
ವಿದೇಶಿ ಪ್ರವಾಸಿಗರು ಭಾರತಕ್ಕೆ ಬಂದಾಗ ಇಲ್ಲಿನ ಜನ ಅವರ ಜೊತೆ ಫೋಟೋ ತೆಗೆದುಕೊಳ್ಳಲು ಮುಗಿ ಬೀಳುತ್ತಾ ಅವರ ಹಿಂದಿದೆ ಹೋಗುವುದು, ಸೆಲ್ಫಿ ಕೇಳುವ ಮೂಲಕ ಅವರನ್ನು ಸೆಲೆಬ್ರಿಟಿಗಳಂತೆ ನೋಡುವುದನ್ನು ನೀವು ಹಲವು ಸೋಶಿಯಲ್ ಮೀಡಿಯಾ ವೀಡಿಯೋಗಳಲ್ಲಿ ಕಾಣಬಹುದಾಗಿದೆ. ಅನೇಕ ವಿದೇಶಿಗರು ಸೋಶಿಯಲ್ ಮೀಡಿಯಾದ ಮೂಲಕ ಈ ರೀತಿಯ ವೀಡಿಯೋಗಳನ್ನು ಹಂಚಿಕೊಂಡಿದ್ದಾರೆ. ಭಾರತದಲ್ಲಿ ನಾನು ಸೆಲೆಬ್ರಿಟಿಯಾದೆ ಅನೇಕರು ನನ್ನ ಬಳಿ ಫೋಟೋ ಕೇಳಿದರು ಎಂದು ವಿದೇಶಿ ಯುವತಿಯರು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಳ್ಳುವುದನ್ನು ನೀವು ನೋಡಬಹುದು. ಆದರೆ ಇಲ್ಲೊಂದು ಕಡೆ ಸೀರೆಯುಟ್ಟ ಭಾರತೀಯ ನಾರಿಯೊಬ್ಬರು ವಿದೇಶದಲ್ಲಿ ಸೆಲೆಬ್ರಿಟಿಯಾಗಿದ್ದು, ಇವರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. ವೀಡಿಯೋ ನೋಡಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತೀಯ ಮಹಿಳೆಯ ಜೊತೆ ಫೋಟೋ ತೆಗೆಸಿಕೊಂಡ ವಿದೇಶಿಗರು
ಹೌದು ಇನ್ಸ್ಟಾಗ್ರಾಮ್‌ನಲ್ಲಿ ಶುಭಂ ಗೌತಮ್ ಎಂಬುವವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವೀಡಿಯೋದಲ್ಲಿ ನನ್ನ ತಾಯಿ ವಿದೇಶದಲ್ಲಿ ಸೆಲೆಬ್ರಿಟಿ ಆದ್ರು ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ವೀಡಿಯೋದಲ್ಲಿ ರಾಜಸ್ತಾನಿ ಮಹಿಳೆಯೊಬ್ಬರು ತಮ್ಮ ಕುಟುಂಬದೊಂದಿಗೆ ರಷ್ಯಾ ಪ್ರವಾಸ ಮಾಡಿದ್ದಾರೆ. ರಷ್ಯಾದ ಪಾಲಿಗೆ ಅವರ ರಾಜಸ್ಥಾನಿ ಶೈಲಿಯ ಸೀರೆ ವಿಭಿನ್ನ ಎನಿಸಿದೆ. ಹೀಗಾಗಿ ಅಲ್ಲಿ ಅನೇಕರು ಮಹಿಳೆಯ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ವೀಡಿಯೋ ಈಗ ಭಾರಿ ವೈರಲ್ ಆಗಿದೆ. ಭಾರತದ ಮಹಿಳೆಯ ಈ ರಾಜಸ್ಥಾನಿ ಶೈಲಿಯ ಕಲರ್‌ಫುಲ್ ಸೀರೆ ಅಲ್ಲಿ ಅನೇಕ ನೋಡುಗರನ್ನು ಸೆಳೆದಿದೆ. ಅನೇಕರು ಅವರ ಜೊತೆ ಫೋಟೋ ತೆಗೆಸಿಕೊಂಡಿದ್ದಲ್ಲದೇ ಅವರಿಗೆ ಸೊಗಸಾಗಿ ಕಾಣುತ್ತಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ.
ರಾಜಸ್ಥಾನಿ ಶೈಲಿಯ ಸಾರಿ ಉಟ್ಟು ವಿದೇಶದಲ್ಲಿ ಓಡಾಟ: ಸೊಗಸಾದ ಧಿರಿಸಿಗೆ ಆಕರ್ಷಿತರಾದ ವಿದೇಶಿಗರು
ಆಕೆ ಈಗ ನನ್ನ ಅಮ್ಮ ಮಾತ್ರ ಅಲ್ಲ, ಆಕೆ ರಷ್ಯಾದ ಮೆಚ್ಚಿನ ಸೆಲೆಬ್ರಿಟಿ ಎಂದು ಅವರು ವಿಡಿಯೋ ಮೇಲೆ ಬರೆದಿದ್ದಾರೆ. ಅನೇಕರು ಈ ವೀಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರು ವಿದೇಶದಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರದರ್ಶಿಸಿದ್ದಕ್ಕೆ ಅನೇಕರು ಅವರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಅನೇಕರು ಸೊಗಸಾಗಿದೆ ರಾಯಲ್ ಆಗಿದೆ, ಭಾರತದ ಅಂಬಾಸೀಡರ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಇದೊಂದು ತುಂಬಾ ಮುದ್ದಾದ ವಿಡಿಯೋ, ಇಲ್ಲಿ ಸಾಕಷ್ಟು ಭಾರತೀಯ ವಿದ್ಯಾರ್ಥಿಗಳಿದ್ದಾರೆ ಆದರೆ ನಾನು ಈ ರೀತಿಯ ಬಟ್ಟೆಯನ್ನು ಎಲ್ಲೂ ನೋಡಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ವೀಡಿಯೋದಲ್ಲಿ ಕಾಣುವಂತೆ ಮಹಿಳೆ ಸೆಲ್ಪಿ ಕೇಳಿದ ಎಲ್ಲ ವಿದೇಶಿಗರಿಗೂ ಸೆಲ್ಫಿ ಕೊಟ್ಟಿದ್ದಾರೆ. ಅವರ ಪತಿ ದೂರದಿಂದಲೇ ಪತ್ನಿಗೆ ಸಿಕ್ಕ ಸೆಲೆಬ್ರಿಟಿ ಸ್ಥಾನಮಾನ ನೋಡಿ ಖುಷಿಪಡೋದನ್ನ ವೀಡಿಯೋದಲ್ಲಿ ಕಾಣಬಹುದು. ಇದನ್ನೇ ಒಬ್ಬರು ವೀಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಅಮ್ಮ ಫುಲ್ ಖುಷಿಯಾಗಿದ್ದರೆ ಇಲ್ಲಿ ಅಂಕಲ್ ತಮ್ಮ ಪತ್ನಿಯನ್ನಾ ನೋಡಿ ಹೆಮ್ಮೆ ಪಡುತ್ತಿದ್ದಾರೆ ಇದನ್ನು ನೋಡಲು ಖುಷಿಯಾಗುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ 2 ಮಿಲಿಯನ್‌ಗೂ ಹೆಚ್ಚು ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ.
ಇದನ್ನೂ ಓದಿ: ಕುಸಿದ ತಾಪಮಾನ: ಬೆಂಗಳೂರು, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರೋಮ್ಯಾಂಟಿಕ್ ವೆದರ್
ಇದನ್ನೂ ಓದಿ: ನ್ಯಾಯ ಎಲ್ಲಿದೆ.. ಪರ ತೀರ್ಪು ನೀಡಲು 15 ಲಕ್ಷ ಲಂಚಕ್ಕೆ ಬೇಡಿಕೆ: ACBಯಿಂದ ಕ್ಲಾರ್ಕ್ ಅರೆಸ್ಟ್, ಜಡ್ಜ್ ನಾಪತ್ತೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.