
ಅಡುಗೆ ಮನೆ (Kitchen) ಯಲ್ಲಿರುವ ಪ್ರತಿಯೊಂದು ವಸ್ತುಗಳೂ ಮಹತ್ವ ಪಡೆಯುತ್ತವೆ. ಕಿಚನ್ ನಲ್ಲಿರುವ ಅನೇಕ ವಸ್ತುಗಳನ್ನು ಮನೆ (Home) ಯ ಬೇರೆ ಕೆಲಸ (Work) ಕ್ಕೆ ಕೂಡ ನಾವು ಬಳಸ್ತೇವೆ. ಉದಾಹರಣೆಗೆ ಅಡುಗೆ ಮನೆಯಲ್ಲಿರುವ ಕತ್ತರಿ, ಚಾಕು ಸೇರಿದಂತೆ ಶುಂಠಿ, ಅರಿಶಿನದ ಜೊತೆ ನಿಂಬೂ ಕೂಡ ಇದ್ರಲ್ಲಿ ಸೇರಿದೆ. ಅಡುಗೆ ಮನೆಯಲ್ಲಿರುವ ನಿಂಬೆ (Lemon) ಹಣ್ಣು ಕೇವಲ ಅಡುಗೆ ರುಚಿಯನ್ನು ಹೆಚ್ಚಿಸುವುದಿಲ್ಲ. ಔಷಧಿಗೂ ನಿಂಬೆ ಹಣ್ಣನ್ನು ಬಳಸ್ತೇವೆ. ಇದ್ರ ಹೊರತಾಗಿಯೂ ನಿಂಬೆ ಹಣ್ಣನ್ನು ಕಲೆಗಳನ್ನು ತೆಗೆದು, ಸ್ವಚ್ಛಗೊಳಿಸಲು ಸಹ ಬಳಸಲಾಗುತ್ತದೆ. ಹೌದು, ನಿಂಬೆ ಹಣ್ಣನ್ನು ಬಳಸಿ ನಾವು ಅನೇಕ ಕಲೆಗಳನ್ನು ತೆಗೆಯಬಹುದು. ಮನೆಯನ್ನು ಸ್ವಚ್ಛವಾಗಿಡಲು ನಿಂಬೆ ಸಹಕಾರಿ. ಇದು ನಿಂಬೆ ಹಣ್ಣಿನ ಪ್ರಯೋಜನಗಳ ಬಗ್ಗೆ ನಾವು ಹೇಳ್ತೇವೆ.
ನಿಂಬೆ ಹಣ್ಣಿನಲ್ಲಿದೆ ಸ್ವಚ್ಛತೆಯ ಗುಣ :
ತರಕಾರಿಗಳ ಸ್ವಚ್ಛತೆ : ತರಕಾರಿಗಳನ್ನು ಬೆಳೆಯುವಾಗ ರಾಸಾಯನಿಗಳನ್ನು ಬಳಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ತರಕಾರಿ ಹಾಗೂ ಹಣ್ಣುಗಳು ಬೇಗ ಬಳಕೆಗೆ ಬರಲಿ ಹಾಗೂ ಅನೇಕ ದಿನವಿರಲಿ ಎನ್ನುವ ಕಾರಣಕ್ಕೆ ರಾಸಾಯನಿಕಗಳನ್ನು ಹಾಕಲಾಗುತ್ತದೆ. ಅನೇಕ ತರಕಾರಿಗಳ ಮೇಲೆ ಇದು ನಮಗೆ ಕಾಣುತ್ತದೆ. ಇದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಮಾರುಕಟ್ಟೆಯಿಂದ ತಂದ ತರಕಾರಿಯನ್ನು ಹಾಗೆಯೇ ಬಳಕೆ ಮಾಡ್ಬೇಡಿ. ಮೊದಲು ಸ್ವಲ್ಪ ಬಿಸಿನೀರನ್ನು ತಯಾರಿಸಿ. ಅದರಲ್ಲಿ 2 ಹನಿ ನಿಂಬೆ ರಸವನ್ನು ಸೇರಿಸಿ ತರಕಾರಿಗಳನ್ನು ನೆನೆಸಿಡಿ. ಸ್ವಲ್ಪ ಸಮಯದ ನಂತ್ರ ತರಕಾರಿಯನ್ನು ತೊಳೆದಿಡಿ. ನಿಂಬೆ ರಸ, ತರಕಾರಿ ಮೇಲಿರುವ ಕೆಮಿಕಲ್ ತೆಗೆಯುತ್ತದೆ.
ನಿಮ್ಮ ಹುಡ್ಗಿ ಮುಂದೆ ಹೀಗೆಲ್ಲ ಮಾತಾಡ್ಬೇಡಿ ಸ್ವಾಮೀ.. ಬಿಟ್ ಹೋದಾಳು!
ಅಡುಗೆ ಮನೆಯ ನೆಲದ ಮೇಲಿರುವ ಕಲೆ : ಅಡುಗೆ ಮಾಡುವಾಗ ಕಲೆಯಾಗುವುದು ಸಾಮಾನ್ಯ. ಅಡಿಗೆ ನೆಲದ ಮೇಲೆ ಬೀಳುತ್ತವೆ. ಕೆಲವೊಂದು ಪದಾರ್ಥ ಸ್ವಚ್ಛಗೊಳಿಸಿದ ನಂತರವೂ ಹೋಗುವುದಿಲ್ಲ. ನೆಲದ ಮೇಲಿರುವ ಕಲೆಯನ್ನು ನೀವು ನಿಂಬೆ ಸಹಾಯದಿಂದ ತೆಗೆಯಬಹುದು. ನೆಲದ ಸ್ವಚ್ಛತೆಗೆ ನಿಂಬೆ ರಸ ಬಳಸಿದ್ರೆ ಅಡುಗೆಮನೆಯಲ್ಲಿ ಸೊಳ್ಳೆ ನೊಣಗಳು ಕಡಿಮೆಯಾಗುತ್ತವೆ. ಕಲೆ ತೆಗೆಯಲು ಎರಡು ಟೀ ಚಮಚ ನಿಂಬೆ ರಸಕ್ಕೆ ಸ್ವಲ್ಪ ವಿನೆಗರ್ ಸೇರಿಸಿ ಮಿಕ್ಸ್ ಮಾಡಿ. ಕಲೆಯಾದ ಜಾಗಕ್ಕೆ ದ್ರಾವಣವನ್ನು ಸಿಂಪಡಿಸಿ ಮತ್ತು ಸ್ವಲ್ಪ ಸಮಯದ ನಂತರ ಅದನ್ನು ಸ್ವಚ್ಛಗೊಳಿಸಿ. ಇದ್ರಿಂದ ನೆಲದ ಮೇಲಿರುವ ಕಲೆ ಮಾಯವಾಗುತ್ತದೆ.
ಅಡುಗೆ ಮನೆಯ ಬಟ್ಟೆ : ಅಡುಗೆ ಮನೆ ಸ್ವಚ್ಛಗೊಳಿಸಲು ಪ್ರತ್ಯೇಕ ಬಟ್ಟೆಯನ್ನಿಟ್ಟಿರಬೇಕು. ಆ ಬಟ್ಟೆಯನ್ನು ಬೇರೆ ಸ್ಥಳಗಳ ಸ್ವಚ್ಛತೆಗೆ ಬಳಸಬಾರದು. ಅಡುಗೆ ಮನೆಯ ನೆಲದ ಮೇಲಾಗಿರುವ ಕಲೆ ತೆಗೆಯಲು ಹೋದಾಗ ಬಟ್ಟೆ ಕೂಡ ಕೊಳಕಾಗುತ್ತದೆ. ಬಟ್ಟೆಯ ಅಲ್ಲಲ್ಲಿ ಕಲೆಯನ್ನು ನಾವು ನೋಡ್ಬಹುದು. ನಿಂಬೆ ಸಹಾಯದಿಂದ ನೀವು ಬಟ್ಟೆಯನ್ನು ಸ್ವಚ್ಛಗೊಳಿಸಬಹುದು. ಬಿಸಿ ನೀರಿಗೆ 2 ಚಮಚ ನಿಂಬೆ ರಸ ಹಾಕಿ. 5-10 ನಿಮಿಷಗಳ ಕಾಲ ಅದರಲ್ಲಿ ಕೊಳಕು ಬಟ್ಟೆಗಳನ್ನು ಹಾಕಿ ನೆನೆಸಿಡಬೇಕು. ನಂತರ ಬಟ್ಟೆಯನ್ನು ಕೈಯಿಂದ ಉಜ್ಜಬೇಕು. ಹೀಗೆ ಮಾಡಿದ್ರೆ ಬಟ್ಟೆ ಸ್ವಚ್ಛವಾಗುತ್ತದೆ. ಇದ್ರಿಂದ ಬಟ್ಟೆಯ ಕಲೆ ಹೋಗುವುದು ಮಾತ್ರವಲ್ಲ ಅದ್ರಲ್ಲಿರುವ ಬ್ಯಾಕ್ಟೀರಿಯಾ ಕೂಡ ಮಾಯವಾಗುತ್ತದೆ.
ತುಕ್ಕು ಮಾಯ : ಪಾತ್ರೆಗಳನ್ನು ಸ್ವಚ್ಛಗೊಳಿಸುವಾಗ ಕೊಳಕು ಸಂಗ್ರಹವಾಗುವುದರಿಂದ ಕಬ್ಬಿಣದ ವಸ್ತುಗಳಿಗೆ ತುಕ್ಕು ಹಿಡಿಯುತ್ತದೆ. ಇದರಿಂದಾಗಿ ಇಡೀ ಅಡುಗೆಮನೆಯ ಸೌಂದರ್ಯ ಹಾಳಾಗುತ್ತದೆ. ಇದಕ್ಕಾಗಿ, ನೀವು ನಿಂಬೆ ರಸವನ್ನು ತುಕ್ಕು ಹಿಡಿದ ಜಾಗಕ್ಕೆ ಹಚ್ಚಿ ಸ್ವಲ್ಪ ಸಮಯ ಹಾಗೆ ಬಿಡಿ. ನಂತ್ರ ಸ್ವಚ್ಛಗೊಳಿಸಿದ್ರೆ ತುಕ್ಕು ಮಾಯವಾಗುತ್ತದೆ.
ಮುಟ್ಟು ಬರದಂತೆ ತಡೆಯಲು ಹೋಗಿ ಸಾವಿನ ಅಪಾಯ ತಂದುಕೊಳ್ತಿದ್ದಾರೆ ಮಹಿಳೆಯರು !
ಗೋಡೆ ಕಲೆ : ಅಡುಗೆಮನೆಯಲ್ಲಿ ಆಹಾರ ತಯಾರಿಸುವಾಗ ಅಡುಗೆಮನೆಯ ಗೋಡೆಗಳು, ಗ್ಯಾಸ್ ಒಲೆ ಮೇಲೆ ಕಲೆಗಳಾಗುತ್ತವೆ. ಅವುಗಳನ್ನು ನಿಂಬೆ ಸಹಾಯದಿಂದ ಸ್ವಚ್ಛಗೊಳಿಸಬಹುದು. ಕಲೆಯಾದ ಜಾಗಕ್ಕೆ ನಿಂಬೆ ರಸಕ್ಕೆ ಉಪ್ಪು ಬೆರೆಸಿದ ಮಿಶ್ರಣವನ್ನು ಹಚ್ಚಿ. 10-15 ನಿಮಿಷಗಳ ಕಾಲ ಅದನ್ನು ಹಾಗೆ ಬಿಡಿ. ನಂತ್ರ ಬಟ್ಟೆಯಿಂದ ಸ್ವಚ್ಛಗೊಳಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.