ಪುರುಷರ ಮೇಲೂ ನಡೆಯುತ್ತೆ ಶೋಷಣೆ! ಮಹಿಳೆಯಿಂದ ತಪ್ಪಿಸಿಕೊಳ್ಳಲು ಟಾಯ್ಲೆಟ್ಟಲ್ಲಿ ಅವಿತ!

By Suvarna NewsFirst Published Apr 23, 2024, 3:28 PM IST
Highlights

ಸಮಾಜದಲ್ಲಿ ಮಹಿಳೆ ಹಾಗೂ ಪುರುಷ ಇಬ್ಬರೂ ಶೋಷಣೆಗೊಳಗಾಗಿದ್ದಾರೆ. ಅನೇಕ ಪುರುಷರು ಮಹಿಳೆ ನೀಡುವ ಹಿಂಸೆಯನ್ನು ಸಹಿಸಿಕೊಂಡ್ರೆ ಈತ ತನ್ನ ಸಮಸ್ಯೆ ಬಿಚ್ಚಿಟ್ಟಿದ್ದಾನೆ. ಆತನ ಪೋಸ್ಟ್ ವೈರಲ್ ಆಗಿದೆ.
 

ಸಮಾಜದಲ್ಲಿ ಮಹಿಳೆಯರು ಮಾತ್ರ ಶೋಷಣೆಗೆ ಒಳಗಾಗ್ತಾರೆ ಅನ್ನೋದು ತಪ್ಪು. ಪುರುಷರಿಗೆ ಹೋಲಿಸಿದ್ರೆ ಶೋಷಣೆಗೆ ಒಳಗಾಗುವ ಮಹಿಳೆಯರ ಸಂಖ್ಯೆ ನೂರು ಪಟ್ಟು ಹೆಚ್ಚಿದೆ. ಆದ್ರೆ ಪುರುಷರು ಕೂಡ ಸಾರ್ವಜನಿಕ ಪ್ರದೇಶದಲ್ಲಿ, ಮನೆಯಲ್ಲಿ ಶೋಷಣೆಗೆ ಒಳಗಾಗ್ತಾರೆ. ಇದನ್ನು ಬಹಿರಂಗವಾಗಿ ಹೇಳಿಕೊಳ್ಳುವವರ ಸಂಖ್ಯೆ ಬಹಳ ಕಡಿಮೆ ಇದೆ. ತಮ್ಮ ಆತ್ಮ ಗೌರವಕ್ಕೆ ಧಕ್ಕೆ ತರುತ್ತದೆ, ಎಲ್ಲರ ಮುಂದೆ ಅವಮಾನ ಎಂಬ ಕಾರಣಕ್ಕೆ ಬಹುತೇಕ ಪುರುಷರು, ಶೋಷಣೆ ವಿಷ್ಯವನ್ನು ಮುಚ್ಚಿಡುತ್ತಾರೆ. ಸುಂದರವಾದ ಹುಡುಗರ ಹಿಂದೆ ದಂಡು ದಂಡು ಹುಡುಗಿಯರು ಸುತ್ತಾಡೋದಿದೆ. ಅವರಿಗೆ ಮೆಸ್ಸೇಜ್ ಕಳುಹಿಸಿ, ಗಿಫ್ಟ್ ನೀಡಿ ಪ್ರೀತಿಸುವಂತೆ ಕಾಡುವ ಹುಡುಗಿಯರಿದ್ದಾರೆ. ಕೆಲ ಸಾರ್ವಜನಿಕ ಪ್ರದೇಶದಲ್ಲಿ ಗೊತ್ತು ಗುರಿ ಇಲ್ಲದ ಹುಡುಗಿಯರು, ಸುಂದರ ಹುಡುಗರ ಹಿಂದೆ ಬಿದ್ದು ಪೀಡಿಸ್ತಾರೆ. ಅಂಥ ಸಮಯದಲ್ಲಿ ಏನು ಮಾಡ್ಬೇಕು ಎಂಬುದು ಪುರುಷರಿಗೆ ಗೊತ್ತಿರಬೇಕು. ಎಷ್ಟೇ ಧೈರ್ಯವಂತನಾದ್ರೂ ಹುಡುಗಿ ಹಿಂದೆ ಬಿದ್ದಾಗ ಬೆವರೋದು ಸಾಮಾನ್ಯ. ಆಕೆಯಿಂದ ತಪ್ಪಿಸಿಕೊಳ್ಳಲು ಏನು ಮಾಡ್ಬೇಕು ಎಂದು ಆಲೋಚಿಸುವ ಮೊದಲೇ ಆತನಿಗೊಂದು ರೀತಿ ಅವಮಾನ, ಭಯ ಶುರುವಾಗಿರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ತನಗಾದ ಅನುಭವ ಹಂಚಿಕೊಂಡಿದ್ದಾನೆ.

ಆತನ ಹೆಸರು ಯಿಜೈ. ಚೀನಾ (China) ದ ಬೀಜಿಂಗ್ ಸಿಟಿಯಲ್ಲಿ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣ (Social Media) ದಲ್ಲಿ ಆತ, ಮಹಿಳೆಯೊಬ್ಬಳು ನನಗೆ ಯಾವ ರೀತಿ ಹಿಂಸೆ (Violence) ನೀಡಿದ್ದಾಳೆ ಎಂಬುದನ್ನು ವಿವರಿಸಿದ್ದಾನೆ. ಯಿಜೈ, ಬಸ್ ಗೆ ಕಾಯುತ್ತ ಬಸ್ ನಿಲ್ದಾಣದಲ್ಲಿ ನಿಂತಿದ್ದ. ಈ ವೇಳೆ ಹಿಂದಿನಿಂದ ಬಂದ ಮಹಿಳೆಯೊಬ್ಬಳು ಆತನ ಹತ್ತಿರಕ್ಕೆ ಬಂದು ಹಗ್ ಮಾಡಿದ್ದಾಳೆ. ಆ ಕ್ಷಣ ಯಿಜೈ ಆಕೆ ವಿಡಿಯೋ ಮಾಡಲು ಶುರು ಮಾಡಿದ್ದಾನೆ. ವಿಡಿಯೋದಲ್ಲಿ ಆತ ಮಹಿಳೆಗೆ ದೂರ ಇರುವಂತೆ ಹೇಳಿದ್ದಾನೆ. ಫೋಲಿಸರಿಗೆ ಕರೆ ಮಾಡಿ ವಿಷ್ಯ ತಿಳಿಸಿದ್ದಾನೆ. ನಂತ್ರ ಅಲ್ಲಿಂದ ಓಡಲು ಶುರು ಮಾಡಿದ್ದಾನೆ.

ಮಲ್ಟಿವಿಟಮಿನ್ ಕೊರತೆ ಎಂಬುದು ಸುಳ್ಳು, ಜಾಹೀರಾತನ್ನು ಖಂಡಿಸಿದ ಪದ್ಮಶ್ರೀ ಪ್ರಶಸ್ತಿ ವಿಜೇತ ಡಾ. ವಿ ಮೋಹನ್‌

ಮಹಿಳೆ ಕೂಡ ಆತನ ಬೆನ್ನು ಹತ್ತಿದ್ದಾಳೆ. ನೀನು ಸುಂದರವಾಗಿದ್ದೀಯೆ ಎಂದು ಮಹಿಳೆ ಹೇಳಿದ್ದಾಳೆ. ಇದನ್ನು ಕೇಳಿದ ಯಿಜೈ, ತನ್ನನ್ನು ಬಿಟ್ಟುಬಿಡು, ನಾನು ಪೊಲೀಸರಿಗೆ ಕರೆ ಮಾಡ್ತೇನೆ ಎಂದಿದ್ದಾನೆ. ಪೊಲೀಸರಿಗೆ ಕರೆ ಮಾಡ್ಬೇಡ ಎಂದು ವಿನಂತಿ ಮಾಡಿಕೊಂಡ ಮಹಿಳೆ ಹಿಂಬಾಲಿಸೋದನ್ನು ಬಿಡಲಿಲ್ಲ. ಬಸ್ ಹತ್ತಿರ ಯಿಜೈ ಹಿಂದೆಯೇ ಮಹಿಳೆ ಬಂದಿದ್ದಾಳೆ. ಬಸ್ ನಲ್ಲಿ ಕೂಡ ಹತ್ತಿರಕ್ಕೆ ಬರುವ ಪ್ರಯತ್ನ ಮಾಡಿದ್ದಾಳೆ. ಆದ್ರೆ ಸಹೋದರಿ ನನ್ನನ್ನು ಬಿಟ್ಟುಬಿಡು ಎಂದು ಯಿಜೈ ವಿನಂತಿಸಿಕೊಂಡಿದ್ದಾನೆ. ಆದ್ರೆ ಯಾವ ವಿನಂತಿಗೂ ಆಕೆ ಜಗ್ಗಲಿಲ್ಲ. ಯಿಜೈ ರೆಸ್ಟೋರೆಂಟ್, ಶೌಚಾಲಯ ಹೀಗೆ ಅಲ್ಲಿ ಇಲ್ಲಿ ಅಡಗಿಕೊಂಡು ಆಕೆಯಿಂದ ಬಚಾವ್ ಆಗಿದ್ದಾನೆ.

ಮಹಿಳೆ ಮಾನಸಿಕ ಅಸ್ವಸ್ಥೆಯಂತೆ ಕಾಣ್ತಾಳೆ. ಆಕೆ ಅನೇಕ ಪುರುಷರಿಗೆ ಇದೇ ರೀತಿ ಹಿಂಸೆ ನೀಡಿರುವ ಸಾಧ್ಯತೆ ಇದೆ. ನಾನು ಪೊಲೀಸರಿಗೆ ಈಗಾಗಲೇ ದೂರು ನೀಡಿದ್ದೇನೆ ಎಂದು ಯಿಜೈ ಹೇಳಿದ್ದಾನೆ. ಶೋಷಣೆಗೆ ಒಳಗಾಗುವುದು ಒಬ್ಬರ ಲಿಂಗವನ್ನು ಅವಲಂಬಿಸಿರುವುದಿಲ್ಲ. ಅವರ ಮಾನಸಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದು ಯಿಜೈ ಹೇಳಿದ್ದಾನೆ.

ಪ್ರೇಮ ಸೌಧದ ಮುಂದೆ ಪತಿ ಜೊತೆ ಲವ್ ಮೂಡಲ್ಲಿ ಸತ್ಯ ಸೀರಿಯಲ್ ನಟಿ ಗೌತಮಿ ಜಾದವ್

ಸಾಮಾಜಿಕ ಜಾಲತಾಣದಲ್ಲಿ ಆತನ ಪೋಸ್ಟ್ ವೈರಲ್ ಆಗಿದೆ. ಅನೇಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನನಗೂ ಇದೇ ರೀತಿ ಅನುಭವವಾಗಿದೆ. ನಾನು ತುಂಬಾ ಭಯಗೊಂಡಿದ್ದೆ. ಏನು ಮಾಡ್ಬೇಕು ಎಂಬುದು ನನಗೆ ಗೊತ್ತಾಗಲಿಲ್ಲ ಎಂದು ಒಬ್ಬ ಕಮೆಂಟ್ ಮಾಡಿದ್ದಾನೆ. ಮನೆಯಿಂದ ಹೊರ ಹೋಗುವ ಪುರುಷರು ಅವರ ಸುರಕ್ಷತೆಗೆ ತಯಾರಾಗಿರಬೇಕು. ಅದನ್ನು ಅವರಿಗೆ ಕಲಿಸುವ ಅಗತ್ಯವಿದೆ ಎಂದು ಇನ್ನೊಬ್ಬರು ಹೇಳಿದ್ದಾರೆ. 

click me!