ರಾಜಕೀಯಕ್ಕೂ ಸೈ, ಕೃಷಿ ಕಾರ್ಯಕ್ಕೂ ಸೈ ಎನ್ನುವ ವಿಜಯಲಕ್ಷ್ಮೀ

By Ravi Janekal  |  First Published Jul 6, 2023, 6:12 AM IST

ಮಹಿಳೆ ಕಾಲಘಟ್ಟಕ್ಕೆ ಅನುಗುಣವಾಗಿ ಬದಲಾವಣೆಗೊಳ್ಳುತ್ತ ತನ್ನ ವ್ಯಾಪ್ತಿ ಹೆಚ್ಚಿಸಿಕೊಳ್ಳುತ್ತಿದ್ದಾಳೆ ಎನ್ನುವುದಕ್ಕೆ ತಾಲೂಕಿನ ಕಡಹಳ್ಳಿ ವಿಜಯಲಕ್ಷ್ಮೀ ಶಂಕರಪ್ಪ ಮುಂದಿನಮನಿ ಉದಾಹರಣೆ. ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದರೂ ಅವರು ಗೋವಿನಜೋಳ ಎಡೆ ಹೊಡೆಯುವ ಮೂಲಕ ಮಾದರಿ ಎನಿಸಿದ್ದಾರೆ.


ಬಸವರಾಜ ಹಿರೇಮಠ

ಶಿಗ್ಗಾಂವಿ (ಜು.6) :  ಮಹಿಳೆ ಕಾಲಘಟ್ಟಕ್ಕೆ ಅನುಗುಣವಾಗಿ ಬದಲಾವಣೆಗೊಳ್ಳುತ್ತ ತನ್ನ ವ್ಯಾಪ್ತಿ ಹೆಚ್ಚಿಸಿಕೊಳ್ಳುತ್ತಿದ್ದಾಳೆ ಎನ್ನುವುದಕ್ಕೆ ತಾಲೂಕಿನ ಕಡಹಳ್ಳಿ ವಿಜಯಲಕ್ಷ್ಮೀ(Kadahalli vijayalakshmi shankarappa) ಶಂಕರಪ್ಪ ಮುಂದಿನಮನಿ ಉದಾಹರಣೆ. ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದರೂ ಅವರು ಗೋವಿನಜೋಳ ಎಡೆ ಹೊಡೆಯುವ ಮೂಲಕ ಮಾದರಿ ಎನಿಸಿದ್ದಾರೆ.

Tap to resize

Latest Videos

undefined

ಇಂದಿನಿದೇನಿದ್ದರೂ ಆಧುನಿಕ ಯುಗ. ತಂತ್ರಜ್ಞಾನದ್ದೇ ಅಬ್ಬರ. ಈ ಮಧ್ಯೆ ಅಭಿವೃದ್ಧಿ ಹೊಂದುತ್ತಿರುವ ಭಾರತದಲ್ಲಿ ಒಂದು ಕಾಲದಲ್ಲಿ ಜೀವನದ ಅವಿಭಾಜ್ಯ ಅಂಗವಾಗಿದ್ದ ಕೃಷಿಯಿಂದ ಇಂದು ಬಹುಪಾಲು ಜನ ವಿಮುಖರಾಗುತ್ತಿದ್ದಾರೆ. ಕಾರ್ಪೊರೇಟ್‌ ಜೀವನಶೈಲಿ ಜತೆ ಹೈಟೆಕ್‌ ಉದ್ಯೋಗ ಬೆನ್ನತ್ತಿರುವ ನಮ್ಮ ಯುವಜನಾಂಗ ಬೇಸಾಯದಿಂದ ಬೇಸರಗೊಂಡು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಆದರೆ ಇದಕ್ಕೆ ಅಪವಾದವೆನ್ನುವಂತೆ ಯುವ ಗೃಹಿಣಿ ರಾಜಕಾರಣ, ಕುಟುಂಬ ನಿರ್ವಹಣೆ ಜತೆಗೆ ಕೃಷಿ ಕಾಯಕ ಕೈಗೊಂಡಿದ್ದಾರೆ. ಇವರ ಕಾಯಕದ ಇನ್ನೊಂದು ವಿಶೇಷತೆ ಎಂದರೆ ಸ್ವತಃ ತಾವೇ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು.

Wild Animal attack: ಕಾಡುಪ್ರಾಣಿಗಳ ದಾಳಿ: ಮೆಕ್ಕೆಜೋಳ ಬೆಳೆ ನಾಶ

ರಾಜಕಾರಣದೊಂದಿಗೆ ಇವರನ್ನು ಸೆಳೆದಿದ್ದು ಕೃಷಿ. ಹೌದು ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂದುಕೊಂಡ ಇವರು ಕೃಷಿಯಲ್ಲಿ ತೊಡಗಿಸಿಕೊಂಡರು. ಕುಂಟೆ ಹೊಡೆಯುವುದು, ಕಳೆ ಕೀಳುವುದು, ಟ್ರ್ಯಾಕ್ಟರ್‌ ಹೊಡೆಯುವುದು(ರೊಳ್ಳಿ ಹೊಡೆಯುವುದು), ಕಾರ್ಮಿಕರ ಜತೆಗೂಡಿ ಭತ್ತದ ನಾಟಿ ಮಾಡುವುದು ಇವರ ದಿನಚರಿ. ಸಾಂಪ್ರದಾಯಿಕ ಕೃಷಿ ಜತೆಗೆ ಲಾಭದಾಯಕ ವಾಣಿಜ್ಯ ಬೆಳೆಗಳನ್ನು ಬೆಳೆಯಬೇಕೆನ್ನುವ ವಿಚಾರಧಾರೆ ಇವರದು.

ಸಾಂಪ್ರದಾಯಿಕ ಕೃಷಿ ಜತೆಗೆ ಲಾಭದಾಯಕ ವಾಣಿಜ್ಯ ಬೆಳೆ ಬೆಳೆಯಬೇಕೆನ್ನುವ ವಿಚಾರಧಾರೆ ಇವರದು. 10 ಎಕರೆ ಸ್ವಂತ ಜಮೀನು ಹೊಂದಿದ್ದರೆ 6 ಎಕರೆ ಲಾವಣಿ ಹಾಕಿಕೊಂಡು ಕೃಷಿ ಮಾಡುತ್ತಿದ್ದಾರೆ. ಸಾವಯವ ಕೃಷಿಯಿಂದ ಕೊಟ್ಟಿಗೆಯ ಗೊಬ್ಬರ ಹಾಗೂ ನೈಸರ್ಗಿಕ ಗೊಬ್ಬರ ಬಳಕೆಯಿಂದ ಬೆಳೆ ಬೆಳೆಯುತ್ತಿದ್ದೇವೆ. ಗೋವಿನಜೋಳ, ಬತ್ತ, ಕಬ್ಬು ಸೇರಿದಂತೆ ವಿವಿಧ ಬೆಳೆ ಬೆಳೆಯುತ್ತೇವೆ ಎನ್ನುತ್ತಾರೆ ವಿಜಯಲಕ್ಷ್ಮಿ.

ಪ್ರಶಸ್ತಿ:

ಕೃಷಿ ಇಲಾಖೆಯಿಂದ 2019ರಲ್ಲಿ ಶ್ರೇಷ್ಠ ಕೃಷಿಕ ಮಹಿಳೆ ಪ್ರಶಸ್ತಿ, ಹುಬ್ಬಳ್ಳಿಯ ಬಸವ ಸಂಸ್ಥೆಯಿಂದ ಬಸವಶ್ರೀ, ರಾಣಿ ಚೆನ್ನಮ್ಮ ಪ್ರಶಸ್ತಿ, ಗಾಣಿಗ ಜ್ಯೋತಿ ಪ್ರಶಸ್ತಿ ದೊರಕಿವೆ. ವಿಜಯಲಕ್ಷ್ಮೀ ಸದಾ ಕ್ರಿಯಾಶೀಲ ಗೃಹಿಣಿ. ಬೆಳಗ್ಗೆ 5 ಗಂಟೆಗೆ ಎದ್ದು ಮಕ್ಕಳಿಗೆ ಅಡುಗೆ ತಯಾರಿಸಿ ಶಾಲೆಗೆ ಕಳುಹಿಸುವ ಜತೆಗೆ ಕುಟುಂಬ ನಿರ್ವಹಣೆಯಲ್ಲಿ ಸೈ ಎನಿಸಿಕೊಂಡಿರುವ ಇವರು ಇಂದಿನ ಉದ್ಯೋಗಸ್ಥ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಸಂಜೆ ಹೊಲದಿಂದ ಬಂದ ನಂತರ ಮಕ್ಕಳ ಪ್ರಗತಿಯ ವಿದ್ಯಾಭ್ಯಾಸದತ್ತ ಗಮನ.

ಈಕೆ ಬಿಕಿನಿ ಧರಿಸಿ ಹೊಲದಲ್ಲಿ ಕೆಲಸ ಮಾಡ್ತಾಳೆ!

ಸ್ವತಃ ತಾವೇ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಹಿನ್ನೆಲೆಯಲ್ಲಿ ರೈತನ ಸಮಸ್ಯೆಗಳೇನು ಎಂಬುದನ್ನು ಮನಗಂಡಿರುವ ವಿಜಯಲಕ್ಷ್ಮೀ ಅವಕಾಶ ಸಿಕ್ಕಾಗ ಅವರ ಸಮಸ್ಯೆಗಳಿಗೆ ಧ್ವನಿಯಾದವರು. ತಮ್ಮ ಜಮೀನಿನಲ್ಲಿ ಹತ್ತಾರು ಕಾರ್ಮಿಕರಿಗೆ ಕೆಲಸ ನೀಡುವ ಮೂಲಕ ಅವರ ಬಾಳಿಗೆ ಆಸರೆಯಾಗಿದ್ದಾರೆ. ಸುತ್ತಮುತ್ತ ಕೃಷಿಕರಿಗೆ ಅಗತ್ಯ ಕೃಷಿ ಮಾಹಿತಿ, ಬೀಜ ಖರೀದಿ, ರಸಗೊಬ್ಬರ ಜತೆಗೆ ಸಾವಯವ ಕೃಷಿಯತ್ತ ಒಲವು ಮೂಡಿಸುವ ಮಹತ್ತರ ಕೆಲಸ ಮಾಡುತ್ತಿದ್ದಾರೆ.

click me!