ವಯಾಗ್ರ.. ಈ ಹೆಸರು ಹೇಳೋಕೆ, ಕೇಳೋಕೆ ಭಾರತೀಯರು ನಾಚಿಕೊಳ್ತಾರೆ. ಇನ್ನು ಮಹಿಳೆಯರಿಗೆ ವಯಾಗ್ರ ಇದೆ ಅನ್ನೋದೇ ಅನೇಕರಿಗೆ ತಿಳಿದಿಲ್ಲ. ಇದ್ರ ಬಗ್ಗೆ ಮಾತನಾಡೋಕೂ ಕಷ್ಟಪಡುವ ಜನರು ಅದ್ರ ಲಾಭ, ನಷ್ಟದ ಬಗ್ಗೆ ತಿಳಿಯಬೇಕು.
ಭಾರತದಲ್ಲಿ ಇಂದಿಗೂ ಮಹಿಳೆಯರ ಲೈಂಗಿಕ ಬಯಕೆಗಳ ಬಗ್ಗೆ ಚರ್ಚೆ ಆಗೋದಿಲ್ಲ. ಅದನ್ನು ಯಾವಾಗ್ಲೂ ಮುಚ್ಚಿಡಲಾಗುತ್ತದೆ. ಲೈಂಗಿಕ ಬಯಕೆ ಬಗ್ಗೆ ಯಾವುದೇ ವೈದ್ಯರೊಂದಿಗೆ ಅಥವಾ ಪತಿ ಅಥವಾ ಸ್ನೇಹಿತರ ಜೊತೆ ಮಹಿಳೆ ಮಾತನಾಡೋದಿಲ್ಲ. ನಾನಾ ಕಾರಣಕ್ಕೆ ಮಹಿಳೆ ಲೈಂಗಿಕ ಆಸಕ್ತಿಯನ್ನು ಕಳೆದುಕೊಳ್ಳುತ್ತಾಳೆ. ಪುರುಷರಿಗೆ ಲೈಂಗಿಕ ಆಸಕ್ತಿ ಹೆಚ್ಚಿಸಿಕೊಳ್ಳಲು ವಯಾಗ್ರವಿದೆ. ಹಾಗೆ ಮಹಿಳೆಯರಿಗೂ ವಯಾಗ್ರ ಲಭ್ಯವಿದೆ. ಲೈಂಗಿಕ ಬಯಕೆಯನ್ನು ಹೆಚ್ಚಿಸಲು ಸ್ತ್ರೀ ವಯಾಗ್ರವನ್ನು ಬಳಸಲಾಗುತ್ತಿದೆ. ನಾವಿಂದು ಸ್ತ್ರೀ ವಯಾಗ್ರದ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
ಸ್ತ್ರೀ ವಯಾಗ್ರ (Viagra) ಎಂದರೇನು? : ವಯಾಗ್ರ, ಪುರುಷರಲ್ಲಿ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ ಚಿಕಿತ್ಸೆ ನೀಡಲು ಬಳಸಲಾಗುವ ಒಂದು ರೀತಿಯ ಔಷಧ (medicine) ವಾಗಿದೆ. ಸ್ತ್ರೀ ಕಾಂಡೋಮ್ ಬಳಕೆ ನಿಷೇಧವೆಂದು ಪರಿಗಣಿಸಿದಂತೆ ಜನರು ಮಹಿಳೆ ವಯಾಗ್ರವನ್ನೂ ಕೂಡ ಬಳಸೋದಿಲ್ಲ. ಲೈಂಗಿಕ ಮತ್ತು ದೈಹಿಕ ಆಸೆಗಳು ಮತ್ತು ಅಗತ್ಯಗಳಿಗೆ ಸಂಬಂಧಿಸಿದಂತೆ ಸಮಾಜದಲ್ಲಿ ಪುರುಷರಿಗೆ ಮಾತ್ರ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಮಹಿಳೆಯರಿಗೆ ವಯಾಗ್ರದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಅನೇಕ ರೀತಿಯ ಪೂರಕಗಳು ಲಭ್ಯವಿದೆ. ಅವುಗಳ ಸೇವನೆಯು ಮಹಿಳೆಯರಲ್ಲಿ ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತದೆ. ಅದ್ರಲ್ಲಿ ಫ್ಲಿಬನ್ಸೆರಿನ್ (flibanserin) ಕೂಡ ಸೇರಿದೆ. ಇದನ್ನು ಮಹಿಳೆಯರ ವಯಾಗ್ರ ಎಂದು ಪರಿಗಣಿಸಲಾಗುತ್ತದೆ. ಈ ಔಷಧಿಯು ಮಹಿಳೆಯ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.
undefined
ಪ್ರೇಮಿಯ ಮಗುವಿನ ಜತೆ ಮಾಜಿ ಪತಿ ಮಗಳ ನಿಶ್ಚಿತಾರ್ಥದಲ್ಲಿ ನಟಿ ಕಲ್ಕಿ! ಕನ್ಫ್ಯೂಸ್ ಆಗ್ತಿದೆ ಎಂದ ಫ್ಯಾನ್ಸ್
ಇದು ಡೋಪಮೈನ್ ಮತ್ತು ನೊರ್ಪೈನ್ಫ್ರಿನ್ ಮೇಲೆ ಪರಿಣಾಮ ಬೀರುತ್ತದೆ. ಇದು ಲೈಂಗಿಕ ಬಯಕೆಯನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ. ಹೆಚ್ಚುತ್ತಿರುವ ವಯಸ್ಸು ಅಥವಾ ಯಾವುದೇ ದೈಹಿಕ ಕಾಯಿಲೆ ಅಥವಾ ಇನ್ನಾವುದೇ ಕಾರಣದಿಂದ ಲೈಂಗಿಕತೆಯ ಬಯಕೆಯನ್ನು ಕಡಿಮೆ ಮಾಡಲು ಪ್ರಾರಂಭಿಸಿದ ಮಹಿಳೆಯರು ಇದನ್ನು ಬಳಸುವುದು ಉತ್ತಮ ಆಯ್ಕೆಯಾಗಿದೆ. ಇದನ್ನು ಸೇವಿಸುವ ಮೊದಲು ವೈದ್ಯರ ಸಲಹೆ ಮತ್ತು ಸರಿಯಾದ ನಿರ್ದೇಶನ ಪಡೆಯಬೇಕು.
ಸ್ತ್ರೀ ವಯಾಗ್ರ ಎಷ್ಟು ಪರಿಣಾಮಕಾರಿ? : ವಯಾಗ್ರ ಮಹಿಳೆಯರಲ್ಲಿ ಪುರುಷರಲ್ಲಿ ಪರಿಣಾಮಕಾರಿಯಾಗಿದೆ ಎಂಬುದಕ್ಕೆ ಇಲ್ಲಿಯವರೆಗೆ ಯಾವುದೇ ಪುರಾವೆಗಳಿಲ್ಲ. ಆದರೆ ಹೆಚ್ಚಿನ ಮಟ್ಟಿಗೆ, ಮಹಿಳೆಯರ ಲೈಂಗಿಕ ಚಟುವಟಿಕೆಯು ಈ ಔಷಧಿಯಿಂದ ಧನಾತ್ಮಕವಾಗಿ ಪರಿಣಾಮ ಬೀರುತ್ತದೆ.
ಒಂದು ಹುಡುಗ - ಹುಡುಗಿ ಒಳ್ಳೆ ಗೆಳೆಯರಾಗಿರಲು ಸಾಧ್ಯವೇ ಇಲ್ವಾ?
ಮಹಿಳೆಯರು ಪುರುಷರ ವಯಾಗ್ರವನ್ನು ತೆಗೆದುಕೊಳ್ಳಬಹುದೇ?: ಆರೋಗ್ಯ ತಜ್ಞರ ಪ್ರಕಾರ, ಮಹಿಳೆಯರು ಪುರುಷರ ವಯಾಗ್ರವನ್ನು ತೆಗೆದುಕೊಳ್ಳಬಾರದು ಎನ್ನುತ್ತಾರೆ ತಜ್ಞರು. ಪುರುಷ ಹಾಗೂ ಮಹಿಳೆ ಇಬ್ಬರ ದೇಹ ಭಿನ್ನವಾಗಿರುವ ಕಾರಣ ವಯಾಗ್ರ ಅವರ ಮೇಲೆ ಬೇರೆ ಬೇರೆ ರೀತಿ ಪರಿಣಾಮ ಬೀರುತ್ತದೆ.
ಈ ಕಾರಣಕ್ಕೆ ಕಡಿಮೆಯಾಗುತ್ತೆ ಮಹಿಳೆಯರ ಸೆಕ್ಸ್ ಡ್ರೈವ್ : ಮಹಿಳೆಯರ ಲೈಂಗಿಕ ಪ್ರತಿಕ್ರಿಯೆಯು ತುಂಬಾ ಸಂಕೀರ್ಣವಾಗಿದೆ. ಅನೇಕ ಕಾರಣಕ್ಕೆ ಸೆಕ್ಸ್ ಡ್ರೈವ್ ಕಡಿಮೆಯಾಗುತ್ತೆ.
1. ದೈನಂದಿನ ಜೀವನದ ಒತ್ತಡದಿಂದಾಗಿ ಅನೇಕ ಮಹಿಳೆಯರು ತಮ್ಮ ಲೈಂಗಿಕ ಬಯಕೆಯನ್ನು ಕಳೆದುಕೊಳ್ಳುತ್ತಾರೆ.
2. ಋತುಬಂಧ ಅಥವಾ ಗರ್ಭಾವಸ್ಥೆಯ ಕಾರಣದಿಂದಾಗಿ ಮಹಿಳೆಯರ ಸೆಕ್ಸ್ ಡ್ರೈವ್ ಕೂಡ ಕಡಿಮೆಯಾಗುತ್ತದೆ.
3. ಆಯಾಸದಿಂದ ಕೆಲ ಮಹಿಳೆಯರು ಲೈಂಗಿಕ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ.
4. ಮಾನಸಿಕ ತೊಂದರೆ ಮತ್ತು ಬಾಹ್ಯ ಸಮಸ್ಯೆಗಳು ಲೈಂಗಿಕ ಬಯಕೆಯನ್ನು ಕಡಿಮೆ ಮಾಡುತ್ತದೆ.
5. ಮಧುಮೇಹ ಅಥವಾ ಮಲ್ಟಿಪಲ್ ಸ್ಕ್ಲೆರೋಸಿಸ್ನಂತಹ ಕೆಲವು ರೋಗಗಳಲ್ಲೂ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ.
6. ಅತಿಯಾದ ದೈಹಿಕ ಶ್ರಮವೂ ಇದಕ್ಕೆ ಕಾರಣವಾಗುತ್ತದೆ.
7. ಒಂದು ಅಧ್ಯಯನದ ಪ್ರಕಾರ, ಮೂರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳ ತಾಯಂದಿರಾದ ಮಹಿಳೆಯರು ಲೈಂಗಿಕ ಬಯಕೆ ಕಳೆದುಕೊಳ್ತಾರೆ.
ಸ್ತ್ರೀ ವಯಾಗ್ರದಿಂದ ಆಗುವ ಅಡ್ಡ ಪರಿಣಾಮ : ವಯಾಗ್ರ ಸೇವನೆ ಮಾಡಿದ್ರೆ ಕೆಲ ಮಹಿಳೆಯರಿಗೆ ತಲೆತಿರುಗುವಿಕೆ, ನಿದ್ರೆ ಸಮಸ್ಯೆ, ವಾಕರಿಕೆ, ಬಾಯಿ ಒಣಗುವುದು, ಸುಸ್ತು, ಅಧಿಕ ರಕ್ತದೊತ್ತಡ, ಪ್ರಜ್ಞಾಹೀನತೆ ಸೇರಿದಂತೆ ಅನೇಕ ಸಮಸ್ಯೆ ಕಾಡುತ್ತದೆ.