
ಕೆಲವು ಹಠಾತನೇ ಎದುರಾಗುವ ಅಘಾತಕಾರಿ ಕ್ಷಣಗಳಲ್ಲಿ ಏನು ಮಾಡಬೇಕು ಎಂಬುದನ್ನೇ ಅನೇಕರು ಮರೆತು ಬಿಡುತ್ತಾರೆ. ಅನೇಕರಿಗೆ ಏನು ಮಾಡಬೇಕು ಎಂಬುದು ತಿಳಿಯದೇ ಗರಬಡಿದಂತವರಾಗಿ ಬಿಡುತ್ತಾರೆ. ಆದರೆ ಇಲ್ಲೊಂದು ಕಡೆ ಪುಟ್ಟ ಬಾಲಕಿಯೊಬ್ಬಳು ಸಮಯಪ್ರಜ್ಞೆ ಮೆರೆದು ತನಗಿಂತ ಪುಟ್ಟ, ನಡೆಯುವುದಕ್ಕಷ್ಟೇ ಆರಂಭಿಸಿದ ಪುಟ್ಟ ಮಕ್ಕಳಿಬ್ಬರ ರಕ್ಷಣೆ ಮಾಡಿದ್ದು, ಆ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ಪುಟ್ಟ ಮಕ್ಕಳಿಬ್ಬರು ಹೊರಗೆ ಹೋಗುವುದಕ್ಕೆ ಮೊದಲು ಲಿಫ್ಟ್ ಸ್ಥಗಿತಗೊಂಡು ಹಠಾತನೇ ಬಾಗಿಲು ಹಾಕಿಕೊಂಡಿದೆ. ಇದರಿಂದ ಇಬ್ಬರು ಪುಟಾಣಿಗಳು ಲಿಫ್ಟ್ ಒಳಗಡೆ ಬಾಕಿಯಾಗಿದ್ದಾರೆ. ಈ ವೇಳೆ ಅಂದಾಜು 10ರಿಂದ 12 ವರ್ಷದೊಳಗಿನ ಬಾಲಕಿಯೊಬ್ಬಳು ಸಮಯಪ್ರಜ್ಞೆ ಮೆರೆದು ಆ ಮಕ್ಕಳಿಬ್ಬರನ್ನು ಲಿಫ್ಟ್‌ನಿಂದ ಹೊರ ತಂದು ಪ್ರಾಣ ಉಳಿಸಿದ್ದಾಳೆ.
ಇದನ್ನೂ ಓದಿ: ಮದುವೆಗೆ ದಿನ ಮೊದಲು ಸಾವಿಗೆ ಶರಣಾದ ಶಿಕ್ಷಕ ಸೋದರಿಯರು: ಮದುವೆ ಸಂಭ್ರಮವಿರಬೇಕಾದ ಮನೆಯಲ್ಲಿ ಸೂತಕ
ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ, ಆದರೆ ಬಾಲಕಿಯ ಈ ಸಾಹಸಮಯ ಕಾರ್ಯಕ್ಕೆ ಈಗ ಭಾರಿ ಶ್ಲಾಘನೆ ವ್ಯಕ್ತವಾಗ್ತಿದೆ. ವೈರಲ್ ಆದ ವೀಡಿಯೋದಲ್ಲಿ ಕಾಣುವಂತೆ ಇಬ್ಬರು ಪುಟ್ಟ ಮಕ್ಕಳು ಒಳಗಿರುವಾಗಲೇ ಇದ್ದಕ್ಕಿದ್ದಂತೆ ಲಿಫ್ಟ್ ಸ್ಥಗಿತಗೊಂಡು ಬಾಗಿಲು ಹಾಕಿಕೊಂಡಿದೆ. ಈ ವೇಳೆ ಆ ಪುಟ್ಟ ಬಾಲಕಿ ಲಿಫ್ಟ್‌ನ ನಡುವೆ ಕೈ ಹಾಗೂ ಕಾಲನ್ನು ತೂರಿಸಿ ಅದರ ಬಾಗಿಲನ್ನು ಶಕ್ತಿಮೀರಿ ಪ್ರಯತ್ನಿಸಿ ಸ್ವಲ್ಪ ಒಪನ್ ಮಾಡಿದ್ದಾಳೆ. ಜೊತೆಯಲ್ಲಿದ್ದ ಮಹಿಳೆಯೊಬ್ಬರು ಆಕೆಗೆ ಸಹಾಯ ಮಾಡಿದ್ದಾರೆ. ನಂತರ ಈ ಬಾಲಕಿಗೆ ಇನ್ನೊಬ್ಬರು ಮಹಿಳೆ ಸಾಥ್ ನೀಡಿದ್ದು, ಇಬ್ಬರು ಮಹಿಳೆಯರು ಹಾಗೂ ಈ ಬಾಲಕಿ ಸೇರಿ ಲಿಫ್ಟ್‌ನಿಂದ ಮಗುವನ್ನು ಹೊರಗೆ ತರಲು ಯಶಸ್ವಿಯಾಗಿದ್ದಾರೆ. ಈ ವೀಡಿಯೋ ಈಗ ವೈರಲ್ ಆಗಿದ್ದು, ವಿಡಿಯೋ ನೋಡಿದ ಅನೇಕರು ಬಾಲಕಿಯ ಈ ಸಾಹಿಸಿ ಕಾರ್ಯಕ್ಕೆ ಭಾರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಖ್ಯಾತ ಹೃದಯ ತಜ್ಞನಿಗಾಗಿ ಎರಡು ಹೃದಯಗಳ ಗಲಾಟೆ: ಪರಸ್ಪರ ಜುಟ್ಟು ಹಿಡಿದು ಕಿತ್ತಾಡಿದ ಪ್ರೇಯಸಿ, ಹೆಂಡ್ತಿ
ಈ ಬಾಲಕಿಯ ತಂದೆ ತಾಯಿ ಸೂಪರ್ ಹೀರೋಗಳು ಎಂದು ಒಬ್ಬರು ಕಾಮೆಂಟ್ ಮಾಡಿದರೆ ಇನ್ನೊಬ್ಬರು ದೈರ್ಯವಾಗಿ ಇರುವುದಕ್ಕೆ ವಯಸ್ಸಿನ ಮಿತಿ ಇಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಅಂತಹ ಸಂದರ್ಭಗಳಲ್ಲಿ ಮನಸ್ಸಿನ ಉಪಸ್ಥಿತಿ ಮತ್ತು ಪೂರ್ವಭಾವಿಯಾಗಿ ವರ್ತಿಸುವುದು ಬಹಳ ಮುಖ್ಯ ಬೆಂಕಿ ಹುಡುಗಿಗೆ ಅಭಿನಂದನೆಗಳು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅವಳ ಶಾಂತ ಮತ್ತು ಸಂಯಮದ ಪೂರ್ವಭಾವಿ ನಡವಳಿಕೆ ನೋಡಿ ರೋಮಾಂಚನವಾಯ್ತು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಆ ಹುಡುಗಿ ದೇವರ ರೂಪದಲ್ಲಿ ಬಂದಿದ್ದಾಳೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆ ಲಿಫ್ಟ್ ಚಲಿಸುವುದಕ್ಕೆ ಆರಂಭಿಸದೇ ಇದ್ದಿದ್ದು ದೊಡ್ಡ ಪುಣ್ಯ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಬಹುಶಃ ಈ ಲಿಫ್ಟ್‌ನ್ನು ಲಾಕ್‌ಡೌನ್ ಟೈಮಲ್ಲಿ ಇಂಜಿನಿಯರ್ ಆದವರು ಮಾಡಿರಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಪುಟ್ಟ ಬಾಲಕಿಯ ಚಾಕಚಕ್ಯತೆ ಸಮಯಪ್ರಜ್ಞೆಗೆ ಈಗ ಭಾರಿ ಶ್ಲಾಘನೆ ವ್ಯಕ್ತವಾಗ್ತಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.