ಮಗನ ಜೊತೆ 8400 ಕಿ.ಮೀ ಬೈಕಲ್ಲಿ ಸಂಚರಿಸಿದ ತಾಯಿಯ ಯಶಸ್ಸಿಗೆ ಯೋಗ ಕಾರಣ!

By Suvarna NewsFirst Published Jun 22, 2023, 5:26 PM IST
Highlights

ಈ ತಾಯಿ – ಮಗನ ಕಥೆ ಸ್ಫೂರ್ತಿದಾಯಕವಾಗಿದೆ. ಸಣ್ಣ ವಯಸ್ಸಿನಲ್ಲಿ ಕೈಲಾಗಲ್ಲ ಎನ್ನುವ ಜನರಿಗೆ ಈ ಮಹಿಳೆ ಉತ್ಸಾಹ ನೀಡ್ತಾಳೆ. ಒಂದಲ್ಲ ಎರಡಲ್ಲ ಸಾವಿರಾರು ಕಿಲೋಮೀಟರ್ ಬೈಕ್ ನ ಹಿಂಬದಿ ಸೀಟ್ ನಲ್ಲಿ ಕುಳಿತು ಸಂಚಾರ ಬೆಳೆಸಿದ ತಾಯಿ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದಾಳೆ.  
 

ಬೈಕ್ ನಲ್ಲಿ ಸ್ನೇಹಿತರ ಜೊತೆ ಜಾಲಿ ರೈಡ್ ಹೋಗೋದು ಮಾಮೂಲಿ. ಇನ್ನು ಕೆಲ ದಂಪತಿ, ಜೊತೆಯಾಗಿ ರೈಡ್ ಹೋಗಿ ಎಂಜಾಯ್ ಮಾಡ್ತಾರೆ. ಆದ್ರೆ ಬೈಕ್ ನಲ್ಲಿ ಸ್ವಲ್ಪ ದೂರ ಪ್ರಯಾಣ ಬೆಳೆಸಿದ್ರೂ ಸೊಂಟ, ಕಾಲು ನೋವು ಬರುತ್ತೆ. ಇದೇ ಕಾರಣಕ್ಕೆ ಸಣ್ಣ ಪುಟ್ಟ ಓಡಾಟಕ್ಕೆ ಬೈಕ್ ಇಟ್ಟುಕೊಳ್ಳುವ ಜನರು, ದೂರದ ಪ್ರಯಾಣಕ್ಕೆ ಕಾರು, ಬಸ್ ಆಯ್ಕೆ ಮಾಡಿಕೊಳ್ತಾರೆ. ಆದ್ರೆ ಇಲ್ಲೊಬ್ಬ ಮಹಿಳೆ, ಎಲ್ಲರಿಗೂ ಸ್ಪೂರ್ತಿಯಾಗಿದ್ದಾಳೆ. ತಾನೇನು ಕಮ್ಮಿಯಿಲ್ಲ ಎಂಬುದನ್ನು ತೋರಿಸಿದ್ದಾಳೆ. ಒಂದಲ್ಲ ಎರಡಲ್ಲ ಬರೋಬ್ಬರಿ 8400 ಕಿಲೋಮೀಟರ್ ಪ್ರಯಾಣವನ್ನು ಬೈಕ್ ನಲ್ಲಿ ಪೂರ್ಣಗೊಳಿಸಿದ್ದಾಳೆ. ಇಲ್ಲಿನ ಮತ್ತೊಂದು ವಿಶೇಷವೆಂದ್ರೆ ಆಕೆ ಜೊತೆ ಬೈಕ್ ರೈಡ್ ಗೆ ಬಂದಿದ್ದು ಮಗ. ಹಾಗೆ ಇಲ್ಲಿನ ಮತ್ತೊಂದು ಆಸಕ್ತಿ ಸಂಗತಿಯೆಂದ್ರೆ ಆಕೆ ಇಷ್ಟು ದೂರ್ ಬೈಕ್ ನಲ್ಲಿ ಹಿಂದೆ ಕುಳಿತು ಪ್ರಯಾಣ ಮಾಡಲು ಸಹಕಾರಿಯಾಗಿದ್ದು ಯೋಗ. 

ಬೈಕ್ (Bike) ನಲ್ಲಿ 8400 ಕಿಲೋಮೀಟರ್ ಸಂಚರಿಸಿದ ಮಹಿಳೆ ಕಥೆ ಇಲ್ಲಿದೆ : ಆಕೆ ಹೆಸರು ರಾಧಿಕಾ ಸಾವಲ್ಕರ್. ವೃತ್ತಿಯಲ್ಲಿ ಯೋಗ (Yoga) ಶಿಕ್ಷಕಿ. ವಯಸ್ಸು 53 ವರ್ಷ. ಮಗನ ಹೆಸರು ಅಕ್ಷಯ್. ವಯಸ್ಸು 27. ರಾಧಿಕಾ ಬೊಮ್ಮನಹಳ್ಳಿಯ ನಿವಾಸಿ. ರಾಧಿಕಾಗೆ ಬೈಕ್ ಹಾಗೂ ಲಾಂಗ್ ರೈಡ್ ಮಾಡಿದ ಅನುಭವ ಇಲ್ಲ. ಇಬ್ಬರೂ ಸುದೀರ್ಘ 24 ದಿನಗಳ ಪ್ರಯಾಣದ ನಂತ್ರ ಬೆಂಗಳೂರು ತಲುಪಿದ್ದಾರೆ. ಈ ಅಮ್ಮ – ಮಗನ ಬೈಕ್ ರೈಡ್  ಕೇವಲ ಇಬ್ಬರ ಪ್ರೀತಿಯನ್ನು ಇನ್ನಷ್ಟು ಗಟ್ಟಿಗೊಳಿಸಿಲ್ಲ. ಬದಲಾಗಿ ಎಲ್ಲರು ಹುಬ್ಬೇರಿಸುವಂತೆ ಮಾಡಿದೆ. 

Latest Videos

ಬೆಂಗಳೂರಿನಿಂದ ಕೇದಾರನಾಥಕ್ಕೆ ಪ್ರಯಾಣ ವೆಚ್ಚ ಎಷ್ಟು? ಹೋಗೋದು ಹೇಗೆ?

ಈ ಬಗ್ಗೆ ರಾಧಿಕಾ ಹೇಳೋದೇನು? : ರಾಧಿಕಾ ಬೈಕ್ ರೈಡ್ ನಲ್ಲಿ ಪಾಲ್ಗೊಳ್ಳುವ ಆಸಕ್ತಿ ತೋರಿದಾಗ ಕೆಲವರು ಆಕೆಗೆ ನಿರುತ್ಸಾಹಗೊಳಿಸಿದ್ರಂತೆ. ಇದು ನಿನ್ನಿಂದ ಸಾಧ್ಯವಿಲ್ಲ ಎಂದರಂತೆ.  ಆದ್ರೆ ಬೈಕ್ ನಲ್ಲಿ ಸಂಚಾರ ಬೆಳೆಸಬೇಕೆಂಬ ನನ್ನ ಆಸೆ ಹಾಗೂ ನನ್ನ ಮಗ ಮತ್ತು ಇತರ ಬೈಕರ್ಸ್ ಪ್ರೋತ್ಸಾಹದಿಂದ ನಾನು ಇಷ್ಟು ದೀರ್ಘ ಪ್ರಯಾಣವನ್ನು ಪೂರ್ಣಗೊಳಿಸಿದೆ ಎನ್ನುತ್ತಾರೆ ರಾಧಿಕಾ.  

ಎಲ್ಲಿಂದ ಎಲ್ಲಿಗೆ ಪ್ರಯಾಣ ಬೆಳೆಸಿದ ತಾಯಿ –ಮಗ? : ಮೇ 26 ರಂದು ಹೆಬ್ಬಾಳದಿಂದ ಪ್ರಯಾಣ ಶುರುವಾಗಿತ್ತು.  ಅಕ್ಷಯ್ ಮತ್ತು ರಾಧಿಕಾ ಜೊತೆ ಇನ್ನೂ ಆರು ಬೈಕ್‌ಗಳಲ್ಲಿ ಏಳು ಮಂದಿ ಪ್ರಯಾಣ ಬೆಳೆಸಿದ್ದರು. ಹೈದರಾಬಾದ್, ನಾಗ್ಪುರ, ಝಾನ್ಸಿ, ದೆಹಲಿ, ಜಮ್ಮು, ಶ್ರೀನಗರ, ಕಾರ್ಗಿಲ್, ಲೇಹ್, ಲಡಾಖ್, ಹಾನ್ಲೆ, ಸ್ಪಿತಿ, ಕಾಜಾ, ಮನಾಲಿ, ಅಮೃತಸರ, ವಾಘಾ ಬಾರ್ಡರ್, ಜೈಪುರ ಮತ್ತು ಔರಂಗಾಬಾದ್ ಗೆ ಭೇಟಿ ನೀಡಿದ್ದಾರೆ. ಒಟ್ಟೂ 8400 ಕಿಲೋಮೀಟರ್ ಪ್ರಯಾಣ ಬೆಳೆಸಿದ್ದಾರೆ. 

ಪ್ರತಿ ಮಹಿಳೆಯೂ ತಿಳಿದಿರಲೇಬೇಕಾದ 3 ಆರೋಗ್ಯ ರಹಸ್ಯಗಳು!

ಅಮ್ಮನ ಬಗ್ಗೆ ಅಕ್ಷಯ್ ಹೇಳೋದೇನು? : ಅಕ್ಷಯ್ ಒಬ್ಬ ರೈಡರ್. ನನ್ನ ಬೈಕ್ ಹಿಂದಿನ ಸೀಟ್ ನಲ್ಲಿ ಅಮ್ಮ ಕುಳಿತುಕೊಳ್ತಾರೆ ಎಂದಾಗ ಖುಷಿಯಾಯ್ತು. ಆರಂಭದಲ್ಲಿ ಭಯವೂ ಇತ್ತು. ನನಗೆ ಬೈಕ್ ಹಿಂದಿನ ಸೀಟ್ ನಲ್ಲಿ ಕುಳಿತು 70 ಕಿಲೋಮೀಟರ್ ಸಂಚರಿಸೋದು ಕಷ್ಟ. ಆದ್ರೆ ಅಮ್ಮ ಇದನ್ನು ಸಾಧಿಸಿ ತೋರಿಸಿದ್ದಾರೆ. ಅಮ್ಮ ಯೋಗ ಶಿಕ್ಷಕಿ. ಹಾಗಾಗಿ ಅವರಿಗೆ ಬೈಕ್ ಹಿಂದಿನ ಸೀಟ್ ನಲ್ಲಿ ಕುಳಿತುಕೊಂಡು ದೀರ್ಘ ಪ್ರಯಾಣ ಬೆಳೆಸೋದು ಕಷ್ಟವಾಗಿಲ್ಲ ಎನ್ನುತ್ತಾರೆ ಅಕ್ಷಯ್. 

ಏನೆಲ್ಲ ಸವಾಲುಗಳು ಎದುರಾಯ್ತು? : ಶಿಖರ ಪ್ರದೇಶಕ್ಕೆ ಹೋಗುವ ಮಾರ್ಗ ಹಾಗೂ ವಾತಾವರಣ ಇಬ್ಬರಿಗೂ ಸವಾಲಾಗಿತ್ತಂತೆ. 40 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಬೈಕ್ ರೈಡಿಂಗ್ ಕಷ್ಟ. ಒಂದೊಂದು ಕಡೆ ಒಂದೊಂದು ಸವಾಲು ಎದುರಾಗಿತ್ತು ಎನ್ನುತ್ತಾರೆ ಅಕ್ಷಯ್. ಕಷ್ಟದ ಪ್ರಯಾಣವಾದ್ರೂ ಅಧ್ಬುತ ಅನುಭವ ಪಡೆದ ರಾಧಿಕಾ, ಮತ್ತೊಮ್ಮೆ ಅವಕಾಶ ಸಿಕ್ಕರೆ ಮತ್ತೆ ಹೋಗ್ತೇನೆ ಎಂದಿದ್ದಾರೆ.
 

click me!