ಮದ್ಯಪಾನ ಈಗ ಗೌಪ್ಯವಾಗಿ ಉಳಿದುಕೊಂಡಿಲ್ಲ. ವೀಕೆಂಡ್ ಪಾರ್ಟಿಯಿಂದ ಹಿಡಿದು ಫ್ಯಾಮಿಲಿ ಗೆಟ್ ಟುಗೆದರ್ ಸೇರಿದಂತೆ ಎಲ್ಲಾ ಕಾರ್ಯಕ್ರಮ, ಸಮಾರಂಭದಲ್ಲಿ ಮದ್ಯಪಾನ ಇದ್ದೇ ಇದೆ. ಇದೀಗ ಮಹಿಳೆಯರು ಮದ್ಯಪಾನ ಮಾಡುವುದು ಹೊಸ ವಿಚಾರವೇನಲ್ಲ. ಹಾಗಾದರೆ ಯಾವ ರಾಜ್ಯದಲ್ಲಿ ಮಹಿಳಾ ಕುಡುಕರ ಸಂಖ್ಯೆ ಹೆಚ್ಚಿದೆ.
ನವದೆಹಲಿ(ಜು.27) ಏಳುವರೆಗೆ ತುಟಿ ಒಣಗುತ್ತೆ ಏನು ಮಾಡೋಣ? ಬಹುತೇಕರ ಕಾಳಜಿ ಇದು. ಮದ್ಯಪಾನ ಆರೋಗ್ಯಕ್ಕೆ ಹಾನಿಕರ. ಆದರೆ ಮದ್ಯ ಇಲ್ಲದ ಜಗತ್ತೆ ಇಲ್ಲ. ರಬ್ ಪಾರ್ಟಿಯಿಂದ ಹಿಡಿದು ಎಲ್ಲಾ ಸಭೆ ಸಮಾರಂಭಗಳಲ್ಲೂ ಇಂದು ಮದ್ಯಪಾನ ಸಾಮಾನ್ಯ. ಮಹಿಳೆಯರು ಮದ್ಯಪಾನ ಮಾಡುವುದು ಹೊಸದೇನಲ್ಲ. ಆದರೆ ಭಾರತದಲ್ಲಿ ಇದರ ಪ್ರಮಾಣ ಕಡಿಮೆ. ಇದೀಗ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ(NFHS) ಕೆಲ ಮಹತ್ವದ ವಿಚಾರಗಳು ಬಯಲಾಗಿದೆ. ಈ ಸಮೀಕ್ಷಾ ವರದಿ ಪ್ರಕಾರ ಭಾರತದಲ್ಲಿ ಮಹಿಳೆಯರು ಅತೀ ಹೆಚ್ಚು ಮದ್ಯ ಸೇವಿಸುವ ರಾಜ್ಯ ಅಸ್ಸಾಂ ಪಾಲಾಗಿದೆ.
NFHS ಸಮೀಕ್ಷಾ ವರದಿ ಪ್ರಕಾರ ಅಸ್ಸಾಂ 15 ರಿಂದ 49 ವಯಸ್ಸಿನ ಮಹಿಳೆಯರ ಪೈಕಿ ಶೇಕಡಾ 26.3 ರಷ್ಟು ಮಹಿಳೆಯರು ಮದ್ಯಪಾನ ಮಾಡುತ್ತಾರೆ. ಇತರ ರಾಜ್ಯ ಹಾಗೂ ಕೇಂದ್ರಾಡಳಿತದ ಪ್ರದೇಶಕ್ಕೆ ಹೋಲಿಸಿದರೆ ಅಸ್ಸಾಂನಲ್ಲಿ ಗರಿಷ್ಠ ಮಹಿಳೆಯರು ಮದ್ಯಪಾನ ಮಾಡುತ್ತಾರೆ. ಅಸ್ಸಾಂ ಹಲವು ವರ್ಷಗಳಲ್ಲಿ ಮಹಿಳಾ ಮದ್ಯಪಾನ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಲೇ ಬಂದಿದೆ.
ಪತ್ನಿಯ ನಾಲ್ಕೇ ನಾಲ್ಕು ಪೆಗ್‌ಗೆ ಗಿರಗಿರ ತಿರುಗಿದ ಗಂಡ, ಡಿವೋರ್ಸ್ ಕೇಳಿದವನಿಗೆ ನೆಟ್ಟಿಗರ ಸಲಹೆ!
ಎರಡನೇ ಸ್ಥಾನದಲ್ಲಿ ಮೇಘಾಲಯ ವಿರಾಜಮಾನವಾಗಿದೆ. ಮೇಘಾಲಯದಲ್ಲಿ 15 ರಿಂದ 49 ವಯಸ್ಸಿನ ಶೇಕಡಾ 8.7 ರಷ್ಟು ಮಹಿಳೆಯರು ಮದ್ಯಪಾನ ಮಾಡುತ್ತಾರೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿ ಮಾಡಿದೆ. ಇನ್ನು ಅರುಣಾಚಲ ಪ್ರದೇಶ ಮೂರನೇ ಸ್ಥಾನದಲ್ಲಿದೆ. ಕಳೆದ ಬಾರಿಯ ಸರ್ವೆಯಲ್ಲಿ ಅರುಣಾಚಲ ಪ್ರದೇಶದಲ್ಲಿ ಶೇಕಡಾ 33 ರಷ್ಟು ಮಹಿಳೆಯರು ಮದ್ಯಪಾನ ಮಾಡುತ್ತಿದ್ದರು ಎಂದು ವರದಿಯಾಗಿತ್ತು. ಆದರೆ ಈ ಬಾರಿ NFHS ಸರ್ವೆಯಲ್ಲಿ ಅರುಣಾಚಲ ಪ್ರದೇಶದ ಮಹಿಳಾ ಮದ್ಯಪಾನಿಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಇದೀಗ ಕೇವಲ 3.3 ಶೇಕಡಾ ಅರುಣಾಚ ಮಹಿಳೆಯರು ಮದ್ಯಪಾನಿಗಳಾಗಿದ್ದಾರೆ.
ಮದ್ಯಪಾನಿಗಳ ಶೇಕಡವಾರು ನೋಡಿದರೆ ಈಶಾನ್ಯ ರಾಜ್ಯಗಳೇ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಈಶಾನ್ಯರಾಜ್ಯಗಳ ಕೆಲ ಸಮುದಾಯದಲ್ಲಿ ಮದ್ಯಪಾನ ಸಂಪ್ರದಾಯವಿದೆ. ನಾಲ್ಕನೇ ಸ್ಥಾನದಲ್ಲಿರುವ ಸಿಕ್ಕಿಂನಲ್ಲಿ 15 ರಿಂದ 49ರ ವಯಸ್ಸಿನ ಶೇಕಡಾ 0.3 ಮಹಿಳೆಯರು ಮದ್ಯಪಾನಿಗಳಾಗಿದ್ದಾರೆ.
ಕುಡಿದಿಲ್ಲ ಅಂದ್ರೂ ಕೇಳ್ತಿರಲಿಲ್ಲ ಡಾಕ್ಟರ್, ದೇಹಕ್ಕೆ ಆಲ್ಕೋಹಾಲ್ ಸೇರ್ತಿದ್ದಿದ್ದು ಹೇಗೆ?
ಚತ್ತೀಸಘಡ ನಂತರದ ಸ್ಥಾನದಲ್ಲಿದೆ. ಚತ್ತೀಸಘಡದ ಶೇಕಡಾ 0.2 ರಷ್ಟು ಮಹಿಳೆಯರು ಮದ್ಯಪಾನಿಗಳಾಗಿದ್ದಾರೆ. ಈಹಿಂದಿನ NFHS ಸಮೀಕ್ಷೆಯಲ್ಲಿ ಚತ್ತೀಸಘಡದಲ್ಲಿ ಶೇಕಡಾ 11 ರಷ್ಟು ಮಹಿಳೆಯರು ಮದ್ಯಪಾನ ಸೇವಿಸುತ್ತಿದ್ದರು. ಇದೀಗ ಗಣನೀಯವಾಗಿ ಇಳಿಕೆ ಕಂಡಿದೆ. ಜಾರ್ಖಂಡ್ ಕೂಡ ಮಹಿಳಾ ಮದ್ಯಪಾನಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ.