Working Women: ಮನೆಯೋ, ಉದ್ಯೋಗವೋ? ಎರಡನ್ನೂ ತೂಗಿಸುವಲ್ಲಿ ಉದ್ಯೋಗಸ್ಥ ಮಹಿಳೆ ಹೈರಾಣ

Published : Feb 10, 2023, 06:13 PM IST
Working Women: ಮನೆಯೋ, ಉದ್ಯೋಗವೋ? ಎರಡನ್ನೂ ತೂಗಿಸುವಲ್ಲಿ ಉದ್ಯೋಗಸ್ಥ ಮಹಿಳೆ ಹೈರಾಣ

ಸಾರಾಂಶ

ವೃತ್ತಿ ಹಾಗೂ ಸಂಸಾರ ಎರಡನ್ನೂ ನಿಭಾಯಿಸುವ ಅನಿವಾರ್ಯತೆ ಮಹಿಳೆಯರಿಗೆ ಹೆಚ್ಚಿರುತ್ತದೆ. ಪರಿಣಾಮ, ಉದ್ಯೋಗಸ್ಥ ಮಹಿಳೆಯರು ಯಾವುದಕ್ಕೂ ಸರಿಯಾದ ಗಮನ ನೀಡಲು ಸಾಧ್ಯವಾಗದೆ ಎರಡೂ ಕಡೆ ಅಸಂತೃಪ್ತಿಯಿಂದ ನರಳಬೇಕಾಗುವ ಸಂದರ್ಭವೇ ಅಧಿಕವಾಗಬಹುದು.  ಮನೆಯ ಜವಾಬ್ದಾರಿ, ಹಿರಿಯರು, ಮಕ್ಕಳ ಬಗ್ಗೆ ಗಮನ ನೀಡುವ ಜತೆಗೆ ತಮ್ಮ ಆರೋಗ್ಯಕ್ಕೆ ಸಮಯ ನೀಡುವಲ್ಲಿ ಭಾರತೀಯ ಉದ್ಯೋಗಸ್ಥ ಮಹಿಳೆಯರು ಸೋಲುತ್ತಿದ್ದಾರೆಯೇ? ಅನೇಕರು ಈ ಕುರಿತು ಅನುಭವ ಹಂಚಿಕೊಂಡಿದ್ದಾರೆ.  

ಉದ್ಯೋಗ ಹಾಗೂ ಮನೆ ಎರಡನ್ನೂ ನಿಭಾಯಿಸುವುದು ಮಹಿಳೆಯರಿಗೆ ಸುಲಭವಾದ ಕಾಯಕವಲ್ಲ. ಅದರಲ್ಲೂ ಮಹಿಳೆಯರೇ ಮನೆಯನ್ನು ಮುನ್ನಡೆಸಬೇಕು ಎಂದು ನಿರೀಕ್ಷೆ ಮಾಡುವ ಭಾರತದಂತಹ ದೇಶದಲ್ಲಿ ಉದ್ಯೋಗ ಮಾಡುವ ಮಹಿಳೆಯರ ಪಾತ್ರ ಖಂಡಿತವಾಗಿ ಸುಲಭದ್ದಲ್ಲ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಮಹಿಳೆಯರು ಈ ಕುರಿತ ತಮ್ಮ  ಅನುಭವ ಹಂಚಿಕೊಂಡಿದ್ದಾರೆ. ಈ ಅನುಭವಗಳು ಕುಟುಂಬದ ಬೆಂಬಲವಿಲ್ಲದ ಉದ್ಯೋಗಸ್ಥ ಮಹಿಳೆಯರ ಸ್ಥಿತಿಗತಿ, ಮಾನಸಿಕ ತೊಳಲಾಟಗಳ ಹಲವು ಮಗ್ಗಲುಗಳನ್ನು ವ್ಯಕ್ತಪಡಿಸುವಲ್ಲಿ ಯಶಸ್ವಿಯಾಗಬಲ್ಲವು. ಅಷ್ಟೇ ಅಲ್ಲ, ಈ ಅನುಭವಗಳು ಪ್ರತಿ ಮಹಿಳೆಗೂ ಒಂದಿಲ್ಲೊಂದು ರೀತಿಯಲ್ಲಿ ಎಚ್ಚರಿಕೆ ನೀಡಲು ಕಾರಣವಾಗಬಲ್ಲವು. ಒಬ್ಬರು ಮಹಿಳೆಯ ಅನುಭವ ಇಲ್ಲಿದೆ ಕೇಳಿ, “ಕಳೆದ ಕೆಲವು ಸಮಯದಿಂದ ಸಾಕಷ್ಟು ಆತಂಕಕ್ಕೆ ಒಳಗಾಗಿದ್ದೇನೆ. ನಾನು ಅತ್ತೆ-ಮಾವನ ಜತೆ ವಾಸಿಸುತ್ತೇನೆ. ಮಧ್ಯಾಹ್ನ 12-9 ಗಂಟೆಯ ಶಿಫ್ಟ್ ನಲ್ಲಿ ಕೆಲಸ ಮಾಡುತ್ತೇನೆ. ಮನೆಯ ಕೆಲಸಕ್ಕೆ ಕೆಲಸದವರನ್ನು ಇಟ್ಟುಕೊಂಡಿದ್ದೇನೆ. ಆದರೂ, ಸಾಕಷ್ಟು ಕೆಲಸ ನನಗಾಗಿ ಕಾಯುತ್ತಿರುತ್ತವೆ. ಅತ್ತೆ ಯಾವತ್ತೂ ನನಗೆ ಟಾಂಟ್ ಮಾಡುತ್ತಿರುತ್ತಾರೆ. ನನ್ನ ಸ್ವಚ್ಛತೆ ಹಾಗೂ ಕೆಲಸದ ಶೈಲಿಗೆ ಟೀಕೆ ಮಾಡುತ್ತಾರೆ. ನನ್ನ ಉದ್ಯೋಗವನ್ನು ಅವರು ಎಂದಿಗೂ ಗಂಭೀರವಾಗಿ ತೆಗೆದುಕೊಂಡೇ ಇಲ್ಲ. ಯಾವಾಗಲೂ ಹಗುರವಾಗಿ ಮಾತನಾಡುತ್ತಾರೆ. ಮನೆಯಿಂದಲೇ ಕೆಲಸ ಮಾಡುವುದರಿಂದ ನನಗೆ ಸಮಯವೆನ್ನುವುದೇ ಇರುವುದಿಲ್ಲ. ಮಧ್ಯಾಹ್ನದವರೆಗೆ ಮನೆಕೆಲಸ, ಬಳಿಕ ಕಚೇರಿಯ ಕೆಲಸಗಳಲ್ಲಿ ಸಮಯ ಹೋಗುತ್ತದೆ. ಸಮಯ ಸಿಕ್ಕಾಗ ನಿದ್ರೆ ಮಾಡುವಂತಾಗುತ್ತದೆ. ಸೂರ್ಯನ ಬೆಳಕಿಗೆ ಹೋಗುವುದಿಲ್ಲ. ವ್ಯಾಯಾಮ ಮಾಡಲು ಪುರುಸೊತ್ತಿಲ್ಲ. ಮನಸ್ಥಿತಿ ಹದಗೆಡುತ್ತಿದೆ. ಕೆಲವೊಮ್ಮೆ ಜೀವನದ ಬಗ್ಗೆ ಗಂಭೀರವಾಗಿ ಯೋಚನೆ ಮಾಡುವಂತಾಗುತ್ತದೆ. ಇದು ನನಗೊಬ್ಬಳಿಗೆ ಮಾತ್ರವೇ ಅಥವಾ ಇದು ಸಹಜವೇ?’ ಎಂದು ಪ್ರಶ್ನಿಸಿದ್ದಾರೆ. 

ಹೊಸದಾಗಿ ಮದುವೆಯಾದ (Newly Married) ಮತ್ತೋರ್ವ ಮಹಿಳೆ (Woman), “ಕೇವಲ 2 ತಿಂಗಳ ಹಿಂದೆ ಮದುವೆಯಾಗಿದೆ. ವರ್ಕ್ ಲೋಡ್ (Workload) ನಿಂದ ಬೇಸತ್ತಿದ್ದೇನೆ. ಬೆಳಗ್ಗೆ ಬೇಗ ಎದ್ದು, ಎಂಟು ಜನಕ್ಕೆ ತಿಂಡಿ, ಅಡುಗೆ ಮಾಡಿ ಮಧ್ಯಾಹ್ನ 1ರಿಂದ ರಾತ್ರಿ 10-30ರವರೆಗೆ ಕೆಲಸ ಮಾಡುತ್ತೇನೆ. ರಾತ್ರಿ ಅಡುಗೆಗೆಂದು (Dinner) ಸಂಜೆ ಸ್ವಲ್ಪ ಸಮಯ ಬ್ರೇಕ್ ತೆಗೆದುಕೊಳ್ಳುತ್ತೇನೆ. ಹೊರಗೆ ಹೋಗಲು, ವ್ಯಾಯಾಮ (Exercise) ಮಾಡಲು, ನನ್ನದಾದ ಯಾವುದಾದರೂ ಕೆಲಸ ಮಾಡಲು ಸಮಯವಿಲ್ಲ. ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡಲು ಅನುಮತಿಯಿಲ್ಲ. ನಾನು ನಾಲ್ಕು ಗೋಡೆಯ ಮಧ್ಯೆ ಖಿನ್ನತೆಗೆ (Depression) ಒಳಗಾಗಿದ್ದೇನೆ. ನನಗೆ ಕಚೇರಿಗೇ ಬಂದು ಕೆಲಸ ಮಾಡಲು ತಿಳಿಸಿದ್ದಾರೆ. ಆದರೆ, “ಜನ ಏನು ಹೇಳುತ್ತಾರೋ?’ ಎನ್ನುವುದು ಅತ್ತೆ-ಮಾವನ ಆತಂಕ! ನಾನು ಯಾವುದನ್ನು ಆಯ್ಕೆ ಮಾಡಿಕೊಳ್ಳಲಿ? ಕೆಲಸವನ್ನೋ, ಸಂಸಾರವನ್ನೋ?’ ಎನ್ನುವ ಪ್ರಶ್ನೆ ಮುಂದಿಟ್ಟಿದ್ದಾರೆ. 

ಹೆರಿಗೆಯ ನಂತರ ಕೂದಲು ಉದುರೋದು ನಿಂತಿಲ್ವಾ? ಈ ಟಿಪ್ಸ್ ಟ್ರೈ ಮಾಡಿ

ಮಕ್ಕಳಿದ್ದರೆ ಅವಕಾಶ ಕಡಿಮೆ!
ಒಬ್ಬಾಕೆ “ನಾನು 4 ತಿಂಗಳ ಗರ್ಭಿಣಿ (Pregnant). ಉತ್ತಮ ಸ್ಟಾರ್ಟಪ್ (Start up) ಒಂದರಲ್ಲಿ ಅವಕಾಶ ಬಂದಿತ್ತು. ಆದರೆ, ಮಕ್ಕಳಿರುವ ಅಥವಾ ಗರ್ಭಿಣಿಯಾಗಿರುವ ಮಹಿಳೆಯರನ್ನು ಮ್ಯಾನೇಜರ್ ಪೋಸ್ಟ್ (Manager Post) ಗೆ ನೇಮಕ ಮಾಡಿಕೊಳ್ಳುವುದಿಲ್ಲವೆಂದು ಕಂಡುಬರುತ್ತಿದೆ’ ಎಂದು ಬೇಸರ ಮಾಡಿಕೊಂಡಿದ್ದಾರೆ.

ಮತ್ತೊಬ್ಬರು, “ಇಂಟರ್ ವ್ಯೂದಲ್ಲಿ ಮದುವೆ, ಪತಿ (Husband), ಮನೆ (House), ಮಕ್ಕಳಾಗುವ ಪ್ಲಾನ್ (Family Plan) ಬಗ್ಗೆ ಅತಿ ಎನಿಸುವಷ್ಟು, ಮುಜುಗರವಾಗುವಷ್ಟು ಪ್ರಶ್ನೆ ಕೇಳಿದ್ದಾರೆ. ಬಾಸ್ ಎನ್ನುವ ಮನುಷ್ಯ ಅಮ್ಮನಿಲ್ಲದೆ ಕೃತಕವಾಗಿ ಜನಿಸಿರಬೇಕು’ ಎಂದು ಅಸಹನೆ ಹೊರಹಾಕಿದ್ದಾರೆ.

ಅಂದು ದೆಹಲಿಯ ಶ್ರೀಮಂತ ಮಹಿಳೆ, ಇಂದು ಬೀದಿಬದಿಯ ಅಜ್ಜಿ: ಇದು ಆಶಾ ದೇವಿ ಕತೆ

ವೃತ್ತಿ-ಸಂಸಾರ ಸಮನ್ವಯತೆ ಹೇಗೆ?
ಸುಕೃತಿ ಬನ್ಸಾಲ್ ಎಂಬಾಕೆ “ವೃತ್ತಿ (Professional) ಮತ್ತು ಮನೆಯನ್ನು (Home) ಬ್ಯಾಲೆನ್ಸ್ ಮಾಡುವುದು ಸುಲಭವಲ್ಲ. ಎಲ್ಲ ಕಡೆಯೂ ಮಹಿಳೆ ಹೊಂದಾಣಿಕೆ (Adjustment) ಮಾಡಿಕೊಳ್ಳಬೇಕಾಗುತ್ತದೆ. ವೃತ್ತಿಯಲ್ಲಿ ಹೊಂದಾಣಿಕೆ ಮಾಡಿಕೊಂಡರೆ ಕೆರಿಯರ್ ಗೆ ಧಕ್ಕೆಯಾಗುತ್ತದೆ, ಮನೆಯಲ್ಲಿ ಹೊಂದಾಣಿಕೆ ಮಾಡಿಕೊಂಡರೆ ಪೇರೆಂಟ್ ಗಿಲ್ಟ್ (Parent Guilt) ನಿಂದ ನರಳಬೇಕಾಗುತ್ತದೆ. ವೃತ್ತಿ ಮತ್ತು ಸಂಸಾರದ ಬದುಕಿನಲ್ಲಿ ಸಮನ್ವಯತೆ (Harmony) ಇರುವಂತೆ ಕಾಪಾಡಿಕೊಳ್ಳುವುದು ಅಗತ್ಯವೆಂದು ಮನೆಗೆ ಸಮೀಪವಿರುವ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!