ಲಂಬಾಣಿ ವೈದ್ಯೆಯನ್ನು ಕೊಂದೇ ಬಿಟ್ಟ ಸೈಫ್​ ಎಂಬ ಸೈತಾನ್​!

By Shobha MCFirst Published Feb 28, 2023, 4:40 PM IST
Highlights

ಜೀವನದಲ್ಲಿ ಹತ್ತು ಹಲವು ಕನಸು ಹೊತ್ತಿದ್ದ ಪ್ರೀತಿ ವೈದ್ಯೆಯಾಗಿ ಸೇವೆ ಸಲ್ಲಿಸುವ ಕನಸು ಕಾಣುತ್ತಿದ್ದಳು. ಸಮುದಾಯದಲ್ಲಿ ಅತ್ಯಂತ ಸುಶಿಕ್ಷಿತ ಕುಟುಂಬವಾದ ಪೋಷಕರೂ ಮಗಳ ಬಗ್ಗೆ ನೂರಾರು ಕನಸು ಕಂಡಿದ್ದರು. ಆದರೆ, ತೆಲಂಗಾಣದ ಈ ಡಾ.ಪ್ರೀತಿ ಸಾವಿಗೆ ಸೈಫ್​ ಮಾಡಿದ Ragging​ ಏನು ಗೊತ್ತಾ ?

-ಎಂ.ಸಿ.ಶೋಭಾ, ಏಷ್ಯಾನೆಟ್ ಸುವರ್ಣ ನ್ಯೂಸ್

ಆಕೆ ವಯಸ್ಸು 26 ವರ್ಷ. ಡಾಕ್ಟರ್ ಆಗಬೇಕೆಂಬ ಮಹಾದಾಸೆ ಹೊತ್ತ ಕನಸು ಕಂಗಳ ಯುವತಿ. ಲಂಬಾಣಿ ಸಮುದಾಯವೇ ಗರ್ವದಿಂದ ನೋಡುವಂತೆ ಮೆಡಿಕಲ್ ಓದಿ, ಅಪ್ಪ-ಅಮ್ಮನ ಬದುಕು ಸಾರ್ಥಕಗೊಳಿಸುವ ನೂರಾರು ಆಸೆ ಹೊತ್ತಿದ್ದ ‘ಪ್ರೀತಿ’ ಎಂಬ ಅರಳು ಗಣ್ಣಿನ ಹುಡುಗಿ, ಶವವಾಗಿಬಿಟ್ಟಿದ್ದಾಳೆ. ಆಕೆಯ ಕನಸುಗಳನ್ನು ನುಚ್ಚುನೂರುಗೊಳಿಸಿ, ಜೀವಂತ ಕೊಂದುಹಾಕಿದ್ದು ಹುಚ್ಚು ಪ್ರೇಮಿಯಲ್ಲ, ಗೆಳೆಯನಲ್ಲ. ಬದಲಾಗಿ, ಕಾಲೇಜಿನ ಸೀನಿಯರ್ ಎಂಬ ಸೈತಾನನ ಕಾಮದ ಆಸೆ. 

ವಾರಂಗಲ್​ನ ಕಾಕತೀಯ ಮೆಡಿಕಲ್ ಕಾಲೇಜು ಪಿಜಿ ಸ್ಟುಡೆಂಟ್​ ಡಾ. ಪ್ರೀತಿಧರಾವತ್ , ಕಳೆದ 3-4 ದಿನಗಳಿಂದ ಸುದ್ದಿಯಲ್ಲಿರೋ ಜೀವ. ಕಾಕತಿಯ ಮೆಡಿಕಲ್‌ ಕಾಲೇಜಿನಲ್ಲಿ ಅನಸ್ತೇಶಿಯಾ ವಿಭಾಗದಲ್ಲಿ ಪಿಜಿ ಓದುತ್ತಿದ್ದ ಡಾ. ಪ್ರೀತಿ ಪಾಲಿಗೆ ವಿಲನ್ ಆಗಿದ್ದು, ಅದೇ ವಿಭಾಗದ ಆಕೆಯ ಸೀನಿಯರ್ 27 ವರ್ಷದ ಮೊಹ್ಮದ್ ಸೈಫ್​. ಪ್ರೀತಿಗೆ ಕಾಲೇಜಿಗೆ ಎಂಟ್ರಿ ಆಗುತ್ತಿದ್ದಂತೆ, ಸೈಫ್​ ಕಾಮದ ಕಣ್ಣು ಪ್ರೀತಿ ಮೇಲೆ ಬಿದ್ದಿತ್ತು. ಯಾವ ಪರಿ ಆಕೆಯ ಬೆನ್ನು ಬಿದ್ದಿದ್ದ ಎಂದ್ರೆ, ಹೆಜ್ಜೆ, ಹೆಜ್ಜೆಗೂ ಕಾಡುತ್ತಿದ್ದ. Ragging ಹೆಸರಿನಲ್ಲಿ ಆಕೆಯನ್ನು ಇನ್ನಿಲ್ಲದಂತೆ ಕಾಡಿಬಿಟ್ಟ. ಫೋನ್​ ಸ್ವೀಕರಿಸಲೇಬೇಕು, ಮೆಸೇಜ್ ಮಾಡಲೇಬೇಕೆಂಬ ಕಟ್ಟಪ್ಪಣೆ ಸೈಫ್​ನದ್ದು. ಆತನ ಎಲ್ಲ ಹಿಂಸೆಯನ್ನೂ ಮೌನವಾಗಿಯೇ ಸಹಿಸಿಕೊಂಡಿದ್ದ ಪ್ರೀತಿಗೆ, ಇತ್ತೀಚಿಗೆ ಸೈಫ್​​ನ ಹೊಸ ಕಾಟ ತಲೆನೋವು ತಂದಿತ್ತು. ಲಂಬಾಣಿ ಸಮುದಾಯದ, ಬಡ ಮಧ್ಯಮ ವರ್ಗದ ಪ್ರೀತಿಗೆ ಯಾರ ಬೆಂಬಲವೂ ಇಲ್ಲ ಅನ್ನೋದು ಗೊತ್ತಿತ್ತು ಈ ಸೈಫ್‌ಗೆ. ಪ್ರೀತಿಯ ಮೇಲೆ ಕಣ್ಣು ಹಾಕಿದ್ದ. ಸೈಫ್​​ನ ಕಾಮದ ವಾಸನೆ ಅರಿತ ಪ್ರೀತಿ, ಆತನಿಂದ ದೂರವೇ ಇರಲು ಪ್ರಯತ್ನಿಸುತ್ತಿದ್ದಳು.

 

ಮದ್ವೆ ಅಂತ ಎಕ್ಸಾಂ ಮಿಸ್ ಮಾಡೋಕಾಗುತ್ತಾ..ಚಿಕ್ಕಂದಿನಲ್ಲೇ ವೈದ್ಯೆಯಾಗುವ ಕನಸು ಕಂಡಿದ್ದ ಕೇರಳದ ವಧು

ಆದ್ರೆ, ತನ್ನ ಆಸೆ ತೀರಿಸಲೇಬೇಕೆಂದು ಪ್ರೀತಿ ಬೆನ್ನು ಬಿದ್ದಿದ್ದ ಸೈಫ್., ಅದಕ್ಕಾಗಿ ದಿನ ದಿನವೂ ಹೊಸ ಹೊಸ ರೀತಿಯಲ್ಲಿ ಕಾಟ ತೊಡಗಿದ್ದ. ಕಳೆದ ಐದು ದಿನಗಳಿಂದ ಪ್ರೀತಿಯನ್ನು ಕಾಡಿದ್ದ ಸೈಫ್​, ತನ್ನಾಸೆ ತೀರಿಸಲೇಬೇಕೆಂದು ಪಟ್ಟು ಹಿಡಿದಿದ್ದು, ಇದಕ್ಕಾಗಿ ಡೆಡ್​ಲೈನ್ ಸಹ ಕೊಟ್ಟಿದ್ದಂತೆ. ಕೊನೆಗೆ ದಾರಿ ಕಾಣದೇ ಡೀನ್ ಡಾ.ನಾಗಾರ್ಜುನ್​ ರೆಡ್ಡಿ ಬಳಿ ತನ್ನ ಅಳಲು ತೋಡಿಕೊಂಡಿದ್ದಳು ಪ್ರೀತಿ. ಇಬ್ಬರನ್ನೂ ಕರೆದು ಮಾತುಕತೆ ನಡೆಸಿದ್ದ ಡೀನ್​, ಪ್ರೀತಿ ತಂಟೆಗೆ ಬಾರದಂತೆ ಸೈಫ್​ಗೆ ತಾಕೀತು ಮಾಡಿದ್ದರಂತೆ. ಡೀನ್​ಗೆ ದೂರು ಕೊಟ್ಟಿದ್ದರಿಂದ ಸೈಫ್​ ಇನ್ನಷ್ಟು  ಕೆರಳಿದ್ದ. ಈ ಬಗ್ಗೆ ಪ್ರೀತಿ, ತನ್ನ ತಾಯಿಗೆ ಕರೆ ಮಾಡಿ ಕಣ್ಣೀರಿಟ್ಟಿದ್ದಳು. ಆಕೆಯ ಆಡಿಯೋ ಸೋಷಿಯಲ್ ಮೀಡಿಯಾದಲ್ಲೀಗ ವೈರಲ್ ಆಗಿದೆ. ಸೈಫ್​ನಿಂದ ಬಚಾವಾಗುವುದು ಕಷ್ಟ ಎಂದು ಅರಿತ ಪ್ರೀತಿ, ತನ್ನ ಜೀವವನ್ನೇ ಕೊನೆಗಾಣಿಸಿಕೊಳ್ಳುವ ನಿರ್ಧಾರ ಮಾಡಿದ್ದಳು. 

ಐದು ದಿನದ ಹಿಂದೆ ಆತ್ಮಹತ್ಯೆಗೆ ಯತ್ನಿಸಿ, ತೀವ್ರವಾಗಿ ಅಸ್ವಸ್ಥಗೊಂಡಿದ್ದರು. 5 ದಿನಗಳ ಜೀವನ್ಮರಣ ಹೋರಾಟದ ನಂತರ ಚಿಕಿತ್ಸೆ ಫಲಿಸದೆ ನಿನ್ನೆ ಜೀವ ಬಿಟ್ಟಳು. ಡಾ. ಮೊಹ್ಮದ್​ ಸೈಫ್​ ಜೈಲು ಸೇರಿದ್ದಾನೆ. ಆದರೆ, ವೈದ್ಯೆಯಾಗಬೇಕೆಂಬ ಕನಸು ಹೊತ್ತು, ಹಳ್ಳಿಯಿಂದ ಸಿಟಿಗೆ ಬಂದಿದ್ದ ಲಂಬಾಣಿ ಸಮುದಾಯದ ಹುಡುಗಿಯೊಬ್ಬಳ ಬದುಕು ದುರಂತ ಅಂತ್ಯ ಕಂಡಿದೆ. ಪ್ರೀತಿ ತಂದೆ ನರೇಂದ್ರ ಅವರಿಗೆ ನಾಲ್ವರು ಮಕ್ಕಳು. ಮೂವರು ಹೆಣ್ಣು, ಒಬ್ಬ ಮಗ. ತಮ್ಮ ಮಕ್ಕಳು ಉನ್ನತ ವ್ಯಾಸಂಗ ಮಾಡಬೇಕೆಂಬ ಕನಸು ಹೊತ್ತಿದ್ದ ನರೇಂದ್ರ ದಂಪತಿ, ಕಷ್ಟ ಪಟ್ಟು ನಾಲ್ಕೂ ಮಕ್ಕಳನ್ನು ಓದಿಸಿದ್ರು. ಪ್ರೀತಿಯ ಸಹೋದರ ವಂಶಿ ಮೆಕಾನಿಕಲ್ ಎಂಜಿನಿಯರ್​ ಓದಿದ್ರೆ, ಹಿರಿಯ ಮಗಳು ಸಾಫ್ಟ್​ವೇರ್ ಎಂಜಿನಿಯರ್​, ಎರಡನೇ ಮಗಳು ಟೀಚರ್​. ಪ್ರೀತಿಗೆ ಚಿಕ್ಕಂದಿನಿಂದಲೇ ವೈದ್ಯಯಾಗಬೇಕೆಂಬ ಕನಸು. ಕಷ್ಟಪಟ್ಟು ಓದಿ ಮೆಡಿಕಲ್ ಸೀಟ್ ಗಿಟ್ಟಿಸಿದ್ದ ಪ್ರೀತಿಗೆ ಪಿಜಿ ಸೀಟ್ ಸಹ ಸಿಕ್ಕಿತ್ತು.

ವಿವಾಹ ವಾರ್ಷಿಕೋತ್ಸವಕ್ಕೆ ವಿಶ್ ಮಾಡಲು ಮರೆತ ಪತಿಗೆ ಹಿಗ್ಗಾ ಮುಗ್ಗಾ ಗೂಸ,ಪತ್ನಿ ವಿರುದ್ಧ ದೂರು!

ಇಡೀ ಸಮುದಾಯವೇ ಹೆಮ್ಮೆಪಡುವಂತಿದ್ದ ಪ್ರೀತಿಯ ಸಾವು, ಕುಟುಂಬವನ್ನು ತತ್ತರಿಸುವಂತೆ ಮಾಡಿದೆ. ಮಗಳು ಡಾಕ್ಟರ್ ಆಗಿಬಿಟ್ಟಳೆಂದು ಸಂಭ್ರಮಿಸುತ್ತಿದ್ದ ಮನೆಯಲ್ಲೀಗ ಸೂತಕ ಆವರಿಸಿದೆ. ನಿವೃತ್ತ ಜಡ್ಜ್ ಮೂಲಕ ತನಿಖೆ ನಡೆಸಿ, ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು, ಪ್ರೀತಿ ಸಾವಿಗೆ ಕಾರಣನಾದ ಸೈಫ್​ಗೆ ಕಠಿಣ ಶಿಕ್ಷೆಯಾಗಬೇಕೆಂದು ನರೇಂದ್ರ ದಂಪತಿ ಪಟ್ಟು ಹಿಡಿದಿದ್ದಾರೆ. ಬಾಳಿ ಬದುಕು ಬೇಕಾದ ತನ್ನ ಬದುಕನ್ನೇ ಸೈತಾನನಿಗೆ ಬಲಿಕೊಟ್ಟ ಪ್ರೀತಿ ಸುದ್ದಿ, ರಾಜಕಾರಣಿಗಳಿಗೆ ದಾಳವಾಗಿಟ್ಟಿದೆ. ಪ್ರೀತಿಯೆಂಬ ಕನಸುಗಣ್ಣಿನ ಯುವತಿಯನ್ನು ಬಲಿಪಡೆದ ಸೈತಾನ್​ ಜೈಲಿನಲ್ಲಿದೆ. 

ಪ್ರಭಾವ, ದುಡ್ಡಿನ ಎದುರು ಸೈತಾನ್​ ಗೆ ಶಿಕ್ಷೆಯಾಗುವುದೇ ಎಂದು ಪ್ರೀತಿಯ ಆತ್ಮನರಳುತ್ತಿದೆ..

click me!