ಕೋಚಿಂಗ್ ಇಲ್ದೆ ಮೊದಲ ಬಾರಿಯೇ ಐಎಎಸ್ ಪರೀಕ್ಷೆ ಪಾಸ್ ಆದ ಲಘಿಮಾ

By Roopa Hegde  |  First Published Feb 21, 2024, 1:04 PM IST

ಕನಸನ್ನು ನನಸು ಮಾಡುವ ಗುರಿ, ನಿರಂತರ ಪ್ರಯತ್ನ, ಪ್ಲಾನಿಂಗ್ ಇದ್ದರೆ ಯುಪಿಎಸ್ಸಿ ಪರೀಕ್ಷೆ ಕೂಡ ಕಠಿಣವಲ್ಲ. ಕೋಚಿಂಗ್ ಇಲ್ಲದೆ ಮೊದಲ ಬಾರಿಯೇ ಪರೀಕ್ಷೆ ಪಾಸ್ ಆಗ್ಬಹುದು ಎಂಬುದಕ್ಕೆ ಈ ಮಹಿಳೆ ಸಾಕ್ಷಿ. ಇತಿಹಾಸ ನಿರ್ಮಿಸಿದ ಇವರ ಡಿಟೇಲ್ ಇಲ್ಲಿದೆ. 
 


ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಪ್ರತಿ ವರ್ಷ ನಾಗರಿಕ ಸೇವಾ ಪರೀಕ್ಷೆಯನ್ನು ನಡೆಸುತ್ತದೆ. ಐಎಎಸ್ ಅಧಿಕಾರಿಯಾಗುವ ಕನಸಿನೊಂದಿಗೆ ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಾರೆ.  ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸ್ ಆಗೋದು ದೊಡ್ಡ ಸಾಧನೆ. ಅದಕ್ಕಾಗಿ ಜನರು ವರ್ಷಾನುಗಟ್ಟಲೆ ತಯಾರಿ ತಡೆಸುತ್ತಾರೆ. ವಿವಿಧ ಕೋಚಿಂಗ್ ಸೆಂಟರ್ ಜಾಲಾಡಿ, ಒಳ್ಳೆಯ ಕೋಚಿಂಗ್ ಸೆಂಟರ್ ಗೆ ಹಣ ಸುರಿದು ತಯಾರಿ ನಡೆಸುತ್ತಾರೆ. ಇಷ್ಟಾದ್ರೂ ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸ್ ಆಗುವವರು ಬಹಳ ಕಡಿಮೆ. ಪದೇ ಪದೇ ಪರೀಕ್ಷೆ ಬರೆಯುವವರನ್ನು ನೀವು ನೋಡ್ಬಹುದು. ಯಾವುದೇ ಕೋಚಿಂಗ್ ಇಲ್ಲದೆ ಮೊದಲ ಪ್ರಯತ್ನದಲ್ಲಿಯೇ ಪರೀಕ್ಷೆ ಪಾಸ್ ಆಗೋದು ಬಹುದೊಡ್ಡ ಸಾಧನೆ. ಅದಕ್ಕೆ ಐಎಎಸ್ ಅಧಿಕಾರಿ ಲಘಿಮಾ ತಿವಾರಿ ಉತ್ತಮ ಉದಾಹರಣೆ. ಅವರ ಯಶಸ್ಸಿನ ಕಥೆ ಇಲ್ಲಿದೆ.

ಐಎಎಸ್ (IAS), ಐಪಿಎಸ್ ಪರೀಕ್ಷೆಯಲ್ಲಿ ಪಾಸಾಗಬೇಕೆಂದ್ರೆ ಅಭ್ಯರ್ಥಿಗಳು ಒಂದು ಮಂತ್ರವನ್ನು ಪಠಿಸುತ್ತಾರೆ. ಅದು ದೃಢತೆ ಮತ್ತು ಸ್ಥಿರತೆ. ಪರೀಕ್ಷೆಗೆ ತಯಾರಿ ನಡೆಸುವಾಗ ಈ ಎರಡು ವಿಷಯಗಳತ್ತ ಗಮನ ಹರಿಸಿದ್ರೆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಸುಲಭ. ಇದನ್ನು ಲಘಿಮಾ ತಿವಾರಿ (Laghima Tiwari) ಚೆನ್ನಾಗಿ ಅರಿತಿದ್ದರು. ಹಾಗಾಗಿಯೇ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಾವುದೇ ಕೋಚಿಂಗ್ (Coaching ) ಇಲ್ಲದೆಯೇ ಲಘಿಮಾ ಮೊದಲ ಪ್ರಯತ್ನದಲ್ಲಿಯೇ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದ್ದಾರೆ. ಮೊದಲ ಪ್ರಯತ್ನದಲ್ಲಿ ಅಖಿಲ ಭಾರತ 19 ನೇ ಶ್ರೇಯಾಂಕವನ್ನು ಪಡೆಯುವ ಮೂಲಕ ಅವರು ಗಮನಾರ್ಹ ಸಾಧನೆಯನ್ನು ಮಾಡಿದರು.

Latest Videos

undefined

ಈ ಭಾರತೀಯ ಮೂಲದ ಮಾಜಿ ಪೋಲೀಸ್ ಆಫೀಸರ್ ನ್ಯೂಜಿಲೆಂಡ್‌ನ ಮಿಸ್ ವರ್ಲ್ಡ್ ಸ್ಪರ್ಧಿ

ಲಘಿಮಾ ತಿವಾರಿ ಎಲ್ಲಿಯವರು? : ಲಘಿಮಾ ತಿವಾರಿ ಮೂಲತಃ ರಾಜಸ್ಥಾನದ ಅಲ್ವಾರ್‌ನಲ್ಲಿ ಜನಿಸಿದರು. ಅವರು ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. 2021 ರಲ್ಲಿ ಲಘಿಮಾ ತಿವಾರಿ ಯುಪಿಎಸ್ಸಿ ಪರೀಕ್ಷೆಗಾಗಿ ತಯಾರಿ ಶುರು ಮಾಡಿದ್ದರು.

ಲಘಿಮಾ ತಿವಾರಿ ತಯಾರಿ ಹೇಗಿತ್ತು? : ಸಂದರ್ಶನವೊಂದರಲ್ಲಿ ಮಾತನಾಡಿದ ಲಘಿಮಾ ತಿವಾರಿ, ಯುಟ್ಯೂಬ್ ನಲ್ಲಿ ಯುಪಿಎಸ್ಸಿ ಟಾಪರ್ ಗಳ ಸಂದರ್ಶನವನ್ನು ನೋಡ್ತಿದ್ದರಂತೆ. ಅವರು ಹೇಳಿದ ನಿಯಮಗಳನ್ನು ಪಾಲಿಸುತ್ತಿದ್ದರಂತೆ. ಇದು ಲಘಿಮಾ ತಿವಾರಿ ಮೊದಲ ಪ್ರಯತ್ನದಲ್ಲಿಯೇ ಪಾಸ್ ಆಗಲು ಹೆಚ್ಚು ಸಹಾಯ ಮಾಡಿದೆ.  ಸ್ಥಿರ ಸೆಷನ್, ಸಾಮಾನ್ಯ ಅಧ್ಯಯನದ ವಿಡಿಯೋಗಳ ವೀಕ್ಷಣೆಯನ್ನು ಅವರು ಪಾಲಿಸಿದ್ದರು. ಲಘಿಮಾ ನಿರಂತರತೆಯ ಮಂತ್ರವನ್ನು ನಂಬುತ್ತಾರೆ. ಕೆಲವು ಗಂಟೆಗಳ ಕಾಲ ಅಧ್ಯಯನ ಮಾಡಿದರೂ ಸತತ ಪ್ರಯತ್ನ ನಡೆಸಬೇಕು ಎನ್ನುತ್ತಾರೆ ಲಘಿಮಾ. ಅಭ್ಯರ್ಥಿಗಳು ಪರೀಕ್ಷೆಗೆ ಮುಂಚಿವಾಗಿಯೇ ಪರೀಕ್ಷೆ ತಯಾರಿ ಮಂತ್ರ ಅಳವಡಿಸಿಕೊಳ್ಳಬೇಕು ಎಂದಿದ್ದಾರೆ.   

ಲಘಿಮಾ ತಿವಾರಿ ಲಿಖಿತ ಪರೀಕ್ಷೆಯಲ್ಲಿ 853 ಮತ್ತು ಪರ್ಸನಾಲಿಟಿ ಟೆಸ್ಟ್ ನಲ್ಲಿ 180 ಅಂಕಗಳನ್ನು ಪಡೆದಿದ್ದಾರೆ. ಅವರ ಒಟ್ಟೂ ಸ್ಕೋರ್ ಒಟ್ಟಾರೆಯಾಗಿ 1033 ಆಗಿತ್ತು. ತಮ್ಮ ಯಶಸ್ಸಿಗೆ ಪಾಲಕರ ಸಹಕಾರ ಹೆಚ್ಚಿದೆ ಎನ್ನುವ ಲಘಿಮಾ, ಸ್ವಯಂ ಅಧ್ಯಯನ ಮುಖ್ಯ ಎನ್ನುತ್ತಾರೆ. 

ಒಂದು ಕೋಟಿ ಸಂಬಳ ಪಡೆಯುವ ಈಕೆ ಕೆಲಸ ಏನು ಗೊತ್ತಾ?

ಪ್ರಿಲಿಮ್ಸ್ ಪರೀಕ್ಷೆಯ ನಂತರ,ಸಮಯ ವ್ಯರ್ಥ ಮಾಡದಂತೆ ಅಭ್ಯರ್ಥಿಗಳಿಗೆ ಲಘಿಮಾ ಸಲಹೆ ನೀಡಿದ್ದಾರೆ. ತಕ್ಷಣದಿಂದಲೇ ಮುಖ್ಯ ಪರೀಕ್ಷೆಗೆ ತಯಾರಿ ಪ್ರಾರಂಭಿಸಿದರೆ ಪರೀಕ್ಷೆ ಪಾಸ್ ಆಗೋದು ಸಲುಭವಾಗುತ್ತದೆ ಎಂದು ಅವರು ಹೇಳಿದ್ದಾರೆ. ಯುಪಿಎಸ್‌ಸಿ ಮುಖ್ಯ ಪರೀಕ್ಷೆಯಲ್ಲಿ ಲಘಿಮಾ ಮಾನವಶಾಸ್ತ್ರವನ್ನು (Humanities) ತನ್ನ ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದರು. ಅವರು 9 ರಿಂದ 12 ನೇ ತರಗತಿಯವರೆಗೆ ಜೀವಶಾಸ್ತ್ರ (Biology) ಅಧ್ಯಯನ ಮಾಡಿದ್ದ ಕಾರಣ ಅವರಿಗೆ ಇಲ್ಲಿ ಹೆಚ್ಚು ಸಮಸ್ಯೆ ಕಾಡಲಿಲ್ಲ. ಅವರ ಯಶಸ್ವಿಗೆ ಬುದ್ಧಿವಂತಿಕೆಯ ಟಾಪಿಕ್ ಆಯ್ಕೆ ಕೂಡ ಕಾರಣವಾಗಿದೆ. ಸತತ ಪರಿಶ್ರಮವಿದ್ದಲ್ಲಿ ಐಪಿಎಸ್ ಪರೀಕ್ಷೆ ಕೂಡ ದೊಡ್ಡದಲ್ಲ ಎಂಬುದನ್ನು ಲಘಿಮಾ ತೋರಿಸಿದ್ದಾರೆ. 

click me!