Kavya Nag: ಶಂಕರ್‌ ನಾಗ್‌ ಮಗಳು ತಯಾರಿಸೋ ತೆಂಗಿನ ಕಾಯಿ ಎಣ್ಣೆ ಬಗ್ಗೆ ಗೊತ್ತಾ?

Published : Aug 05, 2023, 03:19 PM ISTUpdated : Aug 05, 2023, 04:19 PM IST
Kavya Nag: ಶಂಕರ್‌ ನಾಗ್‌ ಮಗಳು ತಯಾರಿಸೋ ತೆಂಗಿನ ಕಾಯಿ ಎಣ್ಣೆ ಬಗ್ಗೆ ಗೊತ್ತಾ?

ಸಾರಾಂಶ

ಸಾಮಾನ್ಯವಾಗಿ ತೆಂಗಿನ ಕಾಯಿ ಒಣಗಿಸಿ ಕೊಬ್ಬರಿ ಎಣ್ಣೆ ಮಾಡೋದು ರೂಢಿ. ಆದರೆ ಶಂಕರ್‌ನಾಗ್ ಮಗಳು ಕಾವ್ಯಾ ನಾಗ್‌ ತೆಂಗಿನ ಕಾಯಿಯಿಂದಲೇ ಎಣ್ಣೆ ತಯಾರಿಸ್ತಾರೆ. ಇದು ಹೇಗೆ?

ಕನಸುಗಾರ, ಮೂವತ್ತಾರೇ ವರ್ಷ ಬದುಕಿದ್ದರೂ ಇಂದಿಗೂ ಜನ ನೆನಪಿಟ್ಟುಕೊಳ್ಳುವಂತೆ ಬಾಳಿದ ಮಹಾನ್ ನಟ ಶಂಕರ್‌ನಾಗ್‌. ಮುಂಬೈಯಲ್ಲಿ ಥಿಯೇಟರ್‌, ಸಿನಿಮಾರಂಗದಲ್ಲಿ ಬ್ಯುಸಿ ಆಗಿದ್ದಾಗಲೇ ಅರುಂಧತಿ ರಾವ್ ಅನ್ನೋ ಪ್ರತಿಭಾವಂತ ನಟಿಯ ಜೊತೆಗೆ ಪ್ರೇಮದಲ್ಲಿ ಬಿದ್ದವರು ಶಂಕರ್. ಆಮೇಲೆ ಅರುಂಧತಿ ಕೈ ಹಿಡಿದದ್ದು, ಈ ದಂಪತಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿದ್ದು ಎಲ್ಲ ಈಗ ಇತಿಹಾಸ. ಈ ದಂಪತಿಯ ಮಗಳು ಕಾವ್ಯಾ. ಶಂಕರ್‌ನಾಗ್‌ ಮತ್ತು ಅರುಂಧತಿ ಕಲಾವಿದರಾಗಿ ಕನ್ನಡಿಗರ ಮನಗೆದ್ದವರು. ಆದರೆ ಇವರು ಮಗಳು ಕಾವ್ಯಾ ನಾಗ್ ಪ್ರಚಾರದಿಂದ ದೂರ. ತಾನಾಯ್ತು, ತನ್ನ ಕೆಲಸ ಆಯ್ತು ಅನ್ನುವಂತೆ ಸೈಲೆಂಟಾಗಿ ತಮ್ಮ ಪಾಡಿಗೆ ತಾವು ಸ್ವಂತ ಬ್ಯುಸಿನೆಸ್ ಮಾಡಿಕೊಂಡು ಲೈಫ್‌ ಲೀಡ್‌ ಮಾಡುತ್ತಿದ್ದಾರೆ.

ಎಷ್ಟೆಂದರೂ ಈಕೆ ಶಂಕರ್‌ ಅರುಂಧತಿಯಂಥಾ ನಟನೆ ಜೊತೆಗೆ ವಿಶಿಷ್ಟ ಚಿಂತನೆಯೂ ಇದ್ದ ಕಲಾವಿದರ ಮಗಳು. ಅವರ ಒಂದಾದರೂ ಗುಣ ಈಕೆಗೆ ಬಂದಿರಲೇ ಬೇಕಲ್ವಾ. ಯೆಸ್‌, ಈಕೆ ಯುನೀಕ್‌ ಅನಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಬೇರೆಲ್ಲ ಸ್ಟಾರ್‌ ಮಕ್ಕಳು ಹದಿನಾರು ದಾಟುತ್ತಿದ್ದಂತೆ ಸಿನಿಮಾದಲ್ಲಿ ನಾಯಕಿಯರಾಗಲು ಹಾತೊರೆಯುತ್ತಿದ್ದರೆ ಈ ಹೆಣ್ಣುಮಗಳು ನಮ್ಮ ದೇಶದ ಪರಂಪರೆಯ ಕೊಂಡಿಯೊಂದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅದೇ 'ಕೋಕೊನೆಸ್'. ಇದು ಕಾವ್ಯಾನಾಗ್ ನಡೆಸಿಕೊಂಡು ಬರುತ್ತಿರುವ ಕಂಪನಿ. ನಿಮಗೆಲ್ಲ ಕೊಬ್ಬರಿ ಎಣ್ಣೆ ಗೊತ್ತೇ ಇರುತ್ತೆ. ನಿತ್ಯ ನಮ್ಮಲ್ಲಿ ಹೆಚ್ಚಿನವರೆಲ್ಲ ಈ ಎಣ್ಣೆಯನ್ನೇ ತಲೆ ಹಚ್ಚಿಕೊಳ್ಳಲು ಬಳಸ್ತಾರೆ. ಕರಾವಳಿ ಕಡೆಯವರಾದರೆ ಈ ಎಣ್ಣೆಯನ್ನು ಅಡುಗೆಗೂ ಬಳಸ್ತಾರೆ. ಆದರೆ ನಮ್ಮಲ್ಲಿ ಹೆಚ್ಚಿನವರಿಗೆ ತೆಂಗಿನ ಕಾಯಿ ಎಣ್ಣೆ ಬಗ್ಗೆ ಗೊತ್ತಿಲ್ಲ.

ನಾನು ಅವಕಾಶವಾದಿ ಅಲ್ಲ, ದೇವರು ಸಾಕು ಬಾ ಅಂತ ಕರ್ಕೊಂಡ್ ಬಿಡ್ತಾನೆ: ಶಿವಣ್ಣ ಶಾಕಿಂಗ್ ಹೇಳಿಕೆ!

ಆದರೆ ಕೊಬ್ಬರಿ ಎಣ್ಣೆಗಿಂತಲೂ ಈ ತೆಂಗಿನ ಕಾಯಿ ಎಣ್ಣೆ ಎಷ್ಟೋ ಪ್ರಯೋಜನಕಾರಿ. ಇದರಲ್ಲಿರುವ ಸತ್ವ ತಾಯಿಯ ಹಾಲಿನಲ್ಲಿರುವಷ್ಟೇ ಇರುತ್ತದೆ ಅಂತಾರೆ ಕಾವ್ಯಾ ನಾಗ್. ಅಂದರೆ ಇದರಲ್ಲಿರೋ ಲ್ಯೂರಿಕ್‌ ಆಸಿಡ್‌ನ ಅಂಶ ಇದನ್ನು ತಾಯಿಯ ಹಾಲಿಗೆ ಸಮವಾಗಿಸುತ್ತಂತೆ. ತೆಂಗಿನ ಕಾಯಿಯನ್ನು ತುರಿದು, ಸಂಸ್ಕರಿಸಿ ತೆಂಗಿನ ಹಾಲಿನ ಎಣ್ಣೆ ತಯಾರಿಸುತ್ತಾರೆ. ಇದರಲ್ಲಿ ಅಪಾರ ಔಷಧೀಯ ಗುಣಗಳಿವೆ. ಸೋರಿಯಾಸಿಸ್, ಎಕ್ಸಿಮಾದಂಥ ಸಮಸ್ಯೆಯನ್ನು ಈ ಎಣ್ಣೆಯಿಂದ ಪರಿಣಾಮಕಾರಿಯಾಗಿ ಗುಣಪಡಿಸಬಹುದು. ಹಾಸಿಗೆ ಹಿಡಿದ ರೋಗಿಗಳಲ್ಲಿ ಬೆಡ್‌ಸೋರ್‌ ಅನ್ನೋದು ಕಾಮನ್‌. ಮಲಗಿದ್ದಲ್ಲೇ ಮಲಗಿ ಮೈಯಲ್ಲಿ ಹುಣ್ಣುಗಳಾವುದನ್ನ ಬೆಡ್‌ ಸೋರ್‌ ಅಂತಾರೆ. ಈ ಸಮಸ್ಯೆಯನ್ನು ಸರಿಪಡಿಸೋದು ಬಹಳ ಕಷ್ಟ. ಏನೇ ಆಯಿಂಟ್‌ಮೆಂಟ್ ಹಚ್ಚಿದರೂ ಗುಣವಾಗಲು ಬಹಳ ದಿನ ಬೇಕು. ಆದರೆ ಈ ಎಣ್ಣೆ ಶೀಘ್ರವಾಗಿ ಈ ಸಮಸ್ಯೆಯನ್ನು ಗುಣಪಡಿಸುತ್ತದೆ. ಈ ಎಣ್ಣೆಯಲ್ಲಿ ಆಂಟಿ ಬ್ಯಾಕ್ಟಿರಿಯಲ್‌, ಆಂಟಿ ವೈರಲ್‌, ಆಂಟಿ ಫಂಗಲ್‌ ಗುಣಗಳಿವೆ.

ಈ ತೆಂಗಿನ ಎಣ್ಣೆಗೆ ವರ್ಜಿನ್‌ ಕೋಕೊನೆಟ್‌ ಆಯಿಲ್‌ ಅಂತ ಹೆಸರು. ಇದರ ಪರಿಮಳ ಕಾಯಿ ತುರಿಯ ಹಾಗಿರುತ್ತದೆ. ತೆಂಗಿನ ಕಾಯಿ ತುರಿದು ಸಂಸ್ಕರಿಸಿ ಆ ಎಣ್ಣೆಯನ್ನು ಬಿಸಿ ಮಾಡಿ ಮತ್ತೆ ಮೈನಸ್‌ ಡಿಗ್ರಿಯಲ್ಲಿ ತಣ್ಣಗೆ ಮಾಡಿ ಬಳಸಲಾಗುತ್ತದೆ. ಈ ಎಣ್ಣೆಯ ಪ್ರಯೋಜನ ನಮ್ಮಲ್ಲಿ ಹಲವರಿಗೆ ಗೊತ್ತಿಲ್ಲ. ಹಾಗೆ ನೋಡಿದರೆ ನಮ್ಮ ಭಾರತೀಯ ಪರಂಪರೆಯಲ್ಲಿ ಈ ಎಣ್ಣೆಗೆ ಮಹತ್ವದ ಸ್ಥಾನ ಇದೆ. ನಮ್ಮ ಪೂರ್ವಜರು ಈ ಎಣ್ಣೆಯನ್ನು ಔಷಧವಾಗಿ, ದಿನ ಬಳಕೆಯಲ್ಲಿ ಬಳಸುತ್ತಿದ್ದರು. ಆದರೆ ಕ್ರಮೇಣ ಇದರ ಬಳಕೆ ಕಡಿಮೆ ಆಗಿ ಕೊಬ್ಬರಿ ಎಣ್ಣೆ ಬಳಕೆ ಅಧಿಕವಾಯ್ತು. ಇದಕ್ಕೆ ಸಾಕಷ್ಟು ಕಾರಣ ಇದೆ. ಕಾವ್ಯಾ ನಾಗ್ ಈ ಬಗ್ಗೆ ಸರ್ಚ್ ಮಾಡುವಾಗ ಫಿಲಿಫೈನ್ಸ್‌ನಲ್ಲಿ ಈ ಎಣ್ಣೆ ಉತ್ಪಾದಿಸುತ್ತಿರುವ ಬಗ್ಗೆ ತಿಳಿಯಿತು. ನಮ್ಮ ದೇಶದ ಉತ್ಪನ್ನವೊಂದು ನಮ್ಮ ದೇಶದಲ್ಲೇ ಕಣ್ಮರೆಯಾದದ್ದನ್ನು ಕಂಡು ಇದಕ್ಕೆ ಮರುಜೀವ ಕೊಡಬೇಕು ಅಂತ ಕಾವ್ಯಾ ಈ ಹೊಸ ಉದ್ಯಮ ಕಟ್ಟಿ ಬೆಳೆಸಲು ಮುಂದಾದರು.

ಕಾವ್ಯಾಗೆ ಪ್ರಚಾರದ ಹುಚ್ಚಿಲ್ಲ. ಎಲ್ಲೂ ತನ್ನ ತಂದೆ, ತಾಯಿಯ ಹೆಸರನ್ನು ಇವರು ಬಳಸೋದಿಲ್ಲ. ತನ್ನ ಪಾಡಿಗೆ ತಾನು ಕೆಲಸ ಮಾಡ್ತಾ ತೆಂಗಿನ ಕಾಯಿ ಎಣ್ಣೆಯ ಮಹತ್ವ ತಿಳಿಸುತ್ತ ಇದ್ದಾರೆ.

ಹೋಟೆಲ್ ಉದ್ಯಮಕ್ಕೆ ಕೈಹಾಕಿ ಯಶಸ್ಸು ಕಂಡ ಬೆಂಗಳೂರಿನ ಇಂಜಿನಿಯರಿಂಗ್ ಪದವೀಧರೆ; ಏನಿವರ ಸಕ್ಸಸ್ ಗುಟ್ಟು?

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವೇದಿಕೆಯಲ್ಲಿ ವಧು ಸದ್ದಿಲ್ಲದೆ ಮಾಡಿದ ಅದೊಂದು ಕೆಲಸ ಇಂಟರ್‌ನೆಟ್‌ನಲ್ಲಿ ಫುಲ್ ವೈರಲ್ ಆಯ್ತು..
ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?