
ಲೈಂಗಿಕ ಚಟುವಟಿಕೆ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವಂತಹದ್ದು. ಸಂತಾನ ಸುಖ ಹಾಗೂ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಸೆಕ್ಸ್ ಅನಿವಾರ್ಯ. ನಿಯಮಿತ ಸೆಕ್ಸ್ ನಿಂದ ಅನೇಕ ಲಾಭವಿದೆ ಎಂದು ತಜ್ಞರು ಆಗಾಗಾ ಹೇಳ್ತಾಳೆ ಇರ್ತಾರೆ. ಆದ್ರೆ ಸೆಕ್ಸ್ ನಂತ್ರ ಎಲ್ಲ ಮಹಿಳೆಯರು ಸಂತೋಷದಿಂದ ಇರಲು ಸಾಧ್ಯವಿಲ್ಲ. ಕೆಲ ಮಹಿಳೆಯರಿಗೆ ಲೈಂಗಿಕ ಚಟುವಟಿಕೆ ನಂತ್ರ ಸಮಸ್ಯೆ ಕಾಡುತ್ತದೆ. ಯೋನಿಯಲ್ಲಿ ಉರಿ, ತುರಿಕೆ ಸೇರಿದಂತೆ ಕೆಲ ಕಿರಿಕಿರಿಯನ್ನು ಅವರು ಅನುಭವಿಸುತ್ತಾರೆ. ಬಹುತೇಕ ಮಹಿಳೆಯರು ಈ ವಿಷ್ಯವನ್ನು ಗುಪ್ತವಾಗಿಡುತ್ತಾರೆ. ಇದನ್ನು ಅತ್ಯಂತ ವೈಯಕ್ತಿಕ ಎಂದು ಭಾವಿಸುವ ಅವರು ಸಂಗಾತಿ ಬಳಿ ಕೂಡ ತಮ್ಮ ಸಮಸ್ಯೆ ಹೇಳಿಕೊಳ್ಳೋದಿಲ್ಲ. ಆದ್ರೆ ಯೋನಿ ತುರಿಕೆ ಕೆಲವೊಮ್ಮೆ ಮುಚ್ಚಿಡಲು ಸಾಧ್ಯವಾಗೋದಿಲ್ಲ. ಸಾರ್ವಜನಿಕ ಪ್ರದೇಶದಲ್ಲಿ ಮುಜುಗರ ಉಂಟು ಮಾಡೋದಲ್ಲದೆ ತುರಿಕೆ ವಿಪರೀತವಾದಾಗ ಅಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಆರಂಭದಲ್ಲಿಯೇ ಇದಕ್ಕೆ ಚಿಕಿತ್ಸೆ ಪಡೆದಲ್ಲಿ ಸಮಸ್ಯೆ ಉಲ್ಬಣಿಸೋದನ್ನು ತಪ್ಪಿಸಬಹುದು. ನಾವಿಂದು ಸಂಭೋಗದ ನಂತ್ರ ಮಹಿಳೆಯರಿಗೆ ಕಾಡುವ ತುರಿಕೆಗೆ ಕಾರಣವೇನು ಎಂಬುದನ್ನು ಹೇಳ್ತೇವೆ.
ಸಂಭೋಗ (Intercourse) ದ ನಂತ್ರ ಕಾಡುವ ತುರಿಕೆ (Itching) ಗೆ ಕಾರಣ :
ಲ್ಯಾಟೆಕ್ಸ್ (Latex) ಅಲರ್ಜಿ : ಲ್ಯಾಟೆಕ್ಸ್ ಅಲರ್ಜಿಯಿಂದಲೂ ಯೋನಿಯಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ. ಲ್ಯಾಟೆಕ್ಸ್ ಹೊಂದಿರುವ ಕಾಂಡೋಮ್ ಬಳಕೆ ಮಾಡಿದ ನಂತ್ರ ಅನೇಕರಿಗೆ ಯೋನಿಯಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ. ಈ ಸಮಯದಲ್ಲಿ ಲ್ಯಾಟೆಕ್ಸ್ ರಹಿತ ಕಾಂಡೋಮ್ ಬಳಕೆ ಅಥವಾ ಪರ್ಯಾಯ ವಿಧಾನ ಬಳಸಬೇಕು. ಮೊದಲು ನಿಮ್ಮ ಸಮಸ್ಯೆಗೆ ಲ್ಯಾಟೆಕ್ಸ್ ಕಾರಣವೇ ಎಂಬುದನ್ನು ಪತ್ತೆ ಮಾಡಿ, ನಂತ್ರ ಅದಕ್ಕೆ ಪರಿಹಾರ ಕಂಡುಕೊಳ್ಳಿ.
ಹೆರಿಗೆ ನಂತರ ಹೆಚ್ಚಿದ ತೂಕ ಇಳಿಸೋದು ಹೇಗೆ? ಯೋಚ್ನೆ ಬಿಡಿ ಇದನ್ನ ಟ್ರೈ ಮಾಡಿ
ಯೋನಿ ಶುಷ್ಕತೆ : ಅನೇಕ ಮಹಿಲೆಯರಿಗೆ ಯೋನಿ ಶುಷ್ಕತೆ ಸಮಸ್ಯೆ ಇರುತ್ತದೆ. ಸೆಕ್ಸ್ ನಂತ್ರ ಕಾಡುವ ತುರಿಕೆಗೆ ಇದು ಬಹಳ ಸಾಮಾನ್ಯ ಕಾರಣವಾಗಿದೆ. ಯೋನಿಯ ಚರ್ಮವು ಸಂಪೂರ್ಣವಾಗಿ ಒಣಗುತ್ತದೆ. ಯೋನಿ ಗೋಡೆಗಳನ್ನು ನಯಗೊಳಿಸಲು ಸಾಕಷ್ಟು ಲೂಬ್ರಿಕಂಟ್ ಉತ್ಪತ್ತಿಯಾಗದಿದ್ದಾಗ ಇದು ಸಂಭವಿಸುತ್ತದೆ. ಕೆಲವು ಜನರು ನೈಸರ್ಗಿಕವಾಗಿ ಒಣ ಚರ್ಮವನ್ನು ಹೊಂದಿರುತ್ತಾರೆ. ಎಸ್ಜಿಮಾದಂತಹ ಚರ್ಮ ಹೊಂದಿರುತ್ತಾರೆ. ಯೋನಿಯ ಅತಿಯಾದ ಸ್ವಚ್ಛತೆ, ಸೋಪ್ ಬಳಕೆ ಕೂಡ ಇದಕ್ಕೆ ಕಾರಣವಾಗುತ್ತದೆ. ಒಣ ಚರ್ಮವುಳ್ಳ ಮಹಿಲೆಯರಿಗೆ ಸೆಕ್ಸ್ ನಂತ್ರ ತುರಿಕೆ ಸಾಮಾನ್ಯ.
ಶಾಂಪೂ ಆದ್ಮೇಲೆ ಕಂಡೀಶನರ್ ಬಳಸಲೇಬೇಕಾ?
ಘರ್ಷಣೆ : ಸೆಕ್ಸ್ ಯೋನಿಗೆ ಕಿರಿಕಿರಿಯುಂಟು ಮಾಡಬಹುದು. ಲೂಬ್ರಿಕಂಟ್ ಕೊರತೆ ತುರಿಕೆ ಅಪಾಯವನ್ನು ಹೆಚ್ಚಿಸುತ್ತದೆ. ಋತುಬಂಧದ ಸಮಯದಲ್ಲಿ ಯೋನಿ ಲೂಬ್ರಿಕಂಟ್ ಉತ್ಪಾದನೆ ಕಡಿಮೆ ಮಾಡುತ್ತದೆ. ಆಗ ಸಮಸ್ಯೆ ಹೆಚ್ಚಾಗುತ್ತದೆ. ನೀವು ಮಾರುಕಟ್ಟೆಯಲ್ಲಿ ಸಿಗುವ ಲೂಬ್ರಿಕಂಟ್ ಬಳಕೆ ಮಾಡಬಹುದು. ಆದ್ರೆ ಅದು ಕೂಡ ಅಲರ್ಜಿ ಉಂಟುಮಾಡುವ ಸಾಧ್ಯತೆ ಇದ್ದು, ಪರೀಕ್ಷಿಸಿ ಬಳಕೆ ಮಾಡಿ.
ಬ್ಯಾಕ್ಟೀರಿಯಾದ ಯೋನಿನೋಸಿಸ್ : ಯೋನಿಯಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾದ ಬೆಳವಣಿಗೆಯು ಬ್ಯಾಕ್ಟೀರಿಯಾದ ಯೋನಿನೋಸಿಸ್ ಗೆ ಕಾರಣವಾಗಬಹುದು. ಇದು ತುರಿಕೆ ಮತ್ತು ವಾಸನೆಗೆ ಕಾರಣವಾಗುತ್ತದೆ. ಅಸುರಕ್ಷಿತ ಲೈಂಗಿಕತೆ ಇದಕ್ಕೆ ಮುಖ್ಯ ಕಾರಣ. ಕಾಂಡೋಮ್ ಧರಿಸದೆ ಲೈಂಗಿಕ ಕ್ರಿಯೆ ನಡೆಸಿದಾಗ ಬ್ಯಾಕ್ಟೀರಿಯಾ ಬೆಳವಣಿಗೆಯಾಗುವ ಅಪಾಯ ಹೆಚ್ಚಿರುತ್ತದೆ.
ವೀರ್ಯ ಅಲರ್ಜಿ : ಅನೇಕ ಮಹಿಳೆಯರ ಯೋನಿ ತುರಿಕೆಗೆ ಇದೂ ಒಂದು ಕಾರಣ. ವೀರ್ಯದಲ್ಲಿರುವ ಪ್ರೋಟೀನ್ ದೇಹದ ಯಾವುದೇ ಭಾಗದಲ್ಲಿ ಅಲರ್ಜಿಯ ಸಮಸ್ಯೆಗಳನ್ನು ಉಂಟುಮಾಡಬಹುದು. ವೀರ್ಯದೊಂದಿಗೆ ಸಂಪರ್ಕಕ್ಕೆ ಬರುವ ಅಂಗಗಳಲ್ಲಿ ಯೋನಿ, ಚರ್ಮ ಮತ್ತು ಬಾಯಿ ಸೇರಿವೆ. ದೈಹಿಕ ಸಂಪರ್ಕದ 10 ರಿಂದ 30 ನಿಮಿಷಗಳಲ್ಲಿ ಇದರ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಈ ಸಮಸ್ಯೆಗಳಿಂದ ದೂರ ಇರಬೇಕೆಂದ್ರೆ ನೀವು ಸಂಭೋಗದ ನಂತ್ರ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಬೇಕು. ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕು. ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವನೆ ಮಾಡಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.