೀಮಂತಿಕೆ ಎಲ್ಲರನ್ನು ಸೆಳೆಯುತ್ತಿತ್ತು. ಅಷ್ಟೊಂದು ಸುಂದರವಾಗಿತ್ತು ಅವರ ಇಂಗ್ಲೀಷ್, ಡಬಲ್ ಡಿಗ್ರಿ ಪಿಹೆಚ್‌ಡಿ ಮಾಡಿದವರೇ ಇಂಗ್ಲೀಷ್ ಮಾತನಾಡಲು ತಡವರಿಸುವ ಸ್ಥಿತಿ ಇದೆ (ಇದು ತಪ್ಪಲ್ಲ)  ಆದರೆ ಈ ಅಜ್ಜಿ ಕಾಲೇಜೊಂದರ ವಿಶ್ವ ವಿದ್ಯಾನಿಲಯದಲ್ಲಿರುವ ಇಂಗ್ಲೀಷ್ ಫ್ರೊಫೆಸರ್‌ನ್ನು ಮೀರಿಸುವಂತೆ ಇಂಗ್ಲೀಷ್ ಮಾತನಾಡುತ್ತಿದ್ದರು.  ಹೀಗೆ ಇಂಗ್ಲೀಷ್ ಮಾತನಾಡುವ ಅಜ್ಜಿಯನ್ನು ನೋಡಿದವರೆಲ್ಲಾ ಅಚ್ಚರಿಗೊಳ್ಳುತ್ತಿದ್ದರೆ ವಿನಃ ಅಜ್ಜಿಯ ಪೂರ್ವಪರ ವಿಚಾರಿಸಲು ಮಾತ್ರ ಹೋಗಿರಲಿಲ್ಲ, ಆದರೆ ಸಾಮಾಜಿಕ ಕಳಕಳಿಯನ್ನು ಹೊಂದಿದ್ದ ಯೂಟ್ಯೂಬರ್‌ ಒಬ್ಬನ ಕಣ್ಣಿಗೆ ಅಜ್ಜಿ ಇತ್ತೀಚೆಗೆ ಬಿದ್ದಿದ್ದು, ಆತನ ಮಹತ್ಕಾರ್ಯದಿಂದ ಅಜ್ಜಿಯ ಬದುಕೇ ಬದಲಾಗಿದೆ. 

ಹೆಲಿಕಾಪ್ಟರ್ ಶಾಟ್‌ ಹೊಡೆಯುವ ಶ್ವಾನ... ಟಾಯ್ಲೆಟ್‌ಗೆ ಹೋಗಿ ಪ್ಲಶ್ ಮಾಡೋ ಬೆಕ್ಕು :ವೈರಲ್ ವೀಡಿಯೋ

ಈ ಅಜ್ಜಿ ಯಾರು? 

ಭಿಕ್ಷೆ ಬೇಡ್ತಿದ್ದ ಈ ಅಜ್ಜಿ ಮೂಲತಃ ಶಿಕ್ಷಕಿ. ಇವರ ಹೆಸರು ಮರ್ಲಿನ್‌(Marilyn), ವಯಸ್ಸು 81 ವರ್ಷ ಮೂಲತಃ ಬರ್ಮಾದ (Burma) ರಂಗೂನ್ (Rangoon) ಮೂಲದವರಾದ ಇವರು ಭಾರತೀಯ ಮೂಲದ ತಮಿಳು ಯುವಕನ ಪ್ರೀತಿಸಿ ಮದುವೆಯಾಗಿ ಭಾರತಕ್ಕೆ ಬಂದಿದ್ದರು. ನಾನು ಆತನನ್ನು ಚರ್ಚ್‌ನಲ್ಲಿ ಮದುವೆಯಾದೆ. ಆತ ನನ್ನನ್ನು ಇಲ್ಲಿಗೆ ಕರೆತಂದ ಎನ್ನುತ್ತಾರೆ ಮರ್ಲಿನ್.  ಅವರೆಲ್ಲರೂ ತೀರಿಕೊಂಡರು ನನಗೆ ಬೇರೆ ಯಾರು ಇಲ್ಲಿ ಅಲ್ಲ, ಹೊಟ್ಟೆಪಾಡಿಗಾಗಿ ನಾನು ಇಲ್ಲಿ ಭಿಕ್ಷೆ ಬೇಡುತ್ತೇನೆ. ಇಲ್ಲಿ ಮದ್ರಾಸ್‌, ಅಡ್ಯಾರ್ ಪ್ರದೇಶಗಳಲ್ಲಿ ನಾನು ಭಿಕ್ಷೆ ಬೇಡುವೆ. ಕೆಲವು ದಿನ ಹೊಟ್ಟೆ ತುಂಬುತ್ತದೆ. ಕೆಲವು ದಿನ ಇಲ್ಲ ಕೆಲವು ದಿನ ಹಸಿವಿನಲ್ಲೇ ಮಲಗುತ್ತೇನೆ, ಇಷ್ಟೇ ಜೀವನ ಎಂದು ಹೇಳುತ್ತಾರೆ. ಈ ವೇಳೆ ಯೂಟ್ಯೂಬರ್ ಬರ್ಮಾದಲ್ಲಿ ನೀವೇನು ಮಾಡುತ್ತಿದ್ದೀರಿ ಎಂದು ಕೇಳುತ್ತಾನೆ. 

ಬರ್ಮಾದಲ್ಲಿ ನಾನು ಶಿಕ್ಷಕಿಯಾಗಿದೆ.

ಬರ್ಮಾದಲ್ಲಿ ನಾನು ಶಿಕ್ಷಕಿಯಾಗಿದೆ. ಮಕ್ಕಳಿಗೆ ಟ್ಯೂಷನ್ ನೀಡುತ್ತಿದೆ. ಎಲ್ಲವೂ ಹೊರಟು ಹೋಯ್ತು ಈಗ ಏನು ಉಳಿದಿಲ್ಲ ಎನ್ನುತ್ತಾರೆ ಅಜ್ಜಿ, ಈ ವೇಳೆ ಈ ವ್ಲಾಗರ್ ಯಾವ ವಿಷಯಗಳನ್ನು ನೀವು ಭೋದಿಸುತ್ತಿದ್ದೀರಿ ಎಂದು ಕೇಳುತ್ತಾನೆ. ಇದಕ್ಕೆ ಅಜ್ಜಿ ಇಂಗ್ಲೀಷ್ (English Teacher) ಹಾಗೂ ಗಣಿತವನ್ನು (Maths)ಪಾಠ ಮಾಡುತ್ತಿದೆ. ತಮಿಳ್ ಬಗ್ಗೆ ಸ್ವಲ್ಪ  ಗೊತ್ತು ಎಂದು ಹೇಳುತ್ತಾರೆ. ಈ ವೇಳೆ ಯೂಟ್ಯೂಬರ್ ನನ್ನಿಂದ ನಿಮಗೇನಾದರು ಸಹಾಯ ಬೇಕೆ ಎಂದು ಕೇಳುತ್ತಾರೆ. ಇದಕ್ಕೆ ಅಜ್ಜಿ ನನಗೊಂದು ಸೀರೆ ಲಂಗ ಹಾಗೂ ಬ್ಲೌಸ್ ಬೇಕು ಬೇರೇನೂ ಬೇಡ ಅಷ್ಟೇ ಸಾಕು ಎಂದು ಹೇಳುತ್ತಾರೆ. ಈ ವೇಳೆ ವ್ಲಾಗರ್ ನೀವಿನ್ನೂ ಭಿಕ್ಷೆ ಬೇಡಬಾರದು. ಇಂಗ್ಲೀಷ್ ಪಾಠ ಮಾಡಬೇಕು, ನನ್ನೊಂದಿಗೆ ಇಂಗ್ಲೀಷ್ ಭಾಷೆಗೆ ಸಂಬಂಧಿಸಿದಂತೆ ವೀಡಿಯೋ ಮಾಡಬೇಕು, ನಾನು ನಿಮಗೆ ಇದಕ್ಕೆ ಹಣ ನೀಡುತ್ತೇನೆ ಎಂದು ಹೇಳುತ್ತಾರೆ. ಅದರಂತೆ ಅಜ್ಜಿ ಈ ಒಪ್ಪಂದಕ್ಕೆ ಒಪ್ಪಿಕೊಂಡಿದ್ದ ಅಜ್ಜಿಯ ಬದುಕು ಈಗ ಬದಲಾಗಿದೆ. ಭಿಕ್ಷೆ ಬೇಡುತ್ತಿದ್ದ ಈ ಇಂಗ್ಲೀಷ್ ಟೀಚರ್‌ನ್ನು ವೃದ್ಧಾಶ್ರಮಕ್ಕೆ (Old age home) ಸೇರಿಸಿದ್ದಾರೆ ಈ ವ್ಲಾಗರ್.

ಪ್ರೀತಿಸಿ ಮದ್ವೆ, ಪತ್ನಿಯ ತಂದೂರಿಯಲ್ಲಿ ಸುಟ್ಟ ಕಾಂಗ್ರೆಸ್ ನಾಯಕ: ರಾಜಧಾನಿಯ ಬೆಚ್ಚಿ ಬೀಳಿಸಿದ ಮರ್ಡರ್ ಸ್ಟೋರಿ ಇದು

ಅಂಗಹಾಗೆ ಹೀಗೆ ಅಜ್ಜಿಗೆ ಅವರ ಇಂಗ್ಲೀಷ್ ಜ್ಞಾನದ ಮೌಲ್ಯದ ಬಗ್ಗೆ ಅವರಿಗೆ ಅರಿವು ಮೂಡಿಸಿ ಅವರಿಗೆ ಒಂದು ನೆಲೆ ಒದಗಿಸಿಕೊಟ್ಟವರು ಮೊಹಮ್ಮದ್ ಆಶಿಕ್ (Mohamed Ashik) ಎಂಬ ಯುವಕ. abrokecollegekid ಎಂಬ ಇನ್ಸ್ಟಾಗ್ರಾಮ್‌ ಖಾತೆಯನ್ನು ಇವರು ಹೊಂದಿದ್ದು, ಈ ರೀತಿಯ ಕೆಲ ಸಾಮಾಜಿಕ ಕಳಕಳಿಯ ಕೆಲಸಗಳಿಂದ ಅವರು ಸಾಮಾಜಿಕ ಜಾಲತಾಣದಲ್ಲಿ ಹೆಸರುವಾಸಿಯಾಗಿದ್ದಾರೆ. ಇನ್ನು ಮೊಹಮ್ಮದ್ ಆಶಿಕ್‌ನ ಈ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಜೊತೆಗೆ ಇಂಗ್ಲೀಷ್ ಟೀಚರ್‌ ಮರ್ಲಿನ್ ಅವವರ ಈ ಅದ್ಬುತ ಇಂಗ್ಲೀಷ್‌ಗೆ ಸಾಮಾಜಿಕ ಜಾಲತಾಣ ಬಳಕೆದಾರರು ಮೆಚ್ಚಿದ್ದು, ಈ ಜನರೇಷನ್‌ನಲ್ಲಿ ನಾವಿದ್ದರೂ ಇವರು ಮಾತನಾಡುವ ಇಂಗ್ಲೀಷ್‌ನ ಅರ್ಧ ನಮಗೆ ಮಾತನಾಡಲು ಆಗುತ್ತಿಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇಂಗ್ಲೀಷ್ ವಿತ್ ಮರ್ಲಿನ್ (English with marilyn) ಎಂಬ ಹೆಸರಿನಲ್ಲಿ ಇಂಗ್ಲೀಷ್ ಭಾಷೆಯ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. 

ಬದುಕು ಹೇಗೆಲ್ಲಾ ಬದಲಾಗುತ್ತದೆ ಅಲ್ಲವೇ ಒಮ್ಮೆ ಇಂಗ್ಲೀಷ್‌ ಟೀಚರ್‌ ಆಗಿ, ಭಾರತೀಯನ ಪ್ರೀತಿಸಿ ಮದುವೆಯಾಗಿ ದೇಶಬಿಟ್ಟು ಬಂದು ಇಲ್ಲಿ ಭಿಕ್ಷುಕಿಯಾಗಿ ಇಳಿವಯಸ್ಸಿಗೆ ಮತ್ತೆ ಶಿಕ್ಷಕಿಯಾದ ಈ ಮರ್ಲಿನ್ ಕತೆ ಯಾವ ಸಿನಿಮಾಗೂ ಕಡಿಮೆ ಏನಿಲ್ಲ. ಎಲ್ಲವೂ ಕಾಲದ ಮಹಿಮೆ ಕಾಲಾಯ ತಸ್ಮೈ ನಮಃ.

ಆಮೆಗೆ ಮುತ್ತಿಕ್ಕುವ ಚಿಟ್ಟೆಯ ಹಿಂಡು: ಈ ವಿಸ್ಮಯದ ಹಿಂದಿದೆ ವಿಶೇಷ: ವೀಡಿಯೋ ವೈರಲ್

 

 

click me!