ಹಸ್ತಮೈಥುನ, ಹದಿ ಹರೆಯದ ಹೆಣ್ಣು ಮಾಡಿಕೊಂಡರೇನು ತಪ್ಪು?

By Suvarna NewsFirst Published Apr 27, 2024, 4:32 PM IST
Highlights

ಹಸ್ತ ಮೈಥುನದ ಬಗ್ಗೆ ತರಹೇವಾರಿ ತಪ್ಪು ಕಲ್ಪನೆಗಳೇ ಹೆಚ್ಚು. ಆದರೂ, ಗಂಡು ಮಕ್ಕಳು ಮಾಡಿಕೊಂಡರೆ, ಪರ್ವಾಗಿಲ್ಲ, ಆದ್ರೆ ಹೆಣ್ಣು ಮಕ್ಕಳು ಮಾಡಿಕೊಂಡರೆ ತಲೆ ಮೇಲೆ ಆಕಾಶ ಬಿದ್ದ ಹಾಗೆ ಆಡ್ತಾರೆ ಪೋಷಕರು. ಈ ಸಹಜ ಪ್ರಕ್ರಿಯೆ ಬಗ್ಗೆ ಅರಿವು ಮೂಡಿಸುವ ಬರಹವಿದು. 

- ಗಿರಿಜಾ ಹೆಗಡೆ

ಈ ಪೋಸ್ಟ್ ಖಂಡಿತಾ ಮಡಿವಂತರು ಓದುವಂಥದ್ದಲ್ಲ
'ಹೆಣ್ಣು ಮತ್ತು ಹಸ್ತ ಮೈಥುನ' 'ನಮ್ಮ ಮಗಳು ಹಸ್ತ ಮೈಥುನದ ಕೆಟ್ಟ ಚಟಕ್ಕೆ ಬಿದ್ದಿದ್ದಾಳೆ, ಮ್ಯಾಮ್...ಹೇಳ್ಕೊಳಕ್ಕೆ ತುಂಬಾ ನಾಚ್ಕೆ ಆಗತ್ತೆ. ಇತ್ತೀಚೆಗೆ ತುಂಬಾ ಮಂಕಾಗಿರ್ತಾಳೆ. ಅವ್ಳಿಗೆ ಆ ಭಾಗದಲ್ಲಿ ಏನೋ ನೋವಾಗಿದೆ ಅನ್ಸುತ್ತೆ. ಡಾಕ್ಟರ್ ಹತ್ರ ಹೋಗೋಣ ಅಂದ್ರೂ ಬರೋಲ್ಲ. ನೀವಾದರೂ ಮಾತಾಡಿ ಮ್ಯಾಮ್ please.

'ಹೇಗೆ ಬಿಡಿಸೋದು,  ಏನು ಮಾಡೋದು ಗೊತ್ತಾಗ್ತಾನೆ ಇಲ್ಲ,' ತಾಯಿ ನನ್ನತ್ರ ಮಾತಾಡ್ತಾ ಇದ್ರೆ, ತಂದೆ ನನ್ನ ಚೇoಬರ್ ಹೊರಗಡೆ, ಒಳಗಡೆ ನಡೀತಿರಬಹುದಾದ ಮಾತುಕತೆಯ ವಿಷಯದ ಸಲುವಾಗಿ ತುಂಬಾ ಆತಂಕ ಮತ್ತು ನಾಚಿಕೆಯಿಂದ  ತಲೆ ತಗ್ಗಿಸಿ ಕೂತಿದ್ರು. ವಿವರಗಳನ್ನು ತಿಳಿದುಕೊಂಡು, ಅವರ ಮಗಳ ಹತ್ತಿರ ಇಂಥ ಒಂದು ತುಂಬಾ ಪ್ರೈವೇಟ್ ಎನ್ನಬಹುದಾದ ವಿಷಯದ ಕುರಿತು ನಾನು ಮಾತನಾಡಬಹುದು ಎಂದು ಒಂದು ಪರ್ಮಿಶನ್ ಲೆಟರ್ ಬರೆಸಿಕೊಂಡು ಸೈನ್ ಹಾಕಿಸಿಕೊಂಡು ಕಳಿಸಿಕೊಟ್ಟೆ. 

ಒಂಭತ್ತನೇ ಕ್ಲಾಸಿನಲ್ಲಿರುವ ಆ ಮಗುವನ್ನು ಗಮನಿಸುತ್ತಾ ಬಂದೆ. ಪ್ರತಿ ಪೀರಿಯಡ್ ಬ್ರೇಕಿನಲ್ಲಿ ಟಾಯ್ಲೆಟ್‌ಗೆ ಹೋಗೋಕೆ ಪರ್ಮಿಶನ್ ಕೇಳ್ತಾಳೆ ಎಂಬ ಕಂಪ್ಲೇಂಟ್ ಟೀಚರ್ಸ್ ಕಡೆಯಿಂದ ಬಂತು. ಗೇಮ್ಸ್ , ಫಿಸಿಕಲ್ ಎಜುಕೇಷನ್ ಪೀರಿಯಡ್ ತಪ್ಪಿಸಿ ಹುಷಾರಿಲ್ಲ ಎಂದು ಕೂರುವ ಬಗ್ಗೆಯೂ ಗಮನಕ್ಕೆ ಬಂತು. ಗೆಳತಿಯರೆಲ್ಲ ಅವಳ ಜೊತೆ ಮಾತು ಬಿಟ್ಟದ್ದೂ ಗೊತ್ತಾಯ್ತು. ಒಂದು ವಾರದ ನಂತರ ಲಂಚ್ ಅವರ್‌ನಲ್ಲಿ ಊಟದ ಡಬ್ಬಿ ತಗೊಂಡು ನನ್ನ ಚೇಂಬರಿಗೆ ಬಾ, ಇಬ್ಬರೂ ಊಟ ಮಾಡೋಣ ಅಂದೆ. ಮಗು ಡಬ್ಬಿಯ ಜೊತೆ ಬಂತು.
 
ನಿದ್ದೆಗೆಟ್ಟ ಮುಖ, ಕಳಾಹೀನ ಗುಳಿಬಿದ್ದ ಕಣ್ಣು, ನಳನಳಿಸಿ ನಲಿಯಬೇಕಾದ ವಯಸ್ಸಿನಲ್ಲಿ ಮುಖದಲ್ಲಿ ಎಲ್ಲಿಲ್ಲದ ಆತಂಕ ಮನೆಮಾಡಿತ್ತು. 'ಪುಟ್ಟೀ ಹೇಳು ಮಗಳೇ, ಎಂತಾ ಆಗಿದೆ ನಿಂಗೆ.? ಯಾಕೆ ಪದೇ ಪದೇ ಟಾಯ್ಲೆಟ್‌ಗೆ ಪರ್ಮಿಶನ್? Any health problems?' ತಲೆದಡವಿ ಕೇಳಿದೆ. ಬಂತು ನೋಡಿ ಅಳುವಿನ ಮಹಾ ಪ್ರವಾಹ.

ತಾಯಿಯಾದ ನಂತರವೂ ನಿಮ್ಮ ಲೈಂಗಿಕ ಜೀವನ ಎಂಜಾಯ್ ಮಾಡಲು ಇಲ್ಲಿವೆ ಟಿಪ್ಸ್!
 
ಅಳಲು ಬಿಟ್ಟು ಕೈಹಿಡಿದು ತಬ್ಬಿ ಕೂತೆ. 'ಮ್ಯಾಮ್...ನಾನು ಕೆಟ್ಟೋಳು..ನನ್ನನ್ನೂ ಯಾರೂ ಮಾತಾಡ್ಸಲ್ಲ
'ಯಾಕೆ ಪುಟ್ಟ, ಅಂಥದ್ದೇನು ಮಾಡಿದೆ?' 
'ನನ್ನ ಅಮ್ಮ ನಿಮ್ಗೆ ಎಲ್ಲಾ ಹೇಳಿರ್ತಾಳೆ ನಂಗೊತ್ತು...'
'ಹೂ ಪುಟ್ಟಾ, ಅಮ್ಮಾ ನೀ ಮಾಡೋದನ್ನ ಹೇಳಿದ್ರು. ಅದ್ರಲ್ಲಿ ಕೆಟ್ಟದ್ದೇನಿಲ್ಲ. ಆದ್ರೆ ಅದೇ ಜಾಸ್ತಿಯಾಗಿ ನಿನ್ನ ಗಮನವೆಲ್ಲ ಅದರ ಕಡೆಯೇ ಹೋಗಿ, ನೀನು ಊಟ, ನಿದ್ದೆ ಬಿಟ್ಟು ನಿನ್ನ ಆರೋಗ್ಯ ಕೆಡಿಸ್ಕೋಬಾರದಲ್ಲ. ಬಹಳ ಹೊತ್ತು ರೂಮಲ್ಲಿ ಬಾಗಿಲು ಹಾಕ್ಕೊಂಡಿರ್ತೀ ಅಂತ ಅಪ್ಪ-ಅಮ್ಮಂಗೆ ತಲೆಬಿಸಿಯಾಗಿದೆ. ಟಾಯ್ಲಿಟ್ಟಿಗೆ ಯಾಕೆ ತುಂಬಾ ಸಾರಿ ಹೋಗ್ತಿ ಅಂತ ಟೀಚರ್ಸ್‌ಗೆ ಆತಂಕವಾಗಿದೆ. ನಿಂಗೇನಾಗ್ತಿದೆ?' ಪ್ರೀತಿಯಿಂದ ತಲೆ ಸವರಿಯೇ ಕೇಳಿದೆ. 

'ಮ್ಯಾಮ್ , ಅಲ್ಲಿ ಗಾಯವಾಗಿದೆ. ಉರಿಯಿಂದ ಪದೆ ಪದೇ ಟಾಯ್ಲೆಟ್ಟಿಗೆ ಹೋಗಿ ವಾಶ್ ಮಾಡಿಸಿಕೊಳ್ಳಬೇಕು ಎಂದೆನಿಸುತ್ತೆ. My friends saw me rubbing myself in the classroom. I have become a laughing stock. I can't go with them to play. ನಂಗೆ ತೊಡೆಯ ಮಧ್ಯೆ ಗಾಯ ಇರೋದ್ರಿಂದ ಸರಿಯಾಗಿ ನಡೆಯೋಕಾಗಲ್ಲ. But, ನಂಗೆ ಹಾಗೆ ಮಾಡ್ಕೋಬೇಕು ಅಂತ ಅನಿಸಿದ ಕೂಡಲೇ ಎಲ್ಲೇ  ಇದ್ರೂ ಒಂದು ಜಾಗ ಹುಡುಕ್ಕೊಂಡು ಮಾಡಲೇಬೇಕು ಅನ್ಸುತ್ತೆ. ನಂಗೆ ಈಗ ನನ್ನ ಮೇಲೆ ಕಂಟ್ರೋಲ್ ಇಲ್ಲ. ಅಷ್ಟು ಉರಿ ಆದ್ರೂ ಅದು ಬೇಕು ಅನ್ಸುತ್ತೆ. ಇದು ಹುಡುಗಿಯಾಗಿ ನಾನು ಮಾಡೋದು ತಪ್ಪು,' ಅಳು, ಬಿಕ್ಕಳಿಕೆಗಳ  ಮಧ್ಯವೇ ಬಂತು ಇವೆಲ್ಲ ವಿಷಯ.  ತಬ್ಬಿ ಕೂತೆ. ತಲೆ ಸವರಿ, ಹಣೆಗೆ ಮುತ್ತಿಟ್ಟೆ. ಅಳು ಭೋರ್ಗರೆಯಿತು...

'What did you insert Putta? ಎಂತಾ ಹಾಕ್ಕೊಂಡೆ ?' 
ಅಳುವಿನ ಮಧ್ಯೆ ಮುಜುಗರದಿಂದ, 'ಕ್ಯಾರೆಟ್...  ಒಳಗಡೆ ಸುಲಿದ ಹಾಗೆ ಆಗಿ ಊದ್ಕೊಂಡಿದೆ,' ಅಳುತ್ತಲೇ ಉತ್ತರ ಬಂತು. ಮುಂದೆ ಹಲವು ದಿನಗಳ ಕಾಲ ಹಸ್ತ ಮೈಥುನದ ಒಳಿತು ಕೆಡುಕುಗಳ ಬಗ್ಗೆ ಮಾತನಾಡಿ, ಆ ಮಗು ಒಂದು ಕಂಟ್ರೋಲಿಗೆ ಬಂದು, ಗೆಳತಿಯರ ಹತ್ತಿರವೂ ಆ ವಿಷಯದ ಬಗ್ಗೆ ಆಪ್ತವಾಗಿ ಮಾತಾಡಿ, ಅವರೆಲ್ಲರೂ ಅವಳನ್ನು ಮತ್ತೆ ಮಾತಾಡಿಸಿ, ಅವಳ ಕಳೆದ ಡಿಗ್ನಿಟಿ ಮತ್ತೆ ಮರಳಿ ಬರುವಂತೆ ಮಾಡಿದೆ. 

ಮಹಿಳೆಯರು ಹಸ್ತಮೈಥುನ ಮಾಡಿಕೊಂಡ್ರೆ ಮೊಡವೆ ಕಾಡುತ್ತಾ?
 
ಹಸ್ತ ಮೈಥುನ ಅಂದ ತಕ್ಷಣ ಅದು ಗಂಡಸರಿಗೆ ಸಂಬಂಧಿಸಿದ ವಿಷಯ ಎನ್ನುವ ಧೋರಣೆ ನಮ್ಮದು. ಮದುವೆಯವರೆಗೂ ಹೆಣ್ಣುಮಕ್ಕಳು ತಮ್ಮ  sexual need ಅನ್ನು ಮುಚ್ಚಿಡುವುದು, ಅದರ ಬಗ್ಗೆ ತಮಗೇನೂ ಗೊತ್ತೇ ಇಲ್ಲ ಎನ್ನುವುದು ಎಲ್ಲಾ ಕಾಮನ್ ನಟನೆ. ಈಗ ಕಾಲ ಬದಲಾಗಿದೆ. ಹೆಣ್ಣು ಮಕ್ಕಳು ಕೂಡ ತಮ್ಮ ದೈಹಿಕ ಅಗತ್ಯದ (Physical Desires) ಬಗ್ಗೆ ಮಾತನಾಡುತ್ತಾರೆ. ಆದರೆ, ಹೆಣ್ಣಿನ Sexual Need ಎನ್ನುವುದು ಒಂದು ಹಾಸ್ಯ ಮಾಡುವ ಸಂಗತಿಯೇ ಆಗಿ ಮುಂದುವರೆದಿದೆ. ಒಂದೋ ಚೀಪ್ ಪೋರ್ನ್‌ಗಳಲ್ಲಿ ಕಾಮಕ್ಕಾಗಿ ಹಪಹಪಿಸುವ ಆಂಟಿ, ಬಾಬಿಗಳಾಗಿ ಚಿತ್ರಿಸುತ್ತಾರೆ. ಇಲ್ಲವೇ ಕಾಮದ ಕಲ್ಪನೆಯೂ ತಾರದ ದೇವಿ ತಾಯಿ ಅಮ್ಮ ಎಂಬ ಪಟ್ಟ ಕಟ್ಟುತ್ತಾರೆ. 

ಗಂಡು ಮಕ್ಕಳ ಬಗ್ಗೆ, ಅವರ search history ಬಗ್ಗೆ ಇರುವ ಕಾಳಜಿ, ಹೆಣ್ಣು ಮಕ್ಕಳ ಮೇಲೂ ಇರಲಿ. ಮತ್ತೂ ಆ ಕುತೂಹಲ ಹದಿಹರಯದ ಸಹಜ ಭಾಗ ಎನ್ನುವುದೂ ತಿಳಿದಿರಲಿ. ಹುಡುಗಿಯಾಗಿ ನೀನು ಹಾಗೆ ಮಾಡ್ತೀಯಾ? ನಿನ್ನ (ನಮ್ಮ) ಮರ್ಯಾದೆ ಗತಿ ಏನೆಂದು ಪಾಲಕರು ಕೇಳದಿರಲಿ. ಆತ್ಮೀಯತೆ, ಆಪ್ತ ಮಾತುಕತೆ, ಮಕ್ಕಳೊಟ್ಟಿಗೆ ಕಳೆಯುವ ಕ್ವಾಲಿಟಿ ಟೈಮನ್ನು, ದುಡ್ಡು, ಆಟಿಕೆ, ದುಬಾರಿ ಗಿಫ್ಟ್‌ಗಳ ರೂಪದಲ್ಲಿ ರಿಪ್ಲೇಸ್ ಮಾಡದಿರಲಿ.

ಕೊನೆಯದಾಗಿ, ಹೆಣ್ಣು ಮಕ್ಕಳ ತಂದೆ ತಾಯಿಯರಲ್ಲಿ ಒಂದು ಬಿನ್ನಹ. 
ಹೆಣ್ಣಿಗೂ ಗಂಡಿನಷ್ಟೇ ದೈಹಿಕ ಅಗತ್ಯಗಳಿವೆ. ಗಂಡನ್ನು ಕಾಡುವಷ್ಟೇ ಹೆಣ್ಣನ್ನೂ ಕಾಡುತ್ತದೆ ಕಾಮ. 'ಮಿಡಲ್ ಫಿಂಗರ್‌‍‌ನಲ್ಲಿ ಇವಳಿಗೆ ಉಗುರು ಯಾಕೆ ಚಿಕ್ಕದಿದೆ ಹೇಳಿ?,' ಎಂಬ ಅರ್ಥ ಬರುವ ಚಿತ್ರಗಳನ್ನು ಹಾಕಿ ಹೆಣ್ಣಿನ sexual need ಅನ್ನು ಉಡಾಫೆ ಮಾಡಲಾಗತ್ತೆ. ಅದು ನಗುವವರ ಕರ್ಮ! ಆದರೆ ನಿಮ್ಮ ಹೆಣ್ಣು ಮಗು ಹಸ್ತ ಮೈಥುನದಲ್ಲಿ ತೊಡಗಿಕೊಂಡಿದ್ದರೆ, ಗಂಡು ಮಗುವನ್ನು ಯಾವ ರೀತಿ ತಾತ್ಸಾರವಿಲ್ಲದೆ ಹಸ್ತ ಮೈಥುನ ಗಂಡಿಗೆ ಸಹಜ ಎನ್ನುವ ರೀತಿಯಲ್ಲಿ ನಡೆದುಕೊಳ್ತೀರೋ, ಹೆಣ್ಣು ಮಕ್ಕಳಿಗೂ ಅದು  ಸಹಜ ಎನ್ನುವ ಕಾಳಜಿಯಲ್ಲಿ ನಡೆಸಿಕೊಳ್ಳಿ.  ಅದು ಅವರ  ಆತ್ಮ ಗೌರವವನ್ನು ಉಳಿಸುತ್ತದೆ.

ಫಸ್ಟ್ ಟೈಮ್ ಸೆಕ್ಸ್‌ಗೆ ಸಂಬಂಧಿಸಿದ ಈ ವಿಷಯಗಳನ್ನು ನಂಬಬಹುದಾ?

ಕಡೆಯದಾಗಿ, ಹಸ್ತಮೈಥುನ ಕೆಲವು ಮದುವೆ, ಸಂಬಂಧಗಳನ್ನೂ ಉಳಿಸಬಲ್ಲದು. ಇದರಲ್ಲೇನೂ ತಪ್ಪಿಲ್ಲ. ಹೆಣ್ಣಾಗಲಿ, ಗಂಡಾಗಲಿ, ವಾಂಛೆ ಎಲ್ಲರಿಗೂ ಒಂದೇ. ಇದರಲ್ಲಿ ಏನೂ ತಪ್ಪಿಲ್ಲ. 

click me!