ಎರಡು ಮಕ್ಕಳಾದ್ಮೇಲೂ ರಾಧಿಕಾ ಪಂಡಿತ್ ಹೀಗೆ ಫಿಗರ್ ಮೈಂಟೇನ್ ಮಾಡಿರೋದು ಹೇಗೆ?

Published : May 16, 2022, 02:13 PM IST
ಎರಡು ಮಕ್ಕಳಾದ್ಮೇಲೂ ರಾಧಿಕಾ ಪಂಡಿತ್ ಹೀಗೆ ಫಿಗರ್ ಮೈಂಟೇನ್ ಮಾಡಿರೋದು ಹೇಗೆ?

ಸಾರಾಂಶ

ಮದ್ವೆ ಆಗಿ ಮಕ್ಕಳಾದ್ಮೇಲೆ ಲೈಫಿನ ಬಗ್ಗೆ ಆಸಕ್ತಿಯೇ ಹೋದಂತೆ ಬದುಕೋ ಹೆಣ್ಮಕ್ಕಳು ಬಹಳಷ್ಟಿದ್ದಾರೆ. ಆದರೆ ನಮ್ ರಾಧಿಕಾ ಪಂಡಿತ್ ಹಾಗಲ್ಲ. ಎರಡೆರಡು ಮಕ್ಕಳಾದ್ಮೇಲೂ ಅವರ ಫಿಗರ್ ಸಖತ್ತಾಗೇ ಇದೆ.ಇದು ಹೇಗೆ ಸಾಧ್ಯ ಆಯ್ತು?

ರಾಧಿಕಾ ಪಂಡಿತ್ (Radhika Pandith) ಅವರ ಸ್ಮಾಲ್ ಸ್ಕ್ರೀನ್, ಬಿಗ್‌ ಸ್ಕ್ರೀನ್ ಜರ್ನಿ ಸಣ್ಣದೇನಲ್ಲ. ಈ ಜರ್ನಿ ಒಂದು ಹಂತಕ್ಕೆ ಬಂದಮೇಲೆ ತಾನು ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗ ಯಶ್‌(Yash) ಜೊತೆಗೆ ಮದುವೆ ಆದವರು ರಾಧಿಕಾ ಪಂಡಿತ್. ಅಂದಿನಿಂದ ಯಶ್ ಹಾಗೂ ರಾಧಿಕಾ ಪಂಡಿತ್ ಅವರದು ಸುಖೀ ದಾಂಪತ್ಯ. ಮದುವೆ ಆದಮೇಲೆ ಫ್ಯಾಮಿಲಿ ಲೈಫ್‌ಗೇ(Family life) ಪ್ರಾಶಸ್ತ್ಯ ಕೊಟ್ಟು ಸಿನಿಮಾ ಜಗತ್ತಿನಿಂದ ಆಚೆ ಸರಿದವರು ರಾಧಿಕಾ. ಇದೀಗ ರಾಧಿಕಾ ಹಾಗೂ ಯಶ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಕ್ಕಳಾದ ಐರಾ ಹಾಗೂ ಯಥರ್ವ ಅವರ ವಿವಿಧ ಚಟುವಟಿಕೆಗಳ ಮುದ್ದಾದ ವೀಡಿಯೋವನ್ನು ರಾಧಿಕಾ ಹಾಗೂ ಯಶ್ ಆಗಾಗ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ತಮ್ಮ ಕೆರಿಯರ್‌ನ ಆರಂಭದಿಂದ ಇಲ್ಲಿಯವರೆಗೆ ಒಂದು ಮಾತನ್ನೂ ಹದ ತಪ್ಪಿ ಆಡಿದವರಲ್ಲ ರಾಧಿಕಾ. ಎಲ್ಲಿ ಎಷ್ಟು ಮಾತಾಡಬೇಕು ಅಷ್ಟೇ ಮಾತಾಡಿ ಸೆಲ್ಫ್ ಡಿಗ್ನಿಟಿಯನ್ನು ಎಂದೂ ಬಿಟ್ಟುಕೊಡದ ರಾಧಿಕಾ ಈ ವಿಚಾರದಲ್ಲಿ ರಾಕಿಬಾಯ್ ಯಶ್‌ಗೂ ಗುರು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪತ್ನಿ ರಾಧಿಕಾ ಪಂಡಿತ್‌ ದೆಸೆಯಿಂದ ತನ್ನ ಲೈಫ್‌ ಹೇಗೆ ಡಿಗ್ನಿಫೈಡ್‌ (Dignified)ಆಗ್ತಾ ಹೋಯಿತು ಅನ್ನೋದನ್ನು ಯಶ್ ಮನದುಂಬಿ ಹೇಳಿದ್ದರು. ಇಡೀ ದೇಶದ ಜನ ಆಗ ರಾಧಿಕಾ ಅವರನ್ನು ಗೌರವದಿಂದ ನೋಡಿದ್ದರು.

 

ಇಷ್ಟೆಲ್ಲ ಒಳ್ಳೆಯ ಹೆಣ್ಮಗಳಾದ ರಾಧಿಕಾ ಪಂಡಿತ್ ಬಹಳ ಚಿಕ್ಕವರೇನಲ್ಲ. ಅವರಿಗೀಗ ವಯಸ್ಸು ಮೂವತ್ತೆಂಟರ ಆಸುಪಾಸು. ತನ್ನ ಪತಿ ಯಶ್‌ ಗಿಂತ ಎರಡು ವರ್ಷ ದೊಡ್ಡವರು ರಾಧಿಕಾ. ಆದರೆ ಈ ದಂಪತಿಗಳನ್ನು ನೋಡಿದ ಯಾರೊಬ್ಬರೂ ಈ ದಂಪತಿಗಳಲ್ಲಿ ರಾಧಿಕಾ ಅವರೇ ದೊಡ್ಡವರು ಅಂತ ಹೇಳೋದಕ್ಕೆ ಸಾಧ್ಯವೇ ಇಲ್ಲ. ಆ ಪರಿ ರಾಧಿಕಾ ಫಿಗರ್ ಮೈಂಟೇನ್ ಮಾಡಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ(Sandalwood) ಹೆಚ್ಚಿನ ಸೆಲೆಬ್ರಿಟಿಗಳೆಲ್ಲ ಒಂದು ಮಗು ಮಾಡ್ಕೊಳ್ಳೋದೇ ಹೆಚ್ಚು ಅನ್ನೋ ಮನೋಭಾವದವರು. ಬೆರಳೆಣಿಕೆಯ ಮಂದಿಗಷ್ಟೇ ಇಬ್ಬರು ಮಕ್ಕಳಿದ್ದಾರೆ. ಆದರೆ ರಾಧಿಕಾಗೆ ಆರಂಭದಿಂದಲೂ ತನಗೆ ಎರಡು ಮಕ್ಕಳು ಬೇಕು, ಆ ಮಕ್ಕಳ ನಡುವೆ ಹೆಚ್ಚು ಗ್ಯಾಪ್ ಇರಬಾರದು, ಅವರು ಆಟವಾಡುತ್ತಲೇ ಬೆಳೆಯಬೇಕು ಅನ್ನೋ ಆಸೆ. ಹೀಗಾಗಿ ಐರಾಗೂ(Ayra) ಯಥರ್ವಗೂ(Yatharva) ಮಧ್ಯೆ ವಯಸ್ಸಿನ ಅಂತರ ಬಹಳ ಕಡಿಮೆ ಇದೆ. ಇದಕ್ಕೆ ರಾಧಿಕಾಗೆ ವಯಸ್ಸಾಗ್ತಿರೋದೂ ಕಾರಣ ಇರಬಹುದು ಅಂತ ಕೆಲವರು ಮಾತಾಡಿಕೊಂಡರೂ ನಲವತ್ತನೇ ವಯಸ್ಸಲ್ಲಿ ಮದುವೆಯಾಗಿ ಆಮೇಲೆ ಮಗು ಮಾಡಿಕೊಂಡ ಸಾಕಷ್ಟು ಸೆಲೆಬ್ರಿಟಿಗಳು ನಮ್ಮ ನಡುವೆ ಇದ್ದಾರೆ. ಹೀಗಾಗಿ ಇಂಥಾ ಮಾತನ್ನೆಲ್ಲ ಕೇಳುವ ಹಾಗಿಲ್ಲ.

ಬೆಂಗ್ಳೂರಿನ ವೀಣಾ ಸ್ಟೋರ್‌ನಲ್ಲಿ ಇಡ್ಲಿ ತಿಂದ್ರಂತೆ ಸಾಯಿ ಪಲ್ಲವಿ!

ರಾಧಿಕಾ ಪಂಡಿತ್ ಇಂದಿಗೂ ಫಿಟ್ ಆಂಡ್ ಫೈನ್. ಇತ್ತೀಚೆಗೆ ಕೆಜಿಎಫ್ 2 (KGF 2) ಪ್ರಚಾರಕ್ಕೆ ಯಶ್ ಜೊತೆಗೆ ಬಂದಿದ್ದ ಅವರ ಫೋಟೋ ವೈರಲ್ ಆಗಿತ್ತು. ಯಶ್‌ ಹೆಂಡ್ತಿ ಎಷ್ಟು ಬ್ಯೂಟಿಫುಲ್ ಆಗಿದ್ದಾರೆ ಅಂತೆಲ್ಲ ಅನೇಕ ಕಡೆ ಸುದ್ದಿಗಳು ಹರಿದಾಡಿದವು.

ತಮ್ಮ ಈ ಫಿಟ್‌ನೆಸ್‌ಗೆ(Fitness) ರಾಧಿಕಾ ಬಹಳ ಡಯೆಟ್(Diet) ಮಾಡ್ತಾರೆ, ಊಟ ತಿಂಡಿ ಕಂಟ್ರೋಲಲ್ಲಿ ಇಟ್ಕೊಳ್ತಾರೆ ಅಂತೆಲ್ಲ ಅಂದುಕೊಂಡರೆ ನಿಮ್ಮ ಭಾವನೆ ತಪ್ಪು. ರಾಧಿಕಾ ಸಿನಿಮಾಗಳಲ್ಲಿ ಆಕ್ಟ್‌ ಮಾಡುತ್ತಿದ್ದಾಗಿನಿಂದ ಈವರೆಗೆ ಯಾವತ್ತೂ ಡಯೆಟ್ ತಂಟೆಗೆ ಹೋದವರಲ್ಲ. ಜೊತೆಗೆ ಯಾವತ್ತೂ ಹೊಟ್ಟೆ ಹಸಿದುಕೊಂಡು ಇದ್ದವರೂ ಅಲ್ಲ. ಡಯೆಟ್ ಅನ್ನೋ ಪದ ಅವರ ಡಿಕ್ಶನರಿಯಲ್ಲೇ ಇಲ್ಲ. ಚೆನ್ನಾಗಿ ತಿಂದೂ ಈ ಲೆವೆಲ್‌ಗೆ ಬಾಡಿ ಮೈಂಟೇನ್ ಮಾಡಿದ್ದಾರೆ ಅಂದರೆ ಅದಕ್ಕೆ ಕಾರಣ ಅವರ ಮೆಟಬಾಲಿಸಂ. ಏನು ತಿಂದರೂ ಕರಗಿಸಿಕೊಳ್ಳೋ ಮೆಟಬಾಲಿಸಂ(Metabolism) ಅವರಿಗೆ ಇದೆ.

ಗರ್ಭಪಾತದಿಂದ ಮಿರಾಕಲ್ ಮಗುವನ್ನು ಕಳೆದುಕೊಂಡ ಖ್ಯಾತ ಗಾಯಕಿ ಬ್ರಿಟ್ನಿ

ಇಂಡಸ್ಟ್ರಿಗೆ ಬಂದ ಆರಂಭದಲ್ಲಿ ಸಿಕ್ಕಾಪಟ್ಟೆ ಸಣ್ಣಗಿದ್ರು ರಾಧಿಕಾ. ಈ ಕಾರಣಕ್ಕೇ ಅವರನ್ನು ಹಲವಾರು ಸಿನಿಮಾಗಳಿಂದ ರಿಜೆಕ್ಟ್(Reject) ಮಾಡಲಾಯ್ತಂತೆ. ಇದನ್ನು ರಾಧಿಕಾ ಅವರೇ ಒಂದು ಕಡೆ ಹೇಳ್ಕೊಂಡಿದ್ದರು. ರಾಧಿಕಾ ಅವರನ್ನ ಇಷ್ಟು ಫಿಟ್ ಆಗಿ ಇಟ್ಟಿರೋದು ಯೋಗ ಮತ್ತು ನಿತ್ಯ ಅವರು ಮಾಡುವ ಒಂದಿಷ್ಟು ಎಕ್ಸರ್‌ಸೈಜ್‌ಗಳು. ಹಿಂದೆ ಅವರು ಝುಂಬಾ ಡ್ಯಾನ್ಸ್ ಮಾಡ್ತಿದ್ರು. ಈಗಲೂ ಟೈಮ್‌ ಸಿಕ್ಕಾಗ ಮಾಡುತ್ತಾರೆ. ಯೋಗ ಮತ್ತು ಡ್ಯಾನ್ಸ್ ಜೊತೆಗೆ ಪುಟ್ಟ ಮಕ್ಕಳ ಹಿಂದೆ ದಿನವಿಡೀ ಓಡಾಡ್ತನೇ ಇರೋದು ಅವರ ಫಿಟ್‌ನೆಸ್ ಹೆಚ್ಚಿಸಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಸಾಲೆ ಪೌಡರ್ ಮಾಡುವಾಗ ಸ್ವಲ್ವೇ ಸ್ವಲ್ಪ ಅಕ್ಕಿ ಸೇರಿಸಿ, ಅಡುಗೆ ರುಚಿ ಡಬ್ಬಲ್ ಆಗುತ್ತೆ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!