ಮದ್ವೆಯಾಗಿ ತಿಂಗಳಿಲ್ಲ , ಒಂದೂವರೆ ತಿಂಗಳ ಗರ್ಭಿಣಿ, ಏನೇನೂ ಯೋಚಿಸಬೇಡಿ, ಇದು ವಿಷ್ಯ

Published : Jan 27, 2026, 09:39 PM IST
Pregnant

ಸಾರಾಂಶ

ಮದುವೆಯಾದ ಒಂದು ತಿಂಗಳಾಗಿದೆ, ಆಗ್ಲೇ ಪ್ರೆಗ್ನೆಂಟ್ ಅಂತ ಡಾಕ್ಟರ್ ಹೇಳಿದ್ರೆ ಖುಷಿ ಜೊತೆ ಶಾಕ್ ಆಗೋದು ನಿಶ್ಚಿತ. ಅದಕ್ಕೆ ಕಾರಣ ಡಾಕ್ಟರ್ ನೀಡೋ ರಿಪೋರ್ಟ್. ಅದ್ರಲ್ಲಿ ಒಂದುವರೆ ತಿಂಗಳ ಪ್ರೆಗ್ನೆಂಟ್ ಅಂತ ಮೆನ್ಶನ್ ಮಾಡ್ತಾರೆ. ಅದ್ಯಾಕೆ? ಉತ್ತರ ಇಲ್ಲಿದೆ.

ಮದುವೆ (Marriage) ಆಗ್ತಿದ್ದಂತೆ ನವ ದಂಪತಿಗೆ ಮಗು ಯಾವಾಗ ಎನ್ನುವ ಪ್ರಶ್ನೆ ಕೇಳಲು ಶುರು ಮಾಡ್ತಾರೆ. ಈ ಮಗು ವಿಷ್ಯದಲ್ಲಿ ಸಂಬಂಧಿಕರು, ಅಕ್ಕಪಕ್ಕದವರ ಕಿವಿ ನೆಟ್ಟಗಿರುತ್ತೆ. ಸಣ್ಣ ವಿಷ್ಯವನ್ನೂ ದೊಡ್ಡದು ಮಾಡೋದ್ರಲ್ಲಿ ನಾವೆಲ್ಲ ಎತ್ತಿದ ಕೈ. ಮದುವೆಯಾಗಿ ಎರಡು ವರ್ಷಕ್ಕೆ ಮಗು ಮನೆಗೆ ಬಂದಿಲ್ಲ ಅಂದ್ರೆ, ಮಕ್ಕಳ್ಯಾಕಾಗ್ಲಿಲ್ಲ ಎನ್ನುವ ಪ್ರಶ್ನೆ ಏಳುತ್ತೆ. ಅದೇ ಮದುವೆಯಾಗಿ ತಿಂಗಳಾಗ್ತಿದ್ದಂತೆ ಮಗು ಆದ್ರೆ ಅದನ್ನು ಅನುಮಾನದ ರೀತಿಯಲ್ಲಿ ಜನ ನೋಡ್ತಾರೆ.

ದಂಪತಿಯೊಬ್ಬರಿಗೆ ಮದುವೆಯಾಗಿ ಒಂದು ತಿಂಗಳಾಗಿತ್ತು. ಆಗ್ಲೇ ಆಕೆಗೆ ಹೊಟ್ಟೆ ನೋವು, ವಾಂತಿ ಕಾಣಿಸಿಕೊಂಡಿತ್ತು. ಆಕೆ ಹಾಸ್ಪೆಟಲ್ ಗೆ ಹೋದಾಗ ಶಾಕ್ ಕಾದಿತ್ತು. ಡಾಕ್ಟರ್, ಮಹಿಳೆ ಗರ್ಭಿಣಿ (pregnant), ಒಂದುವರೆ ತಿಂಗಳಾಗಿದೆ ಎಂದಿದ್ರು. ಇದು ಪತಿ ಮನಸ್ಸಿನಲ್ಲಿ ಅನುಮಾನ ಹುಟ್ಟುಹಾಕಿದ್ದಲ್ಲದೆ ವಿಚ್ಛೇದನಕ್ಕೆ ಹೋಗುವ ಸಾಧ್ಯತೆ ದಟ್ಟವಾಗಿತ್ತು. ಪರಿಸ್ಥಿತಿ ಅರಿತ ವೈದ್ಯರು ವಿಷ್ಯವನ್ನು ವಿವರಿಸಿ, ದಂಪತಿ ಜೀವನವನ್ನು ಸರಿದಾರಿಗೆ ತಂದಿದ್ರು.

ಹೆಂಗಸರಲ್ಲಿ ಲೈಂಗಿಕಾಸಕ್ತಿ ಹೆಚ್ಚಿಸುವ ಆಹಾರ, ಸೂಪರ್‌ ಫುಡ್‌

ಮದುವೆಯಾಗಿ ಒಂದು ತಿಂಗಳಾಗ್ತಿದ್ದಂತೆ ಪ್ರೆಗ್ನೆಂಟ್ ಅಂದ್ರೆ ಎಲ್ಲರೂ ಅಚ್ಚರಿಯಿಂದ ನೋಡೋದು ಸಾಮಾನ್ಯ. ನವ ದಂಪತಿಗೆ ಇದು ಸ್ವಲ್ಪ ಮುಜುಗರದ ವಿಷ್ಯವಾದ್ರೆ ಸಂಬಂಧಿಕರಿಗೆ ಅನುಮಾನದ ಸಂಗತಿ. ಮದುವೆಯಾಗಿ ಒಂದು ತಿಂಗಳಾಗಿಲ್ಲ ಆಗ್ಲೇ ಡಾಕ್ಟರ್ ಪ್ರೆಗ್ನೆಂಟ್ ಆಗಿ ಒಂದುವರೆ ತಿಂಗಳಾಯ್ತು ಅಂತಿದ್ದಾರಲ್ಲ, ಇದು ಹೆಂಗೆ ಅಂತ ಪ್ರಶ್ನೆ ಮಾಡುವ ಜನರು ಮಹಿಳೆಯನ್ನು ಅನುಮಾನದಿಂದ ನೋಡ್ತಾರೆ. ಆಕೆ ಸಾಕಷ್ಟು ಮಾತುಗಳನ್ನು ಕೇಳ್ಬೇಕಾಗುತ್ತೆ. ಆದ್ರೆ ಮದುವೆಯಾಗಿ ಒಂದು ತಿಂಗಳಾಗಿದ್ದು, ಮಹಿಳೆ ಒಂದುವರೆ ತಿಂಗಳ ಗರ್ಭಿಣಿಯಾಗಿದ್ರೆ ಅದ್ರಲ್ಲಿ ಆಕೆ ತಪ್ಪಿಲ್ಲ. ವಿಜ್ಞಾನ ಇದಕ್ಕೆ ಸೂಕ್ತ ಕಾರಣ ನೀಡುತ್ತೆ.

ಗರ್ಭಧಾರಣೆ ಲೆಕ್ಕ ಹಾಕೋದು ಹೇಗೆ?

ಮದುವೆಯಾಗಿ ಒಂದು ತಿಂಗಳಾಗಿದೆ, ವೈದ್ಯರು, ನವವಧು ಒಂದುವರೆ ತಿಂಗಳ ಪ್ರೆಗ್ನೆಂಟ್ ಅಂದ್ರೆ ಟೆನ್ಷನ್ ಮಾಡ್ಕೊಳ್ಬೇಕಾಗಿಲ್ಲ. ವೈದ್ಯರು ಗರ್ಭಧಾರಣೆಯನ್ನು ಲೆಕ್ಕ ಹಾಕುವ ವಿಧಾನ ಬೇರೆ. ಅವರು ಮಹಿಳೆ ಗರ್ಭಧರಿಸಿದ ದಿನದಿಂದ ಲೆಕ್ಕ ಹಾಕುವುದಿಲ್ಲ. ಮಹಿಳೆಯ ಕೊನೆಯ ಪಿರಿಯಡ್ಸ್ ನಿಂದ ಲೆಕ್ಕ ಹಾಕುತ್ತಾರೆ. ಮಹಿಳೆಯ ಕೊನೆಯ ಮುಟ್ಟಿನ ಮೊದಲ ದಿನದಿಂದ ಲೆಕ್ಕ ಹಾಕುತ್ತಾರೆ. ಅಂಡೋತ್ಪತ್ತಿ (ಎಗ್ ಬಿಡುಗಡೆ) ಸಾಮಾನ್ಯವಾಗಿ ಮುಟ್ಟಿನ 14 ನೇ ದಿನದ ಸುಮಾರಿಗೆ ಸಂಭವಿಸುತ್ತದೆ. ನಿಜವಾದ ಗರ್ಭಧಾರಣೆಯು ಹೆಚ್ಚಾಗಿ ಮದುವೆ ಅಥವಾ ಸಂಭೋಗದ 10–15 ದಿನಗಳ ನಂತರ ಸಂಭವಿಸುತ್ತದೆ. ಆದ್ರೆ ವೈದ್ಯಕೀಯ ದಾಖಲೆಗಳು ಈಗಾಗಲೇ ಗರ್ಭಧಾರಣೆಯನ್ನು 2 ವಾರಗಳಷ್ಟು ಹಳೆಯದು ಎಂದು ಪರಿಗಣಿಸುತ್ತವೆ. ಮದುವೆಯಾಗಿ ಒಂದು ತಿಂಗಳಷ್ಟೇ ಆಗಿದ್ದು, ಗರ್ಭಧರಿಸಿ ಒಂದೂವರೆ ತಿಂಗಳಾಗಿದೆ ಅಂತ ವೈದ್ಯಕೀಯ ವರದಿ ಹೇಳಿದ್ರೆ ಅದನ್ನು ಸಾಮಾನ್ಯವಾಗಿ ತೆಗೆದುಕೊಳ್ಳಬೇಕು.

 ಮೊದಲ ರಾತ್ರಿಗೂ ಮೊದಲೇ ಮಗುವಿಗೆ ಜನ್ಮ ನೀಡಿದ ವಧು

ಹುಡುಗಿಯ ಕೊನೆಯ ಮುಟ್ಟು ಮದುವೆಗೆ 15 ದಿನಗಳ ಮೊದಲು ಬಂದಿದ್ರೆ ಮದುವೆಯ ಕೇವಲ ಮೂರು ಅಥವಾ ನಾಲ್ಕು ದಿನಗಳ ನಂತರ ಅವಳು ಗರ್ಭಿಣಿಯಾಗುವ ಸಾಧ್ಯತೆ ಇರುತ್ತದೆ. ಆದ್ರೆ ಅಲ್ಟ್ರಾಸೌಂಡ್ ಮಗುವಿಗೆ ಆರು ವಾರಗಳಷ್ಟು ವಯಸ್ಸಾಗಿದೆ ಎಂದು ತೋರಿಸುತ್ತದೆ. ಅಲ್ಟ್ರಾಸೌಂಡ್ ದಿನಾಂಕಗಳು 7 ರಿಂದ 10 ದಿನಗಳವರೆಗೆ ಬದಲಾಗಬಹುದು ಎಂದು ವೈದ್ಯರು ಸಹ ಒಪ್ಪುತ್ತಾರೆ. ಸ್ತ್ರೀರೋಗತಜ್ಞರ ಪ್ರಕಾರ, ಮದುವೆಯಾದ ಒಂದು ತಿಂಗಳ ನಂತರ ಒಂದುವರೆ ತಿಂಗಳ ಗರ್ಭಧಾರಣೆ ಶೇಕಡಾ 100 ರಷ್ಟು ಸಾಧ್ಯ. ಇದು ಅಸಾಮಾನ್ಯ ಅಥವಾ ಅನುಮಾನಾಸ್ಪದವಲ್ಲ. ಇದು ವೈದ್ಯಕೀಯ ವಿಜ್ಞಾನದಲ್ಲಿ ಸಾಮಾನ್ಯ ಘಟನೆಯಾಗಿದೆ ಎಂದು ವೈದ್ಯರು ಹೇಳ್ತಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪ್ರಿಯಾಂಕಾ ಚೋಪ್ರಾ-ನಿಕ್ ಜೊನಾಸ್ ಜೋಡಿ ಡಿವೋರ್ಸ್ ಆಗದಿರಲು ಅದೊಂದೇ ಕಾರಣವಂತೆ.. ಫೈನಲೀ ಗೊತ್ತಾಯ್ತಲ್ಲ!
ಬಾತ್‌ರೂಮ್ ಒಳಕ್ಕೆ ಹೋಗಿ.. ನಟ ಸೂರ್ಯಂಗೆ ಅದೊಂದು ಕೆಟ್ಟ ಅಭ್ಯಾಸ ಇದ್ಯಂತೆ; ಜ್ಯೋತಿಕಾಗೆ ಅದಕ್ಕೇ ಸಿಟ್ಟು ಬರುತ್ತಂತೆ!