Woman in Plane: ವಿಮಾನದಲ್ಲಿ ಜಿಮ್ನಾಸ್ಟ್ ಆದ ಮಹಿಳೆ-ವಿಡಿಯೋ ವೈರಲ್

By Suvarna News  |  First Published May 16, 2022, 12:10 PM IST

ವಿಮಾನದಿಂದ ಇಳಿಯುತ್ತಿರುವ ಮಹಿಳೆಯೊಬ್ಬರು ಬಲಗೈಯಲ್ಲಿ ಮಗುವನ್ನು ಎತ್ತಿಕೊಂಡು, ಒವರ್ ಹೆಡ್ ಕ್ಯಾಬಿನ್ ಅನ್ನು ಬಲ ಕಾಲನ್ನು ಮೇಲೆತ್ತಿ ಮುಚ್ಚುತ್ತಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಜಿಮ್ನಾಸ್ಟ್ ರೀತಿ ಮಹಿಳೆ ಬೋಲ್ಡಾಗಿ ವರ್ತಿಸುವುದು ಎಲ್ಲರನ್ನೂ ಬೆರಗಾಗಿಸಿದೆ. 
 


ಪ್ರಯಾಣ (Travel) ಎಂದರೆ ಬಹುತೇಕ ಜನರಿಗೆ ಖುಷಿ. ಬಹಳಷ್ಟು ಜನರಿಗೆ ಅಲರ್ಜಿ. ಪ್ರಯಾಣ, ಪ್ರವಾಸವನ್ನು ಇಷ್ಟಪಡುವವರು ಎಲ್ಲೆಂದರಲ್ಲಿ, ಹೇಗೆಂದರಲ್ಲಿ ಸುತ್ತಾಡುತ್ತಿರುತ್ತಾರೆ. ಪಕ್ಕಾ ಪ್ಲಾನ್ ಮಾಡಿಕೊಂಡೂ ಪ್ರವಾಸ ಬೆಳೆಸುತ್ತಾರೆ. ಚಿಕ್ಕ ಚಿಕ್ಕ ಮಕ್ಕಳನ್ನೂ ಕಟ್ಟಿಕೊಂಡು ಪ್ರವಾಸ ಮಾಡುವವರಿದ್ದಾರೆ. ಒಂದೆಡೆಯಿಂದ ಇನ್ನೊಂದೆಡೆಗೆ ಅನಿವಾರ್ಯವಾಗಿ ಪ್ರಯಾಣ ಮಾಡಬೇಕಾದ ಸಂದರ್ಭವಿದ್ದಾಗ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಸಾಮಾನ್ಯ ರೂಢಿ. 

ಮಹಿಳೆಯರು ಒಬ್ಬರೇ ಪ್ರವಾಸ ಮಾಡುವ ಹವ್ಯಾಸ ಇತ್ತೀಚೆಗೆ ಕಂಡುಬರುತ್ತಿದೆ. ಮಕ್ಕಳಿದ್ದಾಗ ಅವರನ್ನು ಜತೆಯಲ್ಲಿ ಇಟ್ಟುಕೊಂಡೇ ಪ್ರಯಾಣ ಮಾಡುವುದು ಅನಿವಾರ್ಯ. ನಮ್ಮ ದೇಶದಲ್ಲಾದರೆ ವಿಮಾನ (Aeroplane) ಪ್ರಯಾಣದ ಸಮಯದಲ್ಲಿ ಮಹಿಳೆಯರು ತಮ್ಮೊಂದಿಗೆ ಯಾರಾದರೂ ಜತೆಗಿರಲಿ ಎಂದೇ ಅಪೇಕ್ಷಿಸುತ್ತಾರೆ. ಮಕ್ಕಳು (Children) ಜತೆಯಲ್ಲಿದ್ದರಂತೂ ಯಾರಾದರೂ ಇನ್ನೊಬ್ಬರು ಸಹಾಯಕ್ಕಾಗಿ ಇರುವುದು ಕೂಡ ಸಾಮಾನ್ಯ. ಆದರೆ, ಎಲ್ಲ ಬಾರಿಯೂ ಜತೆಗಾರರು ಸಿಗುವುದಿಲ್ಲ. ಆದರೆ, ಬಹಳಷ್ಟು ಪಾಶ್ಚಾತ್ಯ ಹಾಗೂ ಯುರೋಪ್ ದೇಶಗಳಲ್ಲಿ ಈ ಹಿಂಜರಿಕೆ ಮಹಿಳೆಯರನ್ನು ಕಾಡುವುದಿಲ್ಲ. ಮಕ್ಕಳು ಜತೆಗಿದ್ದರೂ ಅವರು ಪ್ರಯಾಣವನ್ನು ಸಲೀಸಾಗಿ ಮಾಡಿಮುಗಿಸುತ್ತಾರೆ.

Tap to resize

Latest Videos

ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ (Social Media) ವಿಡಿಯೋವೊಂದು (Video) ವೈರಲ್ (Viral) ಆಗಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿರುವ ಮಹಿಳೆಯೊಬ್ಬರು ಮಗುವನ್ನು ಬಲಗೈಯಲ್ಲಿ (Right Hand) ಎತ್ತಿ ಹಿಡಿದಿದ್ದು, ಬಲಗಾಲನ್ನು (Right Leg) ಮೇಲೆತ್ತಿ ಓವರ್ ಹೆಡ್ ಕ್ಯಾಬಿನ್ (Overhead Cabin) ಬಾಗಿಲು ಮುಚ್ಚಿದ್ದಾರೆ! ಈ ದೃಶ್ಯ ಈಗ ನೆಟ್ಟಿಗರನ್ನು ಅಚ್ಚರಿಪಡಿಸಿದೆ. ಟ್ವಿಟರ್ ಬಳಕೆದಾರರಾದ ಫಿಗೆನ್ ಎನ್ನುವವರು ಇದನ್ನು ಹಂಚಿಕೊಂಡಿದ್ದು, “ಓ ಮೈ ಗಾಡ್, ಇದು ಕೂಲ್ ಆಗಿದೆ’ ಎನ್ನುವ ಟ್ಯಾಗ್ ಲೈನ್ ನೀಡಿದ್ದಾರೆ. 

ಇದನ್ನೂ ಓದಿ: ಪತಿಯೊಂದಿಗೆ ಜಗಳ : 65 ಕಿ.ಮೀ ನಡೆದು ಬಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

ಈಕೆ ಜಿಮ್ನಾಸ್ಟೇ?
ಈ ಮಹಿಳೆ ವಿಮಾನದಿಂದ ಕೆಳಗಿಳಿಯುವ ಸಿದ್ಧತೆಯಲ್ಲಿದ್ದಾರೆ ಎನ್ನುವುದು ವಿಡಿಯೋದಿಂದ ತಿಳಿಯುತ್ತದೆ. ಓವರ್ ಹೆಡ್ ಕ್ಯಾಬಿನ್ ನಿಂದ ತಮ್ಮ ಲಗೇಜ್ ಹೊರತೆಗೆದು, ಅದರ ಬಾಗಿಲನ್ನು ಮುಚ್ಚಲು ಅವರು ಇನ್ನೊಬ್ಬರ ಸಹಾಯ ಕೇಳಿಲ್ಲ, ವಿಮಾನ ಸಿಬ್ಬಂದಿಯನ್ನೂ ಕರೆದಿಲ್ಲ. ಬದಲಿಗೆ ತಾವೇ ಬಲಗಾಲನ್ನು ಜಿಮ್ನಾಸ್ಟ್ (Gymnast) ಥರ ಮೇಲೆತ್ತಿ ಮುಚ್ಚಿದ್ದಾರೆ. ಈ ವಿಡಿಯೋ ಶೇರ್ ಆದ ಕೆಲವೇ ಸಮಯದಲ್ಲಿ 2 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಮಹಿಳೆ ವಿಮಾನ ಪ್ರಯಾಣದ ಸಮಯದಲ್ಲಿ ಹೆಲ್ಪ್ ಲೆಸ್ (Helpless) ಫೀಲ್ (Feel) ಆಗಬೇಕಾಗಿಲ್ಲ ಎನ್ನುವ ಸಂದೇಶಗಳು ಹರಿದಾಡುತ್ತಿದೆ. 

ಮಹಿಳೆಯ ಈ ವಿಡಿಯೋ ಬಗ್ಗೆ ಕೆಲವರು ಮಾತ್ರವೇ ಕೊಂಕು ನುಡಿದಿದ್ದಾರೆ. “ಇದೊಂದು ಶೋ ಆಫ್’ ಎಂದು ಹಲವರು ಕಾಲೆಳೆದಿದ್ದರೆ, ಕೆಲವರು “ಓವರ್ ಹೆಡ್ ಕ್ಯಾಬಿನ್ ಅನ್ನು ಈ ರೀತಿ ಮುಚ್ಚಲು ಸಾಧ್ಯವಿಲ್ಲ. ಅವಳೇನು ಜಿಮ್ನಾಸ್ಟೇ?’ ಎನ್ನುವ ಪ್ರಶ್ನೆ ಎಸೆದಿದ್ದಾರೆ. ಅವಳು ಜಿಮ್ನಾಸ್ಟೇ ಅಲ್ಲವೇ ಎನ್ನುವುದು ಬೇಕಾಗಿಲ್ಲ. ಆದರೆ, ಅವಳ ಸಾಹಸ ಎಲ್ಲರನ್ನೂ ಬೆರಗಾಗಿಸಿದೆ ಎನ್ನುವುದು ಸುಳ್ಳಲ್ಲ. 

ಇದನ್ನೂ ಓದಿ: ಬೆಚ್ಚಿ ಬೀಳಿಸುತ್ತಿದೆ ಸಾವಿನ ಮನೆಯ ವಿಡಿಯೋ: ಹೀಗೂ ಇರುತ್ತಾ!

ಮಕ್ಕಳೊಂದಿಗೆ ಮಹಿಳಾ ವಿಶೇಷ
ಕೆಲವು ವಿಶೇಷ ಸ್ಟಂಟ್ (Stunt) ಮಾಡಿದ ಮಹಿಳೆಯರ ವಿಡಿಯೋ ವೈರಲ್ ಆಗುತ್ತಿರುವುದು ಇದೇ ಮೊದಲೇನೂ ಅಲ್ಲ. 2020ರಲ್ಲಿ ಮನೆಯ ಛಾವಣಿ ಮೇಲಿನಿಂದ ಸ್ವಿಮ್ಮಿಂಗ್ ಫೂಲ್ ಗೆ ಜಿಗಿಯುತ್ತಿರುವ ಮಹಿಳೆಯೊಬ್ಬರ ವಿಡಿಯೋ ಇದೇ ರೀತಿ ವೈರಲ್ ಆಗಿತ್ತು. ಅಷ್ಟೇ ಅಲ್ಲ, ತಮ್ಮೆಲ್ಲ ಕೆಲಸಗಳ ಜತೆಗೇ ಮಗುವನ್ನು ಇರಿಸಿಕೊಳ್ಳುವುದು ಸಹ ಇತ್ತೀಚೆಗೆ ಸಾಮಾನ್ಯವಾಗುತ್ತಿದೆ. ನ್ಯೂಜಿಲ್ಯಾಂಡ್ ಪ್ರಧಾನಿ ಜೆಸಿಂಡಾ ಆರ್ಡರ್ನ್ (Jacinda Orern) ಸಂಸತ್ ಅಧಿವೇಶನಕ್ಕೆ ಮಗುವನ್ನು ಕರೆದುಕೊಂಡು ಬಂದು ಕೂತಿದ್ದುದು ಕೆಲ ಸಮಯದ ಹಿಂದೆ ಇಡೀ ಜಗತ್ತಿನ ಗಮನ ಸೆಳೆದಿತ್ತು. ಹಾಗೆಯೇ, ಆಸ್ಟ್ರೇಲಿಯಾದ ಸಿನೇಟರ್ ಲಾರಿಸ್ಸಾ ವಾಟರ್ಸ್ (Larissa Waters) ಎಂಬುವವರು ಸಂಸತ್ತಿಗೆ ಮಗುವಿನೊಂದಿಗೆ ಬಂದಿದ್ದು ಮಾತ್ರವಲ್ಲದೆ, ಅಲ್ಲಿಯೇ ಮಗುವಿಗೆ ಹಾಲೂಡಿ ಗಮನ ಸೆಳೆದಿದ್ದರು. ಸಂಸತ್ತಿನಲ್ಲಿ ಮಗುವಿಗೆ ಹಾಲೂಡಿದ ಮೊದಲ ಸಿನೇಟರ್ ಎನ್ನುವ ಖ್ಯಾತಿಗೂ ಭಾಜನರಾಗಿದ್ದರು. 

click me!