
ಭಾರತೀಯರು ಆಭರಣ ಪ್ರೀಯರು. ಬೆಳ್ಳಿ, ಬಂಗಾರ, ವಜ್ರ, ಮುತ್ತು ಹೀಗೆ ನವರತ್ನಗಳ ಆಭರಣಗಳನ್ನು ಇಲ್ಲಿನ ಜನರು ಧರಿಸುತ್ತಾರೆ. ಅದರಲ್ಲೂ ಮದುವೆ ಮುಂತಾದ ಸಮಾರಂಭಗಳಲ್ಲಿ ಮಹಿಳೆಯರು ಬೆಲೆಬಾಳುವ ಆಭರಣಗಳಿಂದ ಕಂಗೊಳಿಸುತ್ತಾರೆ. ಇತ್ತೀಚೆಗೆ ಪುರುಷರು ಕೂಡ ಆಭರಣಗಳನ್ನು ಧರಿಸುವುದು ಟ್ರೆಂಡ್ ಆಗಿದೆ.
ಆಭರಣ (Jewelry) ಗಳು ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ, ಆದರೆ ಅಷ್ಟು ಬೆಲೆಬಾಳುವ ಒಡವೆಗಳನ್ನು ಧರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದು ಕಷ್ಟ. ಹಾಗಂತ ಇದನ್ನು ಬ್ಯಾಗ್ ನಲ್ಲಿ ಇಟ್ಟುಕೊಳ್ಳಲು ಕಳ್ಳರ ಭಯ. ರಾತ್ರಿಯ ಸಮಯದಲ್ಲಿ ಬಸ್ ಗಳಲ್ಲಿ ಪ್ರಯಾಣ ಮಾಡುವಾಗ ಆಭರಣಗಳನ್ನು ಹೇಗೆ ಭದ್ರವಾಗಿ ಇಟ್ಟುಕೊಳ್ಳಬೇಕೆಂಬ ಚಿಂತೆ ಹಲವರನ್ನು ಕಾಡುತ್ತದೆ. ಏಕೆಂದರೆ, ಎಲ್ಲ ಸಮಯದಲ್ಲೂ ನಮಗೆ ಅದರ ಮೇಲೆ ಗಮನವಿಟ್ಟುಕೊಳ್ಳುವುದು ಅಸಾಧ್ಯ. ಹಾಗೆಯೇ ಯಾರು ಕಳ್ಳತನ ಮಾಡಿರಬಹುದೆಂದು ಊಹಿಸಲೂ ಸಾಧ್ಯವಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಫ್ಲೈಟ್ ಅಟೆಂಡೆಂಟ್ (Flight attendant) ಒಬ್ಬರು ಒಳ್ಳೆಯ ಲೈಫ್ ಹ್ಯಾಕ್ (Life Hack) ಅನ್ನು ತಿಳಿಸಿದ್ದಾರೆ. ಅದನ್ನು ಅಳವಡಿಸಿಕೊಂಡರೆ ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿ ಇಟ್ಕೊಳ್ಳಬಹುದು.
ಜಿಮ್: ಪುರುಷತ್ವದ ಪ್ರದರ್ಶನವೊ? ಸಾವಿನ ಹಾದಿಯೊ? ಲಾಭದ ಮಾರ್ಗವೊ?
ಫ್ಲೈಟ್ ಅಟೆಂಡೆಂಟ್ ಆಗಿರುವ ಮೈಗ್ಯುಯೆಲ್ ಮೂನೋಜ್ ಅವರು ಬೆಲೆಬಾಳುವ ವಸ್ತುಗಳು ಕಾಣೆಯಾಗುವುದನ್ನು ತಪ್ಪಿಸಲು ಒಳ್ಳೆಯ ಉಪಾಯವನ್ನು ಹೇಳಿದ್ದಾರೆ. ಬೆಲೆಬಾಳುವ ವಸ್ತುಗಳನ್ನು ಯಾರೂ ಊಹಿಸದ ರೀತಿಯಲ್ಲಿ ನೀವು ಇಟ್ಟುಕೊಳ್ಳಬೇಕು ಎಂದು ಮೂನೋಜ್ ಹೇಳುತ್ತಾರೆ. ಅವರು ನಿಮ್ಮೊಂದಿಗೆ ಯಾವಾಗಲೂ ಒಂದು ಖಾಲಿಯಾಗಿರುವ ಚಿಪ್ಸ್ ಪ್ಯಾಕೆಟ್ ಇಟ್ಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಕೇವಲ ಒಂದು ಚಿಪ್ಸ್ ಪ್ಯಾಕೆಟ್ ನಿಂದ ಬಂಗಾರ ಮುಂತಾದ ಆಭರಣಗಳನ್ನು ಹೇಗೆ ಸುರಕ್ಷಿತವಾಗಿ ಇಟ್ಟುಕೊಳ್ಳಬಹುದೆಂದು ನೋಡೋಣ.
ಆಭರಣಗಳನ್ನು ಇಡಲು ಚಿಪ್ಸ್ ಪ್ಯಾಕೆಟ್ ಬಳಸಿ : ಬಸ್ ಅಥವಾ ಕಾರ್ ನಲ್ಲಿ ಪ್ರಯಾಣಿಸುವಾಗ ನಾವು ಚಿಪ್ಸ್ ಮುಂತಾದ ತಿಂಡಿ ತಿನಿಸುಗಳನ್ನು ತೆಗೆದುಕೊಂಡು ಹೋಗ್ತೇವೆ. ಅವು ಖಾಲಿಯಾದ ನಂತರ ಅದನ್ನು ಬಿಸಾಡುತ್ತೇವೆ. ಹಾಗೆ ನಾವು ಬಿಸಾಡುವ ಚಿಪ್ಸ್ ಕವರ್ ನಲ್ಲೇ ನಾವು ಆಭರಣಗಳನ್ನು ಭದ್ರವಾಗಿ ಇಡಬಹುದು ಎಂದರೆ ನೀವು ನಂಬ್ತೀರಾ?
ನಾವು ಪ್ರವಾಸಕ್ಕೆ ಅಥವಾ ಬೇರೆ ಊರಿನಲ್ಲಿ ನಡೆಯುವ ಫಂಕ್ಷನ್ ಗಳಿಗೆ ಹೋದಾಗ ಹೋಟೆಲ್ ಗಳಲ್ಲಿ ಉಳಿದುಕೊಳ್ಳುವ ಸಂದರ್ಭ ಎದುರಾಗುತ್ತೆ. ಬೇರೆ ಊರುಗಳಿಗೆ ಹೋದಾಗ ಅಲ್ಲಿ ನಮ್ಮ ಪರಿಚಿತರು ಕೂಡ ಯಾರೂ ಇರುವುದಿಲ್ಲ. ಅಂತಹ ಸಮಯದಲ್ಲಿ ನಮ್ಮ ಬಳಿ ಇರುವ ಒಡವೆಗಳನ್ನು ಹೇಗೆ ಜೋಪಾನ ಮಾಡುವುದು ಎನ್ನುವುದೇ ದೊಡ್ಡ ಸಮಸ್ಯೆಯಾಗುತ್ತದೆ. ಅಂತಹ ಸಂದರ್ಭದಲ್ಲಿ ಟಿನ್ ಫೈಲ್ ಅಥವಾ ಚಿಪ್ಸ್ ಪ್ಯಾಕೆಟ್ ಗಳಲ್ಲಿ ಆಭರಣಗಳನ್ನು ಇಟ್ಟುಕೊಂಡರೆ ಯಾರಿಗೂ ಅನುಮಾನ ಬರೋದಿಲ್ಲ. ಆಭರಣ ಎಂದ ಮೇಲೆ ದೊಡ್ಡ ಬಾಕ್ಸ್ ಅಥವಾ ಪೆಟ್ಟಿಗೆಯಲ್ಲಿ ಇರುತ್ತದೆ ಎಂಬ ವಿಚಾರದಲ್ಲೇ ಕಳ್ಳರು ಸೂಟ್ ಕೇಸ್, ಅಲ್ಮಾರಿ, ಬ್ಯಾಗ್ ಮುಂತಾದ ಕಡೆ ಹುಡುಕುತ್ತಾರೆ. ಪ್ಲಾಸ್ಟಿಕ್ ಕೊಟ್ಟೆಯಲ್ಲಿ ಆಭರಣಗಳು ಇರಬಹುದೆಂದು ಯಾರೂ ಊಹಿಸುವುದಿಲ್ಲ ಎಂದು ಮೂನೋಜ್ ಹೇಳ್ತಾರೆ.
ಕೂಲ್ ಸ್ವಭಾವದವರು ನೀವಾಗಿದ್ದರೆ, ಈ ತಪ್ಪು ಯಾವತ್ತೂ ಮಾಡೋಲ್ಲ!
ಒಡವೆಗಳನ್ನು ಹೀಗೆ ಊಹೆಗೂ ನಿಲುಕದ ಸ್ಥಳದಲ್ಲಿ ಇರಿಸಿದರೆ ಯಾರೂ ಕೂಡ ಅದನ್ನು ಅಂದಾಜು ಮಾಡಲು ಸಾಧ್ಯವಿಲ್ಲ ಎನ್ನುವುದು ಈ ಫ್ಲೈಟ್ ಅಟೆಂಡರ್ ಸಲಹೆ. ಅವರ ಈ ಸಲಹೆಗೆ ಅನೇಕರು ತಮ್ಮ ಅಭಿಪ್ರಾಯವನ್ನು ಕೂಡ ಹೇಳಿದ್ದಾರೆ. ಅವರಲ್ಲಿ ಕೆಲವರಿಗೆ ಮೂನೋಜ್ ಅವರ ಲೈಫ್ ಹ್ಯಾಕ್ ಇಷ್ಟವಾಗಿಲ್ಲ. ಪ್ಲಾಸ್ಟಿಕ್ ಕೊಟ್ಟೆಯ ಬದಲು ಬಟ್ಟೆಯ ಸೀಕ್ರೆಟ್ ಪಾಕೆಟ್, ಧಾರ್ಮಿಕ ಪುಸ್ತಕ ಅಥವಾ ಕಾಸ್ಮೆಟಿಕ್ ಡಬ್ಬಗಳಲ್ಲಿ ಕೂಡ ನಾವು ಬಂಗಾರ ಹಾಗೂ ಇನ್ನಿತರ ಒಡವೆಗಳನ್ನು ಇಟ್ಟುಕೊಳ್ಳಬಹುದೆಂಬುದು ಕೆಲವರ ಅಭಿಪ್ರಾಯವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.