
-ವಿನುತಾ ಪೆರ್ಲ
ಆಗೊಮ್ಮೆ ಈಗೊಮ್ಮೆ ತೀರಾ ಬೇಜಾರು ಅನಿಸಿದಾಗ ಸಿನಿಮಾ ನೋಡುವುದು ಅಭ್ಯಾಸ. ಹಾಗಾಗಿಯೇ ನೋಡಲು ಹೊರಟ ಸಿನಿಮಾ `ದಿ ಗ್ರೇಟ್ ಇಂಡಿಯನ್ ಕಿಚನ್" ಚಿತ್ರದ ಹೆಸರಲ್ಲಿ ಇರುವಂತೆಯೇ ಇದು ಒಂದು ಮನೆಯ ಅಡುಗೆ ಕೋಣೆಯೊಳಗಿನ ಕುರಿತಾದ ಚಿತ್ರ. ದಿನಪೂರ್ತಿ ಅಡುಗೆಮನೆಯಲ್ಲಿ ದುಡಿಯುವ ಮಹಿಳೆ, ಡ್ರೈನಿಂಗ್ ಟೇಬಲ್ ಮೇಲೆ ಹಾಜರಾಗಿ ಪಟ್ಟಾಗಿ ತಿಂದು ಎಲ್ಲಾ ಚೆಲ್ಲಿ ಎದ್ದು ಹೋಗುವ ಗಂಡಸರು, ಹೆಣ್ಣಿನ ಶೋಷಣೆಯ ಸೃಷ್ಟಿ ಚತ್ರಣವನ್ನು ಇಲ್ಲಿ ಕಟ್ಟಿ ಕೊಡಲಾಗಿದೆ. ಮಲಯಾಳಂ ಭಾಷೆಯ ಈ ಸಿನಿಮಾ ನೋಡುತ್ತಾ ಹೋದಂತೆಲ್ಲಾ ಹೆಚ್ಚು ಇಷ್ಟವಾಯಿತು.
ಕಾಲ ಅದೆಷ್ಟು ಬದಲಾದರೂ ಕೆಲವೊಂದು ವಿಚಾರಗಳು ಬದಲಾಗಿಲ್ಲ. ಬಹುರ್ಶ ಬದಲಾಗುವುದೇ ಇಲ್ಲವೇನೋ. ಅದರಲ್ಲಿ ಮೊದಲ ಸ್ಥಾನದಲ್ಲಿ ಬರುವುದು ಹೆಣ್ಣಿಗಿರುವ ಕಟ್ಟುಪಾಡುಗಳು, ಆಚಾರದ ಹೆಸರಿನಲ್ಲಿ ಜಾರಿಯಲ್ಲಿರುವ ಅರ್ಥಹೀನ ಪದ್ಧತಿಗಳು ಅಂತಹಾ ವಿಚಾರಗಳನ್ನು ಈ ಸಿನಿಮಾದಲ್ಲಿ ಚಿತ್ರಿಸಿಕೊಡಲಾಗಿದೆ.
Womens Day 2023 Wishes: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು
ಅಡುಗೆ ಮನೆಯ ಕೆಲಸವನ್ನೆಲ್ಲಾ ಹೆಣ್ಣೇ ಮಾಡಬೇಕು ಯಾಕೆ?
ಉದ್ಯೋಗಕ್ಕೆ ಮನೆಯಿಂದ ಹೊರಹೋಗುವ ಪುರುಷರು, ಮಾತೆತ್ತಿದರೆ ಸಾಕು ಹೆಂಡತಿಯ ಮೇಲೆ ಧ್ವನಿಯೇರಿಸುತ್ತಾರೆ. ಈ ಸಿನಿಮಾದ ಕಥಾಹಂದರವೇ ಇದು, ಸಾಮಾನ್ಯ ಹುಡುಗಿಯೊಬ್ಬಳು ಮದುವೆಯಾಗಿ ಸಾಂಪ್ರದಾಯಿಕ ಕುಟುಂಬದ ಮನೆ ಸೇರುತ್ತಾಳೆ. ಅಲ್ಲಿಂದ ದಿ ಗ್ರೇಟ್ ಇಂಡಿಯನ್ ಕಿಚನ್ ಕತೆ ಶುರುವಾಗುತ್ತದೆ. ಕಿಚನ್‌ನಲ್ಲಿ ನಡೆಯುವ ಆಗುಹೋಗುಗಳೇ ಸಿನಿಮಾದ ಮುಖ್ಯ ಜೀವಾಳ. ಒಂದು ನಿಮಿಷ ನಿಲ್ಲಲೂ ಸಮಯವಿಲ್ಲದೆ ಗಂಡನ ಸೇವೆ ಮಾಡುತ್ತಾ, ಮನೆ ಮಂದಿಗೆ ಅಡುಗೆ ಮಾಡುತ್ತಾ, ಪಾತ್ರೆ ತೊಳೆಯುವುದರಲ್ಲೇ ದಿನ ಕಳೆಯುವ ಅತ್ತೆಯ ಪಾತ್ರ ಹೆಣ್ಣಿನ ಬವಣೆಯ ಪರಿಚಯ ಮಾಡಿಸುತ್ತದೆ. ಮಗಳು ಗರ್ಭಿಣಿಯೆಂದು ಅತ್ತೆ ಆಕೆಯ ಮನೆಗೆ ಹೊರಟು ಹೋದ ಬೆನ್ನಲ್ಲೇ ಮನೆಯ ಉಸ್ತುವಾರಿ ಹೊಸ ಸೊಸೆಯ ಮೇಲೆ ಬೀಳುತ್ತದೆ. ಜತೆಗೇ ಮನೆಯ ಪುರುಷರ ಉದಾಸೀ ಮನೋಭಾವದ ಪರಿಚಯವಾಗುತ್ತದೆ.
ಬೆಳ್ಳಂಬೆಳಗ್ಗೆ ಎದ್ದು ಅವಳೊಬ್ಬಳು ಎದ್ದೂ ಬಿದ್ದೂ ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿದ್ದರೆ, ಗಂಡ ವ್ಯಾಯಾಮ ಮಾಡುತ್ತಾ, ಮಾವ ಪೇಪರು ಓದುತ್ತಾ ಸಮಯ ಕಳೆಯುತ್ತಿರುತ್ತಾರೆ. ಅಡುಗೆ ಮನೆಯ ಕೆಲಸವನ್ನು ಎಲ್ಲಾ ಒಬ್ಬಳೇ ಮಾಡುವುದರ ಜತೆಗೇ ಮಾವ ಕೂತಲ್ಲಿಗೇ ಬಂದು ಬ್ರಷ್, ಟೂತ್‌ಪೇಸ್ಟ್ ಕೊಡುವ ಪದ್ಧತಿ ಅವಳಿಗೆ ಅಚ್ಚರಿ ಎನಿಸುತ್ತದೆ.
ಆಕೆಗೆ ಮತ್ತದೇ ಕೆಲಸ. ಮುಖ ಸಿಂಡರಿಸುತ್ತಲೇ ಟೇಬಲ್ ಒರೆಸಿ, ಬಟ್ಟಲಲ್ಲಿ ಉಳಿದ ಎಂಜಲನ್ನು ಡಸ್‌ಟ್‌ಬಿನ್‌ಗೆ ಹಾಕಿ ರಾಶಿಬಿದ್ದ ಪಾತ್ರೆಯನ್ನೆಲ್ಲಾ ತೊಳೆದು ಮತ್ತೆ ಮಧ್ಯಾಹ್ನದ ಅಡುಗೆಗೆ ತಯಾರಿ ಶುರು. ಈ ಮಧ್ಯೆ ಮಾವನಿಗೆ ಕುಕ್ಕರಲ್ಲಿ ಬೇಯಿಸಿದ ಅನ್ನ ಆಗುವುದಿಲ್ಲವೆಂದು, ಒಲೆ ಉರಿಸಿ ಅನ್ನವಿಡುವ ಎಕ್‌ಸ್‌ಟ್ರಾ ಕೆಲಸ, ವಾಶಿಂಗ್ ಮೆಶಿನ್‌ನಲ್ಲಿ ಒಗೆದರೆ ಬಟ್ಟೆ ಹಾಳಾಗುತ್ತದೆ ಎಂಬ ತಾಕೀತಿನಿಂದ ಮಾವನ ಬಟ್ಟೆಯನ್ನು ಪ್ರತ್ಯೇಕವಾಗಿ ಒಗೆಯಬೇಕಾಗುತ್ತದೆ. ದೊಡ್ಡ ಮನೆಯ ಕಸ ತೆಗೆದು, ನೆಲ ಸಾರಿಸಿ ಸ್ವಚ್ಛ ಮಾಡುವ ಕೆಲಸವೂ ಅವಳ ಪಾಲಿಗೆ.
International womens day 2023: ಸ್ಪೆಷಲ್ ಆಗಿ ವಿಶ್ ಮಾಡಿದ ಗೂಗಲ್ ಡೂಡಲ್
ಹೆಣ್ಣು ಕಿಚನ್ ಬಿಟ್ಟು ಹೊರಗಡೆ ಕೆಲಸಕ್ಕೆ ಹೋಗುವುದು ತಪ್ಪಾ?
ಈ ಮಧ್ಯೆ ಸೋರುವ ಸಿಂಕು. ಮುಖ ಸಿಂಡರಿಸುತ್ತಲೇ ಅದರ ವಾಸನೆಯನ್ನು ಸಹಿಸಿಕೊಳ್ಳುತ್ತಾ ಸ್ವಚ್ಛ ಮಾಡುವ ಅವಳ ಮನಸ್ಥಿತಿ ಬಹುಶಃ ಅವಳೊಬ್ಬಳಿಗೆ ಅರ್ಥವಾಗುವಂತದ್ದು, ಈ ಮಧ್ಯೆ ನೆಂಟರಿಷ್ಟರು ಬಂದಾಗ ಅವಳ ಮೇಲೆ ಹೆಚ್ಚುವ ಕೆಲಸದ ಒತ್ತಡ. ಬಗೆಬಗೆಯ ಅಡುಗೆ, ಎಂಜಲು ಚೆಲ್ಲಿದ ಟೇಬಲ್, ತಳಹಿಡಿದ ಪಾತ್ರೆ ಅವಳನ್ನು ಮತ್ತಷ್ಟು ಹೈರಾಣಾಗಿಸುತ್ತದೆ. ಸಿಂಕ್ ಸರಿಯಿಲ್ಲವೆಂದರೂ ಸರಿಮಾಡದ ಗಂಡ, ಮನೆಯ ಪುರುಷರಿಗೆ ಅಡುಗೆ ಮನೆಯ ಸಮಸ್ಯೆಯ ಬಗ್ಗೆ ಏನೇನೂ ತಿಳಿದಿರುವುದಿಲ್ಲ ಅನ್ನೋದನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಈ ಮಧ್ಯೆ ಊಟಕ್ಕೆಂದು ಹೊಟೇಲ್‌ಗೆ ಹೋದಾಗ ನೀಟಾಗಿ ಊಟ ಮಾಡುವ ಗಂಡನನ್ನು ನೋಡಿ, ಹಾಗಾದ್ರೆ ಟೇಬಲ್ ಮ್ಯಾನರ್ಸ್ ಎಲ್ಲ ತಿಳಿದಿದೆ ಅಲ್ವಾ ಎಂದು ಹೆಂಡತಿ ಕೇಳಿದ್ದೇ ತಪ್ಪಾಗುತ್ತದೆ. ಇದೇ ವಿಷಯಕ್ಕೆ ಸಿಟ್ಟುಗೊಂಡ ಗಂಡ ಕ್ಷಮೆ ಕೇಳುವವರೆಗೂ ಹೆಂಡತಿಯ ಬಳಿ ಮಾತನಾಡುವುದಿಲ್ಲ. ತಾನು ಹಾಗೆ ಕೇಳಿದ್ದೇ ಮಹಾಪರಾಧವಾಯ್ತನೋ ಎಂದು ಆಕೆಯೇ ಅಂದುಕೊಳ್ಳುವಷ್ಟು ಹೀಯಾಳಿಸುತ್ತಾನೆ. ಈ ಮಧ್ಯೆ ಜಾಬ್‌ಗೆ ಅಪ್ಪೆ ಮಾಡುತ್ತೇನೆಂದು ಆಕೆ ಹೊರಟಾಗಲೂ ಗಂಡ, ಮಾವ ವಿರೋಧಿಸುತ್ತಾರೆ. ನಮ್ಮ ಮನೆಯಿಂದ ಹೆಣ್ಣುಮಕ್ಕಳು ಮನಯಿಂದ ಹೊರಗಡೆ ಕೆಲಸಕ್ಕೆ ಹೋಗುವುದಿಲ್ಲ ಎಂಬ ಕಟ್ಟುಪಾಡನ್ನು ವಿಧಿಸುತ್ತಾರೆ.
Womens Day: ಅರ್ಧ ನಾರೀಶ್ವರನಲ್ಲೇ ಇದೆ ಸಮಾನತೆಯ ಸಂದೇಶ
ಹೆಂಗಸರು ಇರೋದು ಮನೆಮಂದಿಯ ಸೇವೆ ಮಾಡಲು ಅಲ್ಲ!
ಆದರೆ ಎಲ್ಲಾ ಮನೆಯ ಗೃಹಿಣಿಯರಂತೆ ಆಕೆಯೂ ಎಲ್ಲವನ್ನೂ ಅವುಡುಗಚ್ಚಿ ಸಹಿಸಿ ಮುಂದುವರಿಯುತ್ತಾಳೆ. ಹೊಸ ಸಮಸ್ಯೆ ಶುರುವಾಗುವುದು ಆಕ ತಿಂಗಳ ಮುಟ್ಟಾದಾಗ, ಹಲವು ಹಳೆಯ ಪದ್ಧತಿಗಳು ಆಕೆಗ ಕಿರಿಕಿರಿಯನಿಸಲು ತೊಡಗುತ್ತದೆ. ಅದರಲ್ಲಿ ಹಲವು ವಿಚಾರಗಳು ಹಲವರಿಗೆ ಸರಿ ಅನಿಸಬಹುದು, ಇನ್ನು ಕೆಲವರಿಗೆ ಸರಿ ಅನಿಸದೇ ಇರಬಹುದು, ಕಾಲ ಬದಲಾದಂತೆ ಕೆಟ್ಟ ವಿಚಾರಗಳನ್ನು ಅಳಿಸಿ ಹಾಕಬೇಕು ನಿಜ, ಆದರ ಸಂಸ್ಕೃತಿಗೆ ಧಕ್ಕೆಯಾಗುವ ಬದಲಾವಣೆಗಳು ಖಂಡಿತಾ ಬೇಡ, ಹೀಗಾಗಿ ಸಿನಿಮಾದ ಎರಡನೇ ಭಾಗ ಅವರವರ ಇಷ್ಟ, ಕಷ್ಟಕ್ಕೆ ವಿಮರ್ಶಿಸುವಂತದ್ದು,
ತಾನೇ ಸುಪಿರೀಯ, ಹೆಂಗಸರು ಏನಿದ್ದರೂ ತಮ್ಮ ಸೇವೆ ಮಾಡಲಿರುವವರು ಅನ್ನೋ ಪುರುಷರ ಮನೋಭಾವ, ಅಡುಗೆ ಮನೆಯ ಮುಗಿಯದ ಜಂಜಾಟ, ಹಳೆ ಮನ, ಮನಸ್ಸು, ಪದ್ಧತಿಯಿಂದ ಬೇಸತ್ತು ನಾಯಕಿ ಮನೆಯ ಸಂಬಂಧವನ್ನು ಶಾಶ್ವತವಾಗಿ ತೊರೆದು ಹೋಗುತ್ತಾಳೆ, ಸಿಟ್ಟಿನಿಂದಲೇ ತವರು ಮನೆಗೆ ಮರಳಿದ ನಾಯಕಿ, ಮರಳಿ ಗಂಡನ ಮನೆಗೆ ತೆರಳಲು ಸೂಚಿಸುವ ಅಮ್ಮ, ಅಕ್ಕ. ಈ ಮಧ್ಯೆ ಎಲ್ಲೋ ಹೋಗಿದ್ದ ತಮ್ಮ ಬಂದು ಒಂದು ಲೋಟ ನೀರು ತಂದುಕೊಡುವಂತೆ ಹೇಳುತ್ತಾನ. ಥಟ್ಟನೆ, ನಾಯಕಿ ನಿಂಗೇನೂ ಅಡುಗೆ ಮನೆಗೆ ಹೋಗಿ ನೀರು ತೆಗೆದುಕೊಂಡರೆ ಎಂದು ರೋಷದಿಂದ ಕೂಗಾಡುತ್ತಾಳೆ. ಈ ಮೂಲಕ ಬದಲಾವಣೆ ನಮ್ಮಿಂದಲೇ ಆಗಬೇಕು ಅನ್ನೋದನ್ನು ಸೂಚಿಸಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.