ಚಿಕ್ಕವಯಸ್ಸಿನಲ್ಲಿ ಪಿರಿಯಡ್ಸ್ ಆದ್ರೆ ಡಯಾಬಿಟಿಸ್ ಬರೋ ಛಾನ್ಸಸ್ ಹೆಚ್ಚಿರುತ್ತಾ?

By Vinutha PerlaFirst Published Feb 3, 2024, 12:18 PM IST
Highlights

ಮಧುಮೇಹ ಇತ್ತೀಚಿನ ಕೆಲ ವರ್ಷಗಳಲ್ಲಿ ಹಲವರನ್ನು ಕಾಡುತ್ತಿರುವ ಸಮಸ್ಯೆ. ಸಣ್ಣ ವಯಸ್ಸಿನಲ್ಲೇ ಇದು ಹಲವರಿಗೆ ವಕ್ಕರಿಸಿ ಬಿಡುತ್ತದೆ. ಕೆಲವು ಕೆಟ್ಟ ಅಭ್ಯಾಸಗಳಿಂದ ಮಧುಮೇಹ ಬರೋ ಅಪಾಯ ಹೆಚ್ಚಾಗಿರುತ್ತದೆ. ಮಾತ್ರವಲ್ಲ ಬೇಗ ಪೀರಿಯೆಡ್ಸ್ ಆಗೋ ಹುಡುಗಿಯರಿಗೆ ಡಯಾಬಿಟಿಸ್ ಸಾಧ್ಯತೆ ಹೆಚ್ಚು ಅಂತಾರೆ. ಇದು ನಿಜಾನ?

ಪಿರಿಯಡ್ಸ್ ಸಹಜ ಪ್ರಕ್ರಿಯೆ. ಇದು ಪ್ರತಿ ಮಹಿಳೆಗೆ ಸಂಭವಿಸುತ್ತದೆ. ಋತುಚಕ್ರ ಸಾಮಾನ್ಯವಾಗಿ ಹದಿಹರೆಯದ ಆರಂಭದಲ್ಲಿ ಬರುತ್ತವೆ. ಆದರೆ ಕೆಲವೊಬ್ಬರಿಗೆ 13 ವರ್ಷದಲ್ಲೇ ಪಿರಿಯಡ್ಸ್ ಆಗುವುದು ಇದೆ. ಈ ಕುರಿತ ಇತ್ತೀಚಿನ ಅಧ್ಯಯನವೊಂದು ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದೆ. ಅದೇನೆಂದರೆ 13 ವರ್ಷಕ್ಕಿಂತ ಮೊದಲು ಪಿರಿಯಡ್ಸ್ ಆಗುವವರಿಗೆ ಟೈಪ್-2 ಡಯಾಬಿಟಿಸ್ ಬರುವ ಅಪಾಯ ಹೆಚ್ಚು ಎಂದು ಇದರಲ್ಲಿ ಹೇಳಲಾಗಿದೆ. ಬ್ರಿಟಿಷ್ ಮೆಡಿಕಲ್ ಜನರಲ್ ನ್ಯೂಟ್ರಿಷನ್ ಪ್ರಿವೆನ್ಷನ್ ಮತ್ತು ಹೆಲ್ತ್ ಅಧ್ಯಯನದಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ. 

ಅಧ್ಯಯನವು 20-65 ವರ್ಷ ವಯಸ್ಸಿನ 17,000 ಮಹಿಳೆಯರನ್ನು ಒಳಗೊಂಡಿತ್ತು. 13 ವರ್ಷಕ್ಕಿಂತ ಮೊದಲು ಮುಟ್ಟಿನ ಅವಧಿಯನ್ನು ಹೊಂದಿರುವ ಹುಡುಗಿಯರಿಗೆ ಮಧುಮೇಹ ಬರುವ ಅಪಾಯವಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಇದಲ್ಲದೆ, ಈ ಅಧ್ಯಯನವು 10 ವರ್ಷಕ್ಕಿಂತ ಮೊದಲು ತಮ್ಮ ಅವಧಿಯನ್ನು ಪ್ರಾರಂಭಿಸಿದ ಮಹಿಳೆಯರಿಗೆ ಮಧುಮೇಹವನ್ನು ಹೊಂದಿದ್ದರೆ, 65 ವರ್ಷಕ್ಕಿಂತ ಮುಂಚೆಯೇ ಪಾರ್ಶ್ವವಾಯು ಅಪಾಯವು ಗಮನಾರ್ಹವಾಗಿ ಹೆಚ್ಚಾಗುತ್ತದೆ ಎಂದು ತಿಳಿಸುತ್ತದೆ. ಆದರೆ ಇದಕ್ಕೆ ಕಾರಣಗಳನ್ನು ಬಹಿರಂಗಪಡಿಸಲಾಗಿಲ್ಲ. 

30 ವರ್ಷಕ್ಕಿಂತ ಮೇಲ್ಪಟ್ಟವರು ಮಧುಮೇಹದ ಈ ಲಕ್ಷಣಗಳನ್ನು ಎಂದಿಗೂ ಕಡೆಗಣಿಸ್ಬೇಡಿ

ಮಧುಮೇಹ ತಡೆಯುವುದು ಹೇಗೆ?

ಆರೋಗ್ಯಕರ ಆಹಾರ
ಸಂಸ್ಕರಿಸಿದ ಆಹಾರಗಳು ಮತ್ತು ಜಂಕ್ ಫುಡ್ ತುಂಬಾ ರುಚಿಕರವಾಗಿರುತ್ತದೆ. ಅದಕ್ಕಾಗಿಯೇ ಅನೇಕ ಜನರು ಅವುಗಳನ್ನು ನಿಯಮಿತವಾಗಿ ತಿನ್ನುತ್ತಾರೆ. ಆದರೆ ಇವು  ಆರೋಗ್ಯಕ್ಕೆ ಒಳ್ಳೆಯದಲ್ಲ. ಇಂಥಾ ಆಹಾರಗಳ ಸೇವನೆ ವಿವಿಧ ಕಾಯಿಲೆಗಳೊಂದಿಗೆ ಮಧುಮೇಹದ ಅಪಾಯವನ್ನು ಸಹ ಹೆಚ್ಚಿಸುತ್ತದೆ. ಹೀಗಾಗಿ ಇವುಗಳ ಬದಲಿಗೆ ಹಾಲು, ಹಣ್ಣು, ಸೊಪ್ಪು, ಮೊಸರು ಇತ್ಯಾದಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು. ನಾರಿನಂಶವಿರುವ ಆಹಾರವನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುವುದು ಸುಲಭವಾಗುತ್ತದೆ.

ವ್ಯಾಯಾಮ
ವ್ಯಾಯಾಮವು ದೇಹವನ್ನು ಸದೃಢವಾಗಿಡುವುದು ಮಾತ್ರವಲ್ಲದೆ ಅನೇಕ ರೋಗಗಳಿಂದ ದೂರವಿಡುತ್ತದೆ. ನಿಯಮಿತ ವ್ಯಾಯಾಮದಿಂದ ಬೊಜ್ಜು ಕಡಿಮೆ ಮಾಡಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟವೂ ನಿಯಂತ್ರಣದಲ್ಲಿರುತ್ತದೆ. ಆದ್ದರಿಂದ ಪ್ರತಿದಿನ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡಿ. ಇದು ದೇಹದಲ್ಲಿರುವ ಹೆಚ್ಚುವರಿ ಕ್ಯಾಲೋರಿಗಳನ್ನು ಕಡಿಮೆ ಮಾಡುತ್ತದೆ. 

ಮಧುಮೇಹಿಗಳು ಬೆಳಗ್ಗೆದ್ದು ಏನು ಕುಡಿದ್ರೆ ಶುಗರ್ ಲೆವೆಲ್‌ ಮೈಂಟೇನ್‌ ಮಾಡ್ಬೋದು

ತೂಕ ಇಳಿಸಿಕೊಳ್ಳಬೇಕು
BMI (Body mass index)ಸಾಮಾನ್ಯಕ್ಕಿಂತ ಹೆಚ್ಚಿದ್ದರೆ, ಖಂಡಿತವಾಗಿಯೂ ತೂಕ ಇಳಿಸಿಕೊಳ್ಳಲು ಪ್ರಯತ್ನಿಸಿ. ಏಕೆಂದರೆ ಅಧಿಕ ತೂಕವು ನಿಮ್ಮ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ತೂಕವನ್ನು ಕಳೆದುಕೊಳ್ಳಲು ಪ್ರತಿದಿನ ವ್ಯಾಯಾಮ ಮಾಡಬೇಕು. ಆರೋಗ್ಯಕರ ಆಹಾರವನ್ನು ಸೇವಿಸಬೇಕು. 

ಧೂಮಪಾನ ಮಾಡದಿರಿ
ಅನೇಕ ಅಪಾಯಕಾರಿ ರೋಗಗಳು ಧೂಮಪಾನದಿಂದ ಬರುತ್ತವೆ. ಇವುಗಳಲ್ಲಿ ಮಧುಮೇಹವೂ ಸೇರಿದೆ. ಹಾಗಾಗಿ ಧೂಮಪಾನದಿಂದ ದೂರವಿದ್ದರೆ ಮಧುಮೇಹದಿಂದಲೂ ದೂರವಿರಬಹುದು.

click me!