ಕಾಂಡೋಮ್ ಅಲರ್ಜಿ ಆಗ್ತಿದ್ಯಾ? ಬೆಸ್ಟ್ ಪರಿಹಾರೋಪಾಯಗಳು ಇಲ್ಲಿವೆ!

By Suvarna NewsFirst Published Feb 19, 2024, 1:31 PM IST
Highlights

ಸೆಕ್ಸ್ ದಂಪತಿಯನ್ನು ಮತ್ತಷ್ಟು ಹತ್ತಿರಕ್ಕೆ ತರುತ್ತದೆಯಾದ್ರೂ ಲೈಂಗಿಕ ರೋಗ ಮಹಿಳೆಯರಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಅದ್ರಿಂದ ತಪ್ಪಿಸಿಕೊಳ್ಳಲು ಕಾಂಡೋಮ್ ಬಳಸುವಂತೆ ಸಲಹೆ ನೀಡಲಾಗುತ್ತದೆ. ಆದ್ರೆ ಈ ಕಾಂಡೋಮ್ ತೊಂದ್ರೆ ನೀಡಿದ್ರೆ ಏನ್ ಮಾಡೋದು?
 

ಲೈಂಗಿಕ ಸುರಕ್ಷತೆಗೆ ಕಾಂಡೋಮ್ ಅತ್ಯಗತ್ಯ. ಎಚ್ ಐವಿ ಸೇರಿದಂತೆ ಲೈಂಗಿಕವಾಗಿ ಹರಡುವ ರೋಗಗಳ  ಅಪಾಯವನ್ನು ಇದು ಕಡಿಮೆ ಮಾಡುತ್ತದೆ. ಲೈಂಗಿಕ ರೋಗವನ್ನು ನಿಯಂತ್ರಿಸುವ ಜೊತೆಗೆ ಅನಗತ್ಯ ಗರ್ಭಧಾರಣೆ ತಡೆಯಲು ಇದನ್ನು ಬಳಕೆ ಮಾಡಬೇಕು. ಕಾಂಡೋಮ್ ಹೇಗೆ ಬಳಸಬೇಕು ಎಂಬ ವಿಷ್ಯ ತಿಳಿದಿರಬೇಕು. ಕಾಂಡೋಮನ್ನು ಪ್ರತಿ ಬಾರಿ ಲೈಂಗಿಕ ಚಟುವಟಿಕೆ ನಡೆಸುವಾಗ್ಲೂ ಬಳಸಬೇಕಾಗುತ್ತದೆ. ಕಾಂಡೋಮ್, ಅನೇಕ ರೋಗಗಳಿಂದ ರಕ್ಷಣೆ ನೀಡುತ್ತದೆ ಆದ್ರೂ ಕೆಲ ಮಹಿಳೆಯರಿಗೆ ಅದರಿಂದಲೇ ಸಮಸ್ಯೆ ಉಂಟಾಗುತ್ತದೆ. 

ಕೆಲ ಮಹಿಳೆಯರು ಕಾಂಡೋಮ್ (Condom) ಬಳಕೆ ನಂತ್ರ ಅಲರ್ಜಿ ಸಮಸ್ಯೆ ಎದುರಿಸುತ್ತಾರೆ. ಕಾಂಡೋಮ್‌ಗಳ ನೈಸರ್ಗಿಕ ರಬ್ಬರ್‌ನಲ್ಲಿ ಲ್ಯಾಟೆಕ್ಸ್ ಇರುತ್ತದೆ. ಲ್ಯಾಟೆಕ್ಸ್ (Latex) ಪ್ರೋಟೀನ್ಗಳನ್ನು ಹೊಂದಿರುತ್ತದೆ, ಇದು ಅಲರ್ಜಿಯನ್ನು ಉಂಟುಮಾಡಬಹುದು. ಲ್ಯಾಟೆಕ್ಸ್ ಉತ್ಪನ್ನವನ್ನು ಪದೇ ಪದೇ ಬಳಕೆ ಮಾಡಿದಾಗ ಹಾಗೂ ಯೋನಿ (Vagina) ಲೋಳೆ ಇದಕ್ಕೆ ಬೇಗ ಪ್ರತಿಕ್ರಿಯೆ ನೀಡುವ ಕಾರಣ ಸಮಸ್ಯೆ ಬೇಗ ಉಲ್ಬಣಗೊಳ್ಳುತ್ತದೆ. ಲ್ಯಾಟೆಕ್ಸ್ ಅಲರ್ಜಿಯನ್ನು ಹೊಂದಿರುವ ಮಹಿಳೆಗೆ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಆದ್ರೆ ಈ ಕಾರಣಕ್ಕೆ ಕಾಂಡೋಮ್ ಬಳಕೆ ನಿಲ್ಲಿಸೋದು ಸೂಕ್ತವಲ್ಲ. ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು.

ಗರ್ಭಾವಸ್ಥೆಯನ್ನು ನೀವು ಮಾಡೋ ಈ ತಪ್ಪು ಮಕ್ಕಳಲ್ಲಿ ಹೃದ್ರೋಗದ ಅಪಾಯ ಹೆಚ್ಚಿಸುತ್ತೆ

ಲ್ಯಾಟೆಕ್ಸ್ ಅಲರ್ಜಿಯೇ ಎಂಬುದನ್ನು ಹೀಗೆ ಪತ್ತೆ ಮಾಡಿ : 

ಇದು ಕಾರಣ : ಕಾಂಡೋಮ್ ಬಳಸಿದ ನಂತ್ರ ಯೋನಿ ಪ್ರದೇಶದಲ್ಲಿ ಉರಿ, ತುರಿಕೆ, ಊತ ಅಥವಾ ದದ್ದು ಕಾಣಿಸಿಕೊಳ್ಳುತ್ತಿದ್ದರೆ ನಿಮಗೆ ಲ್ಯಾಟೆಕ್ಸ್ ಅಲರ್ಜಿ ಇದೆ ಎಂದರ್ಥ.  ಲ್ಯಾಟೆಕ್ಸ್ ಮಾತ್ರವಲ್ಲ ಕಾಂಡೋಮ್ ನಲ್ಲಿರುವ ಇತರ ಪದಾರ್ಥ ಕೂಡ ಅಲರ್ಜಿಗೆ ಕಾರಣವಾಗಿರಬಹುದು. ಹಾಗಾಗಿ ವೈದ್ಯರನ್ನು ಭೇಟಿಯಾಗಿ ಸೂಕ್ತ ಕಾರಣ ತಿಳಿದುಕೊಳ್ಳುವುದು ಮುಖ್ಯ.

ಪರ್ಯಾಯ ವಸ್ತು : ಲ್ಯಾಟೆಕ್ಸ್‌ಗೆ ಅಲರ್ಜಿ ಇದ್ದರೆ, ಪಾಲಿಯುರೆಥೇನ್, ಪಾಲಿಸೊಪ್ರೆನ್ ಅಥವಾ ಲ್ಯಾಂಬ್‌ಸ್ಕಿನ್ ಕಾಂಡೋಮ್‌ಗಳಂತಹ ಪರ್ಯಾಯ ಕಾಂಡೋಮ್  ಬಳಸಬಹುದು. ಇವು ಕೂಡ ಲೈಂಗಿಕವಾಗಿ ಹರಡುವ ಸೋಂಕುಗಳು ಮತ್ತು ಅನಪೇಕ್ಷಿತ ಗರ್ಭಧಾರಣೆಗೆ ರಕ್ಷಣೆ ನೀಡುತ್ತವೆ. 

ಖರೀದಿ ಮೊದಲು ಲೇಬಲ್ ಓದಿ : ನೀವು ಕಾಂಡೋಮ್ ಖರೀದಿ ಅಥವಾ ಬಳಕೆ ಮೊದಲು ಅದ್ರಲ್ಲಿ ಯಾವೆಲ್ಲ ಅಂಶವಿದೆ ಎಂಬುದನ್ನು ಪತ್ತೆ ಮಾಡಿ. ಲ್ಯಾಟೆಕ್ಸ್ ಇದೆಯೇ ಎಂಬುದನ್ನು ತಿಳಿಯಿರಿ. ನಿಮಗೆ ಅದು ಅಲರ್ಜಿಯುಂಟು ಮಾಡ್ತಿದ್ದರೆ ಬ್ರ್ಯಾಂಡ್ ಬದಲಿಸಿ.

ಪ್ರಯೋಗ : ಎಲ್ಲ ಬ್ರ್ಯಾಂಡ್ ನಲ್ಲಿ ಒಂದೇ ಪ್ರಮಾಣದಲ್ಲಿ ಲ್ಯಾಟೆಕ್ಸ್ ಇರೋದಿಲ್ಲ. ಹಾಗಾಗಿ ನೀವು ಬೇರೆ ಬೇರೆ ಬ್ರ್ಯಾಂಡ್ ಖರೀದಿಸಿ ಪ್ರಯೋಗ ಮಾಡಿ. ಯಾವುದು ನಿಮಗೆ ಅಲರ್ಜಿ ಸಮಸ್ಯೆ ಉಂಟುಮಾಡುವುದಿಲ್ಲವೋ ಆ ಬ್ರ್ಯಾಂಡ್ ಕಾಂಡೋಮ್ ಬಳಕೆ ಶುರುಮಾಡಿ. 

ಬೇರೆ ವಿಧಾನ : ಕಾಂಡೋಮ್ ಸಂಪೂರ್ಣ ನಿಮಗೆ ಸಮಸ್ಯೆ ನೀಡುತ್ತಿದ್ದೆ ಎಂದಾದ್ರೆ ಕೊನೆಯ ಆಯ್ಕೆಯಾಗಿ ನೀವು ಬೇರೆ ವಿಧಾನಗಳನ್ನು ಅನುಸರಿಸಬಹುದು. ಮೌಖಿಕ ಗರ್ಭನಿರೋಧಕಗಳು, ಗರ್ಭಾಶಯದ ಸಾಧನಗಳು, ಗರ್ಭನಿರೋಧಕ ಇಂಪ್ಲಾಂಟ್‌ಗಳು ಅಥವಾ ಡಯಾಫ್ರಾಮ್‌ಗಳಂತಹ ರಕ್ಷಣೆಯ ಇತರ ಸಾಧನೆ ಬಳಕೆ ಮಾಡಬಹುದು. ಆದ್ರೆ ಇವು ಕಾಂಡೋಮ್ ನಂತೆ ಎಸ್ ಐಟಿ ವಿರುದ್ಧ ರಕ್ಷಣೆ ನೀಡೋದಿಲ್ಲ.

ಸಂಗಾತಿ ಜೊತೆ ಮಾತುಕತೆ : ಕಾಂಡೋಮ್ ಅಲರ್ಜಿಯಾಗ್ತಿದ್ದರೆ ಸಂಗಾತಿ ಬಗ್ಗೆ ಮಾತುಕತೆ ನಡೆಸುವುದು ಮುಖ್ಯ. ಈ ಬಗ್ಗೆ ಇಬ್ಬರು ಮಾತನಾಡಿ ಪರಿಹಾರ ಕಂಡುಕೊಳ್ಳಬೇಕು. ಅಲರ್ಜಿಯನ್ನು ನಿರ್ಲಕ್ಷ್ಯ ಮಾಡಿದ್ರೆ ಸಮಸ್ಯೆ ದೊಡ್ಡದಾಗುವ ಸಾಧ್ಯತೆ ಇರುತ್ತದೆ. 

ಕ್ಯಾನ್ಸರ್ ಚಿಕಿತ್ಸೆಗಾಗಿ ದೂರವಿದ್ದ ಅಜ್ಜಿ ಕಂಡು ಬಿಕ್ಕಿ ಬಿಕ್ಕಿ ಅತ್ತ ಮೊಮ್ಮಗ; ನಿಷ್ಕಲ್ಮಶ ಪ್ರೀತಿಗೆ ನೆಟ್ಟಿಗರ ಕಣ್ಣೀರು

ವೈದ್ಯರ ಸಲಹೆ : ನೀವು ಯಾವುದೇ ಹೊಸ ಬದಲಾವಣೆ ಮಾಡಿದ್ರೂ, ಸಮಸ್ಯೆ ಕಾಡ್ತಿದೆ ಎಂದಾಗ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ಅವರು ರೋಗಲಕ್ಷಣ ಪತ್ತೆ ಮಾಡಿ, ಚಿಕಿತ್ಸೆ ನೀಡುತ್ತಾರೆ. 

click me!