Women's Day: ಹಲೋ ಲೇಡೀಸ್, ಮಹಿಳಾ ದಿನವೊಂದೇ ಅಲ್ಲ, ದಿನವೂ ಖುಷಿಯಾಗಿರ್ಬೇಕಾ?

By Suvarna News  |  First Published Mar 8, 2023, 3:28 PM IST

ಮಹಿಳೆಯರು ಮಹಿಳಾ ದಿನದಲ್ಲಿ ಮಾತ್ರವಲ್ಲ, ಪ್ರತಿದಿನವೂ ಖುಷಿಯಾಗಿರಬೇಕು. ಆದರೆ, ಖುಷಿಯಾಗಿರಲು ಹಲವು ಸಮಸ್ಯೆಗಳು. ಎಷ್ಟೇ ಸಮಸ್ಯೆಗಳಿದ್ದವೂ ಅವುಗಳನ್ನು ಪಕ್ಕಕ್ಕಿಟ್ಟು ಖುಷಿಯಾಗಿರುವುದನ್ನು, ನೆಮ್ಮದಿಯಾಗಿರುವುದನ್ನು ಕಲಿತುಕೊಂಡರೆ ಜೀವನ ಸುಖಮಯವೆನಿಸುತ್ತದೆ. ಎಷ್ಟೋ ಬಾರಿ ಇದಕ್ಕೆ ನಮ್ಮ ನಮ್ಮ ಅಭ್ಯಾಸ, ಸ್ವಭಾವಗಳೇ ಅಡ್ಡ ಬರುತ್ತವೆ ಎನ್ನುವುದು ಸತ್ಯ.
 


ಬೆಳಬೆಳಗ್ಗೆ ಏಳುತ್ತಲೇ ಏನೋ ಖುಷಿ. ಎಲ್ಲರೂ ಮಹಿಳಾ ದಿನದ ವಿಶ್ ಮಾಡಿದ್ದೇ ಮಾಡಿದ್ದು, ಹಸಿರು ಸೀರೆಯುಟ್ಟು ಮಹಿಳಾ ಬಳಗದಲ್ಲಿ ಸಂಭ್ರಮಿಸಿದ್ದೇ ಸಂಭ್ರಮಿಸಿದ್ದು. ಸಮಾರಂಭಗಳಲ್ಲಿ ಪಾಲ್ಗೊಂಡು ನಲಿದು, ಎಲ್ಲರೂ ಸೇರಿ ಹೋಟೆಲ್ ನಲ್ಲಿ ಊಟ ಮಾಡಿ, ಮನೆಯತ್ತ ಮುಖ ಮಾಡಿದಾಗ ಮುಖದಲ್ಲಿನ ನಗು ಮಾಯ. ಮತ್ತದೇ ಮಕ್ಕಳು, ಗಂಡ, ಅತ್ತೆಮಾವಂದಿರ ಸಂಸಾರ ಯಾರಿಗೆ ಬೇಕು ಎನ್ನುವ ಭಾವ. ಇದು ಬಹಳಷ್ಟು ಮಹಿಳೆಯರ ಮಹಿಳಾ ದಿನದ ಅನುಭವ. ಕುಟುಂಬದಲ್ಲಿನ ಒತ್ತಡ ಎಂಥದ್ದೇ ಆಗಿರಲಿ, ಕೆಲವೊಮ್ಮೆ ಮಹಿಳೆಯರ ವರ್ತನೆ ನೋಡಿದರೆ ಅವರು ಅತಿಯಾಗಿ ಭಾವಿಸುವುದು, ಅತಿಯಾಗಿ ವರ್ತಿಸುವುದು ಅತಿಯೇ ಆಗುತ್ತದೆ ಎಂದೆನಿಸದೆ ಇರದು. ಮನೆ, ಕುಟುಂಬ, ಜೀವನದಲ್ಲಿ ಏನಾದರೊಂದು ಕೊರತೆ, ಸಮಸ್ಯೆಗಳು ಇದ್ದೇ ಇರುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ, ಒಬ್ಬರ ಸ್ವಭಾವ ಇನ್ನೊಬ್ಬರಂತೆ ಇರುವುದಿಲ್ಲ. ಸ್ವಭಾವದಲ್ಲಿನ ವ್ಯತ್ಯಾಸಗಳನ್ನೇ ಸಮಸ್ಯೆ ಎಂದು ಭಾವಿಸುತ್ತ ಕುಳಿತರೆ ಅದರಷ್ಟು ಹೊರೆ ಬೇರೊಂದಿಲ್ಲ. ಹೀಗಾಗಿ, ಅವರವರ ಸ್ವಭಾವವನ್ನು ಅವರ ಪಾಡಿಗೆ ಬಿಟ್ಟುಬಿಡಿ, ಅವರವರ ವರ್ತನೆಗೂ ಅವರೇ ಜವಾಬ್ದಾರಿ ಎಂದು ತಿಳಿದುಕೊಂಡು ನಿಮ್ಮ ಮನದ ಭಾರವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಿ.

•    ಆರೋಗ್ಯದ ಬಗ್ಗೆ ಕಾಳಜಿ (Take Care of Health)
ಮಹಿಳೆಯರು (Women) ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುವುದು ಸಾಮಾನ್ಯ. ದೇಹದಲ್ಲಿ ಅನಾರೋಗ್ಯವಿದ್ದರೂ ಮನೆಯಲ್ಲಿ ಪೂಜೆ, ವಯಸ್ಸಾದವರಿದ್ದಾರೆ, ಅಡುಗೆ-ಮನೆಕೆಲಸ ಎಂದು ವೈದ್ಯರ ಬಳಿ ತಪಾಸಣೆಗೆ ಹೋಗುವುದಿಲ್ಲ. ಇದು ಸ್ಮಾರ್ಟ್ (Smart) ಕಾಲ. ಮಹಿಳೆಯರೂ ಸ್ವಲ್ಪ ಸ್ಮಾರ್ಟ್ ಆಗದಿದ್ದರೆ ಸುಖವಿಲ್ಲ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಲಿ. 40 ವರ್ಷದ ಮೇಲ್ಪಟ್ಟವರು ಪ್ರತಿವರ್ಷ ನಿಯಮಿತವಾಗಿ ಆರೋಗ್ಯ ತಪಾಸಣೆ (Test) ಮಾಡಿಸಿಕೊಳ್ಳಿ. ಉದ್ಯೋಗಸ್ಥ ಮಹಿಳೆಯರಿಗೆ ಮನೆಯಿಂದಾಚೆಗೆ ಒಂದು ಪ್ರಪಂಚವಿರುತ್ತದೆ. ಆದರೆ, ಗೃಹಿಣಿಯರು ಮನೆಯಲ್ಲೇ ಇದ್ದುಕೊಂಡು ಅನಗತ್ಯ ಚಿಂತೆ ಮಾಡುವುದನ್ನು ಬಿಡಿ. ಎಲ್ಲರಿಗೂ ಅವರದ್ದೇ ಆದ ಸವಾಲುಗಳಿರುತ್ತವೆ. ಅವುಗಳನ್ನು ಆ ಸಮಯದಲ್ಲಿ ಎದುರಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕೇ ಹೊರತು ಅದನ್ನೇ ಯೋಚಿಸುತ್ತ ಕುಳಿತರೆ ಆರೋಗ್ಯ, ಮನಸ್ಸು (Mind) ಎರಡೂ ಹಾಳಾಗುತ್ತದೆ. ಬದುಕಿನಲ್ಲಿ ಖುಷಿ (Happiness) ಇರುವುದಿಲ್ಲ.

Tap to resize

Latest Videos

Women's Day: ಅವಳು ಬಹುವಚನ, ಮಹಿಳಾ ದಿನವನ್ನಲ್ಲ, ಮಹಿಳಾತನವನ್ನು ಸಂಭ್ರಮಿಸಬೇಕು

•    ದಿನವೂ ವ್ಯಾಯಾಮಕ್ಕೆ (Exercise) ಸಮಯ ನೀಡಿ
ದಿನದ ಯಾವುದೇ ಸಮಯದಲ್ಲಾದರೂ ಸರಿ, ಸ್ವಲ್ಪ ಸಮಯ ವ್ಯಾಯಾಮ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಧಾರಾವಾಹಿಗಳಿಗೆ ಅಡಿಕ್ಟ್ (Addict) ಆಗಿರುವವರು ನೀವಾಗಿದ್ದರೆ ಇಂದೇ ಆ ಅಭ್ಯಾಸ ಬಿಡಿ. ಅವು ಮನಸ್ಸನ್ನು ಇನ್ನಷ್ಟು ಕಂಗೆಡಿಸುತ್ತವೆ. ಅದರ ಬದಲು, ಆಂತರಿಕವಾಗಿ ಸಂತಸ ಮೂಡಬೇಕೆಂದರೆ ವ್ಯಾಯಾಮ ಮಾಡುವುದನ್ನು ಅಭ್ಯಾಸ ಮಾಡಿ. ಧ್ಯಾನವನ್ನು (Meditation) ಪ್ರಾಕ್ಟೀಸ್ ಮಾಡಿ. ಸಮಯದ ಹೊಂದಾಣಿಕೆ ಸಾಧ್ಯವಿದ್ದರೆ ಮಕ್ಕಳೊಂದಿಗೆ ಸೇರಿ ವ್ಯಾಯಾಮ, ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿ. ಮನೆಯಲ್ಲಿ ಒಳ್ಳೆಯ ಸಂಗೀತ (Music) ಹಚ್ಚಿಕೊಳ್ಳಿ. 

•    ಮೊಬೈಲ್ (Mobile) ಪಕ್ಕಕ್ಕಿಡಿ
ಮೊಬೈಲ್ ಮಾನಸಿಕ ಆರೋಗ್ಯವನ್ನು ಹದಗೆಡಿಸುತ್ತದೆ ಎಂದು ಗೊತ್ತಿದ್ದೂ ಅದನ್ನು ನಿಮ್ಮ ಸಂಗಾತಿಯನ್ನಾಗಿ ಮಾಡಿಕೊಂಡಿದ್ದರೆ ಖಂಡಿತವಾಗಿ ನಿಮ್ಮ ಆತ್ಮವಿಶ್ವಾಸ (Confidence) ಕ್ರಮೇಣ ಹಾಳಾಗುತ್ತದೆ. ವಾಸ್ತವ ಪ್ರಪಂಚದಿಂದ ದೂರವಾಗಿರುವ ಸೋಷಿಯಲ್ ಮೀಡಿಯಾ (Social Media) ಲೋಕ ಖಂಡಿತವಾಗಿ ನಿಮ್ಮನ್ನು ಕೆಲಸಮಯ ಖುಷಿಪಡಿಸಬಲ್ಲುದಾದರೂ ಅದರಿಂದ ಆಚಗೆ ಬಂದರೆ ನೈಜವಾದ ಬದುಕು ಕಂಗೆಡಿಸಬಹುದು. ಹೀಗಾಗಿ, ಮೊಬೈಲ್ ದೂರವಿಡಿ. ಎಷ್ಟು ಬೇಕೋ ಅಷ್ಟಕ್ಕೆ ಬಳಕೆ ಮಾಡಿ. ಸುಮ್ಮನೆ ಟೈಮ್ ಪಾಸ್ ಗೆಂದು ನೋಡಬೇಡಿ. ಎಂದೋ ಒಮ್ಮೆ ಒಳ್ಳೆಯ ಚಲನಚಿತ್ರಗಳನ್ನು ನೋಡಿ ಎಂಜಾಯ್ ಮಾಡಬಹುದೇ ವಿನಾ ಪ್ರತಿದಿನ ಸಮಯ ಕಳೆಯಬೇಡಿ.

ದಿನವಿಡೀ ಒಂದೇ ಸ್ಯಾನಿಟರಿ ಪ್ಯಾಡ್ ಧರಿಸೋ ಅಭ್ಯಾಸವಿದ್ಯಾ? ಹೆಲ್ತ್ ಹಾಳಾಗೋದು ಗ್ಯಾರಂಟಿ

•    ಗಾಸಿಪ್ (Gossip) ನಿಂದ ದೂರವಿರಿ
ಗಾಸಿಪ್ ನಿಂದ ಇತರರನ್ನು ಅತಿಯಾಗಿ ಗಮನಿಸುವುದು, ಸುಖಾಸುಮ್ಮನೆ ಟೀಕೆ ಮಾಡುವ ಅಭ್ಯಾಸ ಶುರುವಾಗುತ್ತದೆ. ಅದು ಯಾವುದೇ ಕಾರಣಕ್ಕೂ ಒಳ್ಳೆಯದಲ್ಲ. ಇತರರ ಬಗ್ಗೆ ಮತ್ತೊಬ್ಬರ ಬಳಿ ಯಾವುದೇ ಕಾರಣಕ್ಕೂ ಮಾತನಾಡಬೇಡಿ, ಆಡುವುದಿದ್ದರೆ ಒಳ್ಳೆಯ ಮಾತುಗಳನ್ನಾಡಿ. 

ಬೈ ಹೇಳ್ಬಿಡಿ
•    ಇತರರೊಂದಿಗೆ ಹೋಲಿಕೆ (Compare) ಮಾಡಿಕೊಂಡು ಮನಸ್ಸನ್ನು ಕೆಡಿಸಿಕೊಳ್ಳುವ ಗುಣಕ್ಕೆ.
•    ಅತ್ತೆ ಮನೆಯರ ಬಗ್ಗೆ ಇಲ್ಲಸಲ್ಲದ್ದನ್ನ ಭಾವಿಸಿ ಕುದಿಯುವ ಮನಸ್ಥಿತಿಗೆ.
•    ಅತ್ತೆ-ಮಾವನ ಧೋರಣೆ, ನಡವಳಿಕೆ ಬಗ್ಗೆ ಬೇಸರಿಸಿಕೊಳ್ಳುವುದಕ್ಕೆ.
•    ಎಷ್ಟು ಹೇಳಿದರೂ ಕಾಳಜಿ ವಹಿಸದ ಪತಿ, ಮಕ್ಕಳ ಸ್ವಭಾವಕ್ಕೆ ತಲೆಕೆಡಿಸಿಕೊಳ್ಳುವುದಕ್ಕೆ.

  
 

click me!