ಹೆರಿಗೆ ವೇಳೆ ರಕ್ತಸ್ರಾವದಿಂದ ಮೃತಪಟ್ಟಿದ್ದ ಮಹಿಳೆಯ ಮಗು ಸಾವು

Published : Jun 23, 2023, 12:22 PM IST
ಹೆರಿಗೆ ವೇಳೆ ರಕ್ತಸ್ರಾವದಿಂದ ಮೃತಪಟ್ಟಿದ್ದ ಮಹಿಳೆಯ ಮಗು ಸಾವು

ಸಾರಾಂಶ

ಹಿರೇಬಂಡಾಡಿ ಗ್ರಾಮದ ಆಶಾ ಕಾರ್ಯಕರ್ತೆ ಭವ್ಯ (28) ಜೂ.20ರಂದು ರಾತ್ರಿ ಹೆರಿಗೆ ಸಂದರ್ಭದಲ್ಲಿ ತೀರಾ ರಕ್ತಸ್ರಾವದಿಂದ ಮೃತಪಟ್ಟಬೆನ್ನಲ್ಲೇ ಅವರ ಹಸುಗೂಸು ಗುರುವಾರ ಮುಂಜಾನೆ ಅಸುನೀಗಿದೆ.

ಉಪ್ಪಿನಂಗಡಿ (ಜೂ.23): ಹಿರೇಬಂಡಾಡಿ ಗ್ರಾಮದ ಆಶಾ ಕಾರ್ಯಕರ್ತೆ ಭವ್ಯ (28) ಜೂ.20ರಂದು ರಾತ್ರಿ ಹೆರಿಗೆ ಸಂದರ್ಭದಲ್ಲಿ ತೀರಾ ರಕ್ತಸ್ರಾವದಿಂದ ಮೃತಪಟ್ಟಬೆನ್ನಲ್ಲೇ ಅವರ ಹಸುಗೂಸು ಗುರುವಾರ ಮುಂಜಾನೆ ಅಸುನೀಗಿದೆ.

ಭವ್ಯ ಅವರು 3ನೇ ಹೆರಿಗೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ವೇಳೆ ಮಂಗಳವಾರ ರಾತ್ರಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆಯಾಗುತ್ತಲೇ ತೀವ್ರ ರೀತಿಯಲ್ಲಿ ರಕ್ತಸ್ರಾವ ಉಂಟಾಗಿ ಮೃತಪಟ್ಟಿದ್ದರು. ನವಜಾತ ಶಿಶುವನ್ನು ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮುಂಜಾನೆ ಕೊನೆಯುಸಿರೆಳೆದಿದ್ದೆ.

Chikkamagaluru: ಮಾರ್ಗ ಮಧ್ಯೆ 108 ಆ್ಯಂಬುಲೆನ್ಸ್ ನಲ್ಲಿ ಮುದ್ದಾದ ಮಗು ಜನನ

ಜಿಲ್ಲಾಧಿಕಾರಿಗೆ ದೂರು: ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಯವರಿಗೆ ಲಿಖಿತ ದೂರು ಸಲ್ಲಿಸಿರುವ ಮೃತ ಮಹಿಳೆಯ ಗಂಡ ಬಾಲಕೃಷ್ಣ ಗೌಡ, ತನ್ನ ಪತ್ನಿ ಮಂಗಳವಾರ ಸಾಯಂಕಾಲ 6.30ರ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡು ನೋವಿನಿಂದ ಒದ್ದಾಡುತ್ತಿದ್ದರೂ 8.30ರ ಸುಮಾರಿಗೆ ಬಲವಂತಿಕೆಯ ಹೆರಿಗೆಯಾಗುವಂತೆ ಮಾಡಿದ್ದರಿಂದಲೇ ತನ್ನ ಪತ್ನಿ ಹಾಗೂ ಮಗು ಮೃತಪಡಲು ಕಾರಣವೆಂದು ಆರೋಪಿಸಿ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುದಾಗಿ ದೂರು ಸ್ವೀಕರಿಸಿರುವ ಜಿಲ್ಲಾಧಿಕಾರಿಯವರು ಭರವಸೆ ನೀಡಿದ್ದಾರೆ.

ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿ ಸಾವು, ಇಂದು ಎಬಿವಿಪಿ ಪ್ರತಿಭಟನೆ

ಉಡುಪಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ವಿದ್ಯಾರ್ಥಿಯೊಬ್ಬಳು ಗುರುವಾರ ಮೃತಪಟ್ಟಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಎಬಿವಿಪಿ ಇಂದು ಆಸ್ಪತ್ರೆಯ ಮುಂದೆ ಪ್ರತಿಭಟನೆಗೆ ಕರೆ ನೀಡಿದೆ.

ಪಡುಬಿದ್ರಿಯ ಕೆಮ್ಮುಂಡೇಲು ಎಂಬಲ್ಲಿನ ಜನಾರ್ದನ ಮೂಲ್ಯ ಮತ್ತು ಶೋಭಾ ಎಂಬವರ ಒಬ್ಬಳೆ ಮಗಳು ನಿಖಿತ ಕುಲಾಲ್‌ (20) ಮೃತಪಟ್ಟವರು. ಈಕೆ ಕೆಪಿಟಿಯಲ್ಲಿ ಡಿಪ್ಲೋಮಾ ಮಾಡುತ್ತಿದ್ದು ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಳು.

ಹೆರಿಗೆಯ ನಂತರ ಮಹಿಳೆಯರನ್ನು ಕಾಡುವ ಚಳಿ, ಪ್ರಸವದ ನಂತ್ರ ಎಲ್ಲರಿಗೂ ಹೀಗಾಗುತ್ತಾ?

ಸೋಮವಾರ ವಿಪರೀತ ವಾಂತಿಯ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಳು. ನಾಲ್ಕೈದು ಬಾರಿ ಸ್ಕ್ಯಾ‌ನಿಂಗ್‌ ಮಾಡಿದರೂ ಆಕೆಯ ಅನಾರೋಗ್ಯದ ಕಾರಣ ಪತ್ತೆಯಾಗಿರಲಿಲ್ಲ. ಶನಿವಾರ ರಾತ್ರಿ ನಿಖಿತಾ ಆರೋಗ್ಯ ಗಂಭೀರವಾಗಿದೆ ಎಂದು ಆಸ್ಪತ್ರೆಯವರು ಹೇಳಿದಾಗ, ಆಕೆಯನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲು ಮನೆಯವರು ಸಿದ್ಧರಾದರೂ ವೈದ್ಯರು ಅವಕಾಶ ನೀಡಲಿಲ್ಲ. 

ಭಾನುವಾರ ನಿಖಿತಾ ಮೃತಪಟ್ಟಿದ್ದಾಳೆ. ಇದೀಗ ಮನೆಯವರು ವೈದ್ಯರ ನಿರ್ಲಕ್ಷದಿಂದ ಮೃತಪಟ್ಟಬಗ್ಗೆ ಆರೋಪಿಸಿದ್ದು, ಇಂದು ಎಬಿವಿಪಿ ಪ್ರತಿಭಟನೆಗೆ ಕೆರೆ ನೀಡಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!