ವರ್ಕ್ ಫ್ರಮ್ ರ್‍ಯಾಪಿಡೋ, ಬೆಂಗಳೂರು ಟ್ರಾಫಿಕ್​ನಲ್ಲಿ ಸ್ಕೂಟಿಯಲ್ಲೇ ಕುಳಿತು ಕೆಲಸ ಮಾಡಿದ ಮಹಿಳೆ!

By Vinutha PerlaFirst Published May 19, 2023, 3:12 PM IST
Highlights

ವರ್ಕ್ ಫ್ರಂ ಹೋಮ್ ಆಪ್ಶನ್ ಬಂದ್ಮೇಲೆ ಜನ್ರು ಮದುವೆ ಮನೆ, ಹಾಸ್ಪಿಟಲ್, ಹೊಟೇಲ್ ಮೊದಲಾದ ಸ್ಥಳಗಳಿಂದ ವರ್ಕ್ ಮಾಡೋದು ಕಾಮನ್ ಆಗಿದೆ. ಹಾಗೆಯೇ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್​ನಲ್ಲೇ ಮಹಿಳೆಯೊಬ್ಬರು ಲ್ಯಾಪ್ ಟಾಪ್​ ಓಪನ್​ ಕೆಲಸ ಮಾಡುತ್ತಿರುವ ಫೋಟೋ ವೈರಲ್ ಆಗಿದೆ.

ಕಳೆದ 3 ವರ್ಷಗಳಿಂದ ಕೋವಿಡ್-19 ಬಂದಾಗಿನಿಂದ ಹಲವರಿಗೆ ವರ್ಕ್‌ ಫ್ರಂ ಹೋಮ್‌ ಮುಂದುವರಿದಿದೆ. ಈ ಹಿನ್ನೆಲೆ ಕೆಲವರು ಬಾಸ್‌ ಕಿರಿಕಿರಿ ಇಲ್ಲದೆ ತಮಗೆ ಇಷ್ಟ ಬಂದ ಸಮಯದಲ್ಲಿ ಕೆಲಸ ಮಾಡ್ತಿರುತ್ತಾರೆ. ಮಿಕ್ಕಿದ ಟೈಮಲ್ಲಿ ಆರಾಮಾಗಿ ಓಡಾಡ್ತಾ ಇರ್ತಾರೆ. ಆದರೆ, ಹಲವರು ಕೆಲಸವನ್ನು ತುಂಬಾ ಸೀರಿಯಸ್ಸಾಗೇ ತಗೊಂಡಿರ್ತಾರೆ. ಅದು ಯಾವ ಹಂತಕ್ಕೆ ಅಂದ್ರೆ ಹೋದಲ್ಲಿ, ಬಂದಲ್ಲಿ ಎಲ್ಲಾ ಕಡೆನೂ ಕೆಲ್ಸಾನೆ. ಎಲ್ಲಿಂದ, ಹೇಗೆ ಕೆಲಸ ಮಾಡುತ್ತೀರಿ ಎನ್ನುವುದು ನಮಗೆ ಮುಖ್ಯ ಅಲ್ಲವೇ ಅಲ್ಲ. ಕೆಲಸ ಮಾತ್ರ ಮುಖ್ಯ ಎನ್ನುವುದು ಈಗಿನ ಕಾರ್ಪೋರೇಟ್​ ಕಂಪೆನಿಗಳ ಪಾಲಿಸಿ. ಹೀಗಾಗಿಯೇ ಕೆಲ ಉದ್ಯೋಗಿಗಳು ಮದುವೆ ಮನೆಯಿಂದ, ಥಿಯೇಟರ್‌ನಿಂದ ವರ್ಕ್‌ ಮಾಡ್ತಾರೆ. ಅಂಥ ವೀಡಿಯೋಗಳು ಸಾಕಷ್ಟ ವೈರಲ್ ಸಹ ಆಗ್ತವೆ. ಸದ್ಯ ಸಿಲಿಕಾನ್ ಸಿಟಿಯ ಅಂಥಹದ್ದೇ ಒಂದ ವಿಡಿಯೋ ವೈರಲ್ ಆಗ್ತಿದೆ.

ಬೆಂಗಳೂರಿನಲ್ಲಿ ಟ್ರಾಫಿಕ್​ ಜಾಮ್​ ಆಗುವ ವಿಚಾರ ಹೊಸದೇನಲ್ಲ. ವಿಶ್ವದ 2ನೇ ಟ್ರಾಫಿಕ್​ ಜಾಮ್​ ನಗರಿ ಎನ್ನುವ ಕುಖ್ಯಾತಿಗೆ ಬೆಂಗಳೂರು ಪಾತ್ರವಾಗಿದೆ. ಇಂಥಾ ಟ್ರಾಫಿಕ್‌ನಲ್ಲಿ ಸಿಲುಕಿಯೇ ಅದೆಷ್ಟೋ ಮಂದಿ ಸಮಯಕ್ಕೆ ಸರಿಯಾಗಿ ತಲುಪಬೇಕಾದ ಜಾಗಕ್ಕೆ (Place) ತಲುಪಲಾಗದೆ ಒದ್ದಾಡುತ್ತಾರೆ. ಲಾಗಿನ್ ಟೈಮ್‌, ಫಂಕ್ಷನ್ ಎಲ್ಲಾ ಮಿಸ್ ಮಾಡಿಕೊಳ್ಳುತ್ತಾರೆ. ಹೀಗೆಯೇ ಟ್ರಾಫಿಕ್ ಜಾಮ್​ನಲ್ಲಿ ಸಿಕ್ಕಾಕೊಂಡ ಮಹಿಳೆ (Woman)ಯೊಬ್ಬರು ಲ್ಯಾಪ್ ಟಾಪ್​ ಓಪನ್​ ಕೆಲಸ ಮಾಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ (Social media) ವೈರಲ್ ಆಗಿದೆ.

Latest Videos

Work from mandap: ಮದ್ವೆ ದಿನವೂ ಲ್ಯಾಪ್‌ಟಾಪ್ ಹಿಡಿದು ಕೆಲಸ ಮಾಡಿದ ವರ !

ಕೋರಮಂಗಲ ಔಟರ್​ ರಿಂಗ್​ರೋಡ್​ನಲ್ಲಿ ನಡೆದಿರೋ ಘಟನೆ
ಟ್ರಾಫಿಕ್ ಜಾಮ್ ಆದಾಗ ಕೆಲವರು ಬಸ್ಸಿನೊಳಗೆ, ಕಾರಿನೊಳಗೆ ಕುಳಿತು ಕೆಲಸ ಮಾಡುತ್ತಾರೆ. ಆದರೆ ಈ ವಿಡಿಯೋದಲ್ಲಿ ರ್‍ಯಾಪಿಡೋ ಬೈಕ್​ ಹಿಂದೆ ಕುಳಿತು ಮಹಿಳೆ ಕೆಲಸ (Work) ಮಾಡುವುದನ್ನು ನೋಡಬಹುದು. ಈ ಮಹಿಳೆಯ ಫೋಟೋ ಇದೀಗ ನೆಟ್ಟಿಗರ ಗಮನ ಸೆಳೆದಿದೆ. ಕೋರಮಂಗಲ ಔಟರ್​ ರಿಂಗ್​ರೋಡ್​ನ ಟ್ರಾಫಿಕ್​ನಲ್ಲಿ ಈ ವಿಡಿಯೋ ಸೆರೆಹಿಡಿಯಲಾಗಿದೆ. ನಿಹಾರ್ ಲೋಹಿಯಾ ಎನ್ನುವವರು ಇದನ್ನು ಟ್ವೀಟ್ ಮಾಡಿದ್ದಾರೆ. ವೈರಲ್ ಆದ ಈ ವೀಡಿಯೋಗೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.

ಕೋರಮಂಗಲದ ಔಟರ್​ ರಿಂಗ್​ರೋಡ್​​ನ ಇಬ್ಬಲೂರು ಸರ್ವೀಸ್​ ರಸ್ತೆಯ ಮಿಲಿಟರಿ ಗೇಟ್​ ಬಳಿ ಮರ ಬಿದ್ದಿದ್ದರಿಂದ ಈ ರಸ್ತೆಯಲ್ಲಿ ಸಂಚಾರದಟ್ಟಣೆ (Traffic Jam) ಉಂಟಾಗಿದೆ ಎಂದು ಪೊಲೀಸ್ ಉಪ ಕಮಿಷನರ್​ ಸುಜೀತಾ ಸಲ್ಮಾನ್​ ಈ ಟ್ವೀಟ್​ಗೆ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ಪರ್ಯಾಯ ಮಾರ್ಗದಲ್ಲಿ ಚಲಿಸುವಂತೆ ವಿನಂತಿಸಿಕೊಂಡಿದ್ದಾರೆ.

ಮನೆಯಿಂದ ಕೆಲಸ ಮಾಡಿ ಬೋರಾಯ್ತಾ... ಇನ್ಮೇಲೆ ಬಾರಲ್ಲೂ ಕೂತು ಕೆಲ್ಸ ಮಾಡ್ಬಹುದು ನೋಡಿ

ನೆಟ್ಟಿಗರಿಂದ ನಾನಾ ರೀತಿಯ ಕಾಮೆಂಟ್
ವೈರಲ್​ ಆದ ಫೋಟೋವನ್ನು ಕೋರಮಂಗಲ ಮತ್ತು ಅಗರ ಹೊರ ವರ್ತುಲ ರಸ್ತೆಯಲ್ಲಿ ತೆಗೆಯಲಾಗಿದೆ ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಕೋರಮಂಗಲ ಮತ್ತು ಅಗರ ರಸ್ತೆ ಸಂಚಾರ ಅವ್ಯವಸ್ಥೆಗೆ ಹೆಸರುವಾಸಿ ಆಗಿದೆ. ಒಬ್ಬ ಬಳಕೆದಾರರು 'ಈ ಮಹಿಳೆ ಬೈಕ್​ ಮೇಲೂ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ ಎಂದರೆ ಆಕೆಯ ಕೆಲಸದ ಒತ್ತಡ ಎಷ್ಟಿರಬಹುದು ಯೋಚಿಸಿ' ಎಂದು ಕಮೆಂಟಿಸಿದ್ದಾರೆ. 'ಒತ್ತಡಗಳ ಮಧ್ಯೆ ನೀವು ದಿನಕ್ಕೆ 10 ಗಂಟೆಗಳಿಗೂ ಅಧಿಕ ಕಾಲ ಕೆಲಸ ಮಾಡುವುದು ಭಯಾನಕ' ಎಂದು ಇನ್ನೊಬ್ಬರು ತಿಳಿಸಿದ್ದಾರೆ. ಅದೇನೆ ಇರ್ಲಿ, ಕೆಲಸದ ಒತ್ತಡಕ್ಕೆ ಜನರು ಟ್ರಾಫಿಕ್‌ನಲ್ಲೂ ಕೆಲಸ ಮಾಡುವುದಕ್ಕೆ ಕಾರಣವಾಗ್ತಿರೋದು ವಿಪರ್ಯಾಸವೇ ಸರಿ.

Peak Bangalore moment. Women working on a rapido bike ride to the office. pic.twitter.com/bubbMj3Qbs

— Nihar Lohiya (@nihar_lohiya)
click me!